Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಎರಡು ತಲೆಗಳು, ನಾಲ್ಕು ಕಣ್ಣುಗಳು ಮತ್ತು ಮೂರು ಕಿವಿಗಳ ಆಡಿನ ಮರಿ ಜನನ!
ಕೆಲವೊಂದು ಪ್ರಾಣಿಗಳು ತುಂಬಾ ವಿಚಿತ್ರವಾಗಿ ಜನ್ಮ ತಾಳುತ್ತವೆ. ಇದು ಕೆಲವು ಸಂದರ್ಭದಲ್ಲಿ ಬದುಕಿ ಉಳಿಯುತ್ತದೆ. ಇಂತಹ ತುಂಬಾ ವಿಚಿತ್ರವಾಗಿ ಜನಿಸುವಂತಹ ಪ್ರಾಣಿಗಳನ್ನು ನಂಬಿಕೆಯುಳ್ಳವರು ಪೂಜೆ ಕೂಡ ಮಾಡುವರು. ಯಾಕೆಂದರೆ ಅದು ದೇವರ ರೂಪವೆಂದು ಅವರು ಭಾವಿಸಿ ಇರುವರು. ಮನುಷ್ಯರಲ್ಲಿ ಕೂಡ ಎರಡು ತಲೆ ಅಥವಾ ನಾಲ್ಕು ಕೈಗಳ ಮಕ್ಕಳು ಜನಿಸಿದರೆ ಅವರನ್ನು ಪೂಜೆ ಮಾಡುವುದನ್ನು ನಾವು ನೋಡಿದ್ದೇವೆ. ಇಲ್ಲೊಂದು ಅಂತಹ ವಿಚಿತ್ರ ಆಡೊಂದು ಜನಿಸಿದೆ. ಇದಕ್ಕೆ ಎರಡು ತಲೆ ಮತ್ತು ಮೂರು ಕಿವಿಗಳು ಇವೆ. ಇದು ಆ ಗ್ರಾಮದ ಜನರಲ್ಲಿ ತುಂಬಾ ಅಚ್ಚರಿಯನ್ನು ಉಂಟು ಮಾಡಿತು. ಆದರೆ ಜನಿಸಿದ ನಾಲ್ಕೇ ದಿನಗಳಲ್ಲಿ ಈ ಆಡು ಸಾವನ್ನಪ್ಪಿತು. ಈ ಬಗ್ಗೆ ನೀವು ಇನ್ನಷ್ಟು ಮಾಹಿತಿಯನ್ನು ತಿಳಿಯುತ್ತಾ ಸಾಗಿರಿ.

ಆ ಆಡಿನ ಮಾಲಕನಿಗೆ ತಾನು ಯಾವುದಕ್ಕೆ ಸಾಕ್ಷಿಯಾಗುತ್ತೇನೆ ಎನ್ನುವ ಅರಿವು ಇರಲಿಲ್ಲ!
ತಾನು ಸಾಕಿರುವಂತಹ ಆಡು ಯಾವ ರೀತಿಯ ಮರಿಗೆ ಜನ್ಮ ನೀಡಲಿದೆ ಎನ್ನುವ ಬಗ್ಗೆ ಅದರ ಮಾಲಕ ಕನಸು ಕೂಡ ಕಂಡಿರಲಿಲ್ಲ. ಏಳು ಗಂಟೆಗಳ ಕಾಲ ತಾಯಿ ಆಡು ಹೆರಿಗೆ ನೋವಿನಿಂದ ಬಳಲಿತು ಮತ್ತು ಇದರ ಬಳಿಕ ಅದು ವಿಚಿತ್ರವಾದ ಮಗುವಿನ ಜನ್ಮ ನೀಡಿತು.

ಆಡು ರೂಪಾಂತರಿತ ಮರಿಯಾಗಿ ಜನಿಸಿತು
ರೂಪಾಂತರಿತ ಆಡಿನ ಮರಿಗೆ ಎರಡು ತಲೆಗಳು, ನಾಲ್ಕು ಕಣ್ಣುಗಳು ಮತ್ತು ಮೂರು ಕಿವಿಗಳು ಇದ್ದರು. ವೈಕ್ಯಲದಿಂದಾಗಿ ಮರಿಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಎರಡು ತಿಂಗಳಿಂದ ತಾಯಿ ಆಡನ್ನು ಅದರ ಯಜಮಾನ ಸಾಕುತ್ತಲಿದ್ದ.

ಜನರು ಆ ಮರಿಯನ್ನು ಪಡೆಯಲು ಹಣ ಕೊಡಲು ಸಿದ್ಧರಾದರು!
ವಿಚಿತ್ರ ಆಡಿನ ಮರಿ ಜನಿಸಿದ ಚೀನಾದ ಗ್ರಾಮದಲ್ಲಿ ಈ ಸುದ್ದಿಯು ಹಬ್ಬಿದ ಬಳಿಕ ಈ ವಿಚಿತ್ರ ಸೃಷ್ಠಿಯನ್ನು ನೋಡಲು ಜನರು ಮುಗಿಬಿದ್ದರು. ವರದಿಗಳ ಪ್ರಕಾರ ಕೆಲವು ಜನರು ಇದನ್ನು ಖರೀದಿಸಲು ಮುಂದಾಗಿದ್ದರು. ಇದು ತುಂಬಾ ಪವಿತ್ರವೆಂದು ಅವರು ಭಾವಿಸಿದ್ದರು. ಆದರೆ ಅದ ಯಜಮಾನ ಮಾತ್ರ ಇದನ್ನು ಮಾರಲು ಮುಂದಾಗಲಿಲ್ಲ.

ನಾಲ್ಕು ದಿನದ ಬಳಿಕ ಅದು ಸಾವನ್ನಪ್ಪಿತು
ಆದರೆ ದುರಾದೃಷ್ಟವೆಂದರೆ ಈ ಆಡಿನ ಮರಿಯು ನಾಲ್ಕು ದಿನದ ಬಳಿಕ ಸಾವನ್ನಪ್ಪಿತು. ಚೀನಾದ ಪೂರ್ವೋತ್ತರ ಭಾಗವಾಗಿರುವ ಯೆಝೈಯಲ್ಲಿ ಕಾಣಿಸಿಕೊಂಡಿರುವ ಅತಿಯಾದ ಚಳಿಯಿಂದಾಗಿ ಈ ಮರಿ ಸಾವನ್ನಪ್ಪಿದೆ ಎಂದು ವರದಿಗಳು ತಿಳಿಸಿವೆ.



Click it and Unblock the Notifications
