Latest Updates
-
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್
25-12-2018: ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಕಾಳಿ ಎನ್ನುವುದರ ಅರ್ಥ "ಕಪ್ಪಗಿರುವುದು". ಶಿವನನ್ನು ಕಾಲ ಎನ್ನುವುದರಿಂದ -ಅನಂತ ಕಾಲ, ಕಾಳಿ ಆತನ ಪತ್ನಿ, "ಸಮಯ" ಅಥವಾ "ಸಾವು" ಎನ್ನುವ ಅರ್ಥಗಳೂ ಇವೆ. (ಕಾಲವು ಬಂದಂತೆ). ಹೀಗೆ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಹೀಗಿದ್ದರೂ ಕೆಲವೊಮ್ಮೆ ಕಪ್ಪಾಗಿ ಮತ್ತು ರೌದ್ರಾಕಾರವಾಗಿ ಕಾಣಿಸಿಕೊಳ್ಳುವಳು. ಅವಳ ಮೊತ್ತಮೊದಲ ಅವತಾರ ಸರ್ವನಾಶಕ ಶಕ್ತಿಸ್ವರೂಪಿಣಿಯದು, ಇನ್ನೂ ಕೆಲವು ಪ್ರಭಾವವನ್ನು ಹೊಂದಿದೆ. ವಿವಿಧ ಶಾಕ್ತ ಹಿಂದೂ ವಿಶ್ವಶಾಸ್ತ್ರಗಳಲ್ಲಿ, ಅದೇ ರೀತಿ ಶಾಕ್ತ ತಾಂತ್ರಿಕ ನಂಬಿಕೆಗಳಲ್ಲಿ ಆಕೆಯನ್ನೇ ಪರಮಸತ್ಯ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತಾರೆ.

ಅವಳನ್ನು ಭವತಾರಿಣಿ (ಅಕ್ಷರಶಃ "ಭವಬಂಧನದಿಂದ ಪಾರುಮಾಡುವವಳು") ಎಂದು ಪೂಜಿಸುತ್ತಾರೆ. ಇತ್ತೀಚಿನ ಭಕ್ತಿ ಪಂಥದವರು ಕಾಳಿಯನ್ನು ಮಂಗಳವನ್ನುಂಟುವಾಡುವ ಮಹಾಮಾತೆ ಮಹಾದೇವಿ ಎಂದು ಪರಿಗಣಿಸಿದ್ದಾರೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ
ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವವು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿ. ದೈವಬಲದಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.9845743807
ಅದೃಷ್ಟ ಸಂಖ್ಯೆ:2

ವೃಷಭ
ಅನೇಕ ರೀತಿ ಅಡೆತಡೆಗಳನ್ನು ದಾಟಿ ಬಂದಿರುವಿರಿ. ನಿಮ್ಮ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮರ್ಥ್ಯವು ನಿಮ್ಮಲ್ಲಿ ಅಹಂಕಾರ ಉಂಟುಮಾಡದಂತೆ ನೋಡಿಕೊಳ್ಳಿ.ಗುರು ಹಿರಿಯರ ಸೇವೆ ಎಂದರೆ ಅವರನ್ನು ಒಂದೆಡೆ ಕೂರಿಸಿ ಅರ್ಚನೆ ಮಾಡುವುದಲ್ಲ. ಅವರ ಬೇಕು ಬೇಡಗಳನ್ನು ಪೂರೈಸುವುದು. ಅವರಿಗೆ ನೋವಾಗದಂತೆ ನಡೆದುಕೊಳ್ಳುವುದೇ ಸೇವೆ. ಇಂತಹ ಸೇವೆಯಿಂದ ಒಳಿತಾಗುವುದು.9845743807
ಅದೃಷ್ಟ ಸಂಖ್ಯೆ:1

ಮಿಥುನ
ಸಿಂಹ ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ. ಅಂತೆಯೇ ನೀವು ಉದ್ಯೋಗದಲ್ಲಿ ಗಾಂಭೀರ್ಯತೆ ಕಾಯ್ದುಕೊಳ್ಳಿ. ಸಣ್ಣಪುಟ್ಟ ಟೀಕೆಗಳಿಂದ ಆತ್ಮ ಸಂಯಮ ಕಳೆದುಕೊಳ್ಳದಿರಿ. ಕುಲದೇವತಾ ಪ್ರಾರ್ಥನೆ ಮಾಡಿ.ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿ ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.9845743807
ಅದೃಷ್ಟ ಸಂಖ್ಯೆ:4

ಕಟಕ
ಗೆಳೆಯನೊಬ್ಬನ ಸಹಾಯ ನಿಮಗೆ ದೊರೆಯಲಿರುವುದು ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆ ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು. ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೆ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿ . ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ.9845743807
ಅದೃಷ್ಟ ಸಂಖ್ಯೆ:6

ಸಿಂಹ
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ ನುಡಿಯಲ್ಲಿ ಎಚ್ಚರಿಕೆ ವಹಿಸಿ.ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.9845743807
ಅದೃಷ್ಟ ಸಂಖ್ಯೆ:4

ಕನ್ಯಾ
ಕಾಲ, ಶೀಘ್ರಗತಿಯಲ್ಲಿ ಉರುಳುತ್ತಿದೆ ಎನಿಸುತ್ತಿದೆ. ನೀವು ಮಾಡಬೇಕಾದ ಕಾರ್ಯಗಳು ಬಹಳಷ್ಟಿದ್ದು ಆದ್ಯತೆಯ ಮೇರೆಗೆ ಕೆಲಸ ಪೂರೈಸಿ. ಮನೆಯಲ್ಲಿ ನಿಮ್ಮ ಮದುವೆ ಬಗ್ಗೆ ಮಾತುಕತೆಗಳು ನಡೆಯುವವು. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿದಂತೆ ನೀವು ಮಾಡುವುದು ಬೇಡ. ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದೀರಿ. ನಿಮ್ಮ ಎಲ್ಲಾ ನಡೆಯನ್ನು ಗಮನಿಸುವ ಜನರಿದ್ದಾರೆ.9845743807
ಅದೃಷ್ಟ ಸಂಖ್ಯೆ:5

ತುಲಾ
ನಿಮ್ಮ ತಾಂತ್ರಿಕ ಪರಿಜ್ಞಾನ ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅದನ್ನು ನಿಭಾಯಿಸಲು ಹಣದ ಅಡಚಣೆ ಉಂಟಾಗುವುದು. ನಿಮ್ಮ ಆಪ್ತ ಗೆಳೆಯರೇ ನಿಮಗೆ ಸಹಾಯ ಮಾಡಲು ಹಿಂಜರಿಯುವರು. ಆಳು ಮಾಡಿದ್ದು ಹಾಳು ಎನ್ನುವ ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸ ಮಾಡಿದಲ್ಲಿ ಯಶಸ್ಸು ದೊರೆಯುವುದು. ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ.9845743807
ಅದೃಷ್ಟ ಸಂಖ್ಯೆ:2

ವೃಶ್ಚಿಕ
ಒಂದನ್ನು ಪಡೆಯಲು ಮತ್ತೊಂದರ ತ್ಯಾಗ ಅನಿವಾರ್ಯ. ಹಾಗಾಗಿ ಮುಷ್ಟಿಕಾಳುಗಳನ್ನು ಚೆಲ್ಲಿ ಮೂಟೆ ಕಾಳುಗಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.ಬಂಧು ಬಾಂಧವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಬರಹಗಾರರಿಗೆ ಸರ್ಕಾರದಿಂದ ಸನ್ಮಾನ ಹಾಗೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಿ.9845743807
ಅದೃಷ್ಟ ಸಂಖ್ಯೆ:2

ಧನುಸ್ಸು
ಒಂಟಿತನ ನಿಮ್ಮನ್ನು ಕಾಡುವುದು. ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವುದು ಒಳ್ಳೆಯದು.ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.9845743807
ಅದೃಷ್ಟ ಸಂಖ್ಯೆ:8

ಮಕರ
ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ. ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸು ಹಾಗೂ ಬದಲಾವಣೆ ತಂದುಕೊಡುವುದು. ಇದರಿಂದ ಮಾನಸಿಕ ನೆಮ್ಮದಿ, ಸಂತೋಷವುಂಟಾಗುವುದು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು.9845743807
ಅದೃಷ್ಟ ಸಂಖ್ಯೆ:6

ಕುಂಭ
ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯ. ಗ್ರಹಗಳು ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲು ಕಾದಿವೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ. ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.9845743807
ಅದೃಷ್ಟ ಸಂಖ್ಯೆ:2

ಮೀನ
ಭಗವಂತನ ಕೃಪೆ ನಿಮ್ಮ ಮೇಲಿರುವುದರಿಂದ ನಿಮಗೆ ಬರುವ ಅಪವಾದಗಳಿಂದ ಮುಕ್ತರಾಗುವಿರಿ ಮತ್ತು ನಿಮ್ಮ ಸಹಪಾಠಿಗಳು ಮತ್ತು ಸಹೋದ್ಯೋಗಿಗಳ ನಡುವೆ ಗೌರವವನ್ನು ಸಂಪಾದಿಸುವಿರಿ. ಪದೇಪದೆ ನಿಮ್ಮ ವಿರುದ್ಧ ಮಾತುಗಳು ಕೇಳಿಸುವುದು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗುಬರುವ ಸಂಭವವಿದೆ.9845743807
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











