ವಿದೇಶದಲ್ಲಿ ನೌಕರಿ ಮಾಡುವ ಇಚ್ಛೆಯೆ? ಜ್ಯೋತಿಷ್ಯದ ಈ ನಿಯಮಗಳನ್ನು ಪಾಲಿಸಿ..

ಕೈತುಂಬಾ ಸಂಬಳ ಹಾಗೂ ಉತ್ತಮ ಕೆಲಸದ ವಾತಾವರಣದ ಕಾರಣಗಳಿಗಾಗಿ ವಿದೇಶಗಳಲ್ಲಿ ಕೆಲಸ ಮಾಡುವ ಹಾಗೂ ಅಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಾಣುವಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಈಗ ಕೆಲ ವರ್ಷಗಳಿಂದೀಚೆಗೆ ವಿದೇಶ ಪ್ರಯಾಣದ ಸಾರಿಗೆ ವೆಚ್ಚಗಳು ಸಹ ಕಡಿಮೆಯಾಗಿವೆ. ಅಲ್ಲದೆ ವಿದೇಶಗಳಲ್ಲಿ ವಾಸಿಸುವುದು ಸಹ ಮೊದಲಿನಷ್ಟು ದುಬಾರಿಯಾಗಿಲ್ಲ.

ಇವೆಲ್ಲ ಕಾರಣಗಳಿಂದ ವಿದೇಶಗಳಿಗೆ ಹೋಗಬೇಕೆನ್ನುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗೆ ವಿದೇಶಕ್ಕೆ ಹೋಗಿ ಜೀವನ ಕಟ್ಟಿಕೊಳ್ಳಬೇಕೆಂದು ನೀವೂ ಕನಸು ಕಾಣುತ್ತಿದ್ದಲ್ಲಿ, ಬಹುದಿನಗಳಿಂದ ಆ ಕನಸು ನನಸಾಗದೆ ನಿರಾಶೆ ಉಂಟಾಗುತ್ತಿದ್ದಲ್ಲಿ ಜ್ಯೋತಿಷ್ಯ ಶಾಸ್ತ್ರದ ಕೆಲ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಯತ್ನಿಸಬಹುದು.

ವಿದೇಶದಲ್ಲಿ ನೌಕರಿ ಪಡೆದು ಯಶಸ್ವಿ ಭವಿಷ್ಯ ಹೊಂದಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಉಪಾಯಗಳನ್ನು ಸೂಚಿಸಲಾಗಿದೆ. ಈಗ ಹಲವಾರು ದಶಕಗಳಿಂದ ವಿದೇಶಕ್ಕೆ ಹೋಗುವ ಆಕಾಂಕ್ಷಿಗಳು ಈ ಉಪಾಯಗಳನ್ನು ಬಳಸುತ್ತ ಬಂದಿದ್ದು ಅನೇಕರಿಗೆ ಇದರಿಂದ ಸಕಾರಾತ್ಮಕ ಉಪಯೋಗಗಳೂ ಆಗಿವೆ. ನೀವೂ ಸಹ ವಿದೇಶಕ್ಕೆ ಹೋಗಿ ಉತ್ತಮವಾದ ಜೀವನ ಕಟ್ಟಿಕೊಳ್ಳಲು ಬಯಸುತ್ತಿದ್ದಲ್ಲಿ ಜ್ಯೋತಿಷ್ಯ ಶಾಸ್ತ್ರದ ಈ ಕೆಳಗೆ ತಿಳಿಸಲಾದ ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಯತ್ನಿಸಿ.

ದುರ್ಗಾ ಸಪ್ತಶತಿ ಅಧ್ಯಾಯ ಪಠಣದಿಂದ ಇಷ್ಟಾರ್ಥ ಸಿದ್ಧಿ

ದುರ್ಗಾ ಸಪ್ತಶತಿ ಅಧ್ಯಾಯ ಪಠಣದಿಂದ ಇಷ್ಟಾರ್ಥ ಸಿದ್ಧಿ

ದುರ್ಗಾ ಸಪ್ತಶತಿ ಅಧ್ಯಾಯದ ಪಠಣದಿಂದ ವಿದೇಶದಲ್ಲಿ ನೌಕರಿ ಪಡೆಯುವುದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಸುಲಭವಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಬೆಳೆದು ಬಂದಿದೆ. ದುರ್ಗಾ ಸಪ್ತಶತಿಯ ಹನ್ನೊಂದನೆ ಹಾಗೂ ಮೊದಲನೆಯ ಅಧ್ಯಾಯಗಳ ನಿಯಮಿತ ಪಠಣದಿಂದ ವಿದೇಶಕ್ಕೆ ಹೋಗುವ ದಾರಿ ಸುಗಮವಾಗಿ ನಿಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಬಲವಾಗಿದೆ. ದುರ್ಗಾ ಸಪ್ತಶತಿ ಅಧ್ಯಾಯ ಪಠಣದಿಂದ ಜೀವನದಲ್ಲಿ ರಾಹು ಗ್ರಹದ ನಕಾರಾತ್ಮಕ ಹಾಗೂ ಕೆಟ್ಟ ಪರಿಣಾಮಗಳ ನಿವಾರಣೆಯಾಗಿ ಉತ್ತಮ ಗ್ರಹಗತಿ ಆರಂಭವಾಗಲು ದಾರಿಯಾಗುತ್ತದೆ. ದುರ್ಗಾ ಸಪ್ತಶತಿಯನ್ನು ಪಠಣ ಮಾಡಿದಾಗಲೆಲ್ಲ ಕಾಸ್ಮಿಕ್ ಕಂಪನಗಳು ಅವಿರ್ಭವಿಸುವುದರಿಂದ ವಿದೇಶ ಪ್ರಯಾಣ ಮತ್ತಷ್ಟು ಸುಲಭವಾಗುತ್ತದೆ ಎಂಬ ಸಿದ್ಧಾಂತ ಇದರ ಹಿಂದಿದೆ. ಪ್ರತಿನಿತ್ಯ 1800 ಬಾರಿ ಈ ಮಂತ್ರ ಪಠಣದಿಂದ ಅತ್ಯುತ್ತಮ ಸಕಾರಾತ್ಮಕ ಪರಿಣಾಮಗಳನ್ನು ಕಾಣಬಹುದಾಗಿದೆ.

ರಾಹು ಸ್ತೋತ್ರದ ಪಠಣದಿಂದ ಅನಕೂಲಗಳು ಹಲವಾರು

ರಾಹು ಸ್ತೋತ್ರದ ಪಠಣದಿಂದ ಅನಕೂಲಗಳು ಹಲವಾರು

ವಿದೇಶದಲ್ಲಿ ಕೆಲಸ ಸಂಪಾದಿಸಲು ರಾಹು ಸ್ತೋತ್ರದ ಪಠಣ ಮಾಡುವುದು ಅತ್ಯಂತ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ನಿಯಮಿತವಾಗಿ ರಾಹು ಸ್ತೋತ್ರ ಪಠಣ ಮಾಡುತ್ತಿದ್ದಲ್ಲಿ ರಾಹುವಿನ ಕೆಟ್ಟ ಪರಿಣಾಮಗಳು ಉತ್ತಮ ಪರಿಣಾಮಗಳಾಗಿ ಬದಲಾಗುತ್ತವೆ. ಇದರಿಂದ ಸಾಗರದಾಚೆಯ ದೇಶದಲ್ಲಿ ನೌಕರಿ ಹಿಡಿಯುವುದು ಹಾಗೂ ಅಲ್ಲಿಯೇ ಜೀವನ ಕಂಡುಕೊಳ್ಳುವುದು ಸುಲಭವಾಗುತ್ತದೆ.

8 ಮುಖದ ರುದ್ರಾಕ್ಷಿ ಧರಿಸಿದರೆ ಅದೃಷ್ಟ ಪ್ರಾಪ್ತಿ

8 ಮುಖದ ರುದ್ರಾಕ್ಷಿ ಧರಿಸಿದರೆ ಅದೃಷ್ಟ ಪ್ರಾಪ್ತಿ

ಯಾರಿಗೆ ಗ್ರಹಗತಿಯಲ್ಲಿ ರಾಹುವಿನ ವಕ್ರ ದೃಷ್ಟಿ ಇರುತ್ತದೆಯೋ ಅಂಥವರು 8 ಮುಖದ ರುದ್ರಾಕ್ಷಿ ಧಾರಣೆ ಮಾಡಿದಲ್ಲಿ ರಾಹುವಿನ ಕೆಟ್ಟ ದೃಷ್ಟಿಯಿಂದಾಗ ಬಹುದಾದ ನಕಾರಾತ್ಮಕ ಪರಿಣಾಮಗಳನ್ನು ತಡೆಯಲು ಸಾಧ್ಯ ಎಂದು ಜ್ಯೋತಿಷ್ಯ ಶಾಸ್ತ್ರದ ಗ್ರಂಥಗಳಲ್ಲಿ ವಿವರಿಸಲಾಗಿದೆ. 8 ಮುಖದ ರುದ್ರಾಕ್ಷಿ ಧರಿಸುವುದರಿಂದ ಜೀವನದಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿ ಹಾಗೂ ಸಂಬಂಧಗಳಲ್ಲಿನ ಬಾಂಧವ್ಯ ವೃದ್ಧಿಸಿ ಒಟ್ಟಾರೆ ಜೀವನ ಸುಖಮಯವಾಗುತ್ತದೆ. ಅಲ್ಲದೆ ಇದು ರಾಹುವಿನ ಕಾರಣದಿಂದ ವಿದೇಶದಲ್ಲಿ ನೌಕರಿ ಸಿಗುವುದಕ್ಕೆ ಅಡ್ಡಿಯಾಗುವ ಕಾರಣಗಳನ್ನು ಸಂಪೂರ್ಣವಾಗಿ ನಿವಾರಿಸಿ ಬೇಗನೆ ವಿದೇಶದಲ್ಲಿ ಸೆಟ್ಲ ಆಗಲು ಸಹಾಯ ಮಾಡುತ್ತದೆ.

ಗೋಮೇದಕ ರತ್ನದ ಹರಳು ಧರಿಸಿ

ಗೋಮೇದಕ ರತ್ನದ ಹರಳು ಧರಿಸಿ

ಪಚ್ಚೆಕಲ್ಲು ಅಥವಾ ರತ್ನದ ಹರಳು ಧರಿಸುವಿಕೆಯಿಂದ ರಾಹುವಿನ ಎಲ್ಲ ಉತ್ತಮ ಅಂಶಗಳನ್ನು ನಿಮ್ಮತ್ತ ಸೆಳೆಯಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಗೋಮೇದಕ ರತ್ನದ ಹರಳಿನ ಧಾರಣೆಯಿಂದ ವಿದೇಶದಲ್ಲಿ ನೌಕರಿಯನ್ನು ಪಡೆಯುವ ಹಾಗೂ ಅಲ್ಲಿಯೆ ನೆಲೆಸುವ ನಿಮ್ಮ ಪ್ರಯತ್ನಗಳು ಬಹು ಬೇಗನೆ ಕೈಗೂಡುತ್ತವೆ. ಆದರೆ ನಿಮ್ಮ ಜಾತಕಕ್ಕೆ ಅನುಗುಣವಾಗಿ ಎಷ್ಟು ಗಾತ್ರದ ಹರಳು ಧರಿಸುವುದು ಸೂಕ್ತ ಎಂಬುದನ್ನು ಜ್ಯೋತಿಷ್ಯ ಪರಿಣಿತರಿಂದ ಕೇಳಿ ಸಲಹೆ ಪಡೆದುಕೊಂಡೇ ಮುಂದುವರಿಯುವುದು ಸೂಕ್ತ.

ಶನಿವಾರ ಉಪವಾಸ ವ್ರತ ಮಾಡುವುದು ಲಾಭಕರ

ಶನಿವಾರ ಉಪವಾಸ ವ್ರತ ಮಾಡುವುದು ಲಾಭಕರ

ವಿದೇಶದಲ್ಲಿ ನೌಕರಿ ಪಡೆಯುವಿಕೆಗೆ ನೆರವಾಗುವಂಥ ಜ್ಯೋತಿಷ್ಯ ಶಾಸ್ತ್ರದ ಮತ್ತೊಂದು ವಿಧಾನವೆಂದರೆ ಶನಿವಾರದ ದಿನ ಉಪವಾಸ ವ್ರತ ಕೈಗೊಳ್ಳು ವುದಾಗಿದೆ. ಬೇರೆ ಗ್ರಹವಾದ ರಾಹುವಿನ ಉತ್ತಮ ಪರಿಣಾಮಗಳನ್ನು ಪಡೆಯಲು ಶನಿವಾರದ ಉಪವಾಸ ವ್ರತ ಉತ್ತಮವಾಗಿದೆ. ವಿದೇಶದ ಎಲ್ಲ ವ್ಯವಹಾರಗಳನ್ನು ರಾಹು ಗ್ರಹನೇ ನೋಡಿಕೊಳ್ಳುವುದರಿಂದ ಮೊದಲಿಗೆ ಆತನನ್ನು ಸಂಪ್ರೀತಿ ಪಡಿಸಿದಲ್ಲಿ ವಿದೇಶ ಪ್ರಯಾಣ, ವಿದೇಶದಲ್ಲಿ ನೌಕರಿ, ಅಲ್ಲಿಯೇ ಸೆಟ್ಲ ಆಗುವುದು ಹೀಗೆ ಬಯಸಿದ ಎಲ್ಲ ಕೆಲಸಗಳಿಗೆ ವೇಗ ದೊರಕುವುದು.

ಕಷ್ಟದಲ್ಲಿರುವವರಿಗೆ, ಬಡವರಿಗೆ ನೆರವಿನ ಹಸ್ತ ಚಾಚಿ

ಕಷ್ಟದಲ್ಲಿರುವವರಿಗೆ, ಬಡವರಿಗೆ ನೆರವಿನ ಹಸ್ತ ಚಾಚಿ

ಬಡವರು ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದರೆ ರಾಹುವಿನ ಎಲ್ಲ ಕೆಟ್ಟ ದೃಷ್ಟಿಯಿಂದ ಪಾರಾಗಬಹುದಾಗಿದೆ. ಬಡವರಿಗೆ ಅವರ ದೈನಂದಿನ ಜೀವನಕ್ಕೆ ಬೇಕಾದ ಬಟ್ಟೆ ಬರೆ, ಆಹಾರ ಹಾಗೂ ಇನ್ನಿತರ ವಸ್ತುಗಳನ್ನು ದಾನ ಮಾಡಿದಲ್ಲಿ ರಾಹು ಸಂತೃಪ್ತನಾಗುತ್ತಾನೆ. ಹಾಗೆಯೇ ಯಾವುದೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಸಹ ರಾಹುವನ್ನು ಒಲಿಸಿಕೊಳ್ಳಬಹುದು.

ಕಾಲಭೈರವ ಅಷ್ಟಕ ಸ್ತೋತ್ರ ಪಠಣದಿಂದ ಹಲವಾರು ಪ್ರಯೋಜನಗಳು

ಕಾಲಭೈರವ ಅಷ್ಟಕ ಸ್ತೋತ್ರ ಪಠಣದಿಂದ ಹಲವಾರು ಪ್ರಯೋಜನಗಳು

ನಿಮ್ಮ ಗ್ರಹಗತಿಯಲ್ಲಿರುವ ರಾಹುವಿನ ವಕ್ರದೃಷ್ಟಿಯ ಎಲ್ಲ ಕೆಟ್ಟ ಪರಿಣಾಮಗಳನ್ನು ದೂರ ಮಾಡಲು ನೀವು ಬಯಸುವಿರಾದರೆ ಈ ವಿಧಾನವನ್ನು ಖಂಡಿತವಾಗಿಯೂ ಅನುಸರಿಸಬೇಕು. ಕಾಲಭೈರವ ಅಷ್ಟಕ ಸ್ತೋತ್ರದ ನಿತ್ಯ ಪಠಣದಿಂದ ರಾಹು ಮಹಾದಶಾ ಕಾಲದ ಎಲ್ಲ ಕೆಟ್ಟ ಪರಿಣಾಮಗಳನ್ನು ದೂರ ಮಾಡಬಹುದಾಗಿದೆ. ಇದರ ನಿಯಮಿತ ಪಠಣದಿಂದ ನಿಮ್ಮ ವ್ಯಕ್ತಿತ್ವಕ್ಕೆ ಅಂಟಿರುವ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಿ ತೇಜಸ್ಸು ಮೂಡುತ್ತದೆ. ಇದರಿಂದ ಸಹಜವಾಗಿಯೇ ವಿದೇಶದಲ್ಲಿ ಕೆಲಸ ಗಳಿಸುವ ಹಾಗೂ ಶಾಶ್ವತವಾಗಿ ಅಲ್ಲಿಯೇ ನೆಲೆಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

English summary

astrological remedies for getting successful career in abroad

Astrology as an ancient science has always been proven to be effective when it comes to suggest the best of remedies to settle abroad and help in getting successful in career. If you are looking for a lucrative career overseas, try implementing the following astrological remedies for getting instant success in doing so:
X
Desktop Bottom Promotion