Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
26-10-2018: ಶುಕ್ರವಾರದ ದಿನ ಭವಿಷ್ಯ
ಶುಕ್ರವಾರದ ದಿನ ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ. ಶುಕ್ರವಾರ ಲಕ್ಷ್ಮಿಯ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಲಕ್ಷ್ಮೀದೇವಿ ಅಂದರೆ ಸಿರಿಯ ಅಧಿದೇವಿ. ಆಕೆಯ ಅರ್ಚನೆ, ಪೂಜೆಗಳಿಂದ ಸಕಲ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ವಿಜೃಂಭಣೆಯಿಂದ ಉಳ್ಳವರು ಆಚರಿಸಿದರೆ, ಸರಳವಾಗಿ, ಸಾಮೂಹಿಕವಾಗಿ ಆಚರಿಸಿ ದೇವಿಯ ಕೃಪೆಗೆ ಭಾಜನರಾಗುವವರು ಧಾರಾಳವಾಗಿದ್ದಾರೆ.
ಇದರಿಂದ ಈ ದಿನವನ್ನು ಲಕ್ಷ್ಮಿದೇವಿಯನ್ನು ನೆನೆಯುತ್ತಾ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ
ಪ್ರಾಮಾಣಿಕತೆಯಿಂದ ಹೆಜ್ಜೆ ಇರಿಸಿದ ಪರಿಣಾಮವಾಗಿ ಎಲ್ಲೆಡೆ ಯಶಸ್ಸು ನಿಮ್ಮದಾಗುವುದು. ಕೆಲ ಗ್ರಹಗಳ ಶುಭ ಸಂಚಾರದಿಂದ ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವವು.ಶತ್ರುವು ಹೈರಾಣಾಗಿ ಶರಣಾಗಿದ್ದಾನೆಂದು ಸರ್ರನೆ ನಿರ್ಧಾರಕ್ಕೆ ಬಂದು ಬಿಡಬೇಡಿ. ಬೂದಿ ಮುಚ್ಚಿದ ಕೆಂಡದಂತೆ ಆತನು ಉತ್ತಮ ಸಮಯಕ್ಕಾಗಿ ಕಾದು ಕುಳಿತಿರುವನು. ನಿಮ್ಮ ಬಿಗಿಯನ್ನು ಸಡಿಲಾಗದಂತೆ ನೋಡಿಕೊಳ್ಳಿ.ರಾಜಕೀಯಕ್ಕೆ ಧುಮುಕಬೇಕೆಂಬ ಮಹತ್ತರ ಆಸೆಗೆ ಜನ ಬೆಂಬಲ ದೊರೆಯುವುದು. ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ಗೆಲುವು ನಿಶ್ಚಿತ. ಹಾಗಂತ ಅಹಂಕಾರ ಪಡಬೇಡಿ. ಎದುರಾಳಿಯೂ ಅಷ್ಟೇ ಶಕ್ತಿಶಾಲಿಯಾಗಿರುವರು.
ಅದೃಷ್ಟ ಸಂಖ್ಯೆ:2

ವೃಷಭ
ಬಾಕಿ ಇರುವ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸುವುದು ಮತ್ತು ಕಚೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒಪ್ಪವಾಗಿ ಜೋಡಿಸುವುದು ಒಳ್ಳೆಯದು. ಇದರಿಂದ ಅನವಶ್ಯಕ ಟೀಕೆಗಳಿಂದ ಮುಕ್ತರಾಗುವಿರಿ.ರಾಜಕಾರಣಿಗಳಿಗೆ ಹೊಸದಾದ ಭರವಸೆ ಸಿಗುವಂತೆ ಹಲವು ಮೂಲಗಳಿಂದ ಶಕ್ತಿ ಸಂವರ್ಧನೆಯು ಉಂಟಾಗುವುದು. ಈಗ ಬರಲಿರುವ ಅವಕಾಶವನ್ನು ಬಾಚಿಕೊಂಡಲ್ಲಿ ಯಶಸ್ಸಿನತ್ತ ನೀವು ಸಾಗುವಿರಿ.ದುಡಿಮೆ ದುಡ್ಡಿನ ತಾಯಿ ಎಂದರು ಹಿರಿಯರು. ಹಾಗಾಗಿ ನೀವು ಮಾಡುವ ಕೆಲಸವು ಕಾಯಾ, ವಾಚಾ ಮನಸ್ಸುಗಳಿಂದ ಕೂಡಿರಲಿ. ಯಶಸ್ಸು ನಿಮ್ಮದಾಗುವುದು. ಹಣವು ನೀರಿನಂತೆ ಖರ್ಚಾಗುವುದು.
ಅದೃಷ್ಟ ಸಂಖ್ಯೆ:2

ಮಿಥುನ
ಎಲ್ಲ ರೀತಿಯ ಮಾನಸಿಕ ದುಗುಡಗಳು ನಿಮ್ಮನ್ನು ಆವರಿಸುವುದು ಮತ್ತು ಜೀವನದಲ್ಲಿ ನಿರುತ್ಸಾಹ ಮೂಡುವುದು. ಆದರೆ ಗುರು,ಹಿರಿಯರ ಆಶೀರ್ವಾದ ಪಡೆದಲ್ಲಿ ಮಾನಸಿಕ ದುಗುಡಕ್ಕೆ ಪರಿಹಾರ ಸಿಗುವುದು.ಅನ್ಯರು ಮಾಡಿರದ ಕೆಲಸವನ್ನು ಮಾಡುವ ಅಥವಾ ಮಾಡಿಸಿ ತೋರಿಸುವ ಜವಾಬ್ದಾರಿ ನಿಮ್ಮ ಮೈಮೇಲೆ ಬರುವುದು. ಅದಕ್ಕಾಗಿ ಗಾಬರಿ ಬೇಡ. ದೈವಕೃಪೆ ಇದ್ದು ಅದರಲ್ಲಿ ಜಯಶೀಲರಾಗುವಿರಿ.ನಿಮಗೆ ಹಾಸಿಗೆ ಇದ್ದಷ್ಟೆ ಕಾಲು ಚಾಚಿ ಬೇಸರವೇ ಬಂದಿರಬಹುದು. ಆದರೆ ಹರಿ ನಿನ್ನೊಲುಮೆ ಆಗುವ ತನಕ ಸುಮ್ಮನಿರುವುದು ಲೇಸು ಎಂಬಂತೆ ಬಹು ತಾಳ್ಮೆಯಿಂದ ಇದ್ದಲ್ಲಿ ಅನುಕೂಲವಾಗುವುದು.
ಅದೃಷ್ಟ ಸಂಖ್ಯೆ:1

ಕಟಕ
ಮಕ್ಕಳ ವಿದ್ಯಾಭ್ಯಾಸದ ವಿಚಾರದ ಬಗ್ಗೆ ವ್ಯಾಕುಲತೆ ತಲೆದೋರುವ ಸಾಧ್ಯತೆ ಇರುವುದು. ನೀವು ಯೋಚಿಸಿದ ರೀತಿಯಲ್ಲಿ ಮಕ್ಕಳು ಅಂಕಗಳನ್ನು ಪಡೆಯುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಆಂಜನೇಯ ಸ್ತೋತ್ರ ಪಠಿಸಿ ಒಳಿತಾಗುವುದು.ನಿಗೂಢವಾದ ಸಕಾರಾತ್ಮಕ ಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ವಿಚಾರವು ಗಮನಕ್ಕೆ ಬರಬಹುದು. ನಿಮ್ಮ ಆರಾಧ್ಯ ದೈವವನ್ನು ಮನಸಾ ಪ್ರಾರ್ಥಿಸಿ. ನಿಮಗೆ ಶುಭ ಸುದ್ದಿ ದೊರೆಯಲಿದೆ.ಕೋಪದ ಪ್ರದರ್ಶನದಿಂದಾಗಿ ಸಹಾಯ ಮಾಡಬೇಕೆಂದು ಬಂದಿದ್ದ ನಿಮ್ಮ ಸ್ನೇಹಿತರು ನಿಮಗೆ ಸಹಕರಿಸದೆ ಹೋಗುವ ಸಾಧ್ಯತೆ ಇದೆ. ನಿಮ್ಮ ತಪ್ಪನ್ನು ಅರಿತು ಬಾಳುವುದು ಕ್ಷೇಮ.
ಅದೃಷ್ಟ ಸಂಖ್ಯೆ:3

ಸಿಂಹ
ದೂರದ ಊರಿನಿಂದ ಬರುವ ಅತಿಥಿಯೊಬ್ಬರು ನಿಮ್ಮ ವ್ಯಾಪಾರ, ವಹಿವಾಟಿನ ವಿಷಯದಲ್ಲಿ ಉತ್ತಮ ಸಲಹೆ ನೀಡುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗುವುದು. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.ನಿಮ್ಮ ಮನೆಯಲ್ಲಿನ ಶುಭ ಕಾರ್ಯವೊಂದಕ್ಕೆ ಅವಕಾಶ ಕೂಡಿಬರುವುದು. ಇದರಿಂದ ಇಷ್ಟಮಿತ್ರ ಬಂಧುಬಾಂಧವರು ಒಂದೆಡೆ ಸೇರುವರು. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.ಮಡದಿ ಮಕ್ಕಳು ಹೆಚ್ಚು ಮನೋಯಾತನೆ ತರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ ಅವರುಗಳ ವಿಶ್ವಾಸವನ್ನು ಪಡೆದು ಅವರ ಮನ ಗೆಲ್ಲಿ. ಇದರಿಂದ ನಿಮಗೆ ಲಾಭಾಂಶ ಕಂಡುಬರುವುದು.
ಅದೃಷ್ಟ ಸಂಖ್ಯೆ:2

ಕನ್ಯಾ
ಆಪತ್ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮಗೆ ಸಹಾಯ ಸಹಕಾರ ನೀಡುವವನೇ ನಿಮ್ಮ ನಿಜವಾದ ಮಿತ್ರ ಅಥವಾ ಹಿತೈಷಿ. ಆತನ ಮಾತನ್ನು ಆಲಿಸಿ ಸಂತೋಷ ಅನುಭವಿಸಿ.
ಅದೆಷ್ಟೋ ದಿನಗಳಿಂದ ಸಾಧಿಸಲು ಸಾಧ್ಯವಾಗಿರದ ವಿಚಾರವೊಂದಕ್ಕೆ ಮಕ್ಕಳ ಬೆಂಬಲ ಲಭಿಸಿ ಕಾರ್ಯ ಸಿದ್ಧಿಗೆ ದಾರಿ ಆಗುವುದು. ಪ್ರತಿಯೊಂದು ಕ್ಷ ಣಗಳನ್ನು ಆನಂದದಿಂದ ಅನುಭವಿಸುವಿರಿ
ಚುನಾವಣೆ ಘೋಷಿಸಿರುವ ಸಮಯದಲ್ಲಿ ರಾಜಕೀಯ ಮುಖಂಡರುಗಳು ನಿಮ್ಮ ಬಳಿ ಸಹಾಯ ಹಸ್ತ ಚಾಚುವರು. ರಾಜಕೀಯ ಭವಿಷ್ಯ ನುಡಿಯುವುದು ಕಠಿಣವಾದರೂ ದೈವದ ಬಲದಿಂದ ನುಡಿದ ನುಡಿಗಳು ಸತ್ಯವಾಗುವ ಸಾಧ್ಯತೆ ಇರುತ್ತದೆ.
ಅದೃಷ್ಟ ಸಂಖ್ಯೆ:1

ತುಲಾ
ವಿಶೇಷವಾದದ್ದು ನಿಮಗೆ ಲಭ್ಯವಾಗುವುದು. ಅದಕ್ಕಾಗಿ ನೀವು ಪಟ್ಟ ಅಪಾರವಾದ ಶ್ರಮವು ನಿಮಗೆ ಶುಭಫಲವನ್ನು ಕೊಡುವುದು. ಆದಾಗ್ಯೂ ಈ ವಿಷಯದಲ್ಲಿ ಅಲ್ಪ ಕಿರಿಕಿರಿ ಇರುತ್ತದೆ. ಮುಂದಿನ ದಿನಗಳಲ್ಲಿ ಒಳಿತಾಗುವುದು. ನಿಗೂಢವಾದ ಸಕಾರಾತ್ಮಕ ಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ವಿಚಾರದಿಂದ ಪ್ರಭಾವಿತರಾಗುವಿರಿ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ತಾಳ್ಮೆ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ.ದಟ್ಟ ವಾಹನ ಸಂಚಾರದ ಸಂದರ್ಭದಲ್ಲಿ ಹುಷಾರಾಗಿ. ನಿಮ್ಮ ಹಿಂದೆಯೇ ಬರುವ ವಾಹನ ಸವಾರರು ನಿಮಗೆ ಡಿಕ್ಕಿ ಹೊಡೆಯುವ ಸಂದರ್ಭವಿದೆ. ಆದರೆ ಅದನ್ನೆ ದೊಡ್ಡದು ಮಾಡಿ ರಸ್ತೆ ಮಧ್ಯದಲ್ಲಿ ಜಗಳಕ್ಕೆ ಇಳಿದರೆ ಇತರೆಯವರಿಗೆ ತೊಂದರೆಯಾಗುವುದು. ತಾಳ್ಮೆ ಇರಲಿ.
ಅದೃಷ್ಟ ಸಂಖ್ಯೆ:3

ವೃಶ್ಚಿಕ
ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ಸಹಿಸದಿರಿ. ಬಂಧುಮಿತ್ರರ ಪ್ರಾಮಾಣಿಕ ಬೆಂಬಲದಿಂದ ಒಳಿತಾಗುವುದು. ಭಗವಂತನನ್ನು ಸ್ಮರಿಸಿ ಕಾರ್ಯೋನ್ಮುಖರಾಗಿ ಒಳಿತಿಗೆ ದಾರಿ ದೊರೆಯುವುದು.ಆಸ್ತಿಗೆ ಸಂಬಂಧಿಸಿದ ವ್ಯಾಜ್ಯವೊಂದು ಹೊಸದಾದ ತಿರುವುಗಳನ್ನು ಪಡೆದುಕೊಳ್ಳಲಿದೆ. ಹಾಗಾಗಿ ನಿಮ್ಮ ಬಹು ನಿರೀಕ್ಷಿತ ಕನಸು ನನಸಾಗುವುದಿಲ್ಲ. ಮರಳಿ ಯತ್ನ ಮಾಡಿ. ಅನುಕೂಲವಾಗುವುದು.
ಹಿರಿಯರ ಆರೈಕೆ ನಿಮ್ಮ ಪ್ರಥಮ ಪ್ರಾಶಸ್ತ್ಯವಾಗಿರಲಿ. ಈ ಜಾತಕದವರು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದಲ್ಲಿ ಎರಡು ಬಾರಿ ಚಿಂತಿಸಿ ಮುಂದುವರೆಯಿರಿ. ಜನರ ನಾಡಿ, ಮಿಡಿತವನ್ನು ಬಲ್ಲ ಜನರು ನಿಮ್ಮನ್ನು ಗೌರವಿಸಿ ಆದರಿಸುವರು.
ಅದೃಷ್ಟ ಸಂಖ್ಯೆ:8

ಧನಸ್ಸು
ನಿಮ್ಮ ನಿರೀಕ್ಷೆಯನ್ನು ಮೀರಿ ಹಲವು ಹೊಸತನಗಳನ್ನು ರೂಪಿಸಿಕೊಳ್ಳಲು ಸಕಾಲವಾಗಿದೆ. ಇದಕ್ಕೆ ನಿಮ್ಮ ಬಂಧುಗಳು, ಸ್ನೇಹಿತರು ಸಹಾಯ ಹಸ್ತ ನೀಡುವರು. ಆದರೆ ಅದಕ್ಕಾಗಿ ವಿಶೇಷ ಖರ್ಚು ಮಾಡಬೇಕಾಗುವುದು.ಉದ್ಯಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಶ್ಚಿತ ಕಾರ್ಯಕ್ಕೆ ಒತ್ತು ಕೊಡಿ. ಎರಡು ದೋಣಿಗಳ ಪ್ರಯಾಣ ಬೇಡ. ಕೆಲಸ ಕಾರ್ಯಗಳನ್ನು ಪ್ರಥಮ ಆದ್ಯತೆಯ ಮೇಲೆ ಹಮ್ಮಿಕೊಳ್ಳುವುದು ಒಳಿತು.ನಿಮ್ಮ ಮನೆಯ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಮಾಡಿಕೊಳ್ಳಿ. ಇಲ್ಲದೆ ಇದ್ದಲ್ಲಿ ಇದು ಮುಂದೊಂದು ದಿನ ದೊಡ್ಡ ಹೆಮ್ಮರವಾಗಿ ನಿಮ್ಮನ್ನು ಕಾಡಿಸುವುದು. ದಶರಥಕೃತ ಶನೇಶ್ಚರರ ಮಂತ್ರ ಪಠಿಸಿ.
ಅದೃಷ್ಟ ಸಂಖ್ಯೆ:6

ಮಕರ
ಸ್ನೇಹಿತರೇ ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಇದ್ದು ಇದಕ್ಕೆ ವಿಚಲಿತರಾಗದಿರಿ. ಅದೃಷ್ಟವು ನಿಮ್ಮ ಬೆನ್ನಿಗಿದೆ. ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಸಂಗಾತಿಯ ಬೇಕು ಬೇಡಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿ ಒಳಿತಾಗುವುದು.
ನ ಭೂತೋ ನ ಭವಿಷ್ಯತಿ ಎನ್ನುವ ಕಾರ್ಯ ಮಾಡಿ ತೋರಿಸುವಿರಿ. ಇದರಿಂದ ಗೆಲುವು ನಿಮ್ಮದೆ ಆಗಿದ್ದು ವಿಜಯಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಾಮಾಜಿಕ ಮನ್ನಣೆ ಜತೆಯಲ್ಲಿ ಹಣಕಾಸು ದೊರೆಯುವುದು.ನಿಮ್ಮ ಕೈಕೆಳಗಿನ ಕೆಲಸಗಾರರು ನಿಮ್ಮ ಕೋಪತಾಪಗಳು ಕಂಡು ರೋಸಿ ಹೋಗುವರು. ಎಲ್ಲದಕ್ಕೂ ಪರರನ್ನು ದೂಷಿಸುವುದನ್ನು ನಿಲ್ಲಿಸಿ. ಇದರಿಂದ ಮಹತ್ತರ ಕಾರ್ಯಗಳು ನೀವು ಎಣಿಸಿದಂತೆ ನಡೆಯುವವು.
ಅದೃಷ್ಟ ಸಂಖ್ಯೆ:4

ಕುಂಭ
ಹಣ ದ್ವಿಗುಣಗೊಳಿಸುವ ಮೋಸದ ಜಾಲ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಅಪಾರವಾಗಿದೆ. ಆದಷ್ಟು ವ್ಯವಧಾನ ಇರಲಿ. ಯಾರಿಗೂ ಹಣಕಾಸಿನ ವಿಷಯವನ್ನು ತಿಳಿಸದಿರಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ.
ಅವಶ್ಯವಾಗಿ ಸಿಗಬೇಕಾದ ಮತ್ತು ಸೂಕ್ತ ಸಂದರ್ಭದಲ್ಲಿ ದೊರೆಯಬೇಕಾದ ಪದೋನ್ನತಿಯೊಂದು ನಿಮ್ಮನ್ನು ಅರಸಿ ಬರುವುದು. ಪದೋನ್ನತಿಯು ಬರುವುದು ಯೋಗವಾದರೆ ಅದನ್ನು ಉಳಿಸಿ ಬೆಳೆಸಿಕೊಳ್ಳುವುದು ಕ್ಷೇಮಕರವಾಗಿರುತ್ತದೆ.
ನಿಮ್ಮ ಕೆಲಸದ ಸ್ಥಳದಲ್ಲಿ ಬಾಸ್ ನಿಮ್ಮನ್ನು ಪರೀಕ್ಷಿಸುವ ಸಾಧ್ಯತೆಗಳು ಇರುತ್ತವೆ. ಇದರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಪುಟಕ್ಕಿಟ್ಟ ಚಿನ್ನದಂತೆ ನೀವು ಇನ್ನು ಹೆಚ್ಚು ಪರಿಶುದ್ಧತೆಯಿಂದ ಬೀಗುವಂತೆ ಆಗುವುದು.
ಅದೃಷ್ಟ ಸಂಖ್ಯೆ:2

ಮೀನ
ನಿಮ್ಮ ಮನಸ್ಸೆ ನಿಮಗೆ ವಿರೋಧವನ್ನುಂಟು ಮಾಡುವುದು ಹಾಗಾಗಿ ಒಲ್ಲದ ಮನಸ್ಸಿನಿಂದ ಕಾರ್ಯಗಳನ್ನು ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಕುಲದೇವತೆಯನ್ನು ಪ್ರಾರ್ಥಿಸಿ. ಎಲ್ಲವೂ ಒಳಿತಾಗುವುದು.
ಜೀವನದಲ್ಲಿ ಅನೇಕ ಜಂಜಡಗಳನ್ನು ಎದುರಿಸಿ ಹೈರಾಣ ಆಗಿದ್ದೀರಿ. ಈಗಿನ ಪರಿಸ್ಥಿತಿಯಿಂದ ಹೊರಬಂದರೆ ಸಾಕು ಎನ್ನುವ ಮಟ್ಟಿಗೆ ರೋಸಿಹೋಗಿದ್ದೀರಿ. ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕತ್ತಲೆ ಕಳೆದು ಬೆಳಕು ಮೂಡುವುದು.ನಿಮ್ಮ ಸಮೀಪದ ಜನರೇ ನಿಮ್ಮನ್ನು ಅನಾದರಣದಿಂದ ಕಾಣುವ ಸಾಧ್ಯತೆ ಇರುವುದು. ಗುರುವಿನ ಧ್ಯಾನ ಮಾಡುವುದು ಮತ್ತು ಕಡಲೆಕಾಳನ್ನು ದಾನ ಮಾಡುವುದು ಕ್ಷೇಮ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ.
ಅದೃಷ್ಟ ಸಂಖ್ಯೆ:1
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp



Click it and Unblock the Notifications











