For Quick Alerts
ALLOW NOTIFICATIONS  
For Daily Alerts

ಈಕೆ ತನ್ನದೇ ಮೂತ್ರ ಕುಡಿದು-ದೇಹದ ತೂಕ ಇಳಿಸಿಕೊಂಡಳು!

|

ಇಂಟರ್ ನೆಟ್ ನಲ್ಲಿ ನೀವು ತೂಕ ಕಳೆದುಕೊಳ್ಳಲು ಬೇಕಾಗುವಂತಹ ಹಲವಾರು ರೀತಿಯ ವಿಧಾನಗಳು ಹಾಗೂ ಸಲಹೆಗಳನ್ನು ಪಡೆಯಬಹುದು. ಆದರೆ ಇದರಲ್ಲಿ ಕೆಲವೊಂದು ತುಂಬಾ ವಿಚಿತ್ರವಾಗಿರುವಂತದ್ದಾಗಿದೆ.

woman drinks own urine

ಆದರೆ ಇಲ್ಲೊಬ್ಬಳು ಮಹಿಳೆಯು ಸ್ವಮೂತ್ರ ಪಾನ ಮಾಡಿಕೊಂಡು ತೂಕ ಇಳಿಸಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾಳೆ. ಇದನ್ನು ನೀವು ತಿಳಿಯಿರಿ.

All Image Source Youtube

ಆಕೆ ಬೊಜ್ಜು ದೇಹದವಳಾಗಿದ್ದಳು!

ಆಕೆ ಬೊಜ್ಜು ದೇಹದವಳಾಗಿದ್ದಳು!

46ರ ಹರೆಯದ ಲೇಹ್ ಸ್ಯಾಂಪ್ಸನ್ ಎಂಬಾಕೆಯ ದೇಹದಲ್ಲಿ ಬೊಜ್ಜು ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ ಆಕೆಗೆ ತನ್ನ ಕೂದಲು ಬಾಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆಕೆ ಅಮೆರಿಕಾದ ಆಹಾರ ಕ್ರಮವಾಗಿರುವ ಬೀಫ್, ಹಂದಿ ಮತ್ತು ಕೋಳಿ ಮಾಂಸ ಸೇವಿಸುತ್ತಲಿದ್ದಳು. ಆದರೆ ಆಕೆ ತನ್ನ ಮೂತ್ರವನ್ನು ಸೇವಿಸಲು ಆರಂಭಿಸಿದ ಬಳಿಕ ತೂಕ ಕಳೆದುಕೊಂಡಿದ್ದಾಳೆ!

ಜೀವನಶೈಲಿ ಬದಲಾಯಿಸಲು ನಿರ್ಧರಿಸಿದಳು

ಜೀವನಶೈಲಿ ಬದಲಾಯಿಸಲು ನಿರ್ಧರಿಸಿದಳು

ಅತಿಯಾಗಿ ಬೊಜ್ಜು ಬೆಳೆದಿದೆ ಮತ್ತು ದೌರ್ಬಲ್ಯವು ಉಂಟಾಗಿತ್ತೆಂದು ಆಕೆಗೆ ಮನವರಿಕೆಯಾಗಿತ್ತು. ಆಕೆಯ ಕೈಗಳಿಗೆ ಯಾವುದೇ ಸ್ಪರ್ಶಜ್ಞಾನವಿರಲಿಲ್ಲ. ಕೆಲವೊಂದು ಸಲ ಆಕೆಗೆ ಹಲ್ಲುಜ್ಜಲು ಮತ್ತು ಕೂದಲು ಬಾಚಿಕೊಳ್ಳಲು ಆಗುತ್ತಿರಲಿಲ್ಲ. ಇದರಿಂದಾಗಿ ಆಕೆ ತುಂಬಾ ಖಿನ್ನತೆಗೆ ಒಳಗಾಗಿ ಜೀವನವೇ ಬೇಸರ ಮೂಡಿಸಿತ್ತು.

Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ಆಕೆ ಸ್ವಮೂತ್ರ ಪಾನದ ಬಗ್ಗೆ ತಿಳಿದುಕೊಂಡಳು

ಆಕೆ ಸ್ವಮೂತ್ರ ಪಾನದ ಬಗ್ಗೆ ತಿಳಿದುಕೊಂಡಳು

ಆಕೆ ಮೂತ್ರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಳು. ಮಹಿಳೆಯರ ಮೂತ್ರವನ್ನು ಯಾವ ರೀತಿಯಲ್ಲಿ ಔಷಧಿಗಳು ಮತ್ತು ಕಾಸ್ಮೆಟಿಕ್ ಗಳಿಗೆ ಬಳಸುತ್ತಾರೆ ಎಂದು ತಿಳಿದಳು. ಇದರ ಬಳಿಕ ಪ್ರಯೋಗಕ್ಕೆ ಮುಂದಾದಳು. ಆಕೆ ಒಂದು ಗ್ಲಾಸ್ ಗೆ ಮೂತ್ರ ವಿಸರ್ಜನೆ ಮಾಡಿ ಬೆಳಗ್ಗೆ ಅರ್ಧ ಕುಡಿದರೆ, ಉಳಿದರ್ಧವನ್ನು ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದಳು.

ಆಕೆ ಆರೋಗ್ಯವಾಗಿದ್ದಾಳೆ

ಆಕೆ ಆರೋಗ್ಯವಾಗಿದ್ದಾಳೆ

ಮೂತ್ರ ಬಳಕೆ ಜನರು ಭಾವಿಸಿರುವುದಕ್ಕಿಂತ ತುಂಬಾ ಆರೋಗ್ಯಕಾರಿ. ಇದರಿಂದಾಗಿ ಆಕೆ ಇದನ್ನು ಹಲ್ಲುಜ್ಜಲು ಮತ್ತು ಕಣ್ಣುಗಳನ್ನು ತೊಳೆಯಲು ಬಳಸುತ್ತಿದ್ದಳು. ಇದರ ಹೊರತಾಗಿ ಆಕೆ ತುಂಬಾ ಕಠಿಣ ಆಹಾರ ಪಥ್ಯವನ್ನು ಮಾಡುತ್ತಲಿದ್ದಳು. ಇದರಿಂದಾಗಿ ಆಕೆ ತನ್ನ ತೂಕ ಕಳೆದುಕೊಂಡಳು.

Most Read: 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

ತೂಕ ಕಳಕೊಂಡ ಬಳಿಕ ಆತ್ಮವಿಶ್ವಾಸ ಮರಳಿತು

ತೂಕ ಕಳಕೊಂಡ ಬಳಿಕ ಆತ್ಮವಿಶ್ವಾಸ ಮರಳಿತು

ದೇಹದ ತೂಕವನ್ನು ಇಳಿಸಿಕೊಂಡ ಬಳಿಕ ಆಕೆಯನ್ನು ಕಂಡು ಹೆಚ್ಚಿನವರು ಪ್ರಶಂಸೆ ಮಾಡಲು ಆರಂಭಿಸಿದರು ಎಂದು ಲೇಹ್ ಹೇಳುತ್ತಾರೆ.

ವೈದ್ಯಕೀಯವು ಏನು ಹೇಳುತ್ತದೆ?

ವೈದ್ಯಕೀಯವು ಏನು ಹೇಳುತ್ತದೆ?

ವೈದ್ಯಕೀಯ ಲೋಕವು ಲೇಹ್ ಮಾತನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಅತಿಯಾಗಿ ಮೂತ್ರ ಸೇವನೆ ಮಾಡಿದರೆ ದೇಹದಲ್ಲಿ ವಿಷದತ್ಯಾಜ್ಯವು ನಿರ್ಮಾಣವಾಗಬಹುದು ಎಂದು ಎಚ್ಚರಿಸಿದೆ. ಇದರಿಂದಾಗಿ ಕಿಡ್ನಿ ವೈಫಲ್ಯವಾಗಬಹುದು ಎಂದಿದೆ.ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.

English summary

Woman Drinks Her Urine Every Day And Claims She Lost Weight!

There are numerous tricks and ways in which people lose weight, and they share their stories online with the world. While some are tricky, there are those weird tricks that can make you feel disgusted, like in this case, where a woman claims that she lost weight after she started drinking her own urine! Check out the details of the same.
X
Desktop Bottom Promotion