For Quick Alerts
ALLOW NOTIFICATIONS  
For Daily Alerts

ಜುಲೈ 31 ರಿಂದ ಆಗಸ್ಟ್ 6 ರವರೆಗಿನ ವಾರ ಭವಿಷ್ಯ

By Deepu
|

ಶ್ರಾವಣ ಮಾಸದ ಸ್ವಾಗತಕ್ಕೆ ಬಹುತೇಕರು ಸಿದ್ಧರಾಗಿರುತ್ತಾರೆ ಎಂದು ಹೇಳಬಹುದು. ಆಷಾಢ ಮಾಸದ ಅಂತಿಮ ಅವಧಿಯವರೆಗೆ ಬಂದಿದ್ದೇವೆ. ಈ ವಾರದಲ್ಲಿ ಸೂರ್ಯನ ಪ್ರಭಾವು ಹೆಚ್ಚಿರುತ್ತದೆ ಎಂದು ಹೇಳಲಾಗುವುದು. ಸೂರ್ಯನ ಕೃಪೆ ಉತ್ತಮವಾಗಿರುವಾಗ ಸಾಕಷ್ಟು ಸಂಪತ್ತನ್ನು ಪಡೆದುಕೊಳ್ಳುವನು ಎಂದು ಹೇಳಲಾಗುವುದು.

ಸಾಮಾನ್ಯವಾಗಿ ಎಲ್ಲರೂ ಸಂಪತ್ತು ಹಾಗೂ ಆರ್ಥಿಕ ಸ್ಥಿತಿಯ ಸುಧಾರಣೆಯಾಗಲಿ ಎಂದು ಬಯಸುತ್ತಾರೆ. ಹಾಗಾದರೆ ಮಂದಿಯ ಈ ಬಯಕೆಯು ಎಷ್ಟರ ಮಟ್ಟಿಗೆ ನೆರವೇರುತ್ತದೆ? ಎನ್ನುವುದನ್ನು ಈ ವಾರ ನಿರ್ಧಾರವಾಗುವುದು ಎನ್ನಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದ ಆಧಾರದ ಮೇಲೆಯೇ ವ್ಯಕ್ತಿಯ ಭವಿಷ್ಯ ಹಾಗೂ ಅದೃಷ್ಟ ನಿಂತಿರುತ್ತದೆ. ನಿಮಗೂ ನಿಮ್ಮ ಅದೃಷ್ಟವು ರಾಶಿಚಕ್ರಕ್ಕೆ ಅನುಗುಣವಾಗಿ ಎಷ್ಟರ ಮಟ್ಟಿಗೆ ದೊರೆಯುವುದು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಬುಧನ ಪ್ರಭಾವದಿಂದ ಇವರು ವಿನೋದ, ಮಕ್ಕಳೊಂದಿಗೆ ಪ್ರೀತಿ, ನವೀನತೆ ಹಾಗೂ ಸ್ವ-ಪ್ರಗತಿಯ ಸೈದ್ಧಾಂತಿಕ ಸಂಘಟನೆಯ ಮಧ್ಯದಲ್ಲಿ ಪ್ರಯಾಣಿಸುತ್ತಿರುತ್ತೀರಿ. ಇದೇ ರೀತಿಯ ಪ್ರಭಾವವನ್ನು ಸೂರ್ಯನು ಸಹ ಕರುಣಿಸುವನು. ಸೃಜನಾತ್ಮಕ ಬದಲಾವಣೆಯನ್ನು ಕಾಣಬಹುದು. ಇದೀನ ನಿಮ್ಮ ನವೀನ ಕೌಶಲ್ಯವನ್ನು ಹೆಚ್ಚಿಸುವ ಸಮಯ ಎಂದು ಹೇಳಲಾಗುವುದು. ಇನ್ನೊಂದೆಡೆ ಬಿಡುವಿನ ಸಮಯದಲ್ಲಿ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಇದು ಯೋಗ್ಯವಾದ ಸಮಯ ಎಂದು ಹೇಳಲಾಗುವುದು. ನಿಮ್ಮ ಮೇಲ್ವಿಚಾರಕರು ನಿಮ್ಮಿಂದ ಅಸಾಧಾರಣ ಬೇಡಿಕೆಯನ್ನು ಮುಂದಿಡುವ ಸಾಧ್ಯತೆಗಳಿವೆ. ಅವರು ನಿಮ್ಮನ್ನು ಸುಧಾರಣೆ ಮಾಡಲು ಪ್ರಯತ್ನಿಸುವರು. ಈ ಪರಿಸ್ಥಿತಿಯು ಬಹಳ ಜಟಿಲವಾಗಿರುತ್ತದೆ. ನೀವು ಎಲ್ಲವನ್ನೂ ನಿಕಟ ಮೇಲ್ವಿಚಾರಣೆಯ ಅಡಿಯಲ್ಲಿ ಮಾಡಬೇಕಾಗುವುದು.

ವೃಷಭ

ವೃಷಭ

ಇದೀಗ ನೀವು ಕುಟುಂಬದಲ್ಲಿ ಒಂದು ಬಗೆಯ ಅಸಾಧಾರಣ ದಿಗ್ಭ್ರಮೆಯುಳ್ಳ ಪರಿಸ್ಥಿತಿಯನ್ನು ಎದುರಿಸುತ್ತೀರಿ. ನಿಮ್ಮ ಸಂಬಂಧಿಕರೊಂದಿಗಿನ ಸಂಬಂಧವನ್ನು ನೀವು ಕಾದು ನೋಡಬೇಕು. ಹೊಸ ಸಂದರ್ಭಗಳು ನಿಮಗೆ ಒದಗಿ ಬರಬಹುದು. ಜಾಮೀನು ವ್ಯವಸ್ಥೆಗಳು ಮತ್ತು ಅವ್ಯವಸ್ಥೆಗಳ ಬಗ್ಗೆ ಸೂಕ್ತವಾಗಿ ಗಮನ ಹರಿಸಬೇಕು. ನಿಮ್ಮ ವರ್ತನೆಗಳ ಬಗ್ಗೆ ಹಾಗೂ ಯೋಚನೆಗಳ ಮೇಲೆ ಸೂಕ್ತ ಹಿಡಿತ ಹೊಂದಿರಬೇಕು. ಮೋಜಿನ ಕಾರಣದಿಂದ ನೀವು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮನೆಯ ದುರಸ್ತಿ ಕೆಲಸ ಮಾಡಬೇಕಾಗುವುದು. ಕುಟುಂಬದ ಬಗ್ಗೆಯೂ ಸೂಕ್ತ ಗಮನ ನೀಡುವುದನ್ನು ಮರೆಯದಿರಿ.

ಮಿಥುನ

ಮಿಥುನ

ಬುಧನ ಪ್ರಭಾವದಿಂದ ನೀವು ಶಿಕ್ಷಣ, ಸಿದ್ಧತೆಗಳು, ಮಾಧ್ಯಮ, ನಾವೀನ್ಯತೆ, ಯಂತ್ರಾಂಶಗಳ ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಪ್ರಯಾಣ ನಡೆಯುತ್ತಿದೆ. ಕಾರಣ ಬುಧನು ನಿಧಾನಗತಿಯ ಸಂಚಾರವನ್ನು ಪ್ರಾರಂಭಿಸಿರುವುದು ಇದಕ್ಕೆ ಕಾರಣ ಎನ್ನಲಾಗುವುದು. ನಂತರದ ದಿನದಲ್ಲಿ ಹೆಚಿನ ಕೆಲಸವನ್ನು ನಿರ್ವಹಿಸುವಿರಿ. ಪ್ರದರ್ಶನ, ಪ್ರಚಾರ ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ನಿಮ್ಮ ಸಂಬಂಧಗಳಲ್ಲಿ ನೀವು ಉತ್ತಮ ಪತ್ರವ್ಯವಹಾರವನ್ನು ಹೊಂದಿರಬಹುದು. ಆದರೆ ಸಣ್ಣ ಪ್ರಮಾಣದಲ್ಲಿ ಕೆಲವು ಅಡ್ಡಿಯನ್ನು ಅನುಭವಿಸಬೇಕಾಗುವುದು.

ಕರ್ಕ

ಕರ್ಕ

ಹಣ, ಸ್ವಾಭಿಮಾನ, ಕುಟುಂಬ, ಪ್ರವಚನ ಮತ್ತು ವಸ್ತು ಸಂಪನ್ಮೂಲಗಳ ವಿಚಾರದಲ್ಲಿ ನೀವು ಈ ವಾರ ಹೆಚ್ಚು ಸಕ್ರಿಯತೆಯನ್ನು ಕಾಣಬಹುದು. ಈ ವಾರ ನಿಮ್ಮ ಮೇಲೆ ಸೂರ್ಯ ಮತ್ತು ಬುಧನ ಪ್ರಯಾಣ ಆರಂಭವಾಗುವುದು. ಬುಧನು ಮಂದಗತಿಯ ಚಲನೆಯನ್ನು ತೋರುವನು. ಹಾಗಾಗಿ ಹಣದ ವಿಚಾರದಲ್ಲಿ ನೀವು ಎಚ್ಚರಿಕೆ ವಹಿಸಬೇಕು. ಇವುಗಳ ನಡುವೆಯೂ ನಿಮಗೆ ಹೊಸ ಕೌಶಲ್ಯವನ್ನು ಕಲಿಯಲು ಯೋಗ್ಯ ಸಮಯ ಎಂದು ಹೇಳಲಾಗುವುದು. ಅಲ್ಲದೆ ಎಂತಹದ್ದೇ ವಿಚಾರಕ್ಕೂ ನೀವು ವಾದ ಮಾಡದೆ ಇರುವುದೇ ಸೂಕ್ತ. ಹಣಕಾಸಿನ ವಿವಾದವನ್ನು ಇತ್ಯರ್ಥಗೊಳಿಸಲು ಸೂಕ್ತವಾದ ಸಮಯ ಇದು ಎಂದು ಹೇಳಬಹುದಾಗಿದೆ.

ಸಿಂಹ

ಸಿಂಹ

ಸೂರ್ಯ ಮತ್ತು ಬುಧನು ಸ್ವಯಂ ದೃಷ್ಟಿಕೋನ, ಆಕಾಂಕ್ಷೆಗಳು, ಭೌತಿಕ ದೇಹ ಮತ್ತು ಗುರುತಿನ ಭಾಗಗಳ ಮೂಲಕ ಪ್ರಯಾಣಿಸುತ್ತಿವೆ. ಬುಧನು ಮಂದಗತಿಯ ಕ್ರಮದಲ್ಲಿ ಇರುವನು. ಬದಲಾವಣೆಗೆ ಇವರಿಗೆ ಇದು ಉತ್ತಮ ಅವಕಾಶ. ಬದಲಾವಣೆಯು ಇವರ ವೈಯಕ್ತಿಕ ಜೀವನದಲ್ಲೂ ನಡೆಯುವುದು. ಬುಧನು ಬಹಳ ನಿಧಾನಗತಿಯ ಚಲನೆಯನ್ನು ಕೈಗೊಂಡಿರುವುದರಿಂದ ಪತ್ರವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿ ಕೆಲಸ ನಿರ್ವಹಿಸಬೇಕು. ನಿಮ್ಮ ವೈಯಕ್ತಿಕ ಅನುಭವವನ್ನು ಹೆಚ್ಚಿಸಿಕೊಳ್ಳಲು ವಿಶಿಷ್ಟ ಯೋಜನೆಯನ್ನು ನೀವು ಕೈಗೊಳ್ಳಬಹುದು. ಸಂಪರ್ಕಗಳಲ್ಲಿನ ಬದಲಾವಣೆಯನ್ನು ಸಹ ನೀವು ಗಮನಿಸಬಹುದು. ಹಳೆಯ ಸಹಚರರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಯೋಗಕ್ಷೇಮವನ್ನು ಸುಧಾರಿಸುವ ಒಂದು ಅವಕಾಶ ಇದು. ವೈಯಕ್ತಿಕ ಸಂಬಂಧಗಳನ್ನು ಅಪಾಯಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

ಕನ್ಯಾ

ಕನ್ಯಾ

ಭಯ, ಭಾವನೆ, ಮನಸ್ಸು ಮತ್ತು ಗುಪ್ತ ಮನಸ್ಸಿಗೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಮೇಲೆ ಸೂರ್ಯ ಮತ್ತು ಬುಧನ ಪ್ರಭಾವ ಸಕ್ರಿಯಗೊಳ್ಳುವುದು. ಬುಧನ ಮಂದಗತಿಯ ಚಲನೆಯಿಂದ ಭಾವೋದ್ರಿಕ್ತತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವ ಸಾಧ್ಯತೆಗಳಿವೆ. ನಿಗೂಢ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ನೀವು ಪ್ರಯತ್ನಿಸುವ ಸಾಧ್ಯತೆಗಳಿವೆ. ನಿಮ್ಮ ಸುಳ್ಳಿನ ಬಗ್ಗೆ ತಿಳಿದುಕೊಳ್ಳಲು ನಿಮಗೊಂದು ಅವಕಾಶ ಇದು. ಕೆಲವು ದೈಹಿಕ ಸಮಸ್ಯೆಗಳು ತಲೆದೂರಬಹುದು.

ತುಲಾ

ತುಲಾ

ಸೂರ್ಯ ಮತ್ತು ಬುಧನ ಪ್ರಭಾವದಿಂದ ದೀರ್ಘಕಾಲದ ಸ್ನೇಹ, ಮಕ್ಕಳು, ಸಂಘಟನೆಗಳ ಮೇಲೆ ಪ್ರಭಾವ ಉಂಟಾಗಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ಅನುಭವಿಸುತ್ತಿರುವ ಕೆಲವು ಚಟುವಟಿಕೆಗಳ ಮೇಲೆ ಬದಲಾವಣೆಯನ್ನು ಕಾಣುವ ಸಾಧ್ಯತೆಗಳಿವೆ. ಮಕ್ಕಳು ಮತ್ತು ಯುವಕರ ಜೊತೆಗೆ ಕೆಲಸ ಮಾಡಲು ಆಸಕ್ತಿ ಮೂಡುವುದು. ಪ್ರೀತಿಯ ಜೀವನದಲ್ಲಿ ಒಂದಿಷ್ಟು ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸ ಹಾಗೂ ಯೋಜನೆಗಳ ಮೇಲೆ ಹೆಚ್ಚಿನ ದೃಷ್ಟಿಯನ್ನು ಬೀರಬೇಕಾಗುವುದು. ಮಕ್ಕಳು ಮತ್ತು ಯುವಕರ ಗುಂಪುಗಳೊಂದಿಗೆ ಕಾರ್ಯನಿರ್ವಹಿಸಲು ಇದೊಂದು ಅವಕಾಶ ನಿಮಗೆ ಲಭ್ಯವಿದೆ.

ವೃಶ್ಚಿಕ

ವೃಶ್ಚಿಕ

ಕೆಲಸ, ವ್ಯವಸ್ಥಾಪಕರು, ಅಧಿಕಾರ ಮತ್ತು ಆಸೆಗಳಿಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ಸೂರ್ಯ ಮತ್ತು ಬುಧನಿಂದ ಸಕ್ರಿಯವಾಗುವ ಸಾಧ್ಯತೆಗಳಿವೆ. ಬುಧನ ಮಂದಗತಿಯ ಪ್ರಯಾಣವು ಪ್ರಸ್ತುತ ಯೋಜನೆಗಳನ್ನು ಪುನರುಜ್ಜೀವನಗೊಳಿಸುವುದು. ನಿಮ್ಮ ಮೇಲ್ವಿಚಾರಕರು ಮತ್ತು ಪೋಷಕರೊಂದಿಗೆ ನೈಜ ಚರ್ಚೆಗಳನ್ನು ಈ ವಾರದಲ್ಲಿಯೇ ವೀಕ್ಷಿಸುವ ಸಾಧ್ಯತೆಗಳಿವೆ. ವೃತ್ತಿ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ಕೆಲವು ಚಟುವಟಿಕೆಗೆ ಸಿದ್ಧವಾಗಲು ನಿಮಗೊಂದು ಸೂಕ್ತ ಸಮಯ. ನಿಮ್ಮ ಮೇಲ್ವಿಚಾರಕರು ನಿಮ್ಮೊಂದಿಗೆ ಹೋಲಿಸಿದರೆ ಅನಿರೀಕ್ಷಿತ ವೀಕ್ಷಣೆ ಹೊಂದಬಹುದು. ಆದ್ದರಿಂದ ನಿಮ್ಮ ಮೇಲಾಧಿಕಾರಿಗಳಿಗೆ ವಿವರಿಸುವಾಗ ನೀವು ಸ್ವಲ್ಪ ಎಚ್ಚರಿಕೆಯನ್ನು ಹೊಂದಿರಬೇಕಾಗುವುದು. ನಿಮ್ಮ ಸ್ವಂತ ಜೀವನದ ಬಗ್ಗೆ ಯೋಜನೆ ಹಾಗೂ ಆಸೆಗಳನ್ನು ಹೊಂದಲು ಇದು ಸೂಕ್ತ ಸಮಯವಲ್ಲ.

ಧನು

ಧನು

ಸೂರ್ಯ ಮತ್ತು ಬುಧನ ಪ್ರಭಾವದಿಂದ ನೀವು ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಉನ್ನತ ಅಧ್ಯಯ, ಆಧ್ಯಾತ್ಮಿಕತೆ ಮತ್ತು ತತ್ವ ಶಾಸ್ತ್ರಗಳ ಮೇಲೆ ಆಸಕ್ತಿ ಹಾಗೂ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಬುಧನ ಮಂದಗತಿಯ ಪ್ರಯಾಣದಿಂದ ದೀರ್ಘಕಾಳದ ಸಹಾಯಕ್ಕೆ ಯೋಜನೆಯನ್ನು ಕೈಗೊಳ್ಳ ಬೇಕಾಗುವುದು. ಪತ್ರವ್ಯವಹಾರ ಮತ್ತು ಮಾಧ್ಯಮಗಳ ಮೂಲಕ ಪ್ರಯೋಗಗಳನ್ನು ಕೈಗೊಳ್ಳಲು ಈ ವಾರದಲ್ಲಿ ಹೆಚ್ಚುವರಿ ಶ್ರಮವನ್ನು ವಹಿಸುವ ಸಾಧ್ಯತೆಗಳಿವೆ. ಯೋಜನೆಗಳಲ್ಲಿ ಕೆಲವು ವಿಳಂಬವನ್ನು ಕಾಣಬಹುದು.

ಮಕರ

ಮಕರ

ಈ ವಾರದಲ್ಲಿ ನಿಮ್ಮ ಲೈಂಗಿಕ ಜೀವನ, ತುರ್ತು ಸ್ಥಿತಿ, ಉದ್ಯಮಗಳು, ಹಣ, ಶುಲ್ಕಗಳು, ರಕ್ಷಣೆ, ಸಂಘಗಳು ಸೇರಿದಂತೆ ಇನ್ನಿತರ ವಿಚಾರಗಳ ಮೇಲೆ ಸೂರ್ಯ ಮತ್ತು ಬುಧನ ಪ್ರಭಾವ ಬೀರುವುದು. ಬುಧನ ಮಂದಗತಿಯ ಪ್ರಯಾಣದಿಂದ ಭಾವನಾತ್ಮಕವಾಗಿ ಸ್ವಯಂ ಸಕ್ರಿಯರಾಗುವ ಸಾಧ್ಯತೆಗಳಿವೆ. ಬುಧನ ಪ್ರಭಾವದಿಂದ ನೀವು ಸಂಸ್ಥೆಯಲ್ಲಿ ಪ್ರಸ್ತುತ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಜಂಟಿ ಪ್ರಯತ್ನಗಳು ಮತ್ತು ಸಂಘಗಳ ಮೂಲಕ ಹೊಸ ಯೋಜನೆಯನ್ನು ಸ್ಥಾಪಿಸುವ ಸಾಧ್ಯತೆಗಳಿವೆ. ಈ ವಾರ ನೀವು ಸಾಲ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕುಂಭ

ಕುಂಭ

ಸಂಗಾತಿ, ವಿವಾಹ, ವೈಯಕ್ತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯಗೊಳ್ಳುವಂತೆ ಬುಧ ಮತ್ತು ಸೂರ್ಯನು ಪ್ರಚೋದಿಸುವರು. ಬುಧನು ಮಿತವಾದ ಕ್ರಮದಲ್ಲಿ ಚಲನೆ ಹೊಂದುವುದರಿಂದ ನಿಮ್ಮ ಸಂಬಂಧಗಳಿಗೆ ಇದೊಂದು ಕಠಿಣವಾದ ಸಮಯವಾಗಲಿದೆ. ಸಹಚರರೊಂದಿಗೆ ಸಾಕಷ್ಟು ಜಾಗರೂಕರಾಗಿರಬೇಕು. ಹಳೆಯ ಸ್ನೇಹಿತರನ್ನು ಭೇಟಿಯಾಗಲು ಸಮಯ ಒದಗಿ ಬರುವುದು. ನಿಮ್ಮ ಯೋಗಕ್ಷೇಮವನ್ನು ಸುಧಾರಿಸಲು ನೀವು ಪ್ರಯತ್ನಿಸುವಿರಿ.

ಮೀನ

ಮೀನ

ಈ ವಾರ ನೀವು ನಿಮ್ಮ ಕರ್ತವ್ಯ ಹಾಗೂ ಸಾಕುಪ್ರಾಣಿಗಳ ಬಗ್ಗೆ ಹೆಚ್ಚು ಗಮನವನ್ನು ನೀಡುವಿರಿ. ಬುಧನ ಪ್ರಭಾವದಿಂದ ಮನಸ್ಸು ಸ್ವಲ್ಪ ಹಿಡಿತವನ್ನು ಹೊಂದಿರುತ್ತದೆ. ನಿಮ್ಮ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಕಾಳಜಿಯನ್ನು ವಹಿಸುವಿರಿ. ಪಾಲುದಾರರೊಂದಿಗೆ ವಿಸ್ಮಯಕಾರಿ ರೀತಿಯಲ್ಲಿ ರೂಪಾಂತರ ಗೊಳ್ಳುವುದು. ಗುಂಪುಗಳಲ್ಲಿ ಒಂದಿಷ್ಟು ಮಾತುಕತೆಯನ್ನು ನಡೆಸುವ ಸಾಧ್ಯತೆಗಳಿವೆ. ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಸೆಗಳು ಉದ್ಭವಿಸುವ ಸಾಧ್ಯತೆಗಳಿವೆ. ವಾರದಲ್ಲಿ ನೀವು ಇತರ ಚಟುವಟಿಕೆಗಳನ್ನು ಪರಿಗಣಿಸುವ ಸಾಧ್ಯತೆಗಳಿವೆ.

English summary

Your Weekly Horoscope From July 31 To August 6

This weekly prediction is based on your sun sign and uncovers the coming week's fortune. The predictions are for each zodiac sign from July 31 to August 6. From being fortunate in getting affection to maintaining a strategic distance from the approaching obstacles according to your zodiac sign, you can check everything.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more