Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಈ ರಾಶಿಚಕ್ರದವರು ಅತ್ಯಂತ ಆಕ್ರಮಣಶೀಲ ಮತ್ತು ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವರು!
ಆಸೆ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಇರುವ ಸಾಮಾನ್ಯವಾದ ಗುಣ. ಆಸೆ ಇಲ್ಲದೆಯೇ ವ್ಯಕ್ತಿ ಯಾವುದೇ ಸಾಧನೆ ಅಥವಾ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಮನುಷ್ಯನು ತನಗಿರುವ ಆಸೆಯಿಂದಲೇ ಒಂದು ಗುರಿಯನ್ನು ಹೊಂದುತ್ತಾನೆ. ನಂತರ ಆ ಗುರಿಯ ಸಾಧನೆಗಾಗಿ ಸಾಕಷ್ಟು ಶ್ರಮಿಸುತ್ತಾನೆ ಎನ್ನಲಾಗುವುದು. ಕೆಲವೊಮ್ಮೆ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಸಾಕಷ್ಟು ಅನಾಚಾರಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ.
ಕೆಲವರು ತಮ್ಮ ಆಸೆಯ ಪೂರೈಸಿಕೊಳ್ಳಲು ಎಂತಹ ಕೆಲಸವನ್ನು ಮಾಡಲು ಸಹ ಸಿದ್ಧರಾಗುತ್ತಾರೆ. ಅವರ ಕೆಲಸವನ್ನು ಪೂರೈಸಿಕೊಳ್ಳಲು ಇತರರನ್ನು ಬಳಸಿಕೊಳ್ಳುವುದು, ಕೋಪವನ್ನು ವ್ಯಕ್ತಪಡಿಸುವುದು ಅಥವಾ ಹಿಂಸಾತ್ಮಕ ವರ್ತನೆಯನ್ನು ಸಹ ತೋರುವ ಸಾಧ್ಯತೆಗಳಿರುತ್ತವೆ. ತಮಗೆ ಬೇಕು ಎಂದ ವಸ್ತುಗಳನ್ನು ಅಥವಾ ವ್ಯಕ್ತಿಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಸಾಕಷ್ಟು ಆಕ್ರಮಣಶೀಲ ಪ್ರವೃತ್ತಿಯನ್ನು ತೋರುವ ಸಾಧ್ಯತೆಗಳಿರುತ್ತವೆ.
ನಮಗೆ ಆಸೆ ಎನ್ನುವುದು ಒಂದು ಮಿತಿಯಲ್ಲಿ ಇರಬೇಕು. ನಾವು ಬಯಸಿದ ವಸ್ತು ಅಥವಾ ವ್ಯಕ್ತಿಗಳು ನಮಗೆ ಸಿಗದೆ ಇದ್ದರೆ ಅದರ ಬಗ್ಗೆ ಆಕ್ರೋಶ ಅಥವಾ ದಾಳಿ ಮಾಡುವುದು ಸೂಕ್ತವಲ್ಲ. ಬದಲಿಗೆ ಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ಒಂದು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಆಗ ನಮ್ಮಿಂದ ಇತರರಿಗೆ ತೊಂದರೆ ಉಂಟಾಗುವುದನ್ನು ತಡೆಯಬಹುದು. ನಮ್ಮಿಂದ ಇತರರಿಗೆ ನೋವಾಗುವುದನ್ನು ತಡೆಯಬಹುದು. ಆದರೆ ಕೆಲವರು ಇಂತಹ ಸೂಕ್ಷ್ಮ ಸಂಗತಿಗಳನ್ನು ಅರ್ಥೈಸಿಕೊಳ್ಳುವುದಿಲ್ಲ. ಕೇವಲ ತಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎಂದು ಬಯಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ತಮಗೆ ಬೇಕೆಂದ ವಿಷಯದ ಬಗ್ಗೆ ಅಥವಾ ಅವರಿಗೆ ಇಷ್ಟವಾಗುವ ಸಂಗತಿಗಳಿಗಾಗಿ ಸಾಕಷ್ಟು ದಾಳಿ ಹಾಗೂ ಆಕ್ರಮಣಶೀಲ ಪ್ರವೃತ್ತಿಯನ್ನು ತೋರುತ್ತಾರೆ. ಅವರ ಅಂತಹ ಸ್ವಭಾವಕ್ಕೆ ಕಾರಣ ಅವರ ರಾಶಿಚಕ್ರದ ಪ್ರಭಾವ ಎಂದು ಹೇಳಲಾಗುವುದು. ಕೆಲವು ರಾಶಿಚಕ್ರದವರ ಮೇಲೆ ಗ್ರಹಗತಿಗಳ ಪ್ರಭಾವವು ಉಂಟಾಗುವುದರಿಂದ ಅವರು ಸಾಕಷ್ಟು ಆಕ್ರಮಣಶೀಲ ಮತ್ತು ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವರು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು? ಅವರ ಸ್ವಭಾವಗಳು ಹೇಗಿರುತ್ತವೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಮೇಷ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಬಹಿರ್ಮುಖಿ ಸ್ವಭಾವದವರಾಗಿರುತ್ತಾರೆ. ಇವರಿಗೆ ಯುದ್ಧ ಮಾಡುವುದು, ಹಿಂಸೆ ಮಾಡುವುದು ಹಾಗೂ ಅಸಹ್ಯವಾಗಿ ಕಾಣುವುದರಲ್ಲಿ ಯಾವುದೇ ಹಿಂಜರಿಕೆ ಇರುವುದಿಲ್ಲ. ಇವರು ಸಹಜವಾಗಿಯೇ ಹಿಂಸೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರು ಕೆಲವು ವಿಷಯ ಅಥವಾ ಸಂಗತಿಗಳಿಗೆ ಸಾಕಷ್ಟು ಹಿಂಸಾತ್ಮಕ ವರ್ತನೆಯನ್ನು ತೋರುವರು. ಅದರ ಬಗ್ಗೆ ಯಾವುದೇ ಕೀಳರಿಮೆಗೆ ಒಳಗಾಗುವುದಿಲ್ಲ. ಬದಲಿಗೆ ತಮಗೆ ಬೇಕೆನಿಸಿದ ವಸ್ತುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವರು.

ಮೇಷ
ವಿಜಯವನ್ನು ಹಂಬಲಿಸುವ ವ್ಯಕ್ತಿಗಳು. ತಮ್ಮ ಸೋಲನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವುದಿಲ್ಲ. ಇವರಿಗೆ ತಾವು ಹಾಗೂ ತಮ್ಮವರೇ ಸದಾ ಮೇಲ್ಮಟ್ಟದಲ್ಲಿ ಇರಬೇಕು ಎಂದು ಬಯಸುತ್ತಾರೆ. ಹಾಗೊಮ್ಮೆ ನೆರವೇರದೆ ಇದ್ದರೆ ಆಗ ತಮ್ಮ ನಿಜ ವರ್ತನೆಯನ್ನು ತೋರುವುದರ ಮೂಲಕ ಬೇಕಿರುವುದನ್ನು ಪಡೆದುಕೊಳ್ಳುತ್ತಾರೆ. ಹಾಗೊಮ್ಮೆ ಸಿಗುವುದಿಲ್ಲ ಎನಿಸಿದಾಗ ಹಿಂಸಾತ್ಮಕ ವರ್ತನೆ ತೋರುವುದರ ಮೂಲಕ ಬೇಸರವನ್ನುಂಟುಮಾಡುವರು.

ವೃಷಭ
ಇವರು ಸ್ವಭಾವತಃ ಶಾಂತ ಮತ್ತು ಸ್ಥಿರ ಚಿತ್ತದವರು ಎನ್ನಲಾಗುವುದು. ಆದರೆ ಇವರು ಅತಿಯಾಗಿ ಬಯಸಿದ ವಸ್ತುಗಳು ದೊರೆಯದೆ ಇರುವಾಗ ಅದನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡುವರು. ಪ್ರಯತ್ನವು ಸಾಲದು ಎಂದೆನಿಸಿದಾಗ ಹಿಂಸಾತ್ಮಕ ವರ್ತನೆ ಹಾಗೂ ಆಕ್ರಮಣ ಶೀಲ ಪ್ರವೃತ್ತಿಯನ್ನು ಸುಲಭವಾಗಿ ತೋರುವರು. ತಮ್ಮ ಮಾರ್ಗದಲ್ಲಿ ಸಂಗತಿಗಳು ಇಲ್ಲ ಎನಿಸಿದಾಗ ತಮ್ಮ ಸೀಮೆಯನ್ನು ಮೀರಿ ಮುಂದುವರಿಯುವರು. ಇವರು ಸಹನೆ ಹಾಗೂ ಅವಕಾಶವನ್ನು ಕಳೆದುಕೊಂಡಾಗ ಹಿಂಸಾತ್ಮಕ ವರ್ತನೆಯನ್ನು ತೋರುವರು ಎಂದು ಹೇಳಲಾಗುವುದು.

ಸಿಂಹ
ಬೇಕಿದ್ದನ್ನು ಪಡೆದುಕೊಳ್ಳಲು ಸಾಕಷ್ಟು ಸಾಹಸ ಹಾಗೂ ಹಿಂಸಾತ್ಮಕ ವರ್ತನೆಯನ್ನು ತೋರುವ ವ್ಯಕ್ತಿಗಳಲ್ಲಿ ಸಿಂಹ ರಾಶಿಯ ವ್ಯಕ್ತಿಗಳು ಒಬ್ಬರಾಗಿರುತ್ತಾರೆ ಎನ್ನಲಾಗುವುದು. ಸಮಾಜದಲ್ಲಿ ಅಥವಾ ಒಂದು ಸಮೂಹದಲ್ಲಿ ಸಾಕಷ್ಟು ಆಕರ್ಷಣೆ ಮತ್ತು ಕೇಂದ್ರ ಬಿಂದುವಿನಂತಹ ವ್ಯಕ್ತಿಯಾಗಿರಲು ಬಯಸುತ್ತಾರೆ. ಎಲ್ಲಾ ಸಂಗತಿಯಲ್ಲೂ ತಾವು ಉತ್ತಮ ಹಾಗೂ ಒಳ್ಳೆಯದನ್ನು ಪಡೆದುಕೊಳ್ಳಬೇಕು ಎನ್ನುವಂತಹ ಮಹಾ ಆಸೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರಲ್ಲಿ ತಾಳ್ಮೆಯ ಕೊರತೆ ಇರುವುದರಿಂದ ಅಸಹನೆ ಹಾಗೂ ಬಹುಬೇಗ ನಿರಾಶೆಗೆ ಒಳಗಾಗುವರು. ಅಂತಹ ಸಂದರ್ಭದಲ್ಲಿ ಹಿಂಸಾತ್ಮಕ ವರ್ತನೆಗಳು ಹೊರ ಬೀಳುವುದು.

ಸಿಂಹ
ಹಿಂಸಾತ್ಮಕ ವರ್ತನೆ ಅಥವಾ ನಿರ್ಧಾರವನ್ನು ಕೈಗೊಂಡ ಆ ಕ್ಷಣದಲ್ಲಿ ಭವಿಷ್ಯದ ಕುರಿತು ಅಥವಾ ವರ್ತಮಾನದ ಸ್ಥಿತಿಯ ಕುರಿತು ಕೊಂಚವೂ ಯೋಚಿಸುವುದಿಲ್ಲ. ಕೃತ್ಯ ಎಸಗಿದ ನಂತರ ಅಥವಾ ಅವರ ಮನಸ್ಸಿಗೆ ಬಂದಿದ್ದನ್ನು ನಡೆಸಿದ ಬಳಿಕ ಉಂಟಾಗುವ ಹಾನಿ ಅಥವಾ ಅನರ್ಥದ ಬಗ್ಗೆ ಯೋಚಿಸುತ್ತಾರೆ. ಬಹುತೇಕ ಸಂದರ್ಭದಲ್ಲಿ ವಿಷಾದಿಸುತ್ತಾರೆ ಎನ್ನಲಾಗುವುದು. ಇವರು ತಾವು ಕೈಗೊಂಡ ನಿರ್ಧಾರದ ಕುರಿತು ಸಾಕಷ್ಟು ಚಿಂತನೆ ನಡೆಸುವ ಅಗತ್ಯವಿರುತ್ತದೆ.

ಕನ್ಯಾ
ಕನ್ಯಾ ರಾಶಿಯ ವ್ಯಕ್ತಿಗಳು ಹಿಂಸಾತ್ಮಕ ಕೆಲಸಕ್ಕಾಗಿಯೇ ಸದಾ ಸಿದ್ಧರಾಗಿರುವುದಿಲ್ಲ. ಇವರು ಸಾಕಷ್ಟು ವಿಷಯದ ಕುರಿತು ಹಾಗೂ ತಮ್ಮ ಆಸೆ ಆಕಾಂಕ್ಷೆಗಳ ಬಗ್ಗೆ ಸಾಕಷ್ಟು ಚಿಂತನೆ ಹಾಗೂ ವಿಶ್ಲೇಷಣೆ ನಡೆಸುತ್ತಾರೆ. ಹಿಂಸಾಚಾರ ಎನ್ನುವುದು ಈ ರಾಶಿಯವರ ಭಾವನೆಗಳಿಗೆ ವಿರುದ್ಧವಾದ ಸಂಗತಿಯಾಗಿರುತ್ತದೆ. ಆದರೆ ಕೆಲವು ವಿಷಯಕ್ಕೆ ಸಂಬಂಧಿಸಿದ ದ್ವೇಷ ಹಾಗೂ ನಿರಾಶೆಯ ಭಾವನೆಯು ಅವರ ರಕ್ತವನ್ನು ಕುದಿಯುವಂತೆ ಮಾಡುವುದು. ಆ ಸಂದರ್ಭದಲ್ಲಿ ಅವರು ಆಕ್ರಮಣ ಶೀಲ ಪ್ರವೃತ್ತಿ ಅಥವಾ ಹಿಂಸಾತ್ಮಕ ಕೆಲಸವನ್ನು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ.

ಕನ್ಯಾ
ಕನ್ಯಾ ರಾಶಿಯವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಬಯಸಿದ್ದೆಲ್ಲವನ್ನೂ ಬಲು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಅದು ಅವರ ಗ್ರಹಗತಿಗಳ ಹಾಗೂ ರಾಶಿಚಕ್ರದ ಪ್ರಭಾವದಿಂದಲೇ ಉಂಟಾಗುವುದು ಎನ್ನಲಾಗುತ್ತದೆ. ಆತ್ಮೀಯ ವ್ಯಕ್ತಿಯ ಸಾವಿನಿಂದ ಅಥವಾ ವಿಷಯಗಳಿಂದ ಉಂಟಾದ ನೋವುಗಳು ಅವರಲ್ಲಿ ಹಿಂಸಾತ್ಮಕ ಭಾವನೆಯನ್ನು ಕೆರಳಿಸುವುದು ಎಂದು ಹೇಳಲಾಗುವುದು.

ವೃಶ್ಚಿಕ
ವೃಶ್ಚಿಕ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಶ್ರಮ ಜೀವಿಗಳು. ತಮ್ಮ ಗುರಿ ಸಾಧನೆಗಾಗಿ ಸತತವಾದ ಪರಿಶ್ರಮವನ್ನು ಕೈಗೊಳ್ಳುವರು. ಇವರ ಶ್ರಮವು ನಿರರ್ಥಕವಾಗುತ್ತಿದೆ ಅಥವಾ ಅಂದಕೊಂಡ ಫಲಿತಾಂಶ ದೊರೆಯದೆ ಇದ್ದಾಗ ಸಾಕಷ್ಟು ಬೇಸರಕ್ಕೆ ಒಳಗಾಗುವರು. ಅವರ ನಿರಾಶೆಯ ಭಾವನೆಯು ಒಂದು ಬಗೆಯ ಹಿಂಸಾತ್ಮಕ ಕ್ರಿಯೆಗೆ ಪ್ರಚೋದನೆ ನೀಡುವುದು. ಇವರು ಯಾರಿಗೂ ಹಿಂಸೆ ಮಾಡಲು ಬಯಸದ ವ್ಯಕ್ತಿಗಳು. ಆದರೆ ಅವರಿಗೆ ಬೇರೆಯವರಿಂದ ತೊಂದರೆ ಉಂಟಾಯಿತು ಎಂದಾಗ ಅದನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಅದಕ್ಕಾಗಿ ಸಾಕಷ್ಟು ಪ್ರತಿಕ್ರಿಯೆ ಹಾಗೂ ಹಿಂಸಾತ್ಮಕ ಪ್ರತ್ಯುತ್ತರವನ್ನು ನೀಡುವ ಸಾಧ್ಯತೆಗಳಿವೆ.

ವೃಶ್ಚಿಕ
ಇವರು ತಮಗೆ ನೋವುಂಟುಮಾಡಿದ ವ್ಯಕ್ತಿಗಳ ಜೀವನವನ್ನು ಹಾಳುಮಾಡುವುದರ ಮೂಲಕ ಸಂತೋಷವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ. ಆಗ ಅವರಿಗೆ ಸಣ್ಣ ಪುಟ್ಟ ಹಿಂಸಾತ್ಮಕ ಪ್ರತಿಕ್ರಿಯೆಯು ಸಮಾಧಾನವನ್ನು ತಂದುಕೊಡುವುದಿಲ್ಲ. ಸಣ್ಣ ಪುಟ್ಟ ತೊಂದರೆ ಅಥವಾ ಹಿಂಸೆ ಮಾಡುವುದಕ್ಕೆ ಅಷ್ಟಾಗಿ ಆಸಕ್ತಿ ಹೊಂದಿರುವುದಿಲ್ಲ. ಏನೇ ಕೃತ್ಯ ಕೈಗೊಂಡರು ಅದು ನಶಿಸಿ ಹೋಗಬೇಕು ಎಂಬ ಗಾಢವಾದ ನಕಾರಾತ್ಮಕ ಭಾವನೆಯನ್ನು ಹೊಂದುವರು. ಅಲ್ಲದೆ ತಾವು ಮಾಡಿದ ತಪ್ಪಿಗೆ ಸಾಕಷ್ಟು ಸಮರ್ತನೆ ನೀಡುವುದರ ಮೂಲಕ ಸಾಧಿಸುತ್ತಾರೆ. ಅಲ್ಲದೆ ಅವರ ಕೃತ್ಯದ ಬಗ್ಗೆ ಯಾವುದೇ ಬೇಸರದ ಭಾವನೆಯನ್ನು ಹೊಂದುವುದಿಲ್ಲ ಎನ್ನಲಾಗುವುದು.

ಧನು
ಸದಾ ಸ್ವತಂತ್ರರಾಗಿ ಇರಬೇಕು. ಸಾಹಸದ ಕೆಲಸದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಪ್ರಯಾಣದಲ್ಲಿ ನಿರತರಾಗಿರುವ ವ್ಯಕ್ತಿಗಳು ಧನು ರಾಶಿಯ ವ್ಯಕ್ತಿಗಳು ಎನ್ನಲಾಗುವುದು. ಇವರಿಗೆ ಯಾವುದೇ ಬಗೆಯ ಗಾಢವಾದ ಭಾಂಧವ್ಯಗಳ ಸೆಳೆತ ಇರುವುದಿಲ್ಲ ಎನ್ನಲಾಗುವುದು. ಇವರ ರಾಶಿಚಕ್ರದ ಅನ್ವಯ ಇವರಿಗೆ ಏನಾದರೂ ಕೆಡುಕಾದರೆ ಅಥವಾ ತಪ್ಪಾದ ಸಂಗತಿಗಳು ಎದುರಾದರೆ ಅದಕ್ಕೆ ಚಿತ್ರಹಿಂಸೆಯ ರೂಪದಲ್ಲಿ ಪ್ರತ್ಯುತ್ತರವನ್ನು ನೀಡುತ್ತಾರೆ. ಧನು ರಾಶಿಯವರಿಗೆ ಹಾನಿಯನ್ನುಂಟುಮಾಡಿದರೆ ಅದನ್ನು ಅವರು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಬದಲಿಗೆ ಸಾಕಷ್ಟು ಹಿಂಸೆಯನ್ನು ನೀಡುವುದರ ಮೂಲಕ ಮನಸ್ಸಿಗೆ ಸಮಾಧಾನವನ್ನು ತಂದುಕೊಳ್ಳುವರು. ಇವರ ಪ್ರತ್ಯುತ್ತರ ಭಯಾನಕ ಮತ್ತು ಘೋರ ನಿರಾಕರಣೆಯ ರೂಪದಲ್ಲಿ ಇರುತ್ತದೆ.

ಧನು
ಕೆಲವು ವಿಷಯಗಳಲ್ಲಿ ಸೃಜನಾತ್ಮಕವಾಗಿದೆ ಎಂದು ಅನಿಸಿದಾಗ ಅದರ ಬಗ್ಗೆ ಸಾಕಷ್ಟು ಶ್ರಮ ಹಾಗೂ ಕಾಳಜಿಯನ್ನು ಕೈಗೊಳ್ಳುವರು. ಎಲ್ಲಾ ಹಂತದಲ್ಲೂ ಶ್ರಮಿಸುವರು. ಅದೇ ಸಂಗತಿಯಿಂದ ಅಥವಾ ವ್ಯಕ್ತಿಗಳಿಂದ ಒಂದು ನೋವಿನ ಸಂಗತಿ ನಡೆಯಿತು ಎಂದಾದರೂ ಅದನ್ನು ಹಿಂಸಾತ್ಮಕ ರೀತಿಯಲ್ಲಿ ಅಥವಾ ಆಕ್ರಮಣ ಶೀಲ ಪ್ರವೃತ್ತಿ ತೋರುವುದರ ಮೂಲಕ ಮುಕ್ತಾಯ ಕಾಣಿಸುವರು. ಕೆಲವೊಮ್ಮೆ ಮಾನಸಿಕವಾಗಿ ಬಹುಬೇಗ ಅಸಮಧಾನವನ್ನು ಪಡೆದುಕೊಳ್ಳುವ ವ್ಯಕ್ತಿಗಳು ಇವರು ಎನ್ನಲಾಗುವುದು.



Click it and Unblock the Notifications











