Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
19 january 2018 ಶುಕ್ರವಾರದ ದಿನ ಭವಿಷ್ಯ
ಹಣ ಯಾರಿಗೆ ಬೇಡ ಹೇಳಿ. ಎಲ್ಲರಿಗೂ ಬೇಕು. ಇಂದಿನ ದಿನಮಾನಗಳಲ್ಲಿ ಪ್ರತಿಯೊಂಂದನ್ನೂ ಹಣದಿಂದಲೇ ಅಳೆಯುತ್ತಾರೆ. ಹಣ ವಿಲ್ಲದಿದ್ದರೆ ಜೀವನವು ನಶ್ವರ ಎನ್ನುವಂತಾಗಿದೆ. ಹಾಗಾಗಿ ಇಂದು ಸಾಮಾನ್ಯವಾಗಿ ಏನೇ ಕೆಲಸ ಮಾಡುವುದಾದರೂ ಮೊದಲು ಹಣ ಎಷ್ಟು ದೊರೆಯುತ್ತದೆ? ಅಥವಾ ಲಾಭ ಇದೆಯೇ ಎನ್ನುವುದನ್ನೇ ನೋಡುತ್ತಾರೆ. ಆ ಕಾರಣದಿಂದಲೇ ಜನ ಇಂದು ಹಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ. ನಿಜ, ಹಣ ವ್ಯಕ್ತಿಯ ಜೀವನಕ್ಕೆ ಪ್ರಮುಖವಾದದ್ದು.
ಆದರೆ ಅದರೊಟ್ಟಿಗೆ ನಮ್ಮಲ್ಲಿ ಪ್ರಾಮಾಣಿಕತೆ ಹಾಗೂ ಸಜ್ಜನಿಕೆಯನ್ನು ರೂಢಿಸಿಕೊಳ್ಳಬೇಕು. ಹಣ ನಮ್ಮ ಶ್ರೀಮಂತಿಕೆ ಅಥವಾ ಅಗತ್ಯತೆಗಳನ್ನು ಪೂರೈಸಬಹುದು. ಆದರೆ ಪ್ರಾಮಾಣಿಕತೆ ಮತ್ತು ಸಜ್ಜನಿಕೆ ಎನ್ನುವುದು ಜೀವನಕ್ಕೆ ಸಾಕ್ಷಾತ್ಕಾರವನ್ನು ನೀಡುತ್ತವೆ. ಶುಕ್ರವಾರವಾದ ಇಂದು ಲಕ್ಷ್ಮಿ ದೇವಿಯ ದಿನ ಎಂದು ಹೇಳಲಾಗುತ್ತದೆ. ಜೊತೆಗೆ ಆ ದೇವಿಯ ಅನುಗ್ರಹ ಪಡೆಯಲು ವಿಶೇಷ ಪೂಜೆ ಪುನಸ್ಕಾರಗಳು ನಡೆಸುತ್ತೇವೆ. ಇಂದು ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಲಕ್ಷ್ಮಿ ದೇವಿ ತರುತ್ತಾಳೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದಿರುವ ರಾಶಿ ಭವಿಷ್ಯದ ವಿವರಣೆಯನ್ನು ಅರಿಯಿರಿ....

ಮೇಷ: 28 ಮಾರ್ಚ್ -20 ಏಪ್ರಿಲ್
ಇಂದು ನಿಮಗೆ ಸುಂದರವಾದ ದಿನ. ನೀವು ಮಾಡುವ ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಸುಗಮವಾದ ವ್ಯವಸ್ಥೆಯನ್ನು ಪಡೆದುಕೊಳ್ಳುವಿರಿ. ಧನಾತ್ಮಕ ಚಿಂತನೆಗಳನ್ನು ಮಾಡುವುದರಿಂದ ಉತ್ತಮ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳ ಕನಸು ನನಸಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಇಂದು ನಿವಾರಣೆ ಕಾಣುವುದು. ಚಾಲಕ ವೃತ್ತಿಯಲ್ಲಿರುವವರಿಗೆ ಮತ್ತು ಚಿಕ್ಕ ಪುಟ್ಟ ಉದ್ಯೋಗದಲ್ಲಿರುವವರಿಗೂ ಅನುಕೂಲ ಹಾಗೂ ಲಾಭ ಉಂಟಾಗಲಿದೆ. ಹಿರಿಯರ ಆರೋಗ್ಯದಲ್ಲೂ ಸುಧಾರಣೆ ಕಾಣುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ಇಂದು ನೀವು ಅನೇಕ ಗೊಂದಲಮಯ ಅಥವಾ ಕಷ್ಟಕರವಾದ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಹದಗೆಟ್ಟ ಆರೋಗ್ಯವು ನಿಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಆಯಾಸಗೊಳ್ಳುವಂತೆ ಮಾಡುತ್ತದೆ. ಅನಿವಾರ್ಯ ಕಾರಣದಿಂದ ದೂರದ ಪ್ರಯಾಣ ಮಾಡುವಿರಿ. ಬಂಧುಗಳು ಅಗಲಿದ ಸುದ್ದಿಯನ್ನು ಕೇಳುವಿರಿ. ತಂದೆತಾಯಿಗಳ ಮನಸ್ಸನ್ನು ನೋಯಿಸದಿರಿ. ಅವರ ಆಶೀರ್ವಾದ ಸದಾ ನಿಮ್ಮನ್ನು ಕಾಯುವುದು. ಯಾರಿಗೂ ಸಾಲ ನೀಡುವುದು ಅಥವಾ ಕೊಡುವ ಕೆಲಸಕ್ಕೆ ಮುಂದಾಗದಿರಿ. ಖನಿಜ ಮತ್ತು ಅದಿರು ಉತ್ಪನ್ನಗಳ ವ್ಯಾಪಾರ ವಹಿವಾಟಿನಲ್ಲಿ ನಿರೀಕ್ಷಿತ ಮಟ್ಟದ ಲಾಭ ದೊರೆಯದು. ಸಮಸ್ಯೆಗಳ ನಿವಾರಣೆ ಹಾಗೂ ನೆಮ್ಮದಿಯ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ಮಿಥುನ: ಮೇ 21 ಜೂನ್ 20
ಇಂದು ನಿಮಗೆ ಸುಗಮವಾದ ದಿನ. ನೀವು ಅಂದುಕೊಂಡ ಕಾರ್ಯ ಸುಗಮವಾಗುವುದು. ಮಾನಸಿಕವಾಗಿ ನೆಮ್ಮದಿಯನ್ನು ಕಾಣುವಿರಿ. ತಂದೆಯ ಮಾರ್ಗದರ್ಶನದಲ್ಲಿ ಹೊಸ ದಾರಿಯಲ್ಲಿ ಜೀವನವನ್ನು ನಡೆಸಲಿದ್ದೀರಿ. ಧನಾತ್ಮಕ ಚಿಂತನೆ ನಡೆಸುವುದರಿಂದ ಲಾಭವನ್ನು ಪಡೆಯುವಿರಿ. ಬಂಧು ಬಾಂಧವರ ಆಗಮನ ಕಾಣುವಿರಿ. ಹೊಸ ಉಡುಗೆ ಹಾಗೂ ಚಿನ್ನಾಭರಣವನ್ನು ಧರಿಸುವ ಸಾಧ್ಯತೆಗಳಿವೆ. ಕಲಾವಿದರಿಗೆ ಇಂದು ನೆಮ್ಮದಿಯ ದಿನವಾಗಲಿದೆ. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22
ಇಂದು ನಿಮಗೆ ಉತ್ತಮವಾದ ದಿನ. ಫ್ಯಾನ್ಸಿಸ್ಟೋರ್ ಹಾಗೂ ಫ್ಯಾಷನ್ ಡಿಸೈನರ್ ಆಗಿ ವೃತ್ತಿ ನಡೆಸುತ್ತಿರುವವರಿಗೆ ಉತ್ತಮ ಲಾಭ ಉಂಟಾಗುವುದು. ವ್ಯಾಪಾರ ವಹಿವಾಟುಗಳಿಂದ ಲಾಭವನ್ನು ಪಡೆಯುವಿರಿ. ಸ್ಥಿರಾಸ್ತಿಯಿಂದ ಲಾಭ ಮತ್ತು ನೆಮ್ಮದಿ ದೊರೆಯುವುದು. ಮನೆಗೆ ಸಂಬಂಧಿಸಿದ ಕೆಲವು ವಿಚಾರ ಅಥವಾ ವ್ಯವಹಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಂಡಿರುವುದು ಮತ್ತು ಜಯವನ್ನು ಪಡೆದಿರುವ ನೆಮ್ಮದಿ ದೊರೆಯುವುದು. ಮನೆ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ದೇವಿಯ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23
ನಿಮಗೆ ಪಂಚಮ ಶನಿಯ ಪ್ರಭಾವ ಇರುವುದರಿಂದ ನೀವು ಅಂದುಕೊಂಡ ಕಾರ್ಯ ಸುಲಭವಾಗಿ ಯಶಸ್ಸನ್ನು ಪಡೆಯದು. ವ್ಯಾಪಾರ ವಹಿವಾಟುಗಳಲ್ಲಿ ನಷ್ಟ ಹಾಗೂ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಕೈಗೊಂಡ ಕೆಲಸವು ಸೂಕ್ತ ರೀತಿಯಲ್ಲಿ ನೆರವೇರದು. ಬಂಧುಗಳಿಂದಲೂ ಕೆಲವು ಕಿರಿಕಿರಿಗಳನ್ನು ಅನುಭವಿಸಬೇಕಾಗುವುದು. ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಕಾಡುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ನೆಮ್ಮದಿಯ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಗಣೇಶನ ಸ್ಮರಣೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಇಂದು ನೀವು ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಬಂಧುಗಳ ಆಗಮನ. ಅನಿರೀಕ್ಷಿತ ಸೋಲುಗಳನ್ನು ದೂರ ಮಾಡಿಕೊಂಡಿರುವ ನೆಮ್ಮದಿ ನಿಮ್ಮ ಪಾಲಿಗೆ ಲಭಿಸುವುದು. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವಿರಿ. ಅಲ್ಲದೆ ಅನೇಕ ಬಗೆಯ ಶುಭ ವಾರ್ತೆಗಳನ್ನೇ ಇಂದು ನೀವು ಕೇಳುವಿರಿ. ಸ್ತ್ರೀಯರಿಗೆ ಇಂದು ಶುಭ ದಿನ. ಮನೆಯಿಂದ ಹೊರಡುವ ಮುನ್ನ ರಂಗೋಲಿಯನ್ನು ಹಾಕಿ, ಗಣೇಶನ ಅರ್ಚನೆ ಮಾಡಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಇಂದು ನಿಮಗೆ ಸಮಾಧಾನವಾದ ದಿನ. ಹದಗೆಟ್ಟ ಆರೋಗ್ಯವು ಸುಧಾರಣೆಯನ್ನು ಕಾಣುವುದು. ಬಂಧುಗಳಿಂದಲೂ ನಿರೀಕ್ಷಿತ ಮಟ್ಟದ ಸಹಕಾರ ದೊರೆಯುವುದು. ಸ್ತ್ರೀಯರು ಚಿನ್ನವನ್ನು ಖರೀದಿಸುವಂತಹ ಯೋಗವನ್ನು ಪಡೆದುಕೊಳ್ಳುವರು. ಕೆಲವು ಆಸ್ತಿಗಳ ವಿಚಾರದಲ್ಲಿ ಇದ್ದ ವೈಮನಸ್ಸು ದೂರವಾಗುವುದು. ಆಸ್ತಿಯು ನಿಮ್ಮ ಕೈ ಸೇರುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜಯವನ್ನೇ ಕಾಣುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಅನುಕೂಲ ಉಂಟಾಗುವುದು. ವಿದೇಶಯಾನ ಮಾಡಲು ಹಂಬಲಿಸುವವರ ಕನಸು ನನಸಾಗುವುದು. ಪ್ರಗತಿಪರ ಬದುಕಿಗಾಗಿ ಹಾಗೂ ಕಷ್ಟಗಳ ನಿವಾರಣೆಗಾಗಿ ದೇವಿಯ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಇಂದು ನಿಮಗೆ ಸಂಪೂರ್ಣ ಪ್ರಮಾಣದ ಮಾನಸಿಕ ನೆಮ್ಮದಿ ಲಭಿಸದು. ಮನೆಯಲ್ಲಿ ಕಿರಿಕಿರಿಯ ವಾತಾವರಣ ಮುಂದುವರಿಯುವುದು. ಬಂಧು ಮಿತ್ರರಿಂದ ಒಂದಿಷ್ಟು ಅಡೆತಡೆಗಳು ಉದ್ಭವವಾಗುವುದು. ಕೆಲವು ಆತಂಕಗಳ ಕಾರಣದಿಂದ ಮನಸ್ಸು ಕುಂದುವ ಸಾಧ್ಯತೆ ಇದೆ. ಜೀವನದಲ್ಲಿರುವ ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಜೀವನಕ್ಕಾಗಿ ದೇವಿಯ ಉಪಾಸನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ಇಂದು ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ನೀವು ಅಂದುಕೊಂಡಂತಹ ವಿಚಾರಗಳು ನೆರವೇರದು. ಅನೇಕ ಸಮಸ್ಯೆಗಳಿಂದ ಸಂಪೂರ್ಣ ನೆಮ್ಮದಿ ದೊರೆಯದು. ಪತ್ರಕರ್ತರು ಅವಮಾನವನ್ನು ಅನುಭವಿಸಬೇಕಾಗುವುದು. ರಾಜಕಾರಣಿಗಳಿಗೆ ನೆಮ್ಮದಿ ದೊರೆಯದು. ಅನೇಕ ಬಗೆಯ ಸಮಸ್ಯೆಗಳು ನಿಮಗೆ ಹೆಜ್ಜೆ ಹೆಜೆಗೂ ಸಮಸ್ಯೆಯನ್ನು ತಂದೊಡ್ಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಆಂಜನೇಯ ಮತ್ತು ದೇವಿಯ ಆರಾಧನೆ ಮಾಡಿ.

ಮಕರ: 23 ಡಿಸೆಂಬರ್ -20 ಜನವರ
ಇಂದು ನಿಮಗೆ ಸಂಪೂರ್ಣ ಸಮಾಧಾನ ದೊರೆಯದು. ಬಂಧುಗಳಿಂದ ಕಿರಿಕಿರಿ ಹಾಗೂ ನಿರ್ದಿಷ್ಟ ಮಟ್ಟದ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲೂ ಯಶಸ್ಸನ್ನು ಪಡೆಯಲು ಸಾಧ್ಯವಾಗದು. ಸಮಾಧಾನದ ಬದುಕು ಹಾಗೂ ಪ್ರಗತಿಪರವಾದ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18
ಈ ರಾಶಿಯ ಸ್ತ್ರೀಯರು ಇಂದು ಮಾಡುತ್ತಿರುವ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವರು. ಅನಿರೀಕ್ಷಿತವಾಗಿ ಬಂಧುಗಳ ಆಗಮನವಾಗುವುದು. ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸುವಿರಿ. ನೀವು ಅಂದುಕೊಂಡ ಕೆಲವು ವಿಚಾರದಲ್ಲಿ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಮನೆಯಲ್ಲಿ ಶುಭ ವಾರ್ತೆಯನ್ನು ಕೇಳುವಿರಿ. ಮಕ್ಕಳ ಪ್ರಗತಿಯಿಂದ ನಿಮಗೆ ಅಧಿಕ ಸಂತೋಷ ಉಂಟಾಗುವುದು. ಹಣಕಾಸು ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಲಾಭ ಉಂಟಾಗುವುದು. ಬ್ಯಾಂಕ್‍ಅಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್
ಇಂದು ನಿಮಗೆ ಶುಭ ದಿನ. ಕೆಲಸ ಕಾರ್ಯಗಳಲ್ಲಿ ಜಯವನ್ನು ಪಡೆಯುವಿರಿ. ಮಾನಸಿಕವಾಗಿ ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರುವುದು. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಇಂದು ಉತ್ತಮವಾದಂತಹ ದಿನ. ವಿದ್ಯಾರ್ಥಿಗಳ ಕನಸು ನನಸಾಗುವುದು. ಸಾಧನೆ ಮಾಡಿರುವ ಪ್ರಶಂಸೆ ದೊರೆಯುವುದು. ಅನೇಕ ವಿಚಾರಗಳಿಂದ ಶುಭವನ್ನೇ ಪಡೆದುಕೊಳ್ಳುವಿರಿ. ಇನ್ನಷ್ಟು ಪ್ರಗತಿ ಹಾಗೂ ಸಮಾಧಾನಕರವಾದ ಬದುಕಿಗೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.



Click it and Unblock the Notifications











