Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬಾವಿ ಭೂಮಿಯೊಳಕ್ಕೆ ಕುಸಿಯುತ್ತಿರುವ ಮೈನವಿರೇಳಿಸುವ ದೃಶ್ಯ
ನಮ್ಮ ಭೂಮಿಯು ಬಹಳ ಸಹನೆಯುಳ್ಳದ್ದು. ನಾವು ಎಷ್ಟೇ ಅಪಕಾರಗಳನ್ನು ಭೂಮಿ ತಾಯಿಗೆ ಮಾಡಿದ್ದರೂ ಆಕೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ ಮತ್ತು ಮಾನವರನ್ನು ಕ್ಷಮಿಸಿಬಿಡುತ್ತಾಳೆ. ಅದಕ್ಕಾಗಿಯೇ ತಾಳ್ಮೆ ಭೂತಾಯಿಯಷ್ಟಿರಬೇಕು ಎಂದು ಹೇಳುವುದು. ಆದರೆ ಇಂದಿನ ದಿನಗಳಲ್ಲಿ ಮಾನವ ತನ್ನ ಅತಿಯಾಸೆಗೆ ಭೂತಾಯಿಯನ್ನು ಹಿಂಸಿಸುತ್ತಿದ್ದಾನೆ. ಅಲ್ಲಲ್ಲಿ ಅಗೆಯುವುದು, ಕಟ್ಟಗಳ ಸ್ಥಾಪನೆಯಿಂದ ಆಕೆಗೆ ಹೊರಲೂ ಕಷ್ಟವಾಗುತ್ತಿದೆ. ಮಾನವ ಕುಲಕ್ಕೆ ಅತ್ಯಗತ್ಯವಾಗಿರುವ ಮರಗಳ ನಾಶ, ವಾತಾವರಣವನ್ನು ಕಲುಷಿತ ಗೊಳಿಸುತ್ತಿರುವುದು, ಪ್ರಾಣಿಗಳ ನಾಶ ಹೀಗೆ ಮಾನಸ ಸುಖ ಲೋಪುಪತೆಯ ಆಸೆಗೆ ಬಿದ್ದು ಭೂತಾಯಿಯ ಪ್ರಕೃತಿಯ ಮನಸ್ಸಿಗೆ ಬರೆಯನ್ನು ಎಳೆಯುತ್ತಿದ್ದಾನೆ.
ಆಕೆಯ ತಾಳ್ಮೆಯನ್ನು ಪರೀಕ್ಷಿಸಲು ಹೋಗಿಯೇ ಅನೇಕ ವಿನಾಶಗಳು ಭೂಮಿಯಲ್ಲಿ ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಹೀಗೆ ಪ್ರಕೃತಿಯ ರುದ್ರ ನರ್ತನಕ್ಕೆ ಮಾನವ ಬಲಿಯಾಗುತ್ತಿದ್ದಾನೆ. ಆದರೂ ಮಾನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿರುವ ಒಂದು ದೃಶ್ಯವನ್ನು ತೋರಿಸುತ್ತಿದ್ದು ನಿಜಕ್ಕೂ ಇದು ಮೈರೋಮಾಂಚನವನ್ನುಂಟು ಮಾಡುತ್ತಿದೆ.

ಕೆಲವೇ ನಿಮಿಷದಲ್ಲಿ ಬಾವಿಯು ಭೂಕುಸಿತಕ್ಕೆ ಉಂಟಾಗುತ್ತಿರುವ ದೃಶ್ಯಾವಳಿಯನ್ನು ಈ ವೀಡಿಯೊ ಒಳಗೊಂಡಿದೆ. ಕೆಲವೇ ನಿಮಿಷಗಳಲ್ಲಿ ಬಾವಿಯು ಭೂಮಿಯ ಆಳಕ್ಕೆ ಹೋಗುತ್ತಿರುವುದನ್ನು ಜನರು ತಮ್ಮ ವೀಡಿಯೊದಲ್ಲಿ ಸೆರೆಯಾಗಿಸಿಕೊಂಡಿದ್ದರೂ ಪ್ರಕೃತಿಯ ಭೂಮಿತಾಯಿಯ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ವಯನಾಡ್‌ನ ಅಂಬುಕುಟಿ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಬಾವಿಯು ತುಂಬಾ ಹಳೆಯದಾಗಿದ್ದು ಇದನ್ನು ಅಜ್ಜಿಯ ಕಾಲದ ಬಾವಿ ಎಂದು ಕರೆಯುತ್ತಾರೆ. ಭಾರೀ ವರ್ಷಧಾರೆಯಿಂದಾಗಿ ಈ ಬಾವಿ ಭೂಕುಸಿತಕ್ಕೆ ಒಳಗಾಗಿದೆ. ಬಾವಿಯಿಂದ ವಿಚಿತ್ರ ಶಬ್ಧ ಬಂದ ಹಿನ್ನೆಲೆಯಲ್ಲಿ ಜನರು ಬಾವಿ ಇರುವ ಸ್ಥಳಕ್ಕೆ ಧಾವಿಸಿದಾಗ ಬಾವಿ ಕುಸಿಯುತ್ತಿರುವುದು ಕಂಡು ಬೆಚ್ಚಿ ಬಿದ್ದಿದ್ದಾರೆ.
ಅಂತೂ ನಮ್ಮ ತಂಡಕ್ಕೆ ಈ ರೋಚಕ ವೀಡಿಯೊ ದೊರೆತಿದ್ದು ಪ್ರಕೃತಿ ಮುನಿದರೆ ಏನು ಸಂಭವಿಸುತ್ತದೆ ಎಂಬುದನ್ನು ಈ ವೀಡಿಯೊ ಸ್ಪಷ್ಟವಾಗಿ ನಮಗೆ ತಿಳಿಸಿದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ನಾವು ಹಾಗೂ ನಮ್ಮ ಮಕ್ಕಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಬೇಕಾದ ನತದೃಷ್ಟ ಬಂದೊದಗಿದೆ. ಇಂತಹುದೇ ದೃಶ್ಯಗಳು ದೇಶದ ಹಲವೆಡೆ ನಡೆಯುತ್ತಿದ್ದರೂ ನಮ್ಮ ಭೂಮಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.



Click it and Unblock the Notifications
