Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
21 january 2018 ಭಾನುವಾರದ ದಿನ ಭವಿಷ್ಯ
ಬಹುತೇಕ ಜನರು ತಮಗಿಂತ ಇತರರು ಮೇಲೆ ಬರುವುದನ್ನು ಬಯಸುವುದಿಲ್ಲ. ಅದು ಹಣದ ವಿಚಾರದಲ್ಲಿ ಇರಬಹುದು ಅಥವಾ ಅಧಿಕಾರದ ವಿಷಯದಲ್ಲೇ ಇರಬಹುದು. ತಮಗಿಂತ ಕೆಳಮಟ್ಟದಲ್ಲಿದ್ದಾರೆ ಎಂದಾದರೆ ಒಂದು ರೀತಿಯ ಖುಷಿಯನ್ನು ಅನುಭವಿಸುತ್ತಾರೆ. ಅದೇ ಅವರಿಗಿಂತ ಮೇಲೆ ಹೋಗುತ್ತಿದ್ದಾರೆ ಅಥವಾ ಶ್ರೀಮಂತಿಕೆಯನ್ನು ಹೊಂದುತ್ತಿದ್ದಾರೆ ಎಂದಾದರೆ ಅವರಿಗೆ ಮಾನಸಿಕ ತಳಮಳ ಹಾಗೂ ಬೇಸರ ಉಂಟಾಗುತ್ತದೆ.
ಈ ಬಗೆಯ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಸ್ವಾರ್ಥಿಗಳು ಎಂದು ಹೇಳಬಹುದು. ಇಂತಹವರು ಜೀವನದಲ್ಲಿ ಅದೆಷ್ಟೇ ಉತ್ತಮ ಸ್ಥಿತಿಯಲ್ಲಿದ್ದರೂ ಮಾನಸಿಕ ನೆಮ್ಮದಿ ಪಡೆದುಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ಕೊರಗುವುದರ ಮೂಲಕವೇ ಜೀವನದ ಸಂತೋಷಗಳನ್ನು ಕಳೆದುಕೊಳ್ಳುತ್ತಾರೆ. ಭಾನುವಾರವಾದ ಇಂದು ಅನೇಕರು ವಾರದ ರಜೆಯ ಸಂತೋಷವನ್ನು ಅನುಭವಿಸುವ ಹಂಬಲದಲ್ಲಿ ಇರುತ್ತಾರೆ. ನಿಮ್ಮ ಹಂಬಲ ಹಾಗೂ ಆಸೆಗಳು ಎಷ್ಟರ ಮಟ್ಟಿಗೆ ನೆರವೇರುತ್ತದೆ? ಅನಿರೀಕ್ಷಿತ ಸನ್ನಿವೇಶಗಳು ಹೇಗೆ ಬದಲಾವಣೆಯನ್ನು ಉಂಟುಮಾಡುತ್ತವೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಕೊಂಡಿದ್ದರೆ ಈ ಮುಂದಿರುವ ರಾಶಿ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್
ಇಂದು ನಿಮಗೆ ಸಮಾಧಾನ ಲಭಿಸುವುದು. ನಿಮ್ಮ ಸ್ನೇಹಿತರ ಆಗಮನವಾಗುವುದು. ಅನೇಕ ವರ್ಷಗಳಿಂದ ನೋಡದಿರುವ ಸ್ನೇಹಿತರು ಸಹ ನಿಮ್ಮೊಂದಿಗೆ ಸಕಾರಾತ್ಮಕ ವರ್ತನೆಯನ್ನು ತೋರುವರು. ಹಣಕಾಸಿನ ವ್ಯವಸ್ಥೆಯು ಸುಗಮಗೊಳ್ಳುವುದು. ವಾಹನ ಚಲಾಯಿಸುವಾಗ ಆದಷ್ಟು ಕಾಳಜಿಯನ್ನು ತೋರಿ. ಎಡಗಾಲಿಗೆ ಪೆಟ್ಟಾಗುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಹಿರಿಯರ ಆಶೀರ್ವಾದ ಲಭಿಸುವುದು. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಹೊಸ ಉದ್ಯೋಗವನ್ನು ಮಾಡುವ ಹಂಬಲವನ್ನು ಮಾಡುವಿರಿ. ಅದರಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಪ್ರಗತಿಗಾಗಿ ಸೂರ್ಯ ನಾರಾಯಣ ದೇವರ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ಇಂದು ನಿಮಗೆ ಅಷ್ಟಾಗಿ ಅನುಕೂಲಕರವಾದ ದಿನವಲ್ಲ ಎಂದೇ ಹೇಳಬಹುದು. ವಾಹನ ಚಲಿಸುವಾಗ ಆದಷ್ಟು ಕಾಳಜಿಯಿಂದ ಇರಿ. ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ವೈದ್ಯರ ಸೂಕ್ತ ಚಿಕಿತ್ಸೆಯಿಂದ ನಿವಾರಣೆ ಕಾಣುವರು. ಬಟ್ಟೆ ವ್ಯಾಪಾರ ಸೇರಿದಂತೆ ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಸಮಾಧಾನದ ಬದುಕು ಲಭಿಸುವುದು. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಲಾಭ ಉಂಟಾಗುವ ಸಾಧ್ಯತೆಗಳಿವೆ. ಆವಿಷ್ಕಾರ ಉದ್ಯಮದಲ್ಲಿರುವವರು ಉತ್ತಮ ಲಾಭ ಗಳಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಮಿಥುನ: ಮೇ 21 ಜೂನ್ 20
ಇಂದು ನಿಮಗೆ ಶುಭ ದಿನ. ನೀವು ಅಂದುಕೊಂಡ ಕಾರ್ಯ ನೆರವೇರುವುದು. ಮಾನಸಿಕವಾಗಿ ನೆಮ್ಮದಿಯನ್ನು ಕಾಣುವಿರಿ. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ತಂದೆ ತಾಯಿಯ ಆಶೀರ್ವಾದ ಮತ್ತು ಬಂಧು ಬಾಂಧವರಿಂದ ಸಂಪೂರ್ಣ ಸಹಕಾರ ದೊರೆಯುವುದು. ಮಕ್ಕಳಿಂದ ವೃದ್ಧರವರೆಗೂ ಇಂದು ಉತ್ತಮ ಫಲಿತಾಂಶವನ್ನೇ ಪಡೆದುಕೊಳ್ಳುವಿರಿ. ಮನೆಯಿಂದ ಹೊರಡುವಾಗ ಬಲಗಾಲನ್ನು ಮುಂದಿಟ್ಟು ಹೊರಡಿ ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22
ಇಂದು ನಿಮಗೆ ಅನುಕೂಲಕರವಾದ ದಿನ. ಮನೆಯಲ್ಲಿ ನೆಮ್ಮದಿ ಹಾಗೂ ಮಾನಸಿಕವಾಗಿ ಖುಷಿಯನ್ನು ಅನುಭವಿಸುವಿರಿ. ತಂದೆ ತಾಯಿಯ ಆಶೀರ್ವಾದ ಹಾಗೂ ಸಂತೋಷದ ಜೀವನವನ್ನು ಅನುಭವಿಸಲಿದ್ದೀರಿ. ದೂರದ ಪ್ರಯಾಣ ಕೈಗೊಳ್ಳುವಿರಿ. ಮನೆ ಅಥವಾ ಜಮೀನು ಖರೀದಿಸುವ ಸಾಧ್ಯತೆಗಳಿವೆ. ಸಮಾಜ ಸುಧಾರಕರಿಗೆ ಅನುಕೂಲ ಉಂಟಾಗುವುದು. ಇಂದು ಅನೇಕ ರೀತಿಯ ಶುಭ ಫಲವನ್ನು ನೀವು ಪಡೆದುಕೊರ್ಲಳುವ ಸಾಧ್ಯತೆಗಳಿವೆ. ಸಮಸ್ಯೆಗಳ ಪರಿಹಾರ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23
ಹದಗೆಟ್ಟ ಆರೋಗ್ಯವು ನಿಮ್ಮನ್ನು ಹೈರಾಣಗೊಳಿಸುವುದು. ಮಾನಸಿಕ ನೆಮ್ಮದಿ ಹಾಳಾಗುವುದು. ಮಕ್ಕಳು ಮಾತು ಕೇಳದೆ ಇರುವುದರ ಕುರಿತು ಕೊರಗುವಿರಿ. ಅನೇಕ ಅಶುಭ ಸುದ್ದಿಗಳು ನಿಮಗಾಗಿ ಕಾಯುತ್ತಿರುವುದು. ಆದಷ್ಟು ಕಾಳಜಿಯಿಂದ ಇರಿ. ಶಿವನಾಮ ಸ್ಮರಣೆಯೊಂದೆ ನಿಮಗೆ ಮಾನಸಿಕ ನೆಮ್ಮದಿ ನೀಡುವುದು. ಬೆಂಕಿಯಿಂದ ಮಕ್ಕಳನ್ನು ದೂರವಿರಿಸಿ. ಸಮಸ್ಯೆಗಳ ಪರಿಹಾರ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ತೀರ್ಥ ಕ್ಷೇತ್ರಕ್ಕೆ ಯಾನ ಮಾಡುವ ಸಾಧ್ಯತೆಗಳಿವೆ. ಅನೇಕ ಮಾನಸಿಕ ಗೊಂದಲಗಳಿಗೆ ನೀವು ಒಳಗಾಗುವ ಸಾಧ್ಯತೆಗಳಿವೆ. ಮನೆಯಲ್ಲಿ ನೆಮ್ಮದಿ ಹಾಗೂ ಬಂಧು ಮಿತ್ರರ ಆಗಮನ ಉಂಟಾಗುವುದು. ಸ್ಥಿರಾಸ್ತಿ ಖರೀದಿ ಸೇರಿದಂತೆ ಅನೇಕ ಶುಭ ಫಲಗಳನ್ನು ಸಹ ನೀವು ಇಂದು ಅನುಭವಿಸಲಿದ್ದೀರಿ. ಪ್ರಗತಿಯ ಜೀವನ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಗಣೇಶನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಇಂದು ನಿಮಗೆ ಉತ್ತಮವಾದ ದಿನ. ಮಾಡುತ್ತಿರುವ ಉದ್ಯಮ, ಉದ್ಯೋಗ ಮತ್ತು ವ್ಯಾಪಾರಗಳು ಲಾಭವನ್ನು ತಂದುಕೊಡುತ್ತದೆ. ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹೊಸ ಅವಕಾಶಗಳಿಂದ ಸಂತೋಷಗೊಳ್ಳುವ ಸಾಧ್ಯತೆಗಳಿವೆ. ಹದಗೆಟ್ಟ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ರೈತರು ಭೂಮಿಯಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುವರು. ಇನ್ನಷ್ಟು ನೆಮ್ಮದಿ ಹಾಗೂ ಸಮಸ್ಯೆಗಳ ನಿವಾರಣೆಗೆ ದೇವಿಯ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಮಾನಸಿಕವಾಗಿ ಕಿರಿಕಿರಿ ಮುಂದುವರಿಯುವುದು. ಬಂಧು ಬಾಂಧವರಿಂದ ಅವಮಾನ ಉಂಟಾಗುವುದು. ತಂದೆ ಮಕ್ಕಳ ನಡುವೆ ಘರ್ಷಣೆ ಉಂಟಾಗುವುದು. ಸ್ಥಿರಾಸ್ತಿಗಾಗಿ ಕಚ್ಚಾಟ ನಡೆಯುವುದು. ಶನಿಯ ಪ್ರಭಾವ ಇರುವುದರಿಂದ ನ್ಯಾಯಾಂಗದಲ್ಲೂ ಅಪಜಯ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನಿಗೆ ಗರಿಕೆಯನ್ನು ಸಲ್ಲಿಸಿ, ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ಜನ್ಮ ಶನಿಯ ಪ್ರಭಾವ ಇರುವುದರಿಂದ ಆಂತರ್ಯದ ಕಲಹಗಳು ಬಹಿರಂಗ ಗೊಳ್ಳುವುದು. ಮನೆಯಲ್ಲಿ ಕಿರಿಕಿರಿಯ ವಾತಾವರಣ ಉಂಟಾಗುವುದು. ಎಡಗಾಲಿಗೆ ಪೆಟ್ಟಾಗುವ ಸಾಧ್ಯತೆಗಳಿವೆ. ವಾಹನ ಚಲಾಯಿಸುವಾಗ ಅಥವಾ ಪ್ರಯಾಣ ಬೆಳೆಸುವಾಗ ಆದಷ್ಟು ಎಚ್ಚರಿಕೆಯಿಂದ ಇರಿ. ಹಣ ಮತ್ತು ಒಡವೆಯೊಂದಿಗೆ ಜನ ನಿಬಿಡ ಪ್ರದೇಶಗಳಿಗೆ ಹೋಗದಿರಿ. ಹಣಗಳನ್ನು ಕಳೆದುಕೊಳ್ಳುವ ಲಕ್ಷಣಗಳಿವೆ. ಕೆಲವರು ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20
ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗುವುದು. ಬಂಧು ಮಿತ್ರರ ಆಗಮ ಆಗುವುದು. ಹಿರಿಯರು ಅತಿಯಾದ ಸಿಹಿಯನ್ನು ಸವಿಯದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಹನುಮಂತ ಚಾಲೀಸವನ್ನು ಪಠಿಸಿ.

ಕುಂಭ: ಜನವರಿ 20-ಫೆಬ್ರವರಿ 18
ಇಂದು ನಿಮಗೆ ಶುಭ ದಿನ. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಶುಭ ವಾರ್ತೆಗಳ ಸುರಿ ಮಳೆ ನಿಮ್ಮ ಸಂತೋಷಕ್ಕೆ ಕಾರಣವಾಗುವುದು. ಅಂದುಕೊಂಡ ಕಾರ್ಯದಲ್ಲಿ ಸಮಾಧಾನ ಉಂಟಾಗುವುದು. ಉತ್ತಮ ಪ್ರಗತಿಯನ್ನು ಕಾಣುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್
ಶುಭಕರವಾದ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಬಂಧುಗಳ ಆಗಮವಾಗುವುದು. ಹಲವಾರು ಬಗೆಯ ಶುಭಕರವಾದ ಸಂಗತಿಗಳು ನಿಮ್ಮ ಪಾಲಿಗೆ ಒದಗಿ ಬರುವುದು. ಸಂಗಾತಿಯಿಂದ ಶುಭ ಸುದ್ದಿಯನ್ನೇ ಕೇಳುವಿರಿ. ಸಹಾಯ ಬೇಡುವವರಿಗೆ ದೇವರ ಕೃಪೆ ಲಭ್ಯವಾಗುವುದು. ಇನ್ನಷ್ಟು ಪ್ರಗತಿಯ ಜೀವನಕ್ಕಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.



Click it and Unblock the Notifications











