ಜ್ಯೋತಿಷ್ಯದ ಪ್ರಕಾರ, ಈ 5 ರಾಶಿಯವರ ತುಂಬಾನೇ ಚಂಚಲ ಮನಸ್ಸಿನವರು!

Posted By: Deepu
Subscribe to Boldsky

ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಕುರಿತು ಮಾತನಾಡಬೇಕು ಎಂದರೆ ಅನೇಕ ವಿಚಾರಗಳು ಇರುತ್ತವೆ. ಕೆಲವೊಂದು ಉತ್ತಮ ಗುಣಗಳು, ಕೆಟ್ಟ ಗುಣಗಳು ಹಾಗೂ ಕೆಲವು ಮೊಂಡುತನದ ಸ್ವಭಾವ ಸೇರಿದಂತೆ ಎಲ್ಲವೂ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ. ಮೇಲ್ನೋಟಕ್ಕೆ ವ್ಯಕ್ತಿಯ ವ್ಯಕ್ತಿತ್ವವು ಪರಿಸರ ಮತ್ತು ಕುಟುಂಬದ ವಾತಾವರಣದ ಆಧಾರದ ಮೇಲೆ ವಿಕಸನವನ್ನು ಕಾಣುತ್ತದೆ ಎಂದು ಹೇಳಲಾಗುವುದು. ಆದರೆ ನಿಜಾರ್ಥದಲ್ಲಿ ಹೇಳುವುದಾದರೆ ಎಲ್ಲವೂ ಅವರ ಜಾತಕ ಹಾಗೂ ರಾಶಿಚಕ್ರದ ಪ್ರಭಾವವೇ ಆಗಿರುತ್ತದೆ ಎನ್ನಲಾಗುವುದು.

ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಋಣಾತ್ಮಕ ವ್ಯಕ್ತಿತ್ವದ ಗುಣಲಕ್ಷಣವನ್ನು ಹೊಂದಿರುತ್ತಾರೆ. ಅವರೊಂದಿಗೆ ವ್ಯವಹರಿಸುವುದು ಸ್ವಲ್ಪ ಕಷ್ಟದ ವಿಚಾರ. ಅವರೊಂದಿಗೆ ಪ್ರಣಯದ ವಿಚಾರವನ್ನು ಚರ್ಚಿಸುವುದು ಅಥವಾ ಡೇಟಿಂಗ್ ಹೋಗುವುದು ಅಥವಾ ಸ್ವಲ್ಪ ಸಮಯ ಕಳೆಯುವುದು ಎಂದರೆ ಅದೊಂದು ಕಷ್ಟದ ವಿಚಾರ ಆಗುವುದು. ನಿಜ, ಕೆಲವು ರಾಶಿ ಚಕ್ರದವರೊಂದಿಗೆ ಡೇಟಿಂಗ್ ಹೋಗುವುದು ಸ್ವಲ್ಪ ಕಷ್ಟ. ಅವರು ಸೂಕ್ತರೀತಿಯಲ್ಲಿ ಸ್ಪಂದಿಸರು. ಅಲ್ಲದೆ ಅವರು ಈ ವಿಚಾರದಲ್ಲಿ ಬಹಳಷ್ಟು ಇರಿಸುಮುರಿಸಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರದವರ ಗುಣಗಳು ಹೇಗಿರುತ್ತವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....  

ಕನ್ಯಾ: ಆಗಸ್ಟ್ 24- ಸೆಪ್ಟೆಂಬರ್ 23

ಕನ್ಯಾ: ಆಗಸ್ಟ್ 24- ಸೆಪ್ಟೆಂಬರ್ 23

ಈ ರಾಶಿಚಕ್ರದವರು ಬಹಳಷ್ಟು ಸ್ವಾವಲಂಬಿಯಾಗಿರುತ್ತಾರೆ. ಇವರು ಕೆಲವು ಸಂಬಂಧದಲ್ಲಿ ಇರಲು ಬಯಸುವುದಿಲ್ಲ. ಇತರರ ಬಗ್ಗೆ ತಿಳಿದುಕೊಳ್ಳಲು ಉತ್ಸಾಹ ಹಾಗೂ ಕುತೂಹಲವನ್ನು ಹೊಂದಿರುತ್ತಾರೆ. ಜೊತೆಗೆ ಇತರರ ತಪ್ಪನ್ನು ಕಂಡುಹಿಡಿಯುವುದರಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ಇವರು ಸಂಬಂಧವನ್ನು ಹೇಗೆ ತೆಗೆದುಕೊಳ್ಳಬೇಕು? ಎನ್ನುವುದರ ಬಗ್ಗೆ ಒಂದು ಮಿತಿಯನ್ನು ಹಾಕಿಕೊಂಡಿರುತ್ತಾರೆ. ಅದರಂತೆಯೇ ತಮ್ಮ ಪಾಲುದಾರರನ್ನು ಸ್ವೀಕರಿಸುತ್ತಾರೆ. ಇವರ ಬಗ್ಗೆ ಅರಿಯಲು ಸ್ವಲ್ಪ ಗೊಂದಲ ಉಂಟಾಗಬಹುದು.

ಕನ್ಯಾ: (ಮುಂದುವರಿದ ಭಾಗ)

ಕನ್ಯಾ: (ಮುಂದುವರಿದ ಭಾಗ)

ಇವರು ಪ್ರತಿಯೊಂದರ ಬಗ್ಗೆಯೂ ನಿರ್ಣಯ ನೀಡುವುದರ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಸಂಬಂಧದಲ್ಲಿ ಇರುವಾಗ ಉಸ್ತುವಾರಿ ತೆಗೆದುಕೊಳ್ಳಬೇಕು ಮತ್ತು ಅಧಿಕಾರವನ್ನು ವಹಿಸಿಕೊಳ್ಳಲು ಬಯಸುತ್ತಾರೆ. ಇವರು ಬಹುಬೇಗ ತಮ್ಮ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ. ಸಂಬಂಧವನ್ನು ನಿಯಂತ್ರಣದಲ್ಲಿ ಇಡಲು ಬಯಸುತ್ತಾರೆ.

ವೃಶ್ಚಿಕ: ಅಕ್ಟೋಬರ್ 24 - ನವೆಂಬರ್ 22

ವೃಶ್ಚಿಕ: ಅಕ್ಟೋಬರ್ 24 - ನವೆಂಬರ್ 22

ಇವರು ಡೇಟಿಂಗ್ ಬಂದಾಗ ಬಹಳ ಸಿಟ್ಟಿನಿಂದ ಕೂಡಿರಬಹುದು ಅಥವಾ ಬಹಳ ಶಾಂತ ಸ್ವಭಾವವನ್ನು ತೋರಬಹುದು. ಇವರ ಮನಸ್ಸು ಆಗಾಗ ಬದಲಾವಣೆಯನ್ನು ಕಾಣಬಹುದು. ಕೆಲವು ನಿಮಿಷದ ಹಿಂದೆ ತುಂಬಾ ಪ್ರೀತಿಯನ್ನು ತೋರಬಹುದು. ಸಂತೋಷದಿಂದ ಕೂಡಿರುವಂತೆ ಇದ್ದರೆ ಕೆಲವೇ ನಿಮಿಷದಲ್ಲಿ ಸಂಪೂರ್ಣವಾಗಿ ಮುಂಗೋಪವನ್ನು ತೋರಬಹುದು. ಅವರು ಎಲ್ಲಾ ಸಮಯದಲ್ಲೂ ಹೇಗೆ ಇರುತ್ತಾರೆ ಎನ್ನುವುದು ನಿರ್ಧರಿಸುವುದು ಕಷ್ಟ.

ವೃಶ್ಚಿಕ: (ಮುಂದುವರಿದ ಭಾಗ)

ವೃಶ್ಚಿಕ: (ಮುಂದುವರಿದ ಭಾಗ)

ಇವರು ಒಬ್ಬರೊಂದಿಗೆ ಪ್ರೀತಿಯಲ್ಲಿ ಬೀಳುವವರೆಗೂ ತಮ್ಮ ಹೃದಯವನ್ನು ತಾವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಮೂಲಕ ರಕ್ಷಿಸಿಕೊಳ್ಳುತ್ತಾರೆ. ಈ ಗುಣವು ಅವರಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ಹಾಗೂ ಇತರರೊಂದಿಗೆ ಸೂಕ್ತವಾದ ಸಂಬಂಧ ಹೊಂದಲು ಕಷ್ಟವಾಗುವುದು. ಇವರು ತಮ್ಮ ಸಂಗಾತಿಯ ಭಾವನೆಗಳನ್ನು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಾರೆ.

ಧನು: ನವೆಂಬರ್ 23 -ಡಿಸೆಂಬರ್22

ಧನು: ನವೆಂಬರ್ 23 -ಡಿಸೆಂಬರ್22

ಇವರು ಒಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದರೆ ಅವರೊಂದಿಗೆ ಬದ್ಧರಾಗಿರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆರಂಭದಿಂದಲೂ ಇವರು ಅಷ್ಟು ಭರವಸೆಯನ್ನು ಹೊಂದಿರುವುದಿಲ್ಲ. ಇವರು ಸಂಬಂಧವನ್ನು ಹೊಂದುವುದರ ಬಗ್ಗೆ ಖುಷಿ ಪಡುವುದಕ್ಕಿಂತ ಪ್ರೀತಿಯ ಹಿಂದೆ ಹೋಗಲು ಇಷ್ಟಪಡುತ್ತಾರೆ.

 ಧನು: (ಮುಂದುವರಿದ ಭಾಗ)

ಧನು: (ಮುಂದುವರಿದ ಭಾಗ)

ಇವರು ಹೆಚ್ಚು ಫ್ಲರ್ಟ್ ಮಾಡಲು ಮತ್ತು ಸಾಂದರ್ಭಿಕವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಯಾರೊಂದಿಗೂ ಗಮಭೀರವಾಗಿ ಇರಲು ಇಷ್ಟಪಡುವುದಿಲ್ಲ. ಇನ್ನೊಂದೆಡೆ ಇವರು ಹಠಾತ್ ಪ್ರವೃತ್ತಿಯನ್ನು ತೋರುವರು. ಈ ಸ್ವಭಾವವು ಇತರರೊಂದಿಗೆ ಸೇರಿಕೊಳ್ಳಲು ಅವರಿಗೆ ಕಷ್ಟವಾಗುವುದು.

ಮಕರ: ಡಿಸೆಂಬರ್ 23- ಜನವರಿ 20

ಮಕರ: ಡಿಸೆಂಬರ್ 23- ಜನವರಿ 20

ಈ ರಾಶಿಯವರು ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಸ್ಥಿರತೆಯನ್ನು ಹೊಂದಿರುತ್ತಾರೆ. ಇವರ ಪ್ರಾಯೋಗಿಕ ಸ್ವಭಾವವು ಕೆಲವು ಸಂದರ್ಭದಲ್ಲಿ ಆಶ್ಚರ್ಯವನ್ನು ಹುಟ್ಟಿಸಬಹುದು. ಇವರು ಪ್ರೀತಿಯ ವಿಚಾರ ಬಂದಾಗ ಅದರಿಂದ ದೂರ ಇರಲು ಇಷ್ಟಪಡುತ್ತಾರೆ. ಇದರಿಂದ ಅವರಿಗೆ ಇಷ್ಟ ಎಂದರ್ಥವಲ್ಲ.

ಮಕರ: (ಮುಂದುವರಿದ ಭಾಗ)

ಮಕರ: (ಮುಂದುವರಿದ ಭಾಗ)

ಇವರು ಡೇಟಿಂಗ್ ಹೊಂದಿರುವಾಗ ತಾವೊಂದು ಸಂದರ್ಶನ ಎದುರಿಸುತ್ತಿದ್ದೇವೆ ಎನ್ನುವ ಭಾವವನ್ನು ತಳೆದಿರುತ್ತಾರೆ. ಏಕೆಂದರೆ ಇವರು ಇತರರನ್ನು ತಿಳಿಯಲು ಕ್ರಮಬದ್ಧವಾದ ರೋಬಟ್ ಆಗಿರುತ್ತಾರೆ.

 ಕುಂಭ: ಜನವರಿ 21- ಫೆಬ್ರವರಿ 18

ಕುಂಭ: ಜನವರಿ 21- ಫೆಬ್ರವರಿ 18

ಇದೊಂದು ಸ್ವತಂತ್ರವಾದ ಚಿಹ್ನೆ. ಇವರು ನೈಸರ್ಗಿಕವಾಗಿಯೇ ಇವರು ಅಂತರ್ಮುಖಿ ವ್ಯಕ್ತಿತ್ವದವರಾಗಿರುತ್ತಾರೆ. ಇವರು ಜನರಿಂದ ಆದಷ್ಟು ದೂರ ಇರಲು ಇಷ್ಟ ಪಡುತ್ತಾರೆ. ಇತರರ ಮುಂದೆ ದುರ್ಬಲರಂತೆ ಕಾಣುವ ಬದಲು ದೂರ ಇರುವುದು ಲೇಸೆಂದು ಭಾವಿಸುತ್ತಾರೆ. ಈ ಸ್ವಭಾವದಿಂದ ಇವರು ಅತ್ಯಂತ ಶಾಂತ ಸ್ವಭಾವದವರು ಎಂದು ಪರಿಗಣಿಸಲಾಗುತ್ತೆ.

ಕುಂಭ: (ಮುಂದುವರಿದ ಭಾಗ)

ಕುಂಭ: (ಮುಂದುವರಿದ ಭಾಗ)

ಇವರು ಯಾರೊಂದಿಗಾದರೂ ತಪ್ಪು ಕಲ್ಪನೆಗೆ ಅಥವಾ ಬೇಸರಕ್ಕೆ ಒಳಗಾದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ಇವರ ಈ ಸ್ವಭಾವದಿಂದ ಅವರು ಜನರ ಸೂಕ್ತ ವರ್ತನೆ ಹಾಗೂ ನೈಜ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ಇತರರನ್ನು ಅರ್ಥಮಾಡಿಕೊಳ್ಳಲು ಇವರಿಗೆ ಕಷ್ಟವಾಗುವದು.

English summary

Zodiac Signs That Are The Most Difficult People To Date

There are many things that define a person's personality. From their maturity level of thinking to how easy it is to please them, a lot can be revealed by the zodiac signs of individuals. According to astrology, many individuals have negative astrological personality traits. These traits can make it almost impossible for anyone to deal with them, for example, date them!