Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
7-10-2018: ಭಾನುವಾರದ ದಿನ ಭವಿಷ್ಯ
ಭಾನುವಾರ ಬಂತೆಂದರೆ ಸಾಕು, ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ. ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ.

ಇನ್ನು ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ
ರಂಗಕಲಾವಿದರಿಗೆ ವಿಶೇಷವಾಗಿ ಹಾಸ್ಯ ಕಲಾವಿದರಿಗೆ ಗೌರವ.ಮಾತುಗಳಿಗೆ ಮನ್ನಣೆ ಹೊಂದುವಿರಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರದಿಂದಾಗಿ ಕಾರ್ಯಬಾಹುಳ್ಳದ ನಡುವೆಯೂ ನೆಮ್ಮದಿ.ವ್ಯವಹಾರದಲ್ಲಿ ವೃದ್ಧಿ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಒಲವು ಮೂಡಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ದಿನ. ಉದ್ಯೋಗ ಅಂಶಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ.

ವೃಷಭ
ಲೆಕ್ಕ ಪರಿಶೋಧನಾ ಅಥವಾ ಲೆಖ್ಖ ಪತ್ರಗಳನ್ನು ನೋಡಿಕೊಳ್ಳುವವರಿಗೆ ಬಿಡುವಿಲ್ಲದ ಕೆಲಸ. ಸಂಪಾದನೆಯಲ್ಲಿ ಏರುಮುಖ. ವಾದವಿವಾದಗಳು ಬಗೆಹರಿದು ನಿರಾಳತೆ. ಆರೋಗ್ಯದೆಡೆಗೆ ಗಮನವಿರಲಿ.ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗವಾಗಲಿದೆ ಅವಿವಾಹಿತರಿಗೆ ವಿಶೇಷ ರೀತಿಯಲ್ಲಿ ಸಂಬಂಧಗಳು ಕೂಡಿಬರಲಿವೆ.ಮನೆಯವರೊಂದಿಗೆ ಸಂಬಂಧ ಉತ್ತಮ.

ಮಿಥುನ
ಹೊಸ ಪುಸ್ತಕ,ಗ್ರಂಥ ಸಂಪಾದನೆಯಾಗಲಿದೆ.ವಿವಾಹದ ವಿಷಯದಲ್ಲಿ ನೇರ ಮಾತುಕತೆಯಿಂದ ಯಶಸ್ವಿ. ಸಜ್ಜನರೊಂದಿಗಿನ ಮಾತುಕತೆಯಿಂದ ಉಲ್ಲಾಸ. ವಿದ್ಯಾರ್ಥಿಗಳಿಗೆ ಶುಭ. ವೈದ್ಯರಿಗೆ ಹೆಚ್ಚಿನ ಆದಾಯ.ಕಾರ್ಯಕ್ಷೇತ್ರದಲ್ಲಿ ಅನೇಕ ರೀತಿಯ ಸಂಪರ್ಕ ಸ್ನೇಹ ವಿಶ್ವಾಸಗಳು ಮೂಡಿ ಮುನ್ನಡೆಗೆ ನಾಂದಿಯಾಗಲಿದೆ ವೃತ್ತಿರಂಗದಲ್ಲಿ ಗುರಿ ಸಾಧನೆಗೆ ಹೊಸ ಹಾದಿಯನ್ನು ಕ್ರಮಿಸಿ ಬೇಕಾದೀತು .

ಕರ್ಕಾಟಕ
ಕಲಾವಿದರು,ನಟರು,ಸಂಗೀತಗಾರರಿಗೆ ಉತ್ತಮ ದಿನ. ವಾಹನ ಖರೀದಿ ಅಥವಾ ವಿಕ್ರಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.ಹೊಸ ಆದಾಯ ಮೂಲಕ್ಕಾಗಿ ಹುಡುಕಾಟ ನಡೆಸುವಿರಿ.ಕಲಾವಿದರಿಗೆ ಹೆಚ್ಚಿನ ಸ್ಥಾನಮಾನಗಳು ಲಭ್ಯವಾಗಲಿದೆ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ ಮತ್ತು ಆದಾಯ ದೊರಕಲಿದೆ ಆಸ್ತಿಯ ಖರೀದಿಯ ಸಾಧ್ಯತೆ ಕಂಡುಬರುತ್ತಿದೆ .

ಸಿಂಹ
ಕಟ್ಟಡ,ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ. ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆ ಅಥವಾ ಬಡ್ತಿಯಿಂದಾಗಿ ಉತ್ತಮ ಆದಾಯ ಲಭಿಸಲಿದೆ.ಉತ್ತಮ ಆರೋಗ್ಯ ಭಾಗ್ಯ ನಿಮ್ಮದಾಗಲಿದೆ.ಹಿತೈಷಿಗಳ ಭೇಟಿ ಸಾಧ್ಯತೆ ವ್ಯಾಪಾರ ರಂಗದಲ್ಲಿ ಲಾಭ ಸ್ನೇಹಿತರು ಮತ್ತು ಕೌಟುಂಬಿಕ ಸದಸ್ಯರಿಂದ ಉತ್ತಮ ನೆರವು ದೊರಕಲಿದೆ ದಿನದ ಮಟ್ಟಿಗೆ ಪ್ರಯಾಣ ಸುಖನೀಡಲಾರದು.

ಕನ್ಯಾ
ಸಂಶೋಧನಾ ಕಾರ್ಯಗಳಲ್ಲಿ ತೊಡಗಿದವರಿಗೆ ಆರ್ಥಿಕ ನೆರವು ದೊರೆತು ಕೆಲಸಗಳಲ್ಲಿ ನಿರ್ವಿಘ್ನವಾಗಿ ನಡೆಯಲಿದೆ .ರಕ್ಷಣಾ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಬಿಡುವಿಲ್ಲದ ಕೆಲಸ ಮತ್ತು ಜವಾಬ್ದಾರಿ .ಆರಕ್ಷಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಬಿಡುವಿಲ್ಲದ ಕೆಲಸ. ಸಂಶೋಧನೆಗೆ ಪ್ರೋತ್ಸಾಹ ದೊರಕುವ ಸಾಧ್ಯತೆ. ಬರವಣಿಗೆಯಲ್ಲಿ ನಿರತರಾದ ಅವರಿಗೆ ಹಣ ಸಿಗಲಿದೆ .ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರಕಲಿದೆ .

ತುಲಾ
ಚಿತ್ರಕಲಾವಿದರು ಕವಿಗಳಿಗೆ ಮನ್ನಣೆ ರಾಜಕಾರಣಿಗಳ ಮಾತಿಗೆ ಮರುಳಾಗುವ ಸಾಧ್ಯತೆ ಹಿತ ಶತ್ರುಗಳ ಭರವಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.ವಾಹನ ವಹಿವಾಟುಗಳಲ್ಲಿ ನಿರೀಕ್ಷೆಯಂತೆ ಲಾಭ ದೊರಕಲಿದೆ .ಔದ್ಯೋಗಿಕ ವಿಷಯಗಳಲ್ಲಿ ಅನುಕೂಲ ಒದಗಿ ಬರಲಿದೆ. ವಿವಾಹ ಸಂಬಂಧಿ ಮಾತುಕತೆಗಳು ಅನುಕೂಲಕರವಾಗಿ ಪರಿಣಮಿಸಲಿವೆ .

ವೃಶ್ಚಿಕ
ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಗೌರವಾದರ ಲಭಿಸಲಿದೆ ಬರಹಗಾರರು ಕವಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ ಮಗಳಿಗೆ ಉತ್ತಮ ಸಂಬಂಧ ಕೂಡಿಬರಲಿದೆ.ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ ಪ್ರಶಂಸೆಗೆ ಪಾತ್ರರಾಗುವಿರಿ. ಅಧಿಕ ಧನಾಗಮನದಿಂದ ಮನೋಲ್ಲಾಸ ರುಚಿಕರ ತಿನಿಸುಗಳ ಸೇವನೆ .ರಕ್ಷಣಾ ಕಾರ್ಯದಲ್ಲಿರುವವರಿಗೆ ಗೌರವ ಪ್ರಾಪ್ತಿ .

ಧನಸ್ಸು
ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಯನ್ನು ಹೊಂದುವ ಅವಕಾಶ ದೊರೆಯಲಿದೆ ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಲಿದೆ .ಉದ್ಯೋಗದಲ್ಲಿ ಸ್ಥಾನ ಹುದ್ದೆಯಲ್ಲಿ ಬದಲಾವಣೆ ಕುರಿತು ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸುದ್ದಿ ಕೇಳಿಬರಲಿದೆ .ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ .

ಮಕರ
ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ ವಸ್ತ್ರಾಭರಣ ಖರೀದಿ ಮಾಡಲು ಸುಸಮಯವಾಗಿರುವುದು.ದೂರದೂರಿಗೆ ಪ್ರಯಾಣ ಹಾಗೂ ಪ್ರಯಾಣದ ಸೌಖ್ಯ ಹೊಂದಲಿದ್ದೀರಿ. ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ಮನಸ್ಸಿಗೆ ನೆಮ್ಮದಿ.

ಕುಂಭ
ಆದಾಯ ಖರ್ಚುಗಳನ್ನು ಸಮತೋಲನದಲ್ಲಿ ಇಳಿಸಿಕೊಳ್ಳುವಿರಿ. ಮಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ. ಸಂಸಾರದಲ್ಲಿ ನೆಮ್ಮದಿ. ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ ಕಂಡುಬರುವುದು.ಸಾಮಾಜಿಕ ಕಾರ್ಯ ಚಟುವಟಿಕೆ, ಮನರಂಜನೆ ,ಸಪತ್ನಿಕರಾಗಿ ಭೋಜನ ಕೂಟಗಳಲ್ಲಿ ಭಾಗವಹಿಸಲಿದ್ದೀರಿ.ದೈವ ರಕ್ಷೆ ಇರುವುದರಿಂದ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ .

ಮೀನ
ಅರಣ್ಯ ಇಲಾಖಾ ಸಂಬಂಧಿಗಳಿಗೆ ಮನ್ನಣೆ . ಸತ್ಕಾರ ಸಮಾರಂಭಗಳಲ್ಲಿ ಭಾಗಿ. ವಾಹನ ಮತ್ತು ಯಂತ್ರಗಳ ಗಿರಿ ಭಾಗಗಳ ವ್ಯಾಪಾರದಿಂದಾಗಿ ಲಾಭ ಹೊಂದುವಿರಿ. ಉತ್ತಮ ಆರೋಗ್ಯವು ನಿಮ್ಮದಾಗಲಿದೆ.ಉದ್ಯೋಗಿಗಳಿಗೆ ಬಿಡುವಿನಿಂದಾಗಿ ನೆಮ್ಮದಿ ನಿತ್ಯದ ಕೆಲಸಗಳಿಂದ ತುಸು ವಿಶ್ರಾಂತಿಯ ಅಗತ್ಯ ಕಂಡುಬರುತ್ತಿದೆ ಪ್ರೀತಿಪಾತ್ರರು ಹಾಗೂ ಗೆಳೆಯರ ಜೊತೆ ಸಂತಸದ ಸಮಯ ಕಳೆಯಲಿದ್ದೀರಿ . ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp/



Click it and Unblock the Notifications











