For Quick Alerts
ALLOW NOTIFICATIONS  
For Daily Alerts

  ನೋಡಿ ಈ 6 ರಾಶಿಯವರು ಅತಿಯಾಗಿ ಆಲೋಚಿಸುತ್ತಾರಂತೆ

  By Hemanth
  |

  ಆಲೋಚನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಕೆಲವರು ತುಂಬಾ ಆಳವಾಗಿ ಆಲೋಚಿಸಿದರೆ, ಇನ್ನು ಕೆಲವರು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಇದೆಲ್ಲವೂ ಮನುಷ್ಯರಲ್ಲಿರುವಂತಹ ನಡವಳಿಕೆಗಳು. ಆದರೆ ಈ ಆಲೋಚನೆಗಳಿಗೆ ಕೂಡ ನಿಮ್ಮ ರಾಶಿಚಕ್ರಗಳು ಕಾರಣವಾಗುತ್ತದೆ ಎಂದರೆ ಆಗ ಕೆಲವರು ಇದನ್ನು ಬಿಡ್ಯಪ್ಪ ಎಂದು ಕಡೆಗಣಿಸಿಬಿಡಬಹುದು. ಇದು ನಿಜ.

  ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿಯೇ ನೀವು ಆಲೋಚನೆ ಮಾಡುತ್ತೀರಿ. ಕೆಲವು ರಾಶಿಯಗಳು ಯಾವುದೇ ವಿಚಾರದ ಬಗ್ಗೆ ಅತಿಯಾಗಿ ಆಲೋಚನೆ ಮಾಡಿದರೆ, ಇನ್ನು ಕೆಲವು ಅಷ್ಟು ಗಾಢವಾಗಿ ಚಿಂತಿಸಲ್ಲ. ತುಂಬಾ ಅತಿಯಾಗಿ ವಿಶ್ಲೇಷಣೆ ಮಾಡುವಂತಹ ರಾಶಿಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ. ಇದು ಯಾವ ರಾಶಿಗಳು ಎಂದು ತಿಳಿಯಲು ತಯಾರಾಗಿ....

  1.ಮಿಥುನ: ಮೇ 21- ಜೂನ್ 20

  1.ಮಿಥುನ: ಮೇ 21- ಜೂನ್ 20

  ಮಿಥುನ ರಾಶಿಯವರ ತಲೆಯಲ್ಲಿ ತುಂಬಾ ವಿಷಯಗಳು ಹರಿದಾಡುತ್ತಿರುವುದು. ಇವರು ತುಂಬಾ ಆಲೋಚನೆ ಮಾಡುವರು ಮತ್ತು ತಮ್ಮ ಆಲೋಚನೆಗಳನ್ನು ಉತ್ಸಾಹದಿಂದ ಇತರರೊಂದಿಗೆ ಹಂಚಿಕೊಳ್ಳುವರು. ಇವರು ಯಾವಾಗಲೂ ಇತರರೊಂದಿಗೆ ಸಾಮಾಜಿಕವಾಗಿ ಕಾಲ ಕಳೆಯಲು ಬಯಸುವರು ಮತ್ತು ಇವರ ಬುದ್ಧಿಯು ಯಾವತ್ತೂ ಆಲೋಚಿಸುವುದನ್ನು ನಿಲ್ಲಿಸುವುದಿಲ್ಲ. ಏನು ಮಾತನಾಡಬೇಕು ಅಥವಾ ಹಿಂದೆ ಏನು ಮಾತನಾಡಿದ್ದೇವೆ ಎನ್ನುವ ಬಗ್ಗೆ ಅವರು ಆಲೋಚಿಸುತ್ತಾ ಇರುವರು. ಇವರು ಯಾವಾಗಲೂ ಪ್ರಶ್ನೆ ಕೇಳುತ್ತಲಿರುತ್ತಾರೆ. ಇವರಿಗೆ ಒಂದು ಶಬ್ಧದ ಉತ್ತರವು ತೃಪ್ತಿ ನೀಡಲ್ಲ. ಯಾಕೆಂದರೆ ಇವರು ಸಂಗಾತಿಯೊಂದಿಗೆ ಆಳವಾದ ಮಾತುಕತೆಯಲ್ಲಿ ತೊಡಗಲು ಬಯಸುವರು. ಇವರು ತುಂಬಾ ಜಾಣರಾಗಿರುವ ಕಾರಣ ವಿಷಯಗಳನ್ನು ತುಂಬಾ ಕ್ಲಿಷ್ಟವಾಗಿಸುವರು.

  2.ಮಕರ: ಡಿ.23-ಜ.20

  2.ಮಕರ: ಡಿ.23-ಜ.20

  ಯಾವುದೇ ಕ್ರಮ ತೆಗೆದುಕೊಳ್ಳಲು ಮಕರ ರಾಶಿಯವರು ಮೊದಲ ಹೆಜ್ಜೆಯನ್ನಿಡುವರು. ಇವರ ಸುತ್ತಲು ಎಲ್ಲವೂ ಸರಿಯಾಗಿದೆಯಾ ಎಂದು ಮೊದಲು ತಿಳಿದುಕೊಳ್ಳುವರು. ಒಳ್ಳೆಯದನ್ನು ಮಾಡಲು ಯಾವುದರತ್ತ ಗಮನಹರಿಸಬೇಕು ಎನ್ನುವ ಬಗ್ಗೆ ಇವರು ತುಂಬಾ ಆಲೋಚನೆ ಮತ್ತು ಪರಿಶೀಲನೆ ನಡೆಸುವರು. ಇವರು ಸೂಕ್ತ ಸಮಯ ಬರಲಿ ಎಂದು ಕಾಯುವುದಿಲ್ಲ ಮತ್ತು ಇವರು ಸಣ್ಣ ವಿಚಾರಗಳು ಸರಿಯಾಗಿರದಿದ್ದರೆ ಅದನ್ನು ಸರಿಪಡಿಸಬಲ್ಲರು.

  3. ಕುಂಭ: ಜ.21- ಫೆ.18

  3. ಕುಂಭ: ಜ.21- ಫೆ.18

  ಕುಂಭ ರಾಶಿಯವರು ಆರಾಮ ಮಾಡುವುದು ಮತ್ತು ನಿಟ್ಟುಸಿರು ಬಿಡುವುದು ತುಂಬಾ ಕಠಿಣ. ಇವರು ತಲೆಯಲ್ಲಿ ಹಲವಾರು ರೀತಿಯ ಹೊಸ ಆಲೋಚನೆಗಳು ಬರುವುದು ಮತ್ತು ಹಳೆಯ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುವರು. ಸಮಸ್ಯೆಗೆ ಉತ್ತರ ಸಿಗುವ ತನಕ ಅವರು ವಿಶ್ರಾಂತಿ ಮಾಡಲ್ಲ. ಇವರು ಅತಿಯಾಗಿ ಸಂಭ್ರಮಪಡುವರು ಮತ್ತು ಜೀವನದಲ್ಲಿ ನಡೆಯುವ ಸಣ್ಣಸಣ್ಣ ವಿಚಾರಗಳ ಬಗ್ಗೆಯೂ ಚಿಂತೆ ಮಾಡುವರು. ಇನ್ನೊಂದೆಡೆಯಲ್ಲಿ ಇವರು ತುಂಬಾ ಕ್ರಿಯಾತ್ಮಕವಾಗಿರುವರು ಮತ್ತು ಇವರ ಬುದ್ಧಿಯು ಹಲವಾರು ಆಲೋಚನೆ ಮಾಡುವುದು. ಇವರು ಕ್ರಿಯಾತ್ಮಕವಾಗಿರುವಂತಹ ವ್ಯಕ್ತಿಗಳು.

  4.ಕನ್ಯಾ: ಆ.24-ಸೆ. 23

  4.ಕನ್ಯಾ: ಆ.24-ಸೆ. 23

  ಕನ್ಯಾ ರಾಶಿಯವರು ಮಾಹಿತಿ ಪಡೆಯುವ ವ್ಯಕ್ತಿಗಳು. ಹೊಸ ವಿಷಯಗಳನ್ನು ಪಡೆಯಲು ಮತ್ತು ಕಲಿಯಲು ಇವರು ಇಂಟರ್ನೆಟ್ ನಲ್ಲಿ ಗಂಟೆಗಟ್ಟಲೆ ವ್ಯಯಿಸುವರು. ಒಂದು ಸಲ ಇವರಿಗೆ ನೆಟ್ ನಲ್ಲಿ ಹೊಸ ವಿಚಾರಗಳು ಸಿಕ್ಕಿದರೆ ಆಗ ಅವರನ್ನು ಅಲ್ಲಿಂದ ಎಬ್ಬಿಸುವುದು ತುಂಬಾ ಕಷ್ಟ. ಇವರು ಹೊಸ ವಿಚಾರಗಳಲ್ಲಿ ಎಷ್ಟು ಮುಳುಗಿ ಹೋಗಿರುತ್ತಾರೆಂದರೆ ಅವರಿಗೆ ಸಮಯ ಕಳೆದಿರುವುದೇ ತಿಳಿಯಲ್ಲ. ಇವರು ಮಾಡುವಂತಹ ವಿಚಾರಗಳು ಎಷ್ಟು ಪ್ರಭಾವ ಬೀರುತ್ತದೆ ಎಂದರೆ ಇವರ ಆಲೋಚನೆಗಳು ಎಷ್ಟೇ ಕಷ್ಟಪಟ್ಟರೂ ನಿಲ್ಲಲ್ಲ.

  5.ಧನು: ನ.23-ಡಿ.22

  5.ಧನು: ನ.23-ಡಿ.22

  ಧನು ರಾಶಿಯವರಿಗೆ ಒಂದು ನಿರ್ಧಾರ ಮಾಡುವುದು ತುಂಬಾ ಕಠಿಣ. ಇವರು ಯಾವುದಾದರೂ ಹೊಸ ಕೆಲಸ ಆರಂಭಿಸುವ ಮೊದಲು ಅದರ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿರುವರು. ಇವರು ನಿಜವಾಗಿಯೂ ಹೊಸತನ್ನು ಆರಂಭಿಸುವ ಮೊದಲು ಅದರ ಅಣಕು ಮಾಡುವರು ಮತ್ತು ಇದರ ಬಗ್ಗೆ ಅವರಿಗೆ ಪಶ್ಚಾತ್ತಾಪ ಕೂಡ ಆಗುವುದು. ಇವರು ಯಾವುದೇ ವಿಚಾರಕ್ಕಾಗಿ ತುಂಬಾ ಸಮಯ ಹಾಗೂ ಹಣ ವಿನಿಯೋಗಿಸುವರು.

   6. ವೃಶ್ಚಿಕ: ಅ.24-ನ.22

  6. ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರು ತುಂಬಾ ಆಳವಾಗಿರುವರು ಮತ್ತು ಇವರು ಪ್ರತಿಯೊಂದರಲ್ಲೂ ಅರ್ಥ ಹುಡುಕಲು ಬಯಸುವರು. ಇವರ ಜೀವನದಲ್ಲಿ ನಡೆದಿರುವ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡುವಲ್ಲಿ ಇವರು ಸಮಯವು ವ್ಯರ್ಥವಾಗುವುದು ಮತ್ತು ಇದರ ಬಗ್ಗೆ ಅವರಿಗೆ ತಿಳಿಯಲ್ಲ. ಇವರು ಪರಿಣಾಮಗಳ ಬಗ್ಗೆ ಚಿಂತೆ ಮಾಡುವರು ಮತ್ತು ಇವರಲ್ಲಿ ಯಾವಾಗಲೂ ಪ್ಲಾನ್ ಬಿ ತಯಾರಾಗಿರುವುದು. ಇವರ ಆಲೋಚನೆಗೆ ಹೆಚ್ಚಿನ ಮೆದುಳಿನ ಶಕ್ತಿ ಹಾಗೂ ಸಮಯ ಬೇಕಾಗುವುದು. ನಿಮ್ಮ ರಾಶಿ ಇದರಲ್ಲಿ ಇದೆಯಾ? ನೀವು ಇದೇ ರೀತಿಯಲ್ಲಿ ಆಲೋಚಿಸುತ್ತೀರಾ ಎನ್ನುವುದನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

  English summary

  Zodiac Signs Who Overthink Little Things

  Astrology is a guide that would not only help you get the best advice in the form of horoscopes, but it will also help you learn more about your personality in detail.The brain of these zodiac signs never shuts. Having long walks, meditation, pilates or even therapy does not seem to help them from over-analysing everything. They love to think a little extra all the time. Check out their list.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more