For Quick Alerts
ALLOW NOTIFICATIONS  
For Daily Alerts

  ರಾಶಿಭವಿಷ್ಯ: ಪ್ರತಿಯೊಬ್ಬರ ರಾಶಿಚಕ್ರದ ಅಡಿಯಲ್ಲಿ ಕಾಡುವ ಅಭದ್ರತೆಗಳು

  By Divya Pandit
  |

  ಭಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಡಗಿರುತ್ತದೆ. ಕೆಲವರಲ್ಲಿ ಅದರ ಪ್ರಮಾಣ ಅಧಿಕವಾಗಿದ್ದರೆ. ಇನ್ನೂ ಕೆಲವರಲ್ಲಿ ಕಡಿಮೆ ಪ್ರಮಾಣದ ಭಯವಿರುತ್ತದೆ. ಭಯ ಎನ್ನುವುದು ಇದ್ದಾಗ ಮಾತ್ರ ವ್ಯಕ್ತಿಯು ತಗ್ಗಿ ಬಗ್ಗಿ ನಡೆಯುತ್ತಾನೆ. ಜೊತೆಗೆ ತನ್ನಿಂದ ಇತರರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತಾನೆ. ಅದೇ ವ್ಯಕ್ತಿಗೆ ಯಾವುದರಲ್ಲೂ ಭಯವಿಲ್ಲ ಎಂದಾದಾಗ ಲಂಗು-ಲಗಾಮು ಇಲ್ಲದವರಂತೆ ಇರುತ್ತಾನೆ. ಈ ಪ್ರವೃತ್ತಿಯಿಂದಲೇ ಸಮಾಜಕ್ಕೆ ಸಾಕಷ್ಟು ನಷ್ಟ ಹಾಗೂ ನೋವುಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.

  ಅದೇ ರೀತಿ ವ್ಯಕ್ತಿ ಎಲ್ಲದರಲ್ಲೂ ಮಿತಿಮೀರಿದ ಭಯವನ್ನು ಹೊಂದಿದ್ದರೂ ಅದು ಅವನ ವ್ಯಕ್ತಿತ್ವದ ವಿಕಸನಕ್ಕೆ ತೊಂದರೆ ಉಂಟಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಭಯ ಹಾಗೂ ಅಭದ್ರತೆ ಎನ್ನುವುದು ಇರುತ್ತದೆ. ಆದರೆ ಅದರ ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತವೆ. ಆ ವ್ಯತ್ಯಾಸಗಳು ಅವರ ರಾಶಿಚಕ್ರಕ್ಕೆ ಅನುಗುಣವಾಗಿರುತ್ತದೆ ಎಂದು ಹೇಳಲಾಗುವುದು. ರಾಶಿಚಕ್ರಗಳ ಅನುಸಾರ ಯಾವ ಬಗೆಯ ಅಭದ್ರತೆಯಿಂದ ಪ್ರತಿಯೊಬ್ಬರೂ ಅನುಭವಿಸಬೇಕಾಗುವುದು? ಅವುಗಳ ಪ್ರಭಾವ ಹೇಗಿರುತ್ತದೆ? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

  ಮೇಷ

  ಮೇಷ

  ಈ ರಾಶಿಯ ವ್ಯಕ್ತಿಗಳಿಗೆ ತಮ್ಮ ಸೋಲು ಹಾಗೂ ವೈಫಲ್ಯಗಳನ್ನು ಎದುರಿಸಲು ಬಹಳ ಕಷ್ಟ ಎನಿಸಿಕೊಳ್ಳುತ್ತದೆ. ಜೀವನಲ್ಲಿ ಕೆಲವು ಪ್ರಮುಖ ಕಾರ್ಯಗಳಲ್ಲಿ ವಿಫಲವಾಗುವ ಸಾಧ್ಯತೆಗಳಿರುತ್ತವೆ ಎನ್ನುವುದರ ಬಗ್ಗೆ ಹೆಚ್ಚು ಅಭದ್ರತೆಯನ್ನು ಹೊಂದಿರುತ್ತಾರೆ. ಇವರು ಮಾಡಬೇಕಾದ ಕೆಲಸವೆಲ್ಲವೂ ಶಾಂತ ರೀತಿಯಲ್ಲಿಯೇ ಮುಂದುವರಿಯುತ್ತದೆ. ವಿಚಾರ ಹಾಗೂ ಕೆಲಸಗಳನ್ನು ಮಾಡುವಾಗ ಸೂಕ್ತ ಚಿಂತನೆಗಾಗಿ ಸಮಯವನ್ನು ತೆಗೆದುಕೊಂಡರೆ ಸಮಸ್ಯೆ ಅಥವಾ ಅಭದ್ರತೆ ಕಾಡದು. ಇನ್ನು ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು. ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಜೂನ್ ತಿಂಗಳು ಈ ರಾಶಿಯವರಿಗೆ ಸಿನಿಮಾದ ರೀತಿಯಲ್ಲಿ ಬದಲಾವಣೆಯನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಆಕ್ರಮಣ ಶೀಲ ಗುಣವು ಹಿಮ್ಮುಖ ಚಲನೆಗೆ ಎಡೆಮಾಡಿಕೊಡುವುದು. ಅಲೆಗಳು ಅದೆಷ್ಟು ಏರಿಳಿತಗಳ ಅಬ್ಬರ ತಂದರು ಕಾಲನ್ನು ಗಟ್ಟಿಯಾಗಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳಬೇಕು.

  ವೃಷಭ

  ವೃಷಭ

  ಈ ರಾಶಿಯ ವ್ಯಕ್ತಿಗಳು ನಿಸ್ವಾರ್ಥದಿಂದ ಕೂಡಿರುತ್ತಾರೆ. ಇವರು ಒಬ್ಬ ಅದ್ಭುತ ವ್ಯಕ್ತಿಗಳು ಹೌದು. ಇವರು ಸಾಮಾನ್ಯವಾಗಿ ತಮ್ಮ ಕೆಲವು ಕೆಲಸಗಳನ್ನು ಅಥವಾ ಪ್ರಕ್ರಿಯೆಯನ್ನು ಮುಗಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವರು. ಬೇರೆಯವರಿಗೆ ಆದ್ಯತೆ ನೀಡುವ ಮೊದಲು ನಿಮ್ಮ ಬಗ್ಗೆಯೂ ಯೋಚಿಸುವ ಅಗತ್ಯತೆ ಇರುತ್ತದೆ. ಏಕಾಂಗಿಯಾಗಿ ಇರುವುದರ ಬಗ್ಗೆ ಇವರು ಹೆಚ್ಚು ಭಯಪಡುತ್ತಾರೆ. ಇನ್ನು ಈ ರಾಶಿಯ ವ್ಯಕ್ತಿಗಳು ಇನ್ನೊಬ್ಬರ ಒಡೆತನದ ಅಡಿಯಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಒಂದು ವೇಳೆ ನೀವು ವೃಷಭರಾಶಿಯವರಾಗಿದ್ದರೆ ನಿಮ್ಮ ರಾಶಿಯಲ್ಲಿ ಭೂಮಿ ಮತ್ತು ಶುಕ್ರ ಗ್ರಹಗಳು ಪ್ರಮುಖ ಪಾತ್ರವಹಿಸುತ್ತವೆ. ನೀವು ಸರಳಜೀವಿಗಳು ಹಾಗೂ ನೀವು ತೀರಾ ಅತಿರೇಕ ಎನಿಸುವ ಕನಸುಗಳನ್ನೂ ಕಟ್ಟುವುದಿಲ್ಲ. ಓರ್ವ ವ್ಯಕ್ತಿಯಾಗಿ ನೀವು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವವರಾಗಿದ್ದೀರಿ ಹಾಗೂ ಪ್ರಬಲ ಮನೋಬಲವನ್ನೂ ಹೊಂದಿದ್ದೀರಿ. ಈ ರಾಶಿಯ ವ್ಯಕ್ತಿಗಳ ಲಕ್ಷಣಗಳಲ್ಲಿ ಇವು ಪ್ರಮುಖವಾಗಿವೆ. ಆದರೆ ಈ ವ್ಯಕ್ತಿಗಳಿಗೆ ಅಹಂಭಾವ, ಆಸೆಬುರುಕತನ, ಹಠಮಾರಿತನ ಹಾಗೂ ತಡವಾಗಿಸುವ ಗುಣಗಳೂ ಅಂಟಿಕೊಂಡಿರುತ್ತವೆ. ಹಾಗಾಗಿ ಕೆಲವೊಮ್ಮೆ ಸೋಮಾರಿತನ, ಆಸೆಬುರುಕತನ, ಅನುಮಾನ ಪ್ರವೃತ್ತಿ, ಇತರರೊಂದಿಗೆ ಹೊಂದಿಕೊಳ್ಳದಿರುವುದು ಮೊದಲಾದ ಗುಣಗಳಿಂದ ಕೆಲವು ಅಮೂಲ್ಯ ಅವಕಾಶಗಳು ಕೈತಪ್ಪಿಹೋಗಬಹುದು.

  ಮಿಥುನ

  ಮಿಥುನ

  ಈ ರಾಶಿಚಕ್ರದವರು ನೀವಾಗಿದ್ದರೆ ಬಹಳ ಅದೃಷ್ಟವಂತರು ಎಂದು ಹೇಳಬಹುದು. ಯಾವುದಾದರೂ ವಿಚಾರದಲ್ಲಿ ನಿಮ್ಮ ಅನಿಸಿಕೆಯಂತೆ ಆಗದೆ ಅದು ಬೇರೆ ರೀತಿಯಲ್ಲಿಯೇ ಹೋಗುತ್ತಿದೆ ಎಂದಾದರೆ ಒಂದು ರೀತಿಯ ಭಯ ಹಾಗೂ ಅಭದ್ರತೆಯ ಭಾವ ನಿಮ್ಮನ್ನು ಕಾಡುವುದು. ಜೀವನದಲ್ಲಿ ಅಡೆತಡೆ ಎನ್ನುವುದು ಒಂದು ಭಾಗ ಎಂದು ಅರಿತಾಗ ನಿಮ್ಮ ಭಯದ ಪ್ರಮಾಣ ಹಾಗೂ ಅಭದ್ರತೆಯ ಭಾವವು ಕಡಿಮೆಯಾಗುವುದು. ಇನ್ನು ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುವಿರಿ. ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

  ಕರ್ಕ

  ಕರ್ಕ

  ಮಾನಸಿಕ ನೋವು ಹಾಗೂ ಒತ್ತಡವು ಇವರಿಗೆ ಅತ್ಯಂತ ಅಭದ್ರತೆಯ ಭಾವನೆಯನ್ನು ನೀಡುತ್ತದೆ. ಇವರು ಭಾವನೆಗಳನ್ನು ನಿಯಂತ್ರಿಸುವುದು ಹಾಗೂ ಅದರ ನಿಯಂತ್ರಣದ ಬಗ್ಗೆ ಆದಷ್ಟು ಕಾಳಜಿ ವಹಿಸಬೇಕು. ಇವರು ವಸ್ತು ಹಾಗೂ ವ್ಯಕ್ತಿಗಳ ಮೇಲೆ ನಿಯಂತ್ರಣವನ್ನು ಹೇರಲು ಮುಂದಾಗುತ್ತಾರೆ. ಅದು ಅಧಿಕ ನೋವನ್ನುಂಟುಮಾಡುವುದು. ಇನ್ನು ಜೂನ್ ತಿಂಗಳಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಕರ್ಕ ರಾಶಿಯವರ ಮೇಲೆ ಪ್ರಭಾವ ಬೀರುವುದು. ಪ್ರಮುಖ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುವ ಸಾಧ್ಯತೆಗಳಿವೆ. ಅದರಲ್ಲಿ ಕೆಲವು ಘಟನೆಗಳು ನಿಮ್ಮ ಜೀವನದಲ್ಲಿ ಮರೆಯಲಾಗದ ಸಂಗತಿಗಳಾಗಬಹುದು ಅಥವಾ ನಿಮ್ಮ ನೆನಪುಗಳಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ. ದೀರ್ಘಕಾಲದ ನೆನಪುಗಳಾಗಬಲ್ಲ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಸಿಂಹ

  ಸಿಂಹ

  ಈ ರಾಶಿಯವರು ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಅತ್ಯಂತ ಧೈರ್ಯದಿಂದ ಮಾಡುತ್ತಾರೆ. ನಿಮ್ಮ ಪ್ರೀತಿಪಾತ್ರರು ಇವರನ್ನು ಅಷ್ಟಾಗಿ ಇಷ್ಟಪಡುತ್ತಿಲ್ಲ ಅಥವಾ ದೂರವಾಗುತ್ತಿದ್ದಾರೆ ಎಂದಾದರೆ ಇವರಿಗೆ ಭಯ ಹಾಗೂ ಅಭದ್ರತೆಯು ಕಾಡುವುದು.

  ಕನ್ಯಾ

  ಕನ್ಯಾ

  ಈ ರಾಶಿಯವರು ಸಾಮಾನ್ಯವಾಗಿಯೇ ಪರಿಪೂರ್ಣತಾವಾದಿಯಾಗಿರುತ್ತಾರೆ. ಹಾಗಾಗಿ ವಿಷಯಗಳನ್ನು ಅಸ್ತವ್ಯಸ್ಥವಾಗಿ ಅರ್ಥಮಾಡಿಕೊಳ್ಳುವರು. ಆ ವಿಚಾರದಿಂದ ಹೊರಗೆ ಉಳಿಯಲು ಪ್ರಯತ್ನಿಸುವರು. ಆಗ ಒಂದು ಬಗೆಯ ಭಯ ಹಾಗೂ ಅಭದ್ರತೆಯ ಭಾವನೆಯು ಕಾಡುವುದು. ಇವರು ಗೊಂದಲ ಹಾಗೂ ಅವ್ಯವಸ್ಥೆಯನ್ನು ಸಹ ದ್ವೇಷಿಸುತ್ತಾರೆ.

  ತುಲಾ

  ತುಲಾ

  ಈ ರಾಶಿವರನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದು ಇವರ ಗಮನಕ್ಕೆ ಬಂದರೆ ಸಾಕು ಒಂದು ಬಗೆಯ ಭಯ ಕಾಡಲು ಪ್ರಾರಂಭವಾಗುತ್ತದೆ. ಇವರು ತಮಗೆ ಹತ್ತಿರವಾದ ವ್ಯಕ್ತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಯಾರಾದರೂ ಇವರಿಂದ ದೂರವಾಗುತ್ತಿದ್ದಾರೆ ಎಂದಾಗ ಅಭದ್ರತೆ ಉಂಟಾಗುವುದು. ಹಾಗಾಗಿ ನೀವು ಆದಷ್ಟು ಬೆರೆತು ಬಾಳುವುದು ಸೂಕ್ತ.

  ವೃಶ್ಚಿಕ

  ವೃಶ್ಚಿಕ

  ತಮ್ಮ ಸುತ್ತಲಿನ ವಿಚಾರಗಳನ್ನು ಪರಿಶೀಲಿಸುವುದರ ಮೂಲಕ ತಮ್ಮ ನವೀಕರಣವನ್ನು ಮಾಡಿಕೊಳ್ಳುತ್ತಾರೆ. ಇವರು ತಿಳಿಯದೆ ಆಗುವ ಅನಾಹುತಗಳ ಬಗ್ಗೆ ಹೆಚ್ಚು ಆತಂಕ ಹಾಗೂ ಅಭದ್ರತೆಯ ಭಾವನೆಯನ್ನು ಪಡೆದುಕೊಳ್ಳುವರು. ಕೆಲವು ಸಂದರ್ಭಗಳಲ್ಲಿ ಉಂಟಾಗುವ ಸನ್ನಿವೇಶಗಳಿಂದ ಅಭದ್ರತೆ ಭಾವನೆಗೆ ಒಳಗಾಗುವರು.

  ಧನು

  ಧನು

  ಯಾರಾದರೂ ಇವರ ಸಹಾಯಕ್ಕೆ ಎದುರಾದಾಗ ಇವರು ಒಂದು ಬಗೆಯ ಅಸುರಕ್ಷಿತ ಭಾವನೆಗೆ ಒಳಗಾಗುವರು. ಎಲ್ಲವನ್ನೂ ತಾವೇ ಮಾಡಿದಾಗ ಮಾತ್ರ ಇವರಲ್ಲಿ ಒಂದು ಬಗೆಯ ಧೈರ್ಯ ಹಾಗೂ ಹುಮ್ಮಸ್ಸು. ಎಲ್ಲವೂ ಒಬ್ಬ ವ್ಯಕ್ತಿಯಿಂದಲೇ ಮಾಡಲಾಗುವುದಿಲ್ಲ ಎನ್ನುವುದನ್ನು ಇವರು ನೆನಪಿನಲ್ಲಿಟ್ಟುಕೊಳ್ಳಬೇಕು.

  ಮಕರ

  ಮಕರ

  ಇವರು ತಮ್ಮ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಜೊತೆಗೆ ಜೀವನದಲ್ಲಿ ಬರುವ ವಿಚಿತ್ರ ಅಥವಾ ಅಜ್ಞಾತ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಹಾಗಾಗಿ ಇವರಿಗೆ ಅಸುರಕ್ಷಿತ ಭಾವನೆಯನ್ನು ಎದುರಿಸಲು ಯಾವುದೇ ಭಯ ಇರುವುದಿಲ್ಲ. ಆದರೆ ಇವರು ವ್ಯಕ್ತಿ ಹಾಗೂ ಸನ್ನಿವೇಶಗಳನ್ನು ಕಳೆದುಕೊಂಡಾಗ ಅಥವಾ ಕಳೆದುಕೊಳ್ಳುತ್ತೇನೆ ಎನ್ನುವ ಭಾವನೆ ಉಂಟಾದಾಗ ಒಂದು ಬಗೆಯ ಅಭದ್ರತೆಗೆ ಒಳಗಾಗುವರು.

  ಕುಂಭ

  ಕುಂಭ

  ಇವರಿಗೆ ತಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಇವರನ್ನು ಬದಲಿಸುವ ಪ್ರಯತ್ನಗಳು ಉಂಟಾದರೆ ಭಯ ಹಾಗೂ ಅಭದ್ರತೆಯ ಭಾವನೆ ಕಾಡುವುದು. ಹಾಗಾಗಿ ಇವರು ಆದಷ್ಟು ತಮ್ಮ ತನವನ್ನು ಕಾಯ್ದುಕೊಳ್ಳುವುದರ ಬಗ್ಗೆ ಹೆಚ್ಚು ಚಿಂತಿಸುತ್ತಾರೆ.

  ಮೀನ

  ಮೀನ

  ಈ ರಾಶಿಯವರು ಸಾಮಾನ್ಯವಾಗಿ ಟೀಕೆಯನ್ನು ದ್ವೇಷಿಸುತ್ತಾರೆ. ಉಳಿದ ಸಮಸಯದಲ್ಲಿ ಎಲ್ಲರಿಂದಲೂ ಬಹಳ ಒಳ್ಳೆಯವರು ಎನ್ನುವ ಮಾತನ್ನು ಪಡೆದುಕೊಳ್ಳುವಿರಿ. ಆದರೆ ಮುಖಾಮುಖಿಯಾಗಿ ಟೀಕೆಗೆ ಒಳಗಾದಾಗ ಇವರಿಗೆ ಒಂದು ಬಗೆಯ ಅಭದ್ರತೆಯನ್ನು ಅನುಭವಕ್ಕೆ ಒಳಗಾಗುವರು. ಇವರು ಟೀಕೆ ಉಂಟಾದ ತಕ್ಷಣದಲ್ಲಿಯೇ ಅಸುರಕ್ಷಿತ ಭಾವನೆಯನ್ನು ಪಡೆದುಕೊಳ್ಳುವರು.

  English summary

  What Are The Insecurities That Define Your Zodiac Sign

  According to astrology, an individual's fears and insecurities can be revealed when you look at their zodiac signs. Each zodiac sign has its own share of insecurities and fears and there is nothing better than learning about our own insecurities and fears. Here, in this article, we reveal some of the worst insecurities of each zodiac sign. Check them out.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more