Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 6 ರಾಶಿಯವರು ಸದಾ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಳ್ಳುತ್ತಾರಂತೆ!
ಒಂದು ವಿಚಾರವನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲಾ ಎಂದಾದರೆ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ. ಅದರಲ್ಲೂ ನಮ್ಮ ಮಾನಸಿಕ ಚಿಂತನೆಗಳು ಬೇರೆ ಬೇರೆ ಮಜಲುಗಳನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ತಪ್ಪು ಗ್ರಹಿಕೆಯಿಂದಾಗಿ ಮಾನಸಿಕ ಒತ್ತಡ ಹಾಗೂ ಚಿಂತೆಗಳು ಕಾಡುವ ಸಾಧ್ಯತೆಗಳು ಹೆಚ್ಚೆಂದೇ ಹೇಳಬಹುದು. ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಿಕೊಳ್ಳುವುದು ಬಹಳ ಒಳಿತು. ಏಕೆಂದರೆ ಸೂಕ್ಷ್ಮ ಗ್ರಹಿಕೆಯಿಂದ ಅನೇಕ ಸಮಸ್ಯೆಗಳನ್ನು ಬಹು ಬೇಗ ನಿವಾರಿಸಬಹುದು. ಆದರೆ ಅದೇ ತಪ್ಪು ಗ್ರಹಿಕೆಯನ್ನು ಮಾಡಿಕೊಳ್ಳುವುದರಿಂದ ಸಮಸ್ಯೆಗಳು ದ್ವಿಗುಣವಾಗುತ್ತಾ ಸಾಗುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಚಕ್ರದ ಪ್ರಭಾವದ ಅಡಿಯಲ್ಲೂ ಕೆಲವೊಮ್ಮೆ ವ್ಯಕ್ತಿಗಳೆಲ್ಲರೂ ತಪ್ಪು ಗ್ರಹಿಕೆಗೆ ಒಳಗಾಗುತ್ತಾರೆ. ನಂತರ ತಮ್ಮ ಚಿಂತನೆಗಳನ್ನು ಸುಧಾರಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿ ಕೆಲವು ಆಯ್ದ ರಾಶಿಚಕ್ರದವರು ಮಾತ್ರ ಪ್ರತಿಯೊಂದು ವಿಚಾರವನ್ನೂ ಸಹ ತಪ್ಪಾಗಿಯೇ ಗ್ರಹಿಸುತ್ತಾರೆ. ಕೇಳುವುದು ಅಥವಾ ನೋಡುವುದು ಒಂದು ಸಂಗತಿಯಾಗಿದ್ದರೆ ಇವರು ಮಾತ್ರ ಅದನ್ನು ಅರ್ಥೈಸಿಕೊಳ್ಳುವುದು ವಿಭಿನ್ನವಾಗಿರುತ್ತದೆ. ಹಾಗಾದರೆ ಆ ರಾಶಿಚಕ್ರದವರು ಯಾರು? ನೀವು ಆ ರಾಶಿಚಕ್ರದವರ ಅಡಿಯಲ್ಲಿಯೇ ಬರುತ್ತೀರಾ? ಎನ್ನುವುದನ್ನು ತಿಳಿದುಕೊಳ್ಳುವ ಆಸೆಯಿದ್ದರೆ ಈ ಮುಂದೆ ವಿವರಿಸಲಾದ ವಿಚಾರಗಳನ್ನು ಅರಿಯಿರಿ...

ಮೇಷ
ಈ ರಾಶಿಚಕ್ರದವರು ಹೆಚ್ಚಿನ ಸಮಯದಲ್ಲಿ ಅತಿಯಾದ ನಿರ್ಲಕ್ಷ್ಯ ಭಾವನೆಯನ್ನು ಹೊಂದಿರುತ್ತಾರೆ. ಇವರಲ್ಲಿ ಇರುವ ಹೆಮ್ಮೆ ಮತ್ತು ಮೊಂಡುತನದ ಸ್ವಭಾವವು ವಿಷಯವನ್ನು ಸೂಕ್ತವಾಗಿ ಅರಿತುಕೊಳ್ಳುವಲ್ಲಿ ಅಡ್ಡಿಯನ್ನುಂಟು ಮಾಡುವುದು. ಹಾಗಾಗಿ ಇವರು ಅನೇಕ ಸಂದರ್ಭದಲ್ಲಿ ವಿಷಯಗಳನ್ನು ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುವುದು. ಇನ್ನು ಮೇಷ ರಾಶಿಚಕ್ರದವರು ನಕಾರಾತ್ಮಕ ಚಿಂತನೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.ಅಲ್ಲದೆ ಈ ವರ್ಷದಲ್ಲಿ ನಿಮ್ಮನ್ನು ನೀವು ಹೇಗೆ ಸಂತೋಷಪಡಿಸಿ ಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಲು ಉತ್ತಮವಾದ ಸಮಯ ಎಂದು ಹೇಳಬಹುದು. ಆದರೆ ಇದು ಕೇವಲ ಒಂದೇ ರಾತ್ರಿಯಲ್ಲಿ ನಿರ್ಧರಿತವಾಗುವ ವಿಚಾರವಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಭಾವನೆಯನ್ನು ನೀವು ಸಂತೈಸುವುದು ಹಾಗೂ ಸಂತೋಷ ಪಡಿಸಿಕೊಳ್ಳುವ ಕೆಲಸವನ್ನು ಮುಂದುವರಿಸಬೇಕು.

ಸಿಂಹ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸೊಕ್ಕು ಹಾಗೂ ಅತಿಯಾದ ಮೊಂಡುತನದ ಸ್ವಭಾವದವರಾಗಿರುತ್ತಾರೆ. ಇವರು ತಮ್ಮ ಪ್ರೀತಿ ಪಾತ್ರರಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತಾರೆ. ಇವರು ಇಷ್ಟ ಪಡುವ ವ್ಯಕ್ತಿಗಳು ಸಹ ತಮ್ಮ ಹಾಗೆಯೇ ಭಾವನೆಯನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ವಾಸ್ತವದಲ್ಲಿ ಅದು ಸಾಧ್ಯವಾಗದೆ ಇದ್ದಾಗ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸರು. ಅಂತಹ ಸಮಯದಲ್ಲಿ ವ್ಯಕ್ತಿಯನ್ನು ಮತ್ತು ವಿಚಾರವನ್ನು ಇವರು ತಪ್ಪಾಗಿಯೇ ಅರ್ಥೈಸಿಕೊಳ್ಳುವರು.ಇನ್ನು ಈ ರಾಶಿವರು ಕಳೆದ ವರ್ಷದಲ್ಲಿ ಬಹಳಷ್ಟು ನೋವು ಹಾಗೂ ಅಡಚಣೆಗಳನ್ನು ಅನುಭವಿಸಿದ್ದರು ಎಂದು ಹೇಳಬಹುದು. ಆದರೆ ಈವರ್ಷ ಎಲ್ಲಾ ಬಗೆಯ ವಿಚಾರದಲ್ಲೂ ಸಂತೋಷ ಹಾಗೂ ಹೊಸತನವನ್ನು ಅನುಭವಿಸುವ ವರ್ಷ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾವಾಗ ಇವರು ತಮ್ಮ ಸಂತೋಷವನ್ನು ತಾವೇ ಅರಿತುಕೊಳ್ಳುತ್ತಾರೋ ಅಂದಿನಿಂದಲೇ ಸಂತೋಷದ ದಿನಗಳು ಆರಂಭವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ.

ಕನ್ಯಾ
ಈ ವ್ಯಕ್ತಿಗಳು ಮೇಲ್ನೋಟಕ್ಕೆ ಬಹಳ ಕಠಿಣ ವ್ಯಕ್ತಿಗಳಂತೆ ತೋರುತ್ತಾರೆ. ಕೆಲವೊಮ್ಮೆ ಇತರರ ಬಗ್ಗೆ ಇವರು ಅತಿಯಾದ ಕಾಳಜಿಯನ್ನು ತೋರುವರು. ಸ್ವಭಾವತಹ ಬಹಳ ಮೃದು ವ್ಯಕ್ತಿಗಳೂ ಹೌದು. ಆದರೆ ಇವರು ಎಲ್ಲಾ ವಿಚಾರದಲ್ಲೂ ಅಧಿಕವಾಗಿಯೇ ತಪ್ಪು ಗ್ರಹಿಕೆಯನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಬಹುತೇಕ ಸಂದರ್ಭದಲ್ಲಿ ಚಿಂತನೆಯನ್ನು ನಡೆಸುತ್ತಿರುತ್ತಾರೆ. ಇನ್ನು ಈ ರಾಶಿಯವರು ತಮ್ಮ ಭಾವನೆ ಹಾಗೂ ವರ್ತನೆಗಳನ್ನು ಹೇಗೆ ಸಂತೋಷ ಪಡಿಸಿಕೊಳ್ಳಬೇಕು ಅಥವಾ ಹೇಗೆ ಸಮತೋಲನದಲ್ಲಿ ಇರಿಸಿಕೊಳ್ಳಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಇವರ ನ್ಯೂನತೆಯ ಲಕ್ಷಣವೆಂದರೆ ಇತರರೊಂದಿಗೆ ತಮ್ಮನ್ನು ಹೋಲಿಸಿ ಕೊಳ್ಳುವುದು. ಈ ಒಂದು ಪ್ರಕ್ರಿಯೆಯಿಂದ ತಮ್ಮ ಸಂತೋಷವನ್ನು ಕಳೆದು ಕೊಳ್ಳುತ್ತಾರೆ ಎಂದು ಅವರು ತಮ್ಮ ಬಗ್ಗೆ ಹಾಗೂ ತಾವು ಪಡೆದುಕೊಂಡಿರುವುದರ ಬಗ್ಗೆ ಹೆಮ್ಮೆ ಹಾಗೂ ಖುಷಿಯನ್ನು ಪಡುತ್ತಾರೋ ಅಂದಿನಿಂದಲೇ ಸಂತೋಷದ ದಿನಗಳು ಆರಂಭವಾಗುತ್ತದೆ ಎನ್ನಲಾಗುವುದು. ಈ ರಾಶಿಯಲ್ಲಿ ಜನಿಸಿದವರು ಸಂಘಟಿತ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅಚ್ಚುಕಟ್ಟನ್ನು ಪರಿಗಣಿಸುತ್ತಾರೆ.

ವೃಶ್ಚಿಕ
ಈ ರಾಶಿಚಕ್ರದವರು ಬಹುತೇಕ ಸಂದರ್ಭದಲ್ಲಿ ಇತರರು ಬಯಸುವಂತೆಯೇ ಇರುತ್ತಾರೆ. ಆದರೆ ವಿಷಯಗಳನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಇವರು ತಾವು ತಪ್ಪಾದ ಗ್ರಹಿಕೆಗೆ ಒಳಗಾಗುವುದಲ್ಲದೆ ಇತರರ ಅಭಿಪ್ರಾಯವನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಇವರು ನಿಜವಾದ ಭಾವನೆಗಳನ್ನು ಮರೆಮಾಚಲು ಪ್ರಯತ್ನಿಸುವರು. ಹೆಚ್ಚಿನ ಸಂದರ್ಭದಲ್ಲಿ ರಹಸ್ಯವನ್ನು ಕಾಯ್ದುಕೊಳ್ಳುವುದರಿಂದ ಜನರಿಗೆ ಇವರು ತಪ್ಪಾಗಿ ಅರ್ಥವಾಗುತ್ತಾರೆ. ಇನ್ನು ಇವರು ಇವರು ಆಳವಾದ ಹಾಗೂ ಭಾವನಾತ್ಮಕ ಸ್ವಭಾವದವರು. ಇವರು ಪ್ರತಿಯೊಬ್ಬರನ್ನೂ ಅರ್ಥಮಾಡಿಕೊಳ್ಳುವುದು ಅಥವಾ ಪ್ರಶಂಸಿಸುವ ಗುಣವನ್ನು ಹೊಂದಿರುವುದಿಲ್ಲ. ತಮ್ಮನ್ನು ತಾವು ಪ್ರತ್ಯೇಕವಾಗಿಟ್ಟು ಕೊಳ್ಳುವುದರಲ್ಲಿಯೇ ಖುಷಿಯನ್ನು ಕಾಣುತ್ತಾರೆ. ದುರ್ಬಲತೆಯು ಇವರನ್ನು ಹೆದರಿಸುತ್ತದೆ. ತಮ್ಮದೇ ಆದ ನಂಬಿಕೆಯನ್ನು ನಂಬುವುದಕ್ಕಿಂತ ಇತರ ವ್ಯಕ್ತಿಗಳನ್ನು ನಂಬುವುದು ಅವರಿಗೆ ಈ ವರ್ಷ ಸವಾಲಿನ ಕೆಲಸವಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಅಂತರ್ಬೋಧೆಯಿಂದ ಯೋಚಿಸುವ ಅತ್ಯಂತ ತೀವ್ರವಾದ ವ್ಯಕ್ತಿಗಳಾಗಿರುತ್ತಾರೆ.

ಧನು
ಈ ರಾಶಿಚಕ್ರದವರು ಅತ್ಯಂತ ನಿರಾತಂಕ ವ್ಯಕ್ತಿಗಳು ಎಂದು ಹೇಳಬಹುದು. ಆದರೆ ಇವರು ಸಾಕಷ್ಟು ಆಳವಾದ ಭಾವನೆಯನ್ನು ಹೊಂದಿರುತ್ತಾರೆ. ಅದನ್ನು ಯಾರು ಅರಿತಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಅಸಡ್ಡೆಯನ್ನು ತೋರಬಹುದು. ಇವರು ಇಷ್ಟಪಡುವ ಜನರಿಗೆ ಸಮರ್ಪಣಾ ವ್ಯಕ್ತಿಗಳಾಗಿ ಇರುತ್ತಾರೆ. ತಮ್ಮ ಆಲೋಚನೆಯನ್ನು ಹಂಚಿಕೊಳ್ಳುವುದರಲ್ಲೂ ಯಾವುದೇ ಹಿಂಜರಿಕೆ ತೋರುವುದಿಲ್ಲ. ಆದರೆ ಸಾಕಷ್ಟು ಸಂದರ್ಭದಲ್ಲಿ ತಪ್ಪುಗ್ರಹಿಕೆಗೆ ಒಳಗಾಗಿ ತೊಳಲಾಡುತ್ತಾರೆ. ಇನ್ನು ಈ ಹಿಂದೆ ಕಳೆದ ವರ್ಷದಲ್ಲಿ ಪ್ರಮುಖ ಬದಲಾವಣೆಯನ್ನು ನೀವು ಅನುಭವಿಸಿರಿ, ಕೆಲವು ಕಠಿಣವಾದ ಸಮಸ್ಯೆಗಳನ್ನು ಎದುರಿಸುವುದರ ಮೂಲಕ ನಿಮ್ಮ ಪ್ರಯಾಣವನ್ನು ಮುಂದುವರಿಸಿದ್ದೀರಿ. ಈ ವರ್ಷ ಕೆಲವು ಅನುಭವಗಳನ್ನು ಪಡೆಯಲು ನೀವು ಎದುರು ನೋಡಬೇಕಿದೆ. ನಿಮಗೆ ಈ ವರ್ಷ ಒಂದಿಷ್ಟು ಉತ್ತಮ ಬದಲಾವಣೆಯು ಉಂಟಾಗುವುದು. ಕೆಲವು ಕಾರಣಗಳಿಗೆ ವರ್ಷದುದ್ದಕ್ಕೂ ಸಂತೋಷವನ್ನು ನೀವು ಅನುಭವಿಸುವ ಸಾಧ್ಯತೆಗಳಿವೆ.

ಮೀನ
ಇವರು ತಮಗೆ ತಾವೇ ಉನ್ನತ ಮಟ್ಟದಲ್ಲಿರುವ ವ್ಯಕ್ತಿಗಳು ಎಂದು ತೋರ್ಪಡಿಸಿಕೊಳ್ಳುತ್ತಾರೆ. ಇವರು ಇತರರನ್ನು ಬಹುಬೇಗ ತಪ್ಪಾಗಿ ಗ್ರಹಿಸುತ್ತಾರೆ. ಇವರು ವಿವಿಧ ಬಗೆಯ ಭಾವನೆಗಳಿಗೆ ಒಳಗಾಗಿರುತ್ತಾರೆ ಎಂದು ಹೇಳಬಹುದು. ಆದರೆ ಅಂತಿಮವಾಗಿ ತಮ್ಮ ಭಾವನೆಗಳನ್ನು ಬಹಳ ದೃಢವಾಗಿ ಅಥವಾ ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಕರುಣೆ ಬಯಸುವ ವ್ಯಕ್ತಿ ಹಾಗೂ ವಿಷಯಗಳನ್ನು ಇವರು ದೂಷಿಸುತ್ತಾರೆ. ಜೊತೆಗೆ ಒಂದಿಷ್ಟು ತಪ್ಪು ಗ್ರಹಿಕೆಯನ್ನು ಮಾಡಿಕೊಳ್ಳುವರು. ಜನರು ಇವರನ್ನು ಯಾರೆಂದು ನೋಡುತ್ತಾರೆ. ಆದರೆ ಇವರಿಗೆ ಇವರು ಯಾರು? ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇವರು ತಮ್ಮ ಆತ್ಮೀಯರನ್ನು ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟಪಟ್ಟು ಪ್ರಯತ್ನಿಸುತ್ತಾರೆ. ಇವರು ಅನುಭವಿಸಿರುವ ಕೆಲವು ಕಹಿ ಘಟನೆಯಿಂದ ತೃಪ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ತಮಗೆ ತಾವು ಆದ್ಯತೆ ನೀಡುವುದಿಲ್ಲ, ಇದನ್ನೆಲ್ಲಾ ಮೊದಲು ತಿಳಿದುಕೊಂಡರೆ, ಆಗ ಜೀವನವು ಸಂತೋಷದಿಂದ ಕೂಡಿರುತ್ತದೆ ಎನ್ನುವರು.



Click it and Unblock the Notifications











