ಈ ಆರು ರಾಶಿಯವರಲ್ಲಿ ದೇವರಂತಹ ಮನಸ್ಸಿದೆ ಹಾಗೂ ನಿಸ್ವಾರ್ಥಿಗಳು

Posted By: Arshad
Subscribe to Boldsky

ಕೆಲವು ಕೆಲಸಗಳನ್ನು ನಿರ್ವಹಿಸುವಾಗ ನಾವು ಈ ಕೆಲಸದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುತ್ತೇವೆ ಅಥವಾ ಅಗತ್ಯಕ್ಕೂ ಕೊಂಚ ಹೆಚ್ಚೇ ಕಾಳಜಿ ವಹಿಸುತ್ತೇವೆ. ಆದರೆ ಯಾವುದೇ ಕೆಲಸವನ್ನು ನಿಃಸ್ವಾರ್ಥವಾಗಿ ನಿರ್ವಹಿಸುವುದು ಒಂದು ಅಂತರ್ಗತ ಗುಣಲಕ್ಷಣವಾಗಿದೆ ಹಾಗೂ ಈ ಲಕ್ಷಣ ಕೆಲವು ರಾಶಿಯ ವ್ಯಕ್ತಿಗಳ ಪ್ರಮುಖ ಲಕ್ಷಣವೂ ಆಗಿದೆ.

ನಿಃಸ್ವಾರ್ಥ ಮನೋಭಾವದ ಗುಣ ಯಾವ ರಾಶಿಯ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ ಎಂಬುದನ್ನು ಇಂದಿನ ಪಟ್ಟಿಯಲ್ಲಿ ನೋಡೋಣ. ಈ ರಾಶಿಯ ವ್ಯಕ್ತಿಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ನೀವು ಊಹಿಸಿರಲಾರಿರಿ, ಬನ್ನಿ, ನೋಡೋಣ...

ಮೀನ:(ಫೆ. 19-ಮಾರ್ಚ್ 20)

ಮೀನ:(ಫೆ. 19-ಮಾರ್ಚ್ 20)

ಅತಿ ಹೆಚ್ಚು ನಿಃಸ್ವಾರ್ಥ ವ್ಯಕ್ತಿಗಳ ಈ ಪಟ್ಟಿಯಲ್ಲಿ ಮೀನ ರಾಶಿಯ ವ್ಯಕ್ತಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಇತರರ ಕೆಲಸ ಮಾಡಿಕೊಡುವುದರಲ್ಲಿ ಅಪಾರ ತೃಪ್ತಿ ಅನುಭವಿಸುತ್ತಾರೆ ಹಾಗೂ ಇದಕ್ಕಾಗಿ ಇವರು ತಮ್ಮ ಸಮಯವನ್ನು ಹೆಚ್ಚೇ ವಿನಿಯೋಗಿಸುತ್ತಾರೆ. ಇನ್ನೊಂದು ಮಗ್ಗುಲಲ್ಲಿ, ಇವರು ಇತರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೊರಡುವ ಹುಮ್ಮಸ್ಸಿನಲ್ಲಿ ತಮ್ಮ ಕರ್ತವ್ಯಗಳನ್ನೂ ಮರೆತುಬಿಡುತ್ತಾರೆ. ತಮ್ಮ ಸಹಾಯ ಪಡೆದವರಿಂದ ಇವರು ಧನ್ಯವಾದ ಪಡೆಯದೇ ಇದ್ದರೂ ನೆರವು ನೀಡಿದ ನೆಮ್ಮದಿಯನ್ನು ಪಡೆಯುತ್ತಾರೆ. ಇತರರು ಇವರ ಸಹಾಯವನ್ನು ಬೇಡಿದಾಗ ಇವರು 'ಇಲ್ಲ' ಅಥವಾ 'ಆಗದು' ಎಂಬ ಪದಗಳನ್ನು ಬಳಸಲು ತೀರಾ ಹಿಂಜರಿಯುತ್ತಾರೆ. ಇತರರ ನೆರವಿಗೆ ತಾವು ಲಭ್ಯರಿರುವುದನ್ನು ತೋರ್ಪಡಿಸಿಕೊಳ್ಳುವುದರಲ್ಲಿಯೇ ಇವರು ಸಂತೋಷಗೊಳ್ಳುತ್ತಾರೆ.

 ಕರ್ಕಾಟಕ (ಜೂನ್ 21- ಜುಲೈ 22)

ಕರ್ಕಾಟಕ (ಜೂನ್ 21- ಜುಲೈ 22)

ಈ ವ್ಯಕ್ತಿಗಳೂ ಅತಿಹೆಚ್ಚೇ ನಿಃಸ್ವಾರ್ಥಿಗಳಾಗಿರುತ್ತಾರೆ ಹಾಗೂ ಇವರ ಈ ಗುಣವನ್ನು ಗಮನಿಸಿದ ಇತರರು ಸಹಾಯಕ್ಕಾಗಿ ಈ ವ್ಯಕ್ತಿಗಳ ಬಳಿ ಮೊದಲು ಧಾವಿಸುತ್ತಾರೆ. ಅದರಲ್ಲೂ ತಮ್ಮ ಪ್ರೀತಿಪಾತ್ರರ ಸಮಸ್ಯೆಗಳನ್ನು ಇವರು ತಮ್ಮ ಸ್ವಂತ ಸಮಸ್ಯೆ ಎಂಬಂತೆ ಪರಿಗಣಿಸುವ ಹಾಗೂ ಎದುರಿನವರ ಸಮಸ್ಯೆಗಳು ಪರಿಹಾರವಾಗುವಲ್ಲಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುವವರಾಗಿರುತ್ತಾರೆ. ಇವರು ಸಮಸ್ಯೆ ಹೊಂದಿದ ವ್ಯಕ್ತಿಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಮಕರ (ಡಿ. 23- ಜ. 20)

ಮಕರ (ಡಿ. 23- ಜ. 20)

ಇವರ ವಿಶ್ವಾಸಾರ್ಹತೆ ಹಾಗೂ ನಂಬಿಕಸ್ತ ಮನೋಭಾವದ ಕಾರಣ ಈ ವ್ಯಕ್ತಿಗಳು ನಿಃಸ್ವಾರ್ಥ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವ್ಯಕ್ತಿಗಳು ಯಾವುದೇ ಯಾಚನೆಗೆ ನೆರವು ನೀಡುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇವರು ಸುಳ್ಳು ಸುಳ್ಳೇ ಸಹಾಯ ಮಾಡುವ ವಾಗ್ದಾನವನ್ನು ಎಂದೂ ನೀಡಲು ಇಷ್ಟಪಡುವುದಿಲ್ಲ. ಇತರರಿಗೆ ನೆರವಾಗುವ ನಿಟ್ಟಿನಲ್ಲಿ ಇವರು ತಮ್ಮ ಜೀವನವನ್ನೂ ಕೊಂಚ ಮಾರ್ಪಾಡಿಸಿಕೊಳ್ಳಲೂ ಹಿಂಜರಿಯುವುದಿಲ್ಲ.

ತುಲಾ: (ಸೆ 24-ಅ. 23)

ತುಲಾ: (ಸೆ 24-ಅ. 23)

ಇವರಿಂದಾಗಿ ಇತರರು ನಿರಾಶೆಗೊಳ್ಳುವುದನ್ನು ಈ ವ್ಯಕ್ತಿಗಳು ಸರ್ವಥಾ ಸಹಿಸುವುದಿಲ್ಲ. ಇತರರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಗಳೆನ್ನಿಸಿಕೊಳ್ಳಲು ಇವರು ತಮ್ಮ ಅಗತ್ಯತೆಗಳನ್ನು ತ್ಯಜಿಸುವ ಅಥವಾ ಬದಲಿಸಿಕೊಳ್ಳುವ ಮೂಲಕ ತಮ್ಮ ಆದ್ಯತೆಗಳನ್ನು ಕಡೆಗಣಿಸಲೂ ಇವರು ಹಿಂಜರಿಯುವುದಿಲ್ಲ. ಸಾಮಾನ್ಯವಾಗಿ ಇವರು ಸಮಸ್ಯೆಗೆ ಸಿಲುಕಿದ ವ್ಯಕ್ತಿಗಳ ನೆರವಿಗೆ ಧಾವಿಸಿ ಅವರ ಪರವಾಗಿ ವಾದಿಸುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೇ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಅಥವಾ ನಾಲ್ಕು ಜನರ ನಡುವೆ ಪ್ರಶಂಸೆ ಸಿಗದೇ ಹೋದರೆ ಮಾತ್ರ ಇವರು ಹೆಚ್ಚು ವ್ಯಾಕುಲತೆ ಅನುಭವಿಸುತ್ತಾರೆ. ಇವರು ಗುಟ್ಟನ್ನು ಕಾಪಾಡಿಕೊಳ್ಳುವವರೂ, ತಮಗೆ ಕಷ್ಟವಾದರೂ ಸರಿ, ಇದನ್ನು ರಟ್ಟು ಮಾಡದೇ ಇರುವ ವ್ಯಕ್ತಿಗಳಾಗಿರುತ್ತಾರೆ.

ಕನ್ಯಾ: ಆ 24-ಸೆ 23

ಕನ್ಯಾ: ಆ 24-ಸೆ 23

ತಮ್ಮ ಸುತ್ತ ಮುತ್ತ ಸಂಭವಿಸಿದ ಯಾವುದೇ ತೊಂದರೆ, ತಪ್ಪುಗಳು ಅಥವಾ ಏನಾದರೂ ಸಂಭವಿಸಬಾರದ ಸಂಗತಿ ಘಟಿಸಿದರೆ ಇವರು ಇದಕ್ಕೆ ತಮ್ಮನ್ನು ತಾವೇ ಜವಾಬ್ದಾರಿ ಎಂದು ಭಾವಿಸಿಕೊಳ್ಳುತ್ತಾರೆ. ಅಲ್ಲದೇ ಇವುಗಳನ್ನು ತಾವೇ ಸರಿಪಡಿಸಬೇಕು ಎಂದು ಬಲವಂತವಾಗಿ ತಮ್ಮನ್ನು ತಾವೇ ಒಡ್ಡಿಕೊಳ್ಳುವವರಾಗಿರುತ್ತಾರೆ. ಈ ತಪ್ಪುಗಳಿಗೂ ಇವರಿಗೂ ಸಂಬಂಧವೇ ಇಲ್ಲದಿದ್ದರೂ ಸರಿ, ಇವರು ತಮ್ಮನ್ನೇ ಹಳಿದುಕೊಂಡು ದುಃಖಿಸುವವರಾಗಿರುತ್ತಾರೆ. ಇವರು ಇತರರಿಗೆ ನೀಡುವ ಯಾವುದೇ ನೆರವಿನ ಬದಲಿಗೆ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ಇವರು ತಮ್ಮ ಸಹಾಯವನ್ನು ಕನಿಷ್ಟ ಪಕ್ಷ ಇತರರು ಗುರುತಿಸುವಂತಾಗಾಬೇಕು ಎಂದು ನಿರೀಕ್ಷಿಸುತ್ತಾರೆ.

ಕುಂಭ: (ಜ.21-ಫೆ 18)

ಕುಂಭ: (ಜ.21-ಫೆ 18)

ಒಂದು ವೇಳೆ ತಮ್ಮ ಸಹಾಯ ಅಗತ್ಯ ಹಾಗೂ6m.jpgಸೂಕ್ತ ಎಂದು ಇವರಿಗೆ ಅನ್ನಿಸಿದರೆ ಆ ಸಹಾಯ ನೀಡಲು ಇವರು ಎಂದೂ ಹಿಂಜರಿಯುವುದಿಲ್ಲ. ಇತರರನ್ನು ಸಂತೋಷಪಡಿಸಲು ಇವರು ತಮ್ಮ ಹಾದಿಯನ್ನು ಕೊಂಚ ಬದಲಿಸಿಕೊಳ್ಳುವುದಲ್ಲಿ ಹಿಂದೇಟು ಹಾಕುವುದಿಲ್ಲ. ಇನ್ನೊಂದು ಮಗ್ಗುಲಲ್ಲಿ, ಇವರು ಧನಾತ್ಮಕ ಬದಲಾವಣೆಗಾಗಿ ಹೋರಾಡುವವರೂ ಹಾಗೂ ಸಮಾಜದಲ್ಲಿ ಏನಾದರೂ ಒಳ್ಳೆಯದಾಗುವುದಾದರೆ ನಿಃಸ್ವಾರ್ಥ ಭಾವನೆಯಿಂದ ಕೆಲಸ ಮಾಡುವವರೂ ಆಗಿರುತ್ತಾರೆ. ಕ್ಷಿಪ್ರವಾಗಿ ಹೇಳಬೇಕೆಂದರೆ ಇವರು ಮಾನವತಾವಾದಿಗಳೂ ಉತ್ತಮ ವಕೀಲರೂ ಆಗಿರುತ್ತಾರೆ.

English summary

Zodiac Signs That Are Ranked To Be The Most Selfless Signs

When we do things, we generally tend to overdo them or are cautious of the outcome. But Do you know that being selfless is not an inbuilt ability, it may be due to our zodiac signs. Check out on the list of zodiac signs that are considered to be the most selfless zodiac signs. These signs are ranked as per their nature of being selfless. We bet you would not have imagined of these signs being listed here... Check them out...