Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
17-10-2018: ಬುಧವಾರದ ದಿನ ಭವಿಷ್ಯ
ಬುಧವಾರದ ದಿನ ಅಂದರೆ ವಿಶೇಷವಾಗಿ ಬುದ್ದಿ,ಆಲೋಚನೆ, ಸಂಭ್ರಮಗಳ ನಿರ್ಧರಿಸುವ ವಿಚಾರವಾಗಿರುತ್ತದೆ. ಜ್ಯೋತಿಷ್ಯದ ಹನ್ನೆರಡು ರಾಶಿಗಳಲ್ಲಿ ವಿಶೇಷವಾಗಿ ದಾರಿ ತೋರಿಸುವ ದಿನವಾಗಿದೆ. ಇದರಿಂದ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ
ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ತಾಯಿ ಸಂಬಂಧದವರಿಗೆ ಅನಾರೋಗ್ಯ ಕಾಡಿ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವವು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿ. ದೈವಬಲದಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.
ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಜಾಗ್ರತೆಯಾಗಿರಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳು ನಿರೀಕ್ಷಿತ ಯಶಸ್ಸು ತಂದುಕೊಡುವವು.
ಅದೃಷ್ಟ ಸಂಖ್ಯೆ: 1

ವೃಷಭ
ತೀರ ಸಣ್ಣ ವಿಷಯವೊಂದಕ್ಕೆ ಬಂಧುಗಳ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಬರುವುದು. ಹಾಗಾಗಿ ಕ್ಷಮಿಸುವ ಗುಣವಿದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.ಯಾರದೋ ಮುಲಾಜಿಗೆ ಕಟ್ಟುಬಿದ್ದು ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಈ ದಿನ ತುಸು ನಿರಾಳತೆ ಇರುವುದು. ದುಡಿದ ಹಣ ನೀರಿನಂತೆ ಖರ್ಚಾಗುವ ಸಾಧ್ಯತೆ ಇದೆ. ಆಂಜನೇಯನ ಸ್ಮರಣೆ ಮಾಡಿ.
ಅದೃಷ್ಟ ಸಂಖ್ಯೆ: 4

ಮಿಥುನ
ತೋಟಗಾರಿಕೆ, ಪಶುಪಾಲನೆ ವೃತ್ತಿ ವಿಶೇಷ ಅದೃಷ್ಟ ತಂದುಕೊಡಲಿವೆ. ನಿಮ್ಮ ಮನೆಗೆ ಹಿತೈಷಿಗಳಾಗಿದ್ದ ಹಿರಿಯರ ದರ್ಶನ ಭಾಗ್ಯವಾಗಲಿದೆ. ಅವರ ಸಾಂತ್ವನ ನುಡಿಗಳು ನಿಮಗೆ ಚೇತೋಹಾರಿಯಾಗಲಿವೆ.
ಅನೇಕ ರೀತಿ ಅಡೆತಡೆಗಳನ್ನು ದಾಟಿ ಬಂದಿರುವಿರಿ. ನಿಮ್ಮ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮರ್ಥ್ಯವು ನಿಮ್ಮಲ್ಲಿ ಅಹಂಕಾರ ಉಂಟುಮಾಡದಂತೆ ನೋಡಿಕೊಳ್ಳಿ.ಕಚೇರಿ ವಾತಾವರಣದಲ್ಲಿ ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ನೀವು, ಕಚೇರಿಯಲ್ಲಿನ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಅನಾಯಾಸವಾಗಿ ಪಡೆಯುವಿರಿ. ನಿಮ್ಮ ಈ ಪ್ರಗತಿ ಇತರೆಯವರಿಗೆ ಅಸೂಯೆಯನ್ನು ತರುವುದು.
ಅದೃಷ್ಟ ಸಂಖ್ಯೆ: 6

ಕಟಕ
ಸಾಮಾಜಿಕ ಜೀವನದ ನಾಗಾಲೋಟ ಮತ್ತು ನಿಮ್ಮ ಜನಪರ ಕಾಳಜಿ ನಿಮ್ಮ ಸಮಾಜ ಬಾಂಧವರಿಂದ ಗುರುತಿಸಲ್ಪಡುವುದು. ಅದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು ಅವರು ಆಯೋಜಿಸಿ ನಿಮ್ಮನ್ನು ಆಮಂತ್ರಿಸುವ ಸಾಧ್ಯತೆ ಇದೆ.ಗುರು ಹಿರಿಯರ ಸೇವೆ ಎಂದರೆ ಅವರನ್ನು ಒಂದೆಡೆ ಕೂರಿಸಿ ಅರ್ಚನೆ ಮಾಡುವುದಲ್ಲ. ಅವರ ಬೇಕು ಬೇಡಗಳನ್ನು ಪೂರೈಸುವುದು. ಅವರಿಗೆ ನೋವಾಗದಂತೆ ನಡೆದುಕೊಳ್ಳುವುದೇ ಸೇವೆ. ಇಂತಹ ಸೇವೆಯಿಂದ ಒಳಿತಾಗುವುದು.
ಸ್ಥಿರಾಸ್ತಿ ಕೊಂಡುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆದರೆ ಶೀರೋವೇದನೆ ನಿಮ್ಮ ಮೂಡನ್ನು ಹಾಳುಮಾಡುವುದು.
ಅದೃಷ್ಟ ಸಂಖ್ಯೆ: 6

ಸಿಂಹ
ಸಾವಿರ ಉಳಿಪೆಟ್ಟಿನಿಂದ ಒಂದು ಸುಂದರ ಮೂರ್ತಿ ನಿರ್ಮಾಣವಾಗುವಂತೆ ಕಷ್ಟ ನಿಮ್ಮನ್ನು ಅಂತರ್ ಮುಖಿಯನ್ನಾಗಿ ಮಾಡುವುದಲ್ಲದೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗುವುದು.ಸಿಂಹ ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ. ಅಂತೆಯೇ ನೀವು ಉದ್ಯೋಗದಲ್ಲಿ ಗಾಂಭೀರ್ಯತೆ ಕಾಯ್ದುಕೊಳ್ಳಿ. ಸಣ್ಣಪುಟ್ಟ ಟೀಕೆಗಳಿಂದ ಆತ್ಮ ಸಂಯಮ ಕಳೆದುಕೊಳ್ಳದಿರಿ. ಕುಲದೇವತಾ ಪ್ರಾರ್ಥನೆ ಮಾಡಿ.ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ವಾಮಿ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.
ಅದೃಷ್ಟ ಸಂಖ್ಯೆ: 9

ಕನ್ಯಾ
ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ. ವಿಶೇಷ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.
ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿ ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.ಕಲಿತ ವಿದ್ಯೆಯು ಯಾವಾಗಲೂ ನಶಿಸುವುದಿಲ್ಲ. ಆದರೆ ಕಾಲಕಾಲಕ್ಕೆ ಅದನ್ನು ಸಾಣೆ ಹಿಡಿಯಬೇಕು. ಉಪಯೋಗಿಸದೆ ಇದ್ದು ಚೂಪಾದ ಚೂರಿ ಮೊಂಡು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಿತ್ಯ ಬದುಕಿನ ಸತ್ಯದರ್ಶನವಾಗುವುದು.
ಅದೃಷ್ಟ ಸಂಖ್ಯೆ: 7

ತುಲಾ
ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವವು. ನಿಮ್ಮ ಅತ್ಯಂತ ಆಪ್ತ ಗೆಳೆಯ ನಿಮಗೆ ಹಣಕಾಸಿನ ನೆರವು ನೀಡುವನು. ಸಂಗಾತಿ ಆರೋಗ್ಯದ ಕಡೆ ಗಮನ ಹರಿಸಿ.ಗೆಳೆಯನೊಬ್ಬನ ಸಹಾಯ ನಿಮಗೆ ದೊರೆಯಲಿರುವುದು ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆ ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು.
ಅವಸರ ಅವಘಡಕ್ಕೆ ಮೂಲ ಎನ್ನುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅವಸರ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಸಂಗಾತಿ ಸಲಹೆ ಸ್ವೀಕರಿಸಿ. ಮುದ್ದು ಮಗುವಿನ ಮಾತು ನಿಮಗೆ ಖುಷಿ ನೀಡುವುದು.
ಅದೃಷ್ಟ ಸಂಖ್ಯೆ: 5

ವೃಶ್ಚಿಕ
ಗುರು ಹಿರಿಯರ ಬಗ್ಗೆ ವಿಶೇಷ ಗೌರವ ಮತ್ತು ವಿನಯ ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಸಂತೋಷ ಮತ್ತು ಸಂಭ್ರಮ ನಿಮ್ಮದಾಗುವುದು.
ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೆ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿ . ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ.
ತೆರೆಮರೆ ಕಾರ್ಯಗಳಿಗೆ, ಫೋಟೋಗ್ರಫಿ ರಂಗದಲ್ಲಿರುವವರಿಗೆ ಅಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ದುರ್ಗಾಮಾತೆಯನ್ನು ಮನಸಾ ಭಜಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಮನೆಯ ಸದಸ್ಯರೊಟ್ಟಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ.
ಅದೃಷ್ಟ ಸಂಖ್ಯೆ: 7

ಧನುಸ್ಸು
ಕಷ್ಟದ ದಿನಗಳು ಮುಗಿದಿಲ್ಲ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನ ಮಾಡಿ.
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ ನುಡಿಯಲ್ಲಿ ಎಚ್ಚರಿಕೆ ವಹಿಸಿ.ಯಾವುದೇ ಕಾರ್ಯ ರಾತ್ರಿ ಕಳೆದು ಬೆಳಕು ಆಗುವುದರೊಳಗೆ ಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.
ಅದೃಷ್ಟ ಸಂಖ್ಯೆ: 8

ಮಕರ
ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧ ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.
ಅದೃಷ್ಟ ಸಂಖ್ಯೆ: 5

ಕುಂಭ
ನಿಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟಪಡುತ್ತಾರೆ. ನಿಮಗೆ ಸಾಮಾಜಿಕ ನಾಯಕತ್ವ ಲಭ್ಯವಾಗಲಿದೆ. ಇದರೊಟ್ಟಿಗೆ ನಿಮ್ಮ ಜವಾಬ್ದಾರಿಯೂ ಹೆಚ್ಚುವುದು. ಎಲ್ಲವೂ ಗುರುವಿನ ಮಹಿಮೆ ಎಂದು ತಿಳಿಯಿರಿ.ಕಾಲ, ಶೀಘ್ರಗತಿಯಲ್ಲಿ ಉರುಳುತ್ತಿದೆ ಎನಿಸುತ್ತಿದೆ. ನೀವು ಮಾಡಬೇಕಾದ ಕಾರ್ಯಗಳು ಬಹಳಷ್ಟಿದ್ದು ಆದ್ಯತೆಯ ಮೇರೆಗೆ ಕೆಲಸ ಪೂರೈಸಿ. ಮನೆಯಲ್ಲಿ ನಿಮ್ಮ ಮದುವೆ ಬಗ್ಗೆ ಮಾತುಕತೆಗಳು ನಡೆಯುವವು.ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟದೇವತೆಯ ಸನ್ನಿದಾನಕ್ಕೆ ಭೇಟಿ ನೀಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.
ಅದೃಷ್ಟ ಸಂಖ್ಯೆ: 7

ಮೀನ
ನಿಮ್ಮ ಜರೂರಾದ ಪ್ರವಾಸ ಕಾರ್ಯಕ್ರಮಗಳು ಅನಿರೀಕ್ಷಿತವಾಗಿ ಮುಂದೂಡಲ್ಪಡುವವು. ಹಾಗಾಗಿ ನಿಮಗೆ ಸ್ವಲ್ಪ ನಿರಾಸೆ ಆಗುವುದು. ಆದರೆ ಇದಕ್ಕೆ ಬೇಸರಿಸಬೇಡಿ. ಆದದ್ದೆಲ್ಲಾ ಒಳಿತೇ ಆಯಿತು ಎನ್ನಿ.ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಯಾರೂ ಗಮನಿಸುತ್ತಿಲ್ಲ ಎಂದು ಭಾವಿಸಿದಂತೆ ನೀವು ಮಾಡುವುದು ಬೇಡ. ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದೀರಿ. ನಿಮ್ಮ ಎಲ್ಲಾ ನಡೆಯನ್ನು ಗಮನಿಸುವ ಜನರಿದ್ದಾರೆ.ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.
ಅದೃಷ್ಟ ಸಂಖ್ಯೆ: 7
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











