Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಮದುವೆ ಮನೆಗೆ ಪ್ರವೇಶಿಸಿದ ಮಾಜಿ ಪ್ರಿಯತಮೆಯಿಂದ ಗಲಾಟೆ- ವಿಡಿಯೋ ವೈರಲ್
ಪ್ರೀತಿಸಿ ನಡುನೀರಿನಲ್ಲಿ ಕೈಬಿಟ್ಟ ಅಥವಾ ಸಂಬಂಧವನ್ನು ತುಂಬಾ ಜಗಳ ಮಾಡಿಕೊಂಡು ಕೊನೆಗೊಳಿಸಿರುವಂತಹ ಹುಡುಗ ಅಥವಾ ಹುಡುಗಿಗೆ ಮದುವೆ ಸಂದರ್ಭದಲ್ಲಿ ಯಾವಾಗಲೂ ಒಂದು ರೀತಿಯ ಭೀತಿ ಎನ್ನುವುದು ಇದ್ದೇ ಇರುತ್ತದೆ. ಯಾಕೆಂದರೆ ಮಾಜಿ ಪ್ರೇಯಸಿ ಅಥವಾ ಪ್ರಿಯತಮ ಬಂದು ಮದುವೆ ಮನೆಯಲ್ಲಿ ಜಗಳ ಮಾಡಿದರೆ ಏನು ಮಾಡುವುದು ಎನ್ನುವುದು. ಇಂತಹ ಹಲವಾರು ಘಟನೆಗಳು ನಡೆದಿರುವುದು ಇದೆ.

ಮಾಜಿ ಪ್ರಿಯಕರ ಅಥವಾ ಪ್ರೇಯಸಿ ತುಂಬಾ ಭಾವನಾತ್ಮಕವಾಗಿ ಸಂಬಂಧಕ್ಕೆ ಅಂಟಿಕೊಂಡಿದ್ದರೆ ಆಗ ಮದುವೆ ಮನೆಯಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜ. ಇಲ್ಲೊಂದು ಘಟನೆಯಲ್ಲಿ ವರನ ಮಾಜಿ ಪ್ರೇಯಸಿಯು ಬಂದು ಗಲಾಟೆ ಮಾಡಿರುವ ವಿಡಿಯೋ ಇದೆ. ಇದರ ಬಗ್ಗೆ ನೀವು ಓದಿಕೊಳ್ಳಿ.

ಮದುವೆ ಮನೆಯಲ್ಲಿ ನಡೆಯಿತು ಗಲಾಟೆ
ಚೀನಾದಲ್ಲಿ ನಡೆದಿರುವಂತಹ ಘಟನೆಯು ಇದಾಗಿದ್ದು, ವಧು ಹಾಗೂ ವರ ಇನ್ನೇನು ಚುಂಬಿಸಬೇಕು ಎನ್ನುವ ಹೊತ್ತಿನಲ್ಲಿ ಮಾಜಿ ಪ್ರಿಯತಮೆಯ ಪ್ರವೇಶವಾಗಿದೆ. ಆಕೆ ಮದುಮಗಳ ಧಿರಿಸಿನೊಂದಿಗೆ ಸ್ಟೇಜ್ ಮೇಲೆ ಹೋಗಿದ್ದಾಳೆ.

ಈ ವಿಡಿಯೋ ವೈರಲ್ ಆಗಿದೆ
30 ಸೆಕೆಂಡು ಇರುವಂತಹ ಈ ವಿಡಿಯೋ ಈಗ ವಿಶ್ವದೆಲ್ಲೆಡೆಯಲ್ಲಿ ವೈರಲ್ ಆಗಿದೆ. ವಧು ಕೋಪದಲ್ಲಿ ಅಲ್ಲಿಂದ ತೆರಳುತ್ತಿರುವುದು ಮತ್ತು ಮಾಜಿ ಪ್ರೇಯಸಿಯು ಬೇಡುತ್ತಿರುವುದು ಈ ವಿಡಿಯೋದಲ್ಲಿದೆ.

ಅವರಿಬ್ಬರು ಸಂಬಂಧ ಮುರಿದಿರುವುದಕ್ಕೆ ವಧು ಕಾರಣ ಹೇಳಿದಳು
ಈ ವಿಡಿಯೋ ವೈರಲ್ ಆಗುತ್ತಿರುವಂತೆ ವಧು ತನ್ನ ಪತಿಯ ಬೆಂಬಲಕ್ಕೆ ನಿಂತು ಮಾಜಿ ಪ್ರೇಯಸಿ ಜತೆಗೆ ಆತ ಸಂಬಂಧ ಕಡಿದುಕೊಂಡಿರುವುದಕ್ಕೆ ಕಾರಣವನ್ನು ಹೇಳಿದ್ದಾರೆ. ಅವರಿಬ್ಬರ ವ್ಯಕಿತ್ವ ಮತ್ತು ಆಲೋಚನೆಗಳು ಭಿನ್ನವಾಗಿದ್ದ ಕಾರಣ ದೂರವಾಗಿದ್ದರು ಎಂದು ಆಕೆ ತಿಳಿಸಿದ್ದಾರೆ.
ನೆಟ್ಟಿಗರು ತುಂಬಾ ಕ್ರೋಧಗೊಂಡಿದ್ದಾರೆ
ನೆಟ್ಟಿಗರು ಈ ಘಟನೆಯನ್ನು ನೋಡಿದ ಕೂಡಲೇ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಹೆಚ್ಚಿನ ಕಮೆಂಟ್ ನಲ್ಲಿ ಮಾಜಿ ಪ್ರೇಯಸಿಯು ಅಸಹ್ಯ ಎಂದು ಹೇಳಲಾಗಿದೆ. ಆಕೆ ತುಂಬಾ ಸ್ವಾರ್ಥಿ ಮತ್ತು ಇದರಿಂದ ಮಾಜಿಗಳ ಜತೆ ಸ್ನೇಹವನ್ನು ಇಟ್ಟುಕೊಳ್ಳಬಾರದು ಎಂದು ಕೆಲವು ಮಂದಿ ಕಮೆಂಟ್ ನಲ್ಲಿ ಹೇಳಿರುವರು. ಮದುವೆ ಮನೆಯಲ್ಲಿ ನಡೆದಿರುವಂತಹ ಈ ಅಪರೂಪದ ಗಲಾಟೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
