Latest Updates
-
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ!
ಪುರುಷರ ಬಗ್ಗೆ ಮಹಿಳೆಯರು ತಿಳಿಯಬೇಕಾದ ಏಳು ರಹಸ್ಯಗಳು
ಪುರುಷರು ಹಾಗೂ ಮಹಿಳೆಯರ ದೇಹ ಪ್ರಕೃತಿಯು ತುಂಬಾ ಭಿನ್ನವಾಗಿ ಇರುವುದು. ಅದೇ ರೀತಿ ಅವರ ಮನೋಬಲ ಕೂಡ. ಪುರುಷರು ಮಾನಸಿಕವಾಗಿ ಹೆಚ್ಚು ಬಲಿಷ್ಠರು, ಮಹಿಳೆಯರು ಮಾನಸಿಕವಾಗಿ ಅಷ್ಟು ಪ್ರಬಲರಲ್ಲ ಎನ್ನುವ ಮಾತುಗಳು ಇದೆ. ಆದರೆ ಮಹಿಳೆಯರು ವಿವಾಹದ ಬಳಿಕ ತಮ್ಮ ಸಂಗಾತಿ ಜತೆಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಪುರುಷರಿಗೆ ಮಹಿಳೆಯರು ಹೇಳದೆ ಇರುವಂತಹ ವಿಚಾರಗಳು ಹಲವಾರು ಇದೆ. ಇದನ್ನು ಅವರು ಯಾವತ್ತೂ ತಮ್ಮ ಪ್ರಿಯತಮ ಅಥವಾ ಪತಿಗೆ ಹೇಳುವುದಿಲ್ಲ. ಅದೇ ರೀತಿಯಾಗಿ ಪುರುಷರು ಕೂಡ ಕೆಲವೊಂದು ರಹಸ್ಯಗಳನ್ನು ಕಾಪಾಡಿಕೊಂಡು ಬರುವರು. ಇದನ್ನು ಅವರು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಅದು ರಹಸ್ಯವಾಗಿ ಇರುವುದು. ಈ ಲೇಖನದಲ್ಲಿ ಮಹಿಳೆಯರು ಪುರುಷರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವೊಂದು ರಹಸ್ಯ ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಪುರುಷರಲ್ಲಿ ಕೂಡ ಕೆಲವು ರಹಸ್ಯಗಳು ಇವೆ!
ಮಹಿಳೆಯರಿಗೆ ನಿಜವಾಗಿಯೂ ಏನು ಬೇಕು? ಅವರನ್ನು ಡೇಟಿಂಗ್‌ಗೆ ಕರೆಯಬೇಕೇ ಅಥವಾ ಈ ಸಂಬಂಧಕ್ಕೆ ಇನ್ನು ಸ್ವಲ್ಪ ಸಮಯ ನೀಡಬೇಕು? ಅವರ ಮನಸ್ಥಿತಿ ಪದೇ ಪದೇ ಬದಲಾಗಲು ಕಾರಣಗಳು ಏನು? ಅವರು ಇಂದು ಕೋಪಗೊಳ್ಳಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳು ಪುರುಷರ ತಲೆಯಲ್ಲಿ ಓಡುತ್ತಿರುತ್ತದೆ. ಈ ಎಲ್ಲಾ ಅಂಶಗಳಿಂದಾಗಿ ಮಹಿಳೆಯರು ಪುರುಷರನ್ನು ತುಂಬಾ ಗೊಂದಲಕ್ಕೀಡು ಮಾಡುವರು. ಪುರುಷರ ಮನಸ್ಸಿನಲ್ಲಿ ಇರುವಂತಹ ರಹಸ್ಯಗಳನ್ನು ಮಹಿಳೆಯು ಹೊರಗೆ ಹಾಕಲು ಬಯಸುವಳು. ಈ ರಹಸ್ಯಗಳನ್ನು ತಿಳಿದುಕೊಂಡರೆ, ಆಗ ಆಕೆಗೆ ಹೊಂದಾಣಿಕೆ ಮಾಡಿಕೊಳ್ಳಲು ತುಂಬಾ ಸುಲಭವಾಗುವುದು. ಪುರುಷರಲ್ಲಿ ಕೆಲವೊಂದು ಸಲ ಮನಸ್ಥಿತಿ ಬದಲಾವಣೆ ಆದ ವೇಳೆ ನೀವು ಅವರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದು. ಪುರುಷರ ಬಗ್ಗೆ ಇರುವ ಕೆಲವೊಂದು ರಹಸ್ಯಗಳನ್ನು ತಿಳಿಯಬೇಕು.

ಮುದ್ದಾಡುವುದನ್ನು ಆತ ಇಷ್ಟಪಡುವನು
ಇದನ್ನು ಆತ ಬಾಯಿ ಬಿಟ್ಟು ಹೇಳುವುದಿಲ್ಲ ಮತ್ತು ನೀವು ಹೀಗೆ ಮಾಡಿದರೂ ಅದು ಆತನಿಗೆ ಇಷ್ಟವಾಗದೆ ಇರಬಹುದು. ಆದರೆ ಆತನಿಗೆ ಮುದ್ದಾಡುವುದು ಇಷ್ಟವಾಗಿರುವುದು. ಇದನ್ನು ಒಪ್ಪಿಕೊಳ್ಳಲು ಆತ ಹಿಂಜರಿಯುತ್ತಾನೆ. ಯಾಕೆಂದರೆ ಮುದ್ದಾಡುವುದು ಯಾವಾಗಲೂ ಮಹಿಳೆಯರಿಗೆ ಸಂಬಂಧಿಸಿದ ವಿಚಾರವೆಂದು ಈ ಜಗತ್ತು ಕೂಡ ಹೇಳುತ್ತದೆ. ಅದಾಗ್ಯೂ, ಮುದ್ದಾಡುವ ಮೂಲಕವಾಗಿ ಅವರು ತಮ್ಮ ಸಂಗಾತಿ ಜತೆಗೆ ಒಳ್ಳೆಯ ಸಂಪರ್ಕ ಸಾಧಿಸಲು ನೆರವಾಗುವುದು. ಯಾವುದೇ ಕಾರಣವಿಲ್ಲದೆ ಅವರು ಮುದ್ದಾಡುವುದನ್ನು ಬಯಸುವರು.

ಆತ ಎಲ್ಲಾ ಸಮಯದಲ್ಲೂ ತಾನು ಬಲಿಷ್ಠನಾಗಿರಲು ಬಯಸಲ್ಲ
ಪುರುಷರು ತುಂಬಾ ಕಠಿಣವಾಗಿ ಇರುವರು ಮತ್ತು ಅವರು ಅದೇ ರೀತಿಯಾಗಿ ಇರಬೇಕು ಎಂದು ಬಯಸುವರು ಕೂಡ. ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ಅಥವಾ ಯಾವುದಾದರೂ ಸಾಹಸಕಾರಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದಾಗಿ ಅವರು ತುಂಬಾ ಬಲಿಷ್ಠರು ಎಂದು ಭಾವನೆ ಬರುವುದು. ಅವರು ನಿಮ್ಮ ಭದ್ರತೆ ಹಾಗೂ ಆರೈಕೆ ಬಗ್ಗೆ ಗಮನಹರಿಸುವರು. ಆದರೆ ಇದೇ ವೇಳೆ ಅವರಿಗೆ ನಿಮ್ಮಿಂದ ಬೆಂಬಲವು ಬೇಕಾಗಿರುವುದು. ಸಂಬಂಧದಲ್ಲಿ ಇವರು ತುಂಬಾ ಬಲಿಷ್ಠರಾಗಿದ್ದರೂ, ಕೆಲವೊಂದು ಸಲ ಇವರಿಗೆ ಭಾವನಾತ್ಮಕ ಬೆಂಬಲ ಬೇಕಾಗಿರುವುದು. ನೀವು ಸಂಬಂಧದಲ್ಲಿ ಇದ್ದರೆ ಆಗ ನೀವು ಭಾವನಾತ್ಮಕ ಬೆಂಬಲ ನೀಡುವುದರಿಂದ ಪ್ರಮುಖ ಪಾತ್ರ ವಹಿಸಬಹುದು.

ನಿಮಗೆ ತಿಳಿಯದೆ ಇರುವಂತಹ ನಿಮ್ಮ ವಿಚಾರಗಳನ್ನು ಆತ ಇಷ್ಟಪಡುತ್ತಿರಬಹುದು!
ಪುರುಷರ ಬಗ್ಗೆ ತಿಳಿಯದೆ ಇರುವಂತಹ ದೊಡ್ಡ ರಹಸ್ಯದಲ್ಲಿ ಇದು ಒಂದಾಗಿದೆ. ನೀವು ಕೂದಲನ್ನು ಕಟ್ಟಿಕೊಳ್ಳುವ ರೀತಿ, ರಸ್ತೆ ದಾಟುವ ವೇಳೆ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿಯುವ ರೀತಿ ಹೀಗೆ ಹಲವಾರು ವಿಚಾರಗಳು ಆತನಿಗೆ ಇಷ್ಟವಾಗಿರುವುದು. ಇದು ನಿಮ್ಮ ಬಗ್ಗೆ ಆತನಲ್ಲಿ ಹುಚ್ಚು ಎಬ್ಬಿಸುತ್ತಿರಬಹುದು ಮತ್ತು ನಿಮಗೆ ಇದರ ಬಗ್ಗೆ ತಿಳಿದಿರದು. ಪುರುಷರು ಯಾವಾಗಲೂ ಮಹಿಳೆಯರನ್ನು ಆರಾಧಿಸುವರು ಮತ್ತು ಇದನ್ನು ಅವರು ತುಂಬಾ ನಯ ಹಾಗೂ ಅರ್ಥಪೂರ್ಣವಾಗಿ ಮಾಡುವರು.

ಕೆಲವೊಮ್ಮೆ ನಿಮ್ಮ ಧಾರವಾಹಿಗಳು ಮತ್ತು ಸಿನಿಮಾಗಳು ಆತನಿಗೆ ಇಷ್ಟವಾಗಬಹುದು!
ಭಾನುವಾರದ ರಜಾದಿನದಂದು ತುಂಬಾ ಬೋರ್ ಅನಿಸುವ ಸಿನಿಮಾ ನೋಡುವುದು ಆತನಿಗೆ ಇಷ್ಟವಾಗದೆ ಇರಬಹುದು. ಆದರೆ ಕೆಲವೊಂದು ಸಲ ಆತನಿಗೆ ನೀವು ನೋಡುವಂತಹ ಬೋರ್ ಹೊಡೆಸುವ ಸಿನಿಮಾ ಹಾಗೂ ಧಾರವಾಹಿಗಳು ಇಷ್ಟವಾಗಬಹುದು. ಇದನ್ನು ಆತ ಒಪ್ಪಿಕೊಳ್ಳದೆ ಇರಬಹುದು. ಆದರೆ ಇದನ್ನು ನೋಡಿ ಆತ ಕಣ್ಣೀರು ಹಾಕಬಹುದು ಮತ್ತು ನಿಮ್ಮೊಂದಿಗೆ ಕುಳಿತು ಆ ಸಿನಿಮಾ ವೀಕ್ಷಿಸಬಹುದು.

ಋತುಚಕ್ರದ ವೇಳೆ ಆತನಿಗೆ ಭೀತಿ ಆಗುವುದು
ನೀವು ಪ್ರತೀ ತಿಂಗಳು ಋತುಚಕ್ರದ ವೇಳೆ ಸ್ನಾಯು ಸೆಳೆತ, ತಲೆನೋವು ಮತ್ತು ಮನಸ್ಥಿತಿ ಬದಲಾವಣೆ ಅಂತಹ ಸಮಸ್ಯೆಗಳು ಎದುರಿಸಬಹುದು. ಋತುಚಕ್ರಕ್ಕೆ ಮೊದಲು ಅಥವಾ ಬಳಿಕ ಕೂಡ ಕೆಲವು ಸಮಸ್ಯೆ ಎದುರಿಸಬಹುದು. ಆದರೆ ಆತ ಕೂಡ ಇಂತಹ ಸಮಯದಲ್ಲಿ ನಿಮ್ಮ ಸಮಸ್ಯೆಯಿಂದಾಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನೀವು ಆತನೊಂದಿಗೆ ಜಗಳವಾಡಬಹುದು. ತಪ್ಪಾಗಿರುವ ಪ್ರತಿಯೊಂದು ವಿಚಾರಕ್ಕೂ ಆತನನ್ನು ದೂರಬಹುದು. ಹಾರ್ಮೋನು ಬದಲಾವಣೆಯು ಅತಿಯಾಗುತ್ತಿರುವ ಮಹಿಳೆಯರು ಚಾಕಲೇಟ್ ಸೇವಿಸುವುದನ್ನು ಹೆಚ್ಚಿಸಬಹುದು. ಇದರಿಂದ ಆತ ಚಾಕಲೇಟ್ ನ್ನು ಅತಿಯಾಗಿ ಖರೀದಿ ಮಾಡಬೇಕಾಗಿ ಬರಬಹುದು.

ಆತನಿಗೆ ಪ್ರಶಂಸೆಯು ಇಷ್ಟವಾಗುವುದು
ಪುರುಷರು ಯಾವಾಗಲೂ ಗಟ್ಟಿ ಹೃದಯದ ವ್ಯಕ್ತಿಗಳು ಎಂದು ನಾವು ಭಾವಿಸಿರುತ್ತೇವೆ. ಇದರಿಂದಾಗಿ ಅವರಿಗೆ ಪ್ರಶಂಸೆಯು ಇಷ್ಟವಾಗುವುದಿಲ್ಲ ಎಂದು ಮಹಿಳೆಯರು ಭಾವಿಸಿರುವರು. ಆದರೆ ಇದು ಮಹಿಳೆಯರು ಭಾವಿಸಿದಂತೆ ಇಲ್ಲ. ಪುರುಷರಿಗೆ ಕೂಡ ಕೆಲವೊಂದು ಸಂದರ್ಭದಲ್ಲಿ ಪ್ರಶಂಸೆಯು ಬೇಕು ಎಂದು ಅನಿಸುವುದು. ಮಹಿಳೆಯರು ಬಯಸಿದಂತೆ ಪುರುಷರಿಗೆ ಕೂಡ ಪ್ರಶಂಸೆ ಬೇಕಾಗಿರುವುದು. ನೀವು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಿ ಎಂದು ಹೇಳಿದರೆ, ಆಗ ಆತನ ದಿನ ಮತ್ತು ಆತ್ಮವಿಶ್ವಾಸವು ಆ ದಿನ ಉನ್ನತ ಮಟ್ಟದಲ್ಲಿ ಇರುತ್ತದೆ.

ನಿಮ್ಮನ್ನು ಆಕರ್ಷಿಸಲು ಆತ ಹಲವಾರು ಕೆಲಸಗಳನ್ನು ಮಾಡಬಹುದು
ದುಬಾರಿ ಉಡುಗೊರೆ, ಸುಂದರ ಹೂವಿನ ಗುಚ್ಛ ಅಥವಾ ಚಾಕಲೇಟ್ ಗಳು ಮಾತ್ರ ನಿಮ್ಮನ್ನು ಆಕರ್ಷಿಸಲು ಆತ ಮಾಡುವಂತಹ ಕೆಲಸ ಎಂದು ಮಹಿಳೆಯರು ಭಾವಿಸಿರಬಹುದು. ಇದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ಆತ ಪ್ರತಿಯೊಂದು ಕೆಲಸವನ್ನು ನಿಮ್ಮನ್ನು ಆಕರ್ಷಿಸಲು ಮಾಡುತ್ತಾನೆ. ಆತನ ವರ್ತನೆಯು ಸ್ವಾಭಾವಿಕ ಎಂದು ನಿಮಗೆ ಅನಿಸಬಹುದು. ಆದರೆ ಆಳವಾಗಿ ನೋಡಿದರೆ ಆತ ನಿಮ್ಮ ಗಮನ ಸೆಳೆಯುವ ಕಾರಣದಿಂದಾಗಿ ಈ ರೀತಿಯಲ್ಲಿ ವರ್ತಿಸುತ್ತಾನೆ. ನಿಮ್ಮ ಗಮನ ತನ್ನತ್ತ ಸೆಳೆಯಲು ಆತ ಕೆಲವು ಕೆಲಸಗಳನ್ನು ಮಾಡಬಹುದು.



Click it and Unblock the Notifications











