Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
10-12-2018: ಸೋಮವಾರದ ದಿನ ಭವಿಷ್ಯ
ಶಿವ ಎಂದರೆ ಆದಿಯೋಗಿ, ಅರ್ಥಾತ್, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಎಂದು ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು ಶಂಕರ. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ.
ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಎಂಬ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ.
ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.ಶಿವ ಎಂದರೆ ಶೂನ್ಯವೆಂದು ಹೇಳಿ ಅವನು ಸಪ್ತ ಋಷಿಗಳಿಗೆ ಯೋಗ ಭೋಧಿಸಿದನೆಂದು ಹೇಳಿರುವುದು ವಿಚಿತ್ರವಾಗಿದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ ( 10 ಡಿಸೆಂಬರ್ 2018)
ನಿಮ್ಮ ಇತ್ತೀಚಿನ ಕಾರ್ಯಕ್ರಮವು ಜನಮನ್ನಣೆ ಗಳಿಸಿದೆ. ಆದರೆ ಅದರಲ್ಲೂ ತಪ್ಪು ಹುಡುಕುವವರಿದ್ದಾರೆ. ಅನ್ಯರು ನಿಮ್ಮನ್ನು ಹೊಗಳಲಿ ಅಥವಾ ತೆಗಳಲಿ ಎಲ್ಲವನ್ನು ನಗುಮುಖದಿಂದ ಸ್ವಾಗತಿಸುವಿರಿ. ಇದರಿಂದ ನಿಮ್ಮ ಘನತೆ ಹೆಚ್ಚುವುದು.
ಹಲವು ದಿನಗಳಿಂದ ಒಂದು ಸ್ಪಷ್ಟ ಸ್ವರೂಪ ಕೊಡಲು ಸಾಧ್ಯವಾಗದ ಒಂದು ಸಂಗತಿಗೆ ನಿಶ್ಚಿತ ರೂಪ ದೊರೆಯಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆ ಆಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಎಂಬಂತೆ ನೀವು ಆಡುವ ಮಾತು ನಿಮ್ಮ ಹತ್ತಿರದ ವೃಕ್ತಿಗೆ ಘಾಸಿಯನ್ನುಂಟು ಮಾಡುವುದು. ಅದರಿಂದ ಆತ ಕುಪಿತನಾಗಿ ನಿಮ್ಮ ಮೇಲೆ ಜಗಳಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ನಿಮ್ಮ ವಿಶೇಷವಾದ ಪ್ರವಾಸ ಕಾರ್ಯಕ್ರಮ ನಿಗದಿಗೊಳ್ಳಲು ಅವಕಾಶ ದಿಢೀರಾಗಿ ಕೂಡಿಬರುತ್ತದೆ. ಇದನ್ನು ಉಪಯೋಗಿಸಿಕೊಂಡಲ್ಲಿ ನಿಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು. ಹಣಕಾಸಿನ ಸ್ಥಿತಿ ಉತ್ತಮ ವಾಗಿರುವುದು.ಅನವಶ್ಯಕ ಖರ್ಚುಗಳು ನಿಮ್ಮನ್ನು ಹೈರಾಣ ಮಾಡುವುದು. ಬರಬೇಕಾದ ಹಣ ಸಕಾಲದಲ್ಲಿ ಬರದೆ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುವುದು. ಮನೋನಿಯಾಮಕ ರುದ್ರದೇವರನ್ನು ಮನಸಾ ಸ್ಮರಿಸಿ, ಒಳಿತಾಗುವುದು.ನೀವು ನಿಮ್ಮ ಮಕ್ಕಳಿಗೆ ತಿಳಿಸಬೇಕೆಂದಿರುವ ಮಹತ್ವದ ವಿಷಯವನ್ನು ತಿಳಿಸಲು ಇಂದು ಉತ್ತಮ ದಿನವಾಗಿದೆ. ಇದರಿಂದ ಮುಂದಿನ ದಿನಗಳನ್ನು ಸರಾಗವಾಗಿ ರೂಪಿಸಿಕೊಳ್ಳಲು ಸಹಾಯವಾಗುವುದು. ಮಕ್ಕಳಿಗೂ ಸ್ವಲ್ಪ ಜವಾಬ್ದಾರಿಯನ್ನು ಕಲಿಸಿಕೊಡಿ.9845743807 ಅದೃಷ್ಟ ಸಂಖ್ಯೆ:1

ಮಿಥುನ
ಏನೋ ಆತಂಕ ಎದುರಾಗಲಿದೆ ಎಂದು ವಿಚಲಿತರಾಗುವ ಸಾಧ್ಯತೆ ಇದ್ದು ಎಲ್ಲವೂ ದೈವಕೃಪೆಯಿಂದ ಪರಿಹಾರವಾಗಲಿದೆ ಮತ್ತು ಆತಂಕದಿಂದ ದೂರ ಉಳಿಯುವಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಜೀರ್ಣ ಅಥವಾ ವಾಯು ತೊಂದರೆ ಎದುರಾಗುವ ಸಾಧ್ಯತೆ ಇರುವುದು. ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆದುಕೊಳ್ಳಿ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ.ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಟಿಲ ಸಮಸ್ಯೆಗಳು ಎದುರಾಗುವವು. ಭಗವಂತನ ಮೊರೆ ಹೋಗಿ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯವರ್ತಿಯಾಗಿ ಕಾಗದ ಪತ್ರಗಳಿಗೆ ಸಹಿ ಮಾಡದಿರಿ.9845743807
ಅದೃಷ್ಟ ಸಂಖ್ಯೆ:6

ಕಟಕ
ನಿಮಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಮೂಗು ತೂರಿಸುವುದರಿಂದ ಮುಜುಗರಕ್ಕೆ ಒಳಗಾಗುವಿರಿ. ಅಂತಹ ವ್ಯಕ್ತಿಗಳಿಗೆ ಕಠಿಣ ಪದಗಳನ್ನು ಉಪಯೋಗಿಸಿ ದೂರ ಇರಲು ತಿಳಿಸಿ. ಅನುಕೂಲವಾಗುವುದು. ಯಾರೇ ನಿಮ್ಮ ನಿಲುವನ್ನು ಟೀಕಿಸಲಿ, ತರ್ಕಪೂರ್ಣವಾಗಿದ್ದಲ್ಲಿ ನಿಮ್ಮ ಹೆಜ್ಜೆಯನ್ನು ಹಿಂದೆ ಇಡಲೇ ಬೇಡಿ. ಸಾಹಸವಂತನಿಗೆ ಭಗವಂತನು ಸಹಾಯಹಸ್ತ ನೀಡುವನು. ನಿಮ್ಮ ಮನೋ ಕಾಮನೆಗಳು ಪೂರ್ಣಗೊಳ್ಳುವವು. ನಿಮ್ಮ ವಿಚಾರದಲ್ಲಿ ಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಇಂದು ಶುಭದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು.9845743807. ಅದೃಷ್ಟ ಸಂಖ್ಯೆ:8

ಸಿಂಹ
ಹಣಕಾಸು ಸಂಸ್ಥೆಗಳಿಂದ ಸಹಾಯ ದೊರೆಯಲಿದೆ. ಮನೆಯವರ ದೂರ ಪ್ರಯಾಣದಿಂದ ಒಂಟಿತನ ಕಾಡುವುದು. ಜಮೀನಿನ ಕೆಲಸ ಕಾರ್ಯಗಳು ಭರದಿಂದ ಸಾಗುವುವು.ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾಗುವುದು. ಸಂಸಾರದಲ್ಲಿ ನೆಮ್ಮದಿ ದೊರೆಯಲಿದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ ಉಂಟಾಗಲಿದೆ. ಕುಲದೇವರ ದರ್ಶನ ಸಾಧ್ಯತೆ ಇದೆ. ಮಕ್ಕಳು ನಿಮಗೆ ಆರ್ಥಿಕ ಸಹಾಯ ನೀಡುವರು.ಮಿಥುನ:- ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವುದು ಒಳ್ಳೆಯದು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿ ಹೊಂದುವುವು. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವುದು.9845743807
ಅದೃಷ್ಟ ಸಂಖ್ಯೆ:6

ಕನ್ಯಾ
ತಂದೆ, ತಾಯಿ ಮಕ್ಕಳ ಸಲುವಾಗಿ ವಿದೇಶ ಪ್ರವಾಸ ಮಾಡಬೇಕಾದ ಸಂದರ್ಭ ಬರುವುದು. ಸತ್ಪುರುಷರ ಸಂದರ್ಶನ ಸಾಧ್ಯತೆ ಇದೆ. ಆಸ್ತಿ ಪರಭಾರೆಗೆ ಸೂಕ್ತ ಕಾಲವಲ್ಲ.ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ಮಾಡುವ ಸಾಧ್ಯತೆ ಇದೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಲಿದೆ. ಮಗನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡುವುದು.ಹೊಸ ಮನೆಯ ಕೆಲಸಗಳು ಪೂರ್ಣಗೊಂಡು ಬಾಡಿಗೆದಾರರು ನಿಗದಿಯಾಗಿದ್ದರ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಮೂಡುವುದು. ಈಗ ಏನಿದ್ದರೂ ಮನೆಗೆ ಮಾಡಿದ ಸಾಲದ ತೀರುವಳಿ ಬಗ್ಗೆ ಚಿಂತಿಸಬೇಕಾಗುವುದು.9845743807
ಅದೃಷ್ಟ ಸಂಖ್ಯೆ:4

ತುಲಾ
ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗುವುದು. ಪತ್ನಿ ವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆಗಳು ನಿವಾರಣೆ ಆಗುವುವು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರೆ ಹೋಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾಗುವುದು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ. ಸಾಲದ ತೀರುವಳಿಗೆ ಹೆಚ್ಚಿನ ಗಮನ ನೀಡುವಿರಿ. ಚಿನ್ನಾಭರಣಗಳ ವ್ಯವಹಾರ ಆರಂಭಿಸಲು ಅಥವಾ ಖರೀದಿಸಲು ಉತ್ತಮ ದಿನ. ಅಂತೆಯೇ ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾಗುವುದು. ಉತ್ತಮ ಆದಾಯ ಹೊಂದುವಿರಿ.9845743807 ಅದೃಷ್ಟ ಸಂಖ್ಯೆ:5

ವೃಶ್ಚಿಕ
ಮಕ್ಕಳು ಬುದ್ಧಿವಂತರಿದ್ದರೂ ಪರೀಕ್ಷೆಯಲ್ಲಿ ಹಿನ್ನಡೆಯನ್ನು ಅನುಭವಿಸುವರು. ನಿಮಗೆ ಅನ್ಯರು ಬೌದ್ಧಿಕ ಕೀಟಲೆಯನ್ನು ಕೊಡುವರು. ಇದರಿಂದ ನಿಮ್ಮ ಮನಸ್ಸು ಉದ್ವಿಗ್ನತೆಯಿಂದ ಕೂಡುವುದು. ಕೈಹಾಕಿದ ಎಲ್ಲಾ ವಿಷಯದಲ್ಲೂ ಯಶಸ್ಸು ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ನೇರವಾಗಿ ನಿಮ್ಮಿಂದ ತಪ್ಪು ಸಂಭವಿಸದಿದ್ದರೂ ನಿಮ್ಮ ಬಂಧುಗಳಿಂದಲೋ ಅಥವಾ ನಿಮ್ಮ ಸ್ನೇಹಿತರಿಂದಲೋ ತೊಂದರೆ ಅನುಭವಿಸುವಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ತೋರುವುದಿಲ್ಲ. ಮಕ್ಕಳು ನಿಮ್ಮ ಬಗ್ಗೆ ಗೌರವ ತೋರುತ್ತಿಲ್ಲ ಎಂದು ಚಿಂತಿಸದಿರಿ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಬಲ ಇರುವುದಿಲ್ಲ. ಹಣವನ್ನು ಹಿತಮಿತವಾಗಿ ಖರ್ಚು ಮಾಡಿ.9845743807 ಅದೃಷ್ಟ ಸಂಖ್ಯೆ:6

ಧನುಸ್ಸು
ನಿಮ್ಮ ವಹಿವಾಟಿನ ತೊಂದರೆಗಳನ್ನು ದೂರ ಮಾಡಿಕೊಳ್ಳಲು ಪಾಲುದಾರರ ಜೊತೆ ಮುಕ್ತ ಮಾತುಕತೆಗಳನ್ನು ನಡೆಸಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದಿಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸುಮ್ಮನೆ ಮತ್ತೊಬ್ಬರಿಗೆ ಅನುಕಂಪ ತೋರಿ ಹಣದ ಸಹಾಯ ಮಾಡದಿರಿ. ನಿಮ್ಮ ಹೃದಯ ವೈಶಾಲ್ಯವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಇದರಿಂದ ಮಾನಸಿಕ ಚಿಂತೆಗಳು ಹೆಚ್ಚು ಕಾಡುತ್ತವೆ. ದೂರದ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಜಾಸ್ತಿಯಾಗಿದೆ. ಬದಲಾವಣೆ ಈಗ ಅನಿವಾರ್ಯವಾಗಿರುತ್ತದೆ. ಬೇರೊಂದು ಕಡೆ ವರ್ಗ ಆಗುವ ಜಾಗ ಉತ್ತಮವಾಗಿರುತ್ತದೆ.9845743807
ಅದೃಷ್ಟ ಸಂಖ್ಯೆ:8

ಮಕರ
ಹಿರಿಯರು ನಡೆಸಿದ ಆದರ್ಶ ಜೀವನ, ನಿಮ್ಮ ಬದುಕಿಗೆ ದಾರಿದೀಪವಾಗಲಿದೆ. ಅಂತೆಯೇ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಉತ್ತಮ.ತಿಳಿದವರಿಗೆ ಹೆಚ್ಚಿನ ಸಲಹೆ ಸೂಚನೆಗಳು ಬೇಡ ಎಂಬುದು ಸರಿಯಾದರೂ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ. ಆಂಜನೇಯ ಸ್ತೋತ್ರವನ್ನು ಪಠಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ಗಾದೆ ಮಾತಿದೆ. ಅಂತೆಯೇ ನಿಮ್ಮ ಕಾರ್ಯಗಳು ನೆರವೇರಬೇಕೆಂದರೆ ನಿಮ್ಮ ಶತ್ರುಗಳ ಸಹಾಯವನ್ನು ಪಡೆಯಬೇಕಾಗುವುದು. ಈ ಬಗ್ಗೆ ಹಿಂಜರಿಕೆ ಬೇಡ.9845743807
ಅದೃಷ್ಟ ಸಂಖ್ಯೆ:8

ಕುಂಭ
ರಾಜಕೀಯ ನೇತಾರರು ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹು ಎಚ್ಚರಿಕೆಯಿಂದ ಇರಬೇಕು. ಅನವಶ್ಯಕವಾಗಿ ಅಪವಾದಗಳನ್ನು ಎದುರಿಸಬೇಕಾಗುವುದು. ಸರ್ವ ಶಕ್ತಳಾದ ದುರ್ಗಾಮಾತೆಯನ್ನು ಆರಾಧಿಸಿ. ದೇವಿ ದೇವಸ್ಥಾನಕ್ಕೆ ಹುರುಳಿಕಾಳನ್ನು ದಾನ ಮಾಡುವುದರಿಂದ ಕಾರ್ಯಗಳು ಸುಗಮವಾಗುವುವು. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.ಬೆಟ್ಟಿಂಗ್, ಜೂಜು, ರೇಸು ಇತ್ಯಾದಿಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾದು ನೋಡಿ, ಮುಂದಿನ ದಿನಗಳಲ್ಲಿ ಒಳಿತಾಗುವುದು. ಅಧಿಕ ಸುತ್ತಾಟದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.9845743807
ಅದೃಷ್ಟ ಸಂಖ್ಯೆ:2

ಮೀನ
ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಉಂಟಾಗುವುದು. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ ಕಂಡು ಬರುವುದು. ರಾಜಕೀಯದಲ್ಲಿರುವವರಿಗೆ ಉತ್ತಮ ಕಾಲ.ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಹಾಯ, ಸಲಹೆ ಕೋರಿ ಬರುವವರಿಗೆ ಸಹಾಯ ಮಾಡಿ.9845743807
ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











