ರಾಶಿಚಕ್ರಕ್ಕೆ ಅನುಗುಣವಾಗಿ ಪ್ರಬಲ ವ್ಯಕ್ತಿತ್ವಗಳು-ನಿಮ್ಮದೂ ಪರಿಶೀಲಿಸಿಕೊಳ್ಳಿ

By Hemanth

ಆ ಮನುಷ್ಯನಿಗೆ ಕರಣೆಯೇ ಇಲ್ಲ, ಪಾಪಿಯಂತೆ ವರ್ತಿಸುತ್ತಾನೆ. ಆದರೆ ಇವರನ್ನು ನೋಡಿ ತುಂಬಾ ದಯಾಮಯಿ, ಎಲ್ಲರಿಗೂ ನೆರವಾಗುವ ಮನೋಭಾವ ಹೊಂದಿರುವರು ಎನ್ನುವ ಮಾತುಗಳು ನಮ್ಮ ಸುತ್ತಮುತ್ತಲು ಕೇಳಿಬರುವುದು. ಕೆಲವೊಂದು ಸಲ ಮನುಷ್ಯನ ಗುಣ ನಡತೆಗಳು ಹೀಗೆ ಯಾಕೆ ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುವುದು.

Strongest Personality Trait As Per Your Zodiac

ಆದರೆ ಇದಕ್ಕೆಲ್ಲವೂ ಮುಖ್ಯ ಕಾರಣವೆಂದರೆ ಅವರ ರಾಶಿಚಕ್ರಗಳು ಎಂದರೆ ನಂಬಲೇಬೇಕು. ಹೌದು, ಪ್ರತಿಯೊಂದು ರಾಶಿಚಕ್ರದವರಲ್ಲೂ ಕೆಲವೊಂದು ಧನಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಇದ್ದೇ ಇರುತ್ತದೆ. ಪ್ರತಿಯೊಂದು ರಾಶಿಯ ಪ್ರಬಲ ಶಕ್ತಿಯೇನು ಎನ್ನುವ ಬಗ್ಗೆ ನೀವು ತಿಳಿಯಲು ತಯಾರಾಗಿ.

ಮೇಷ (ಧನಾತ್ಮಕ)

ಮೇಷ (ಧನಾತ್ಮಕ)

ಧನಾತ್ಮಕತೆ ಎನ್ನುವುದು ನಿಮ್ಮ ನಡವಳಿಕೆಯ ದೊಡ್ಡ ಲಕ್ಷಣ. ಹೃದಯದಿಂದ ತುಂಬಾ ಮುಗ್ಧರಾಗಿರುವ ಇವರು ಯಾವಾಗಲೂ ನಿಮ್ಮ ಬೆಂಬಲಕ್ಕೆ ನಿಲ್ಲುವರು. ವಿಶ್ವವು ಜೀವಿಸಲು ಇವರಿಗೆ ತುಂಬಾ ಸುಂದರ ತಾಣ ಮತ್ತು ನಿಮಗಾಗಿಯೂ ಇದನ್ನು ಸುಂದರವಾಗಿಸುವರು. ಇಂತಹ ಬಲಿಷ್ಠ ವ್ಯಕ್ತಿತ್ವದ ಹಿಂದೆ ಧನಾತ್ಮಕತೆಯು ಕೆಲಸ ಮಾಡುವುದು.

ವೃಷಭ(ಸಹಾನುಭೂತಿ)

ವೃಷಭ(ಸಹಾನುಭೂತಿ)

ಸಹಾನುಭೂತಿಯು ಇವರ ದೊಡ್ಡ ವ್ಯಕ್ತಿತ್ವವಾಗಿದೆ. ವೃಷಭ ರಾಶಿಯವರು ನೀವು ಕಷ್ಟದಲ್ಲಿರುವಾಗ ತಬ್ಬಿಕೊಂಡು ನಿಮಗೆ ಬೆಂಬಲ ಸೂಚಿಸುವರು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಇವರು ನಿಮಗೆ ನೆರವಾಗುವರು.

ಮಿಥುನ(ಬುದ್ಧಿಶಕ್ತಿ)

ಮಿಥುನ(ಬುದ್ಧಿಶಕ್ತಿ)

ತಮ್ಮ ಗುಂಪಿನಲ್ಲಿ ತುಂಬಾ ಜಾಣರಾಗಿರುವ ಮಿಥುನ ರಾಶಿಯವರಲ್ಲಿ ಎಲ್ಲದಕ್ಕೂ ಮತ್ತು ಪ್ರತಿಯೊಂದಕ್ಕೂ ಅಭಿಪ್ರಾಯವಿರುವುದು. ಕೆಲವೊಮ್ಮೆ ಇವರು ಸ್ವಲ್ಪ ಕೋಪಿಷ್ಠರೆಂದು ಅನಿಸಿದರೂ ಅವರ ನಿರ್ಧಾರ ಸರಿಯಾಗಿರುವುದು.

ಕರ್ಕಾಟಕ(ದಯೆ)

ಕರ್ಕಾಟಕ(ದಯೆ)

ಕರ್ಕಾಟಕ ರಾಶಿಯವರು ತುಂಬಾ ದಯೆ ಇರುವ ವ್ಯಕ್ತಿಗಳು. ಇವರು ಶಾಂತಿ ಬಯಸುವವರು ಮತ್ತು ಜನರು ಸಮಸ್ಯೆಯಲ್ಲಿ ಇರುವುದನ್ನು ನೋಡಲು ಇವರಿಗೆ ಆಗಲ್ಲ. ಇವರು ಜನರಿಗೆ ಯಾವುದೇ ವಿಧದಲ್ಲಿ ನೆರವಾಗುವ ಕಾರಣದಿಂದಾಗಿ ಇವರನ್ನು ಪ್ರತಿಯೊಬ್ಬರು ಇಷ್ಟಪಡುವರು. ಸ್ನೇಹಿತರು, ಕುಟುಂಬದವರು ಮತ್ತು ಅಪರಿಚಿತರಿಗೂ ಇವರು ನೆರವಾಗುವರು.

ಸಿಂಹ(ಅಂತಃಶಕ್ತಿ)

ಸಿಂಹ(ಅಂತಃಶಕ್ತಿ)

ಬಲವೆನ್ನುವ ಪದವು ಸಿಂಹ ರಾಶಿಯಿಂದ ಬಂದಿರಬಹುದು. ಇವರ ವ್ಯಕ್ತಿತ್ವದ ದೊಡ್ಡ ಶಕ್ತಿಯೆಂದು ಇವರು ತುಂಬಾ ಬಲಿಷ್ಠರು. ಇವರು ತುಂಬಾ ನಗುಮೊಗ ಹಾಗೂ ಸರಳವಾಗಿರುವ ನಡವಳಿಕೆಯು ಇವರ ಶಕ್ತಿ ಪ್ರತಿಬಿಂಬಿಸುವುದು. ಇವರಲ್ಲಿರುವ ಅಂತಃಶಕ್ತಿಯು ಯಾವುದೇ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲು ನೆರವಾಗುವುದು.

ಕನ್ಯಾ(ಕಾಳಜಿ)

ಕನ್ಯಾ(ಕಾಳಜಿ)

ತಾಯಿ ಮಮತೆ ಬೇಕಾಗಿರುವ ನಿಮಗೆ ಕನ್ಯಾ ರಾಶಿಯವರು ನೆನಪಾಗುವರು. ಯಾಕೆಂದರೆ ಕನ್ಯಾ ರಾಶಿಯವರು ಹೆಚ್ಚಿನ ಕಾಳಜಿ ತೋರಿಸುವರು. ನೀವು ಆಪ್ತ ಸ್ನೇಹಿತ ಅಥವಾ ಕೇವಲ ಸ್ನೇಹಿತನಾಗಿದ್ದರೂ ಇವರು ಕಾಳಜಿ ತೋರಿಸುವರು.

ತುಲಾ(ಪರಿಪೂರ್ಣತೆ)

ತುಲಾ(ಪರಿಪೂರ್ಣತೆ)

ಅರ್ಧಂಬರ್ಧ ಮಾಡಿರುವ ಕೆಲಸವು ತುಲಾ ರಾಶಿಯವರಿಗೆ ಇಷ್ಟವಾಗಲ್ಲ. ಇವರು ತಾವು ಮಾಡುವ ಮತ್ತು ಬೇರೆಯವರು ಮಾಡುವಂತಹ ಕೆಲಸದಲ್ಲಿ ಪರಿಪೂರ್ಣತೆ ಬಯಸುವರು. ಅರ್ಧಮನಸ್ಸಿನಿಂದ ಮಾಡಿರುವ ಕೆಲಸವನ್ನು ಇವರು ಒಪ್ಪಲ್ಲ. ಪರಿಪೂರ್ಣವಾಗಿ ಕೆಲಸ ಪೂರೈಸಲು ಇವರು ಯಾವುದೇ ಮಟ್ಟಕ್ಕೂ ಹೋಗಬಹುದು.

ಧನು(ಮುಕ್ತ ಮನಸ್ಸಿನವರು)

ಧನು(ಮುಕ್ತ ಮನಸ್ಸಿನವರು)

ಇತರರನ್ನು ಹಲವಾರು ರೀತಿಯಿಂದ ಪ್ರೇರೇಪಿಸುವ ಧನು ರಾಶಿಯವರು ಜನರ ಬಗ್ಗೆ ತೀರ್ಪು ನೀಡಲ್ಲ. ಇವರಲ್ಲಿರುವ ಮುಕ್ತ ಮನಸ್ಸು ಇದಕ್ಕೆಲ್ಲಾ ಕಾರಣ. ಇವರು ಹೊಸತನ್ನು ಪ್ರಯತ್ನಿಸಲು ಇಷ್ಟಪಡುವರು ಮತ್ತು ಇದರಿಂದಾಗಿಯೇ ಇವರಿಗೆ ತುಂಬಾ ಪ್ರಭಾವಿಗಳ ಸ್ನೇಹ ಹಾಗೂ ಸಂಪರ್ಕ ಪಡೆಯುವರು.

ಮಕರ(ಬದ್ಧತೆ)

ಮಕರ(ಬದ್ಧತೆ)

ತಮ್ಮ ಮನಸ್ಸಿನಲ್ಲಿ ಇರುವುದನ್ನು ಇವರು ತುಂಬಾ ಬದ್ಧತೆಯಿಂದ ಮಾಡುವರು. ಈ ರಾಶಿಯವರು ಯಾವತ್ತೂ ಗಡುವು ಮೀರಲ್ಲ ಮತ್ತು ನೇರ ಮನೋವೃತ್ತಿ ಹೊಂದಿರುವರು. ಇದು ಇವರ ಪ್ರಬಲ ನಡವಳಿಕೆಗಳು ಮತ್ತು ಇವರ ಯಶಸ್ಸಿನಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು.

ಕುಂಭ(ಪ್ರಕೃತಿ ಪ್ರಿಯರು)

ಕುಂಭ(ಪ್ರಕೃತಿ ಪ್ರಿಯರು)

ಹಸಿರು ಉಳಿವು ಹಾಗೂ ಮರಗಳ ರಕ್ಷಣೆಗಾಗಿ ಅಭಿಯಾನ ಮಾಡುವ ಕುಂಭ ರಾಶಿಯವರು ಎಲ್ಲಾ ರೀತಿಯಿಂದಲೂ ಪ್ರಕೃತಿಯ ರಕ್ಷಕರಾಗಿರುವರು. ಇವರು ಹೆಚ್ಚಿನ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿಗಳನ್ನು ಬಳಸುವರು.

ಮೀನ(ಒಳ್ಳೆಯ ಕೇಳುಗರು)

ಮೀನ(ಒಳ್ಳೆಯ ಕೇಳುಗರು)

ಬೇರೆಯವರ ಮಾತನ್ನು ಕೇಳುವಂತಹ ತಾಳ್ಮೆಯು ಮೀನ ರಾಶಿಯವರಲ್ಲಿ ಇರುವುದು. ಅನಗತ್ಯ ವಿಚಾರ ಮಾತನಾಡುವುದು ಇವರಿಗೆ ಇಷ್ಟವಾಗಲ್ಲವಾದರೂ ಇವರು ಅದನ್ನು ಕೇಳಿ ಸಲಹೆ ನೀಡುವರು. ಒಳ್ಳೆಯ ಕೇಳುಗರಾಗಿರುವುದು ಇವರ ಒಳ್ಳೆಯ ಗುಣ.

English summary

Your strongest personality trait according to your sun sign

Whether you believe it or not, the qualities that we possess are determined by our stars up to a large extent. Depending upon your zodiac we have brought to you the list of qualities which are your strongest points. Take a look.
Story first published: Thursday, August 2, 2018, 7:00 [IST]
X
Desktop Bottom Promotion