24 -10-2018: ಬುಧವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು

ಬುಧವಾರ ದಿನ ಬುಧನು ಬೃಹಸ್ಪ್ರತಿಯ ಮಗ .ಅದಲ್ಲದೇ ನಮ್ಮ ಜೀವ-ಜೀವನದ ಬಹುಮುಖ್ಯ ಅಂಗವಾದ ಬುದ್ಧಿ ಮತ್ತು ನರಮಂಡಲವನ್ನು ನಿಯಂತ್ರಿಸುತ್ತಾನೆ. ಬುಧನ ಚಿಹ್ನೆ ಆತ್ಮ, ಜೀವಾತ್ಮ, ದೇಹ, ಮನಸ್ಸು ಅನ್ನು ಒಳಗೊಂಡಿದ್ದು ಇದರಿಂದ ಬುಧನನ್ನು ಬುದ್ಧಿ, ಮನಸ್ಸು, ಇದಕ್ಕೆ ಸಂಬಂಧಿಸಿದಂತೆ ನರಮಂಡಲ ಮತ್ತು ಸಾತ್ವಿಕತೆಯ ಪ್ರತೀಕಾವಾದ ಆತ್ಮವನ್ನೂ ಒಳಗೊಂಡಿದೆ.

your daily horoscope-24-october-2018

ಇದರಿಂದ ಇವನನ್ನು ಶುಭನೊಡನೆ ಶುಭಗ್ರಹವಾಗಿಯೂ ಅಶುಭ ನೊಡನೆ ಪಾಪಗ್ರಹನಾಗಿಯೂ ವರ್ತಿಸುತ್ತಾನೆ.
ಬುಧನ ಅಧಿದೇವತೆ, ಮಹಾವಿಷ್ಣು, ಪದ್ಮನಾಭನನ್ಶು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ. 9845743807

ಮೇಷ

ಮೇಷ

ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.ಎಷ್ಟೇ ಹಣ ಇದ್ದರೂ ವ್ಯಾಪಾರ, ವ್ಯವಹಾರಗಳಿಗೆ ಸಾಲದಾಗಬಹುದು. ಹಾಗಂತ ಹಣವನ್ನು ಪರರಿಂದ ಎರವಲು ಪಡೆಯದಿರಿ. ಪಡೆದ ಸಾಲವನ್ನು ತೀರಿಸಲು ನಿಮಗೆ ಕಷ್ಟವಾಗುವುದು. ಗುರುವಿನ ಮೊರೆ ಹೋಗುವುದು ಒಳಿತು.ಜನರ ಮನಸ್ಸನ್ನು ಗೆಲ್ಲುವ ಅವಕಾಶ ಲಭ್ಯವಾಗಲಿದೆ. ನಿಮ್ಮಿಂದ ಚಾಲನೆಗೊಂಡ ಉತ್ತಮ ಕಾರ್ಯವು ನಿಮ್ಮ ಕ್ರೀಯಾಶೀಲತೆಗೆ ಹಿಡಿದ ಕನ್ನಡಿಯಂತಾಗುವುದು. ಸಮಾಜದ ಜನರಿಂದ ಪ್ರಶಂಸೆಗಳ ಸುರಿಮಳೆ ಆಗುವುದು.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು ಭ್ರಮೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಘಾತವಾಗುವುದು. ಮಾತಾ ದುರ್ಗಾದೇವಿಯನ್ನು ಸ್ಮರಿಸಿ.ಬಂಧುಮಿತ್ರರನ್ನು ಪ್ರೀತಿಯಿಂದ ಆದರಿಸಬೇಕು ನಿಜ. ಆದರೆ ಅವರಿಗೆ ಪ್ರೀತಿಯನ್ನು ತೋರಿದಲ್ಲಿ ಅವರು ನಿಮ್ಮ ಬಗ್ಗೆ ಇಲ್ಲಸಲ್ಲದ ನಂಜನ್ನೆ ಕಾರುವರು. ಹಾಗಾಗಿ ಎಷ್ಟು ಬೇಕೋ ಅಷ್ಟು ಅವರೊಡನೆ ವ್ಯವಹರಿಸಿ.

ಖರ್ಚುವೆಚ್ಚಗಳು ಹನುಮಂತನ ಬಾಲದ ಹಾಗೆ. ದುಡಿದ ಹಣವೆಲ್ಲವೂ ನೀರಿನಂತೆ ಖರ್ಚಾಗುತ್ತಿರುವುದು. ಹಾಗಾಗಿ ಖರ್ಚುವೆಚ್ಚಗಳ ಬಗ್ಗೆ ಕೈ ಹಿಡಿತ ಮಾಡುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಎಲ್ಲಾ ದಿಕ್ಕುಗಳಲ್ಲಿಯೂ ನೀವು ಹಲವು ಒತ್ತಡಗಳನ್ನು ಎದುರಿಸಬೇಕಾಗುವುದು. ಗುರುವಿನ ಅನುಗ್ರಹವಿರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವರು.ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗಲಿದೆ. ಆದರೆ ಇದಕ್ಕೂ ಮುಂಚೆ ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಧ್ಯ ಪ್ರವೇಶಿಸಿ ಆಗುವ ಕೆಲಸಕ್ಕೆ ಕಲ್ಲು ಹಾಕುವರು.ಯಾವುದೇ ಕಾರಣಕ್ಕೂ ಯಾರ ಜತೆಗೂ ವಾಗ್ವಾದಕ್ಕೆ ಇಳಿಯುವುದು ಬೇಡ. ನಿಮ್ಮ ಮಾತು ಕೃತಿಯಲ್ಲಿ ತಾಳ್ಮೆಯಿರಲಿ. ಮನೆಯಿಂದ ಹೊರಗೆ ಹೊರಡುವಾಗ ಗುರು, ಹಿರಿಯರ ಆಶೀರ್ವಾದ ಪಡೆದು ಹೊರಡಿ.

ಅದೃಷ್ಟ ಸಂಖ್ಯೆ:4

ಕಟಕ

ಕಟಕ

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎನ್ನುವಂತೆ ಆಗಬಾರದು ಎಂದರೆ ಮೈಯೆಲ್ಲಾ ಕಣ್ಣಾಗಿ ಆಗುವ ಕೆಲಸಗಳತ್ತ ಗಮನ ಹರಿಸಬೇಕು. ಇಲ್ಲದೆ ಇದ್ದಲ್ಲಿ ಬಂದ ಮಹತ್ತರ ಅವಕಾಶ ತಪ್ಪಿಹೋಗುವ ಸಾಧ್ಯತೆ ಇರುತ್ತದೆ.

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಕೇವಲ ಹಣದಿಂದ ಮಾನಸಿಕ ನೆಮ್ಮದಿಯನ್ನು ಪಡೆಯಲು ಆಗುವುದಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ ಮತ್ತು ಮನೆಯಲ್ಲಿನ ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ಸದಾ ಚಿಂತೆಯ ಮೂಡ್‌ನಲ್ಲಿದ್ದು ಎಲ್ಲಾ ಕಳೆದುಕೊಂಡವರಂತೆ ಇರುವುದು ಸೂಕ್ತವಲ್ಲ. ಕತ್ತಲೆ ಕಳೆದ ಮೇಲೆ ಬೆಳಕು ಖಂಡಿತ ಬರುವುದು. ಶುಭ ದಿನಗಳು ನಿಮ್ಮ ಪಾಲಿಗೆ ಇವೆ. ಅಧೈರ್ಯ ಬೇಡ. ಕುಲದೇವರನ್ನು ನೆನೆದು ಕಾರ್ಯ ಪ್ರವೃತ್ತರಾಗಿ.

ಅದೃಷ್ಟ ಸಂಖ್ಯೆ:3

ಸಿಂಹ

ಸಿಂಹ

ಹೊಸ, ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಸುಳಿದು ಮಾಯವಾಗುವವು. ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಶಿಸ್ತುಬದ್ಧತೆಯನ್ನು ಪ್ರದರ್ಶಿಸಬೇಕಾಗುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ.ಯಾವ ಹುತ್ತದಲ್ಲಿ ಯಾವ ಹಾವೋ ಎಂಬ ವಾಸ್ತವವನ್ನು ಅರಿತು ಹೆಜ್ಜೆ ಇಡಿ. ನೀವು ನಡೆಯುವ ದಾರಿ ಸರಿಯಾದದ್ದೇ ಆದರೆ ನಿಮ್ಮ ಆಪ್ತ ಹಿತೈಷಿಗಳು ನಿಮ್ಮ ದಾರಿಗೆ ಅಡ್ಡಬರುವರು. ಇಲ್ಲವೆ ಹಾದಿ ತಪ್ಪಿಸುವರು.

ಹಲಸಿನ ಹಣ್ಣನ್ನು ಕತ್ತರಿಸಲು ಸೂಜಿಯು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕಾಗುವುದು. ಅಂತೆಯೇ ನಿಮ್ಮ ವಿರುದ್ಧ ಪಿತೂರಿ ನಡೆಸುವವರಿಗೆ ಬರಿ ಬಾಯಿಮಾತಿನ ಉಪಯೋಗವಿಲ್ಲ. ಅವರಿಗೆ ಕಾನೂನಿನ ಭಯ ಹುಟ್ಟುವಂತೆ ಮಾಡಿ.

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ನಿಮ್ಮ ಕಾರ್ಯಯೋಜನೆಗಳು ಸಫಲವಾಗುವುದನ್ನು ತಪ್ಪಿಸಲು ಹಲವರು ಹೊಂಚುಹಾಕಿ ಕಾಯುತ್ತಿರುವರು. ಆದರೆ ದೈವಬಲವಿರುವವರಿಗೆ ಯಾರ ಹಂಗೇನು? ನಿಮ್ಮ ಕಾರ್ಯಯೋಜನೆಗಳು ಭಗವಂತನ ದಯೆಯಿಂದ ಸಫಲಗೊಳ್ಳುವವು.

ಯಾವ ಹುತ್ತದಲ್ಲಿ ಯಾವ ಹಾವೋ ಎಂಬ ವಾಸ್ತವವನ್ನು ಅರಿತು ಹೆಜ್ಜೆ ಇಡಿ. ನೀವು ನಡೆಯುವ ದಾರಿ ಸರಿಯಾದದ್ದೇ ಆದರೆ ನಿಮ್ಮ ಆಪ್ತ ಹಿತೈಷಿಗಳು ನಿಮ್ಮ ದಾರಿಗೆ ಅಡ್ಡಬರುವರು. ಇಲ್ಲವೆ ಹಾದಿ ತಪ್ಪಿಸುವರು.ಎಂಬುದನ್ನು ಮರೆಯದಿರಿ.ನಿಮ್ಮ ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ. ಬಹಳ ದಿನಗಳಿಂದ ಹರಕೆ ಹೊತ್ತುಕೊಂಡು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದೀರಿ. ಆದಷ್ಟು ಶೀಘ್ರವಾಗಿ ಗುರು ಕಾಣಿಕೆಯನ್ನು ಸಲ್ಲಿಸಿ ಗುರುವಿನ ಆಶೀರ್ವಾದವನ್ನು ಪಡೆಯಿರಿ.

ಅದೃಷ್ಟ ಸಂಖ್ಯೆ:2

ತುಲಾ

ತುಲಾ

ಪೂರ್ವಾಪರ ಯೋಚನೆಯನ್ನು ಮಾಡದೆ ದಿಢೀರನೆ ಮಾಡುತ್ತಿರುವ ಉದ್ಯೋಗಕ್ಕೆ ರಾಜೀನಾಮೆ ನೀಡದಿರಿ. ಒಂದು ವೇಳೆ ರಾಜೀನಾಮೆ ನೀಡಿದಲ್ಲಿ ಕಷ್ಟ ಪರಂಪರೆಯನ್ನು ಎದುರಿಸಬೇಕಾಗುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ನಿಮ್ಮನ್ನು ಕಾಡುವವು. ಮನೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಅದನ್ನು ಅನುಭವಿಸುವ ಯೋಗವಿರುವುದಿಲ್ಲ. ಸಂಗಾತಿಯ ಕುಹಕ ನುಡಿಯು ನಿಮ್ಮ ಆತ್ಮಸ್ಥೈರ್ಯವನ್ನು ಕೆಣಕುವುದು.ಮಾತಿನಲಿ ಗಾಂಭೀರ್ಯವಿರಲಿ. ನಿಮ್ಮ ಅಧಿಕಾರಕ್ಕೆ ತಕ್ಕಂತೆ ವರ್ತಿಸಿ. ಇಲ್ಲದೆ ಇದ್ದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರೆ ನಿಮ್ಮನ್ನು ಕಂಡು ಅಪಹಾಸ್ಯ ಮಾಡುವರು. ಇಲ್ಲವೆ ನಿಮ್ಮ ಮಾತಿಗೆ ಬೆಲೆಯನ್ನು ನೀಡುವುದಿಲ್ಲ.

ಅದೃಷ್ಟ ಸಂಖ್ಯೆ:2

ವೃಶ್ಚಿಕ

ವೃಶ್ಚಿಕ

ಹಲವು ದಿನಗಳಿಂದ ಕಂಡ ಕನಸು ನನಸಾಗುವ ಸಾಧ್ಯತೆ ಇರುತ್ತದೆ. ಎಲ್ಲಾ ಮೂಲಗಳಿಂದ ಶುಭವಾರ್ತೆಯನ್ನು ಕೇಳುವಿರಿ. ಮನೆಯ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು.ಬಂಧುಗಳು, ಸ್ನೇಹಿತರು ನಿಮಗೆ ಸಕಾಲದಲ್ಲಿ ಸಹಾಯ ಮಾಡುವುದಿಲ್ಲ. ಗ್ರಹಗಳ ಸಂಚಾರ ವ್ಯತಿರಿಕ್ತವಾದಾಗ ಸ್ವಂತ ಮಕ್ಕಳೆ ನಿಮ್ಮನ್ನು ದೂರುವರು ಮತ್ತು ಹಣಕಾಸಿನ ನೆರವಿಗಾಗಿ ನಿಮ್ಮನ್ನು ಪೀಡಿಸುವರು. ಆಂಜನೇಯ ಸ್ತೋತ್ರವನ್ನು ಪಠಿಸಿ.ಸಾಡೇಸಾತ್‌ ಶನಿಯ ಪ್ರಭಾವ ಹೇಗೆ ತಿರುಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ ಎನ್ನುತ್ತಿರುವಾಗಲೇ ದಿಢೀರನೆ ಸಮಸ್ಯೆಗಳು ಎದುರಾಗುವುದು. ಆಂಜನೇಯ ಸ್ವಾಮಿಯನ್ನು ಅನನ್ಯತೆಯಿಂದ ಭಜಿಸಿ ಆನಂದ ಭರಿತರಾಗಿ.

ಅದೃಷ್ಟ ಸಂಖ್ಯೆ:4

ಧನಸ್ಸು

ಧನಸ್ಸು

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ವಿದೇಶದಿಂದ ಬರುವ ಉದ್ಯೋಗದ ವಿಚಾರವಾಗಿ ತೀರ್ಮಾನ ಕೈಗೊಳ್ಳುವಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ಈ ದಿನಗಳಲ್ಲಿ ವಿದೇಶ ಪ್ರಯಾಣ ನಿಮಗೆ ಲಾಭಕಾರಿಯಾಗುವುದಿಲ್ಲ.ನಿಮ್ಮ ಹಲವು ರೀತಿಯ ಪ್ರವಾಸ ಯೋಜನೆಗಳ ಪಟ್ಟಿಯು ಒಂದು ಹಂತಕ್ಕೆ ತಲುಪುವುದು. ಆತ್ಮೀಯ ಸ್ನೇಹಿತರು ನಿಮಗೆ ಸಹಕಾರಿಯಾಗಿ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದು.ಒಳ್ಳೆಯ ದಿನಗಳಿಗಾಗಿ ಉತ್ತಮ ಪ್ರಯತ್ನವನ್ನು ಮಾಡುತ್ತಿರುವಿರಿ. ನಿಮ್ಮ ಪ್ರಯತ್ನದಲ್ಲಿ ಎಳ್ಳಷ್ಟು ಕುಂದಿಲ್ಲ. ಆದರೆ ಜನ್ಮಶನಿಯು ನಿಮ್ಮ ಪ್ರಯತ್ನಗಳು ಕೈಗೂಡಲು ಅಡೆತಡೆಯನ್ನುಂಟು ಮಾಡುತ್ತಿರುವರು. ದಶರಥಕೃತ ಶನಿಯ ಮಂತ್ರವನ್ನು ಪಠಿಸಿ.

ಅದೃಷ್ಟ ಸಂಖ್ಯೆ:6

ಮಕರ

ಮಕರ

ಸಂಸಾರ ಗುಟ್ಟು ವ್ಯಾದಿ ರಟ್ಟು ಎನ್ನುವಂತೆ ಸಾಂಸಾರಿಕ ಜೀವನದ ಒಳ ತುಮುಲಗಳನ್ನು ಹೊರಗೆ ಹಾಕುವುದು ಸೂಕ್ತವಲ್ಲ. ಮನೆಯೊಳಗಿನ ವಿಚಾರವನ್ನು 4 ಗೋಡೆಗಳ ಮಧ್ಯದಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ.ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ಹಾಗಂತ ನಿಮ್ಮ ಮನೆಯ ದೋಸೆಯ ತೂತು ದೊಡ್ಡದಾಗಲು ಬಿಡಬೇಡಿ. ಮನೆ ಸದಸ್ಯರೆಲ್ಲರೂ ಒಂದೆಡೆ ಸೇರಿ ಈಗಿರುವ ಸಮಸ್ಯೆಯ ಪರಿಹಾರಕ್ಕಾಗಿ ಚಿಂತಿಸಿ.

ನಿಮಗೇ ಎಲ್ಲವೂ ಗೊತ್ತು ಎಂಬ ಅಹಂಕಾರದಿಂದ ಪರರು ಉಪದೇಶಿಸಿದ ಮಾತುಗಳನ್ನು ಅಲಕ್ಷ ಮಾಡುವುದರಿಂದ ಮಾಡುತ್ತಿರುವ ವ್ಯಾಪಾರದಲ್ಲಿ ಹಾನಿಯನ್ನು ಅನುಭವಿಸುವಿರಿ. ಯಾವಾಗಲೂ ಸೋತು ಗೆಲ್ಲುವುದು ಜಾಣರ ಲಕ್ಷ ಣ.

ಅದೃಷ್ಟ ಸಂಖ್ಯೆ:7

ಕುಂಭ

ಕುಂಭ

ದೂರದ ಊರಿನ ಪ್ರಯಾಣವು ದಿಢೀರನೆ ನಿರ್ಣಯವಾಗುವುದು. ಇದರಿಂದ ದಿನನಿತ್ಯದ ಕಾರ್ಯಗಳಿಗೆ ಹಿಂಚಲನೆ ಉಂಟಾಗುವುದು. ಆದಾಗ್ಯೂ ಗುರು, ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಹಣಕಾಸು ವಿಚಾರದಲ್ಲಿ ನಿಮ್ಮ ಎಚ್ಚರದ ಜಾಗೃತೆ ಅವಶ್ಯ. ನಿಮ್ಮ ಸ್ನೇಹಿತರು, ಸಹಪಾಠಿಗಳು ಮತ್ತು ಕಾರ್ಯಕ್ಷೇತ್ರದಲ್ಲಿನ ಸಹೋದ್ಯೋಗಿಗಳ ನೆರವು ನಿಮಗೆ ನಿರಂತರವಾಗಿರುತ್ತದೆ. ನೀವು ನಂಬಿದ ಗುರುಗಳನ್ನು ಅನನ್ಯ ಭಜಿಸಿ.ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಮುಂದೆ ಇರುವ ಕಾರ್ಯಭಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಅದು ನಿಮ್ಮನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವುದು. ಆಗ ಯಾರ ಮರ್ಜಿಯ ಸಹಾಯ ಬೇಕಾಗುವುದಿಲ್ಲ. ಇಟ್ಟ ಹೆಜ್ಜೆಯನ್ನು ಹಿಂದೆ ಇಡದಿರಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಮಹತ್ತರ ಕಾರ್ಯವನ್ನು ಹಮ್ಮಿಕೊಳ್ಳಲು ಯೋಚಿಸಿರುವಿರಿ. ಆದರೆ ಅದನ್ನು ಆರಂಭಿಸಲು ಸೂಕ್ತಕಾಲವಲ್ಲ. ಸ್ವತಂತ್ರವಾಗಿ ನಿರ್ಧಾರ ತಳೆಯದೇ ಬಂಧುಮಿತ್ರರ ಸಲಹೆಯನ್ನು ಸ್ವೀಕರಿಸಿ.ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇರುತ್ತದೆ. ನಿಮ್ಮನ್ನು ಆಗಂತುಕರು ವಿಪರೀತ ಹೊಗಳಿ ನಿಮ್ಮಿಂದ ದ್ರವ್ಯವನ್ನು ಅಪಹರಿಸುವರು. ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಅತಿ ಪರಿಚಯವು ಅನಾದರವನ್ನುಂಟು ಮಾಡುತ್ತದೆ. ನಿಮ್ಮ ಸುತ್ತಮುತ್ತಲಿನವರು ನಿಮ್ಮನ್ನು ಕುರಿತು ಅತಿಸಲುಗೆಯನ್ನು ಬೆಳೆಸಿಕೊಳ್ಳುವರು. ಇದರಿಂದ ನೀವು ಅವರ ಹಂಗಿನ ಅರಮನೆಯಲ್ಲಿ ಜೀವಿಸುವಂತೆ ಆಗುವುದು. ನಿಮ್ಮತನವನ್ನು ಉಳಿಸಿಕೊಳ್ಳಿ.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-24-october-2018

Know what astrology and the planets have in store for you today. Choose your zodiac sign and read the details...
Story first published: Wednesday, October 24, 2018, 4:00 [IST]
X
Desktop Bottom Promotion