For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರದ ಅನ್ವಯದಲ್ಲಿ ಇವರು ನಿಮಗೆ ಕೆಟ್ಟ ಶತ್ರುಗಳಾಗುವರು

By Deepu
|

ಕೆಲವೊಮ್ಮೆ ನಾವು ಎಷ್ಟೇ ಒಳ್ಳೆಯ ನಡವಳಿಕೆಯಿಂದ ವರ್ತಿಸಿದರೂ ಕೆಲವರು ನಮ್ಮ ಶತ್ರುಗಳಾಗುತ್ತಾರೆ. ಇನ್ನು ಕೆಲವೊಮ್ಮೆ ಯಾವುದಾದರೂ ಒಂದು ಪುಟ್ಟ ಸಮಸ್ಯೆಯಿಂದ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡರೆ ಕೊನೆಗೆ ಅದೇ ದೊಡ್ಡ ವೈಮನಸ್ಸು ಬೆಳೆಯುತ್ತಾ ಶತ್ರುಗಳಾಗಿ ಪರಿವರ್ತನೆ ಹೊಂದುವ ಸಾಧ್ಯತೆಗಳಿರುತ್ತವೆ. ಕೆಲವರು ಮೇಲ್ನೋಟಕ್ಕೆ ಬಹಳ ಒಳ್ಳೆಯವರಂತೆ ಕಂಡುಬಂದರೂ ಆಂತರಿಕವಾಗಿ ನಮ್ಮ ಬಗ್ಗೆ ಶತ್ರುಗಳ ಭಾವನೆಯನ್ನು ಹೊಂದಿರುತ್ತಾರೆ. ನಾಳೆ ಏನು ಎನ್ನುವುದೇ ಯಾರಿಗೂ ತಿಳಿದಿರುವುದಿಲ್ಲ. ಆದರೂ ನಮ್ಮನಡುವೆ ದ್ವೇಷ ಹಾಗೂ ವೈರತ್ವ ಎನ್ನುವ ಭಾವ ಇರುತ್ತದೆ.

ಹೌದು, ಕುಟುಂಬ ಹಾಗೂ ಸಮಾಜದಲ್ಲಿ ನಮಗೆ ಕೆಲವೊಮ್ಮೆ ಕೆಲವು ವ್ಯಕ್ತಿಗಳು ಶತ್ರುಗಳಾಗಿ ಉಳಿದುಕೊಳ್ಳುತ್ತಾರೆ. ಅವರನ್ನು ನೋಡಲು ಹಾಗೂ ಅವರೊಂದಿಗೆ ಮಾತನಾಡಲು ಸಹ ಮನಸ್ಸು ಬಯಸುವುದಿಲ್ಲ. ಬದಲಿಗೆ ಒಂದಿಷ್ಟು ಅಂತರದಲ್ಲಿಯೇ ಉಳಿದುಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ಕೇವಲ ವ್ಯಕ್ತಿಯ ಆಂತರಿಕ ಭಾವನೆಯಷ್ಟೇ ಕಾರಣವಾಗಿರುವುದಿಲ್ಲ. ಬದಲಿಗೆ ರಾಶಿಚಕ್ರಗಳ ಪ್ರಭಾವವೂ ಕಾರಣವಾಗಿರುತ್ತವೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ರಾಶಿಚಕ್ರದ ಅನ್ವಯದಲ್ಲಿ ಯಾರು ಶತ್ರುಗಳಾಗಿ ಉಳಿಯುತ್ತಾರೆ? ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗಾಗಿ ಈ ಮುಂದೆ ವಿವರಣೆಯನ್ನು ನೀಡಿದೆ...

ಮೇಷ

ಮೇಷ

ಮೇಷ ರಾಶಿಯವರಿಗೆ ಇನ್ನೊಬ್ಬ ಮೇಷರಾಶಿಯ ವ್ಯಕ್ತಿಗಳೇ ಶತ್ರುಗಳಾಗಿರುತ್ತಾರೆ. ಇದು ಒಂದು ಆಶ್ಚರ್ಯ ಎನ್ನುವ ರೀತಿಯಲ್ಲಿ ಕಾಣಿಸಬಹುದು. ಆದರೆ ಇದು ನಿಜ. ಏಕೆಂದರೆ ಈ ರಾಶಿಯವರಲ್ಲಿ ನಾಯಕತ್ವ ಗುಣ, ನೈಸರ್ಗಿಕ ಸಾಮರ್ಥ್ಯ ಹಾಗೂ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಇನ್ನೊಬ್ಬ ಮೇಷ ರಾಶಿಯವರು ಇದೇ ಗುಣಗಳಿಂದ ಸ್ಪರ್ಧೆಯನ್ನು ನೀಡುತ್ತಾರೆ. ಹಾಗಾಗಿ ಅವರಿಗೆ ಅವರ ರಾಶಿಯವರೇ ಶತ್ರುಗಳಾಗಿ ತಿರುಗುತ್ತಾರೆ.

ವೃಷಭ

ವೃಷಭ

ಈ ರಾಶಿಚಕ್ರದವರಿಗೆ ಸಿಂಹ ರಾಶಿಯವರು ಅತ್ಯಂತ ಶತ್ರುಗಳಾಗಿ ಉಳಿಯುವರು. ಈ ಎರಡು ರಾಶಿಯವರ ತುಲನೆ ಮಾಡಿದರೆ ಇವರಿಬ್ಬರೂ ತದ್ವಿರುದ್ಧವಾದ ಗುಣವನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಹೆಚ್ಚು ಕ್ರಿಯಾಶಿಲರಾಗಿ ವರ್ತಿಸಿದರೆ ವೃಷಭ ರಾಶಿಯವರು ಹುರುಪಿಲ್ಲದ ಮೊಂಡುತನವನ್ನು ವರ್ತಿಸುತ್ತಿರುತ್ತಾರೆ ಎನ್ನಲಾಗುವುದು. ಹಾಗಾಗಿ ಇವರಿಬ್ಬರಲ್ಲಿ ಸಾಮ್ಯತೆ ಮತ್ತು ಹೊಂದಾಣಿಕೆ ಇರುವುದಿಲ್ಲ.

ಮಿಥುನ

ಮಿಥುನ

ಮಿಥುನ ರಾಶಿಯವರಿಗೆ ಶತ್ರುಗಳಾಗಿ ಕರ್ಕ ರಾಶಿಯವರು ಉಳಿಯುತ್ತಾರೆ. ಮಿಥುನ ರಾಸಿಯವರು ಸಾಮಾನ್ಯವಾಗಿ ಸ್ವತಂತ್ರ, ಕುಖ್ಯಾತ ಹಾಗೂ ಕಾಳಜಿ ಮುಕ್ತ ವರ್ತನೆಯನ್ನು ತೋರುತ್ತಾರೆ. ಕರ್ಕ ರಾಶಿಯವರು ಸೂಕ್ಷ್ಮ ಮತ್ತು ಭಾವನಾತ್ಮಕ ವರ್ತನೆಯನ್ನು ತೋರುತ್ತಾರೆ. ಅಲ್ಲದೆ ಕರ್ಕ ರಾಶಿಯವರಲ್ಲಿ ಸಂವಹನದ ತೊಂದರೆ ಇರುತ್ತದೆ. ಇದು ಮಿಥುನ ರಾಶಿಯವರಿಗೆ ಇಷ್ಟವಾಗದ ಸಂಗತಿಗಳಾಗಿರುತ್ತದೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರ ಅತ್ಯಂತ ಶತ್ರುಗಳು ಎಂದರೆ ಕುಂಭ ರಾಶಿಯವರು. ಈ ಎರಡು ರಾಶಿಚಕ್ರದವರು ಆಕ್ರಮಣಕಾರಿ ಹಾಗೂ ಸ್ವ ಆಡಳಿತ ಸಂಕೇತವನ್ನು ಹೊಂದಿದ್ದಾರೆ. ಕನ್ಯಾ ರಾಶಿಯವರು ಹೆಚ್ಚು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿಗಳಂತೆ ತೋರುತ್ತಾರೆ. ಆದರೆ ಕುಂಭ ರಾಶಿಯವರು ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದರ ಮೂಲಕ ಕೆಲವೊಮ್ಮೆ ಆಕ್ರಮಣಕಾರಿ ಮತ್ತು ಹಠಾತ್ ವರ್ತನೆಯನ್ನು ತೋರುತ್ತಾರೆ. ಈ ಎರಡು ಚಿಹ್ನೆಗಳ ನಡುವೆ ಜಗಳ ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚು ತಲೆದೂರುತ್ತವೆ.

ತುಲಾ

ತುಲಾ

ಈ ರಾಶಿಯವರ ಕೆಟ್ಟ ಶತ್ರುಗಳು ಎಂದರೆ ಮಕರ ರಾಶಿಯವರು. ಇವರು ಇಬ್ಬರು ಕೆಲಸ ಮಾಡುವ ಸಂದರ್ಭದಲ್ಲಿ ಬಹಳಷ್ಟು ರಾಜಿಯನ್ನು ಮಾಡಿಕೊಳ್ಳಬೇಕಾಗುವುದು. ತುಲಾ ರಾಶಿಯವರು ಗುಣಮಟ್ಟದ ಸಮಯ ದೊರೆತಾಗ ಅದನ್ನು ಆನಂದಿಸಲು ಇಷ್ಟಪಡುತ್ತಾರೆ. ಅದೇ ಮಕರ ರಾಶಿಯವರು ಹೆಚ್ಚು ಶ್ರಮ ವಹಿಸಲು ಇಷ್ಟಪಡುತ್ತಾರೆ. ಇವರಿಬ್ಬರ ನಡುವೆ ಅಧಿಕ ಪ್ರಮಾಣದಲ್ಲಿ ಅನುಮಾನ ಪ್ರವೃತ್ತಿ ಇರುತ್ತದೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ಮತ್ತು ಕುಂಭ ರಾಶಿಯವರಲ್ಲಿ ಹೆಚ್ಚಿನ ಪ್ರಮಾಣದ ವೈರತ್ವ ಉಂಟಾಗುವುದು. ಇವರ ಸಂಬಂಧದಲ್ಲಿ ಹೆಚ್ಚಿನ ಅಸಮಾನತೆ ಉಂಟಾಗುವುದು. ಇವರಿಬ್ಬರ ನಡುವೆ ಪರಸ್ಪರ ಗೆಲುವಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಬ್ಬರ ನಡುವೆ ನಡೆಯುವ ವಾಗ್ವಾದದಲ್ಲಿ ಸೋಲಲು ಇಬ್ಬರೂ ಬಯಸುವುದಿಲ್ಲ. ಹಾಗಾಗಿ ಇವರು ಕೆಟ್ಟ ಶತ್ರುಗಳಾಗಿ ಉಳಿದುಕೊಳ್ಳುತ್ತಾರೆ.

ಧನು

ಧನು

ಧನು ರಾಶಿಯವರ ಕೆಟ್ಟ ವೈರಿಗಳು ಎಂದರೆ ಮೀನ ರಾಶಿಯವರು. ಇವರಲ್ಲಿರುವ ಅತಿಯಾದ ಸೂಕ್ಷ್ಮತೆಯು ಪರಸ್ಪರ ದ್ವೇಷಕ್ಕೆ ಕಾರಣವಾಗುವುದು. ಮೀನ ರಾಶಿಯವರು ಸಾಮಾನ್ಯವಾಗಿ ಅತಿಯಾದ ಒರಟು ತನವನ್ನು ಇಷ್ಟಪಡುವುದಿಲ್ಲ. ಆದರೆ ಧನು ರಾಶಿಯವರು ಧೈರ್ಯಶಾಲಿಗಳು ಹಾಗೂ ಮುಕ್ತರಾಗಿ ಇರಲು ಬಯಸುತ್ತಾರೆ. ಇವರಿಬ್ಬರ ಗುಣಗಳು ಪರಸ್ಪರ ಯಾವುದೇ ರೀತಿಯಲ್ಲೂ ಹೊಂದಾಣಿಕೆಯನ್ನು ಪಡೆದುಕೊಳ್ಳುವುದಿಲ್ಲ. ಹಾಗಾಗಿ ಇವರು ಶತ್ರುಗಳಾಗಿ ಉಳಿಯುತ್ತಾರೆ.

English summary

Zodiac Signs That Can Be Your Worst Enemies

We tend to get along with a few people with an instant connect, while there are those whom we just cannot connect with! This is something that you can relate to as per your birth signs. Certain connections just happen, while a few make us realise that it was just not meant to be! Here, in this article, we are revealing to you the facts about certain zodiac signs that can be your worst enemies.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more