Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಈ 6 ರಾಶಿಚಕ್ರದವರು ಮುಂಬರುವ ದಿನಗಳಲ್ಲಿ ಅತ್ಯಂತ ಶ್ರೀಮಂತರಾಗುವರು!
ಯಾರ ಸಮಯ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅತ್ಯಂತ ಶ್ರೀಮಂತರು ಸಹ ಕೆಟ್ಟ ಸಮಯದಿಂದಾಗಿ ಬಡತನವನ್ನು ಅನುಭವಿಸಬಹುದು. ಅತ್ಯಂತ ಬಡತನದಲ್ಲಿ ಇರುವವರು ಸಹ ಶ್ರೀಮಂತರಾಗಿ ಮೆರೆಯಬಹುದು. ಏಕೆಂದರೆ ಮನುಷ್ಯನ ಜೀವನ ಇರುವುದು ಅವನ ಅದೃಷ್ಟದ ಮೇಲೆ. ಹೇಗೆ ತನ್ನ ಗ್ರಹಗತಿಗಳ ಪರಿಣಾಮವನ್ನು ಅನುಭವಿಸುತ್ತಾನೋ ಹಾಗೆಯೇ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಾ ಸಾಗುತ್ತಾನೆ.
ವ್ಯಕ್ತಿಯ ಅದೃಷ್ಟವೆಂದರೆ ಕೇವಲ ಹಣದಕ್ಕೆ ಸೀಮಿತವಾದ ವಿಚಾರವಾಗಿರುವುದಿಲ್ಲ. ಆರೋಗ್ಯ, ಸಂಬಂಧ, ಖ್ಯಾತಿ, ಯಶಸ್ಸು ಕುಟುಂಬ ಹೀಗೆ ಎಲ್ಲಾ ವಿಚಾರದಲ್ಲೂ ಧನಾತ್ಮಕ ಬದಲಾವಣೆಯನ್ನು ಅವಲಂಬಿಸಿರುತ್ತದೆ. ಉತ್ತಮ ಫಲಿತಾಂಶವನ್ನು ಪಡೆಯುತ್ತಾ ಸಾಗಿದಂತೆ ಜೀವನದಲ್ಲಿ ಅತ್ಯುತ್ತಮ ಏಳಿಗೆಯನ್ನು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಮುಂದಿನ ದಿನದಲ್ಲಿ ಶ್ರೀಮಂತಿಕೆಯನ್ನು ಅನುಭವಿಸುವರು ಎನ್ನಲಾಗುತ್ತಿದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಅದೃಷ್ಟವೇನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಕನ್ಯಾ
ಈ ವ್ಯಕ್ತಿಗಳು ತಮ್ಮ ಗುರಿಯನ್ನು ತಲುಪುವತ್ತ ಹೆಚ್ಚು ಗಮನಹರಿಸುತ್ತಾರೆ ಹಾಗೂ ಇವರಿಗೆ ಯಾರೂ ಅಥವಾ ಯಾವುದೂ ಅಡ್ಡಿಬರಲು ಸಾಧ್ಯವಿಲ್ಲ. ತಮ್ಮ ಕೆಲಸಗಳ ಬಗ್ಗೆ ಹೆಚ್ಚು ಏಕಾಗ್ರತೆಯಿಂದ ಕೆಲಸ ಮಾಡುತ್ತಾರೆ ಹಾಗೂ ತಮ್ಮ ಕೆಲಸ ಪೂರ್ಣವಾಗಲು ಬೇಕಾದ ಎಲ್ಲಾ ಕ್ರಮಗಳೂ ತಮ್ಮ ಎಣಿಕೆಯಂತೆಯೇ ಆಗಬೇಕೆಂದು ಬಯಸುತ್ತಾರೆ. ಇವರು ಹಠಮಾರಿಗಳಾಗಿದ್ದರೂ ದಯಾಪರರೂ ಆಗಿರುತ್ತಾರೆ. ಇವರು ತಮ್ಮ ಕೆಲಸದಲ್ಲಿ ಯಾವ ತೊಂದರೆಗಳು ಎದುರಾಗುತ್ತವೆ ಎಂದು ಮೊದಲೇ ಅರಿತುಕೊಳ್ಳುವ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ.

ವೃಶ್ಚಿಕ
ವೃಶ್ಚಿಕ ರಾಶಿಯವರು ಹುಟ್ಟಿದಾಗಿನಿಂದಲೇ ಅಂತದೃಷ್ಟಿಯ ಶಕ್ತಿ ಹಾಗೂ ದಿವ್ಯಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಇವರು ಜೀವನದಲ್ಲಿ ಮುಂದೆಬರಲು ತಮ್ಮ ಎಲ್ಲಾ ಜ್ಞಾನ ಮತ್ತು ಅರ್ಥಗರ್ಭಿತ ಪ್ರವೃತ್ತಿಯನ್ನು ಬಳಸುತ್ತಾರೆ. ಇವರು ತಾವು ಮಾಡುವ ಕೆಲಸದಲ್ಲಿ ಅತ್ಯಂತ ಪರಿಣಾಮಕಾರಿ ಯಶಸ್ಸನ್ನು ಪಡೆಯುವುದರಿಂದ ಬಹುಬೇಗ ಶ್ರೀಮಂತಿಕೆಯನ್ನು ಅನುಭವಿಸುವರು. ಇನ್ನು ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಯಶಸ್ವಿಯಾದ ವ್ಯಕ್ತಿ ಗಳಾಗಿರುತ್ತಾರೆ. ಇವರು ಸೂಕ್ತ ಅವಕಾಶಕ್ಕಾಗಿ ಕಾಯುವ ಹಾಗೂ ಎಂದಿಗೂ ತಮ್ಮ ಗುರಿಯಿಂದ ವಿಮುಖರಾಗದ ವ್ಯಕ್ತಿಗಳಾಗಿದ್ದಾರೆ. ಈ ವ್ಯಕ್ತಿಗಳೂ ಮುಂದಿನ ದಿನಗಳಲ್ಲಿ ಹೆಚ್ಚು ಅದೃಷ್ಟ ಪಡೆಯಲಿದ್ದಾರೆ.

ಸಿಂಹ
ಈ ವ್ಯಕ್ತಿಗಳು ಜನ್ಮತಃ ನಾಯಕರಾಗಿರುತ್ತಾರೆ. ಇವರು ಶಕ್ತಿಯನ್ನು ಪಡೆಯಲು ಹಾಗೂ ಗಣ್ಯವ್ಯಕ್ತಿಗಳಾಗಲು ಎಂದಿಗೂ ಮುಂದೆ ನಡೆಯುತ್ತಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಬೇಗನೇ ಏಳಿಗೆ ಪಡೆಯುತ್ತಾರೆ ಹಾಗೂ ಪ್ರಸಿದ್ಧರೂ ಆಗುತ್ತಾರೆ. ಹೆಚ್ಚು ಜವಾಬ್ದಾರಿ ಹಾಗೂ ವಹಿಸಿದ ಯಾವುದೇ ಕೆಲಸವನ್ನು ನಿರ್ವಹಿಸುವ ಮೂಲಕ ಎಲ್ಲರ ಮನ ಗೆಲ್ಲುತ್ತಾರೆ. ಇವರು ನಾಲ್ಕು ಜನರ ನಡುವೆ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ ಹಾಗೂ ಇವರಿಗೆ ಹೆಸರು ಮತ್ತು ಖ್ಯಾತಿ ಪಡೆಯುವ ಮೂಲಕ ಹೆಚ್ಚು ಸಂಪ್ರೀತಗೊಳ್ಳುತ್ತಾರೆ.

ವೃಷಭ
ಈ ರಾಶಿಯ ವ್ಯಕ್ತಿಗಳು ಬಹುಬೇಗ ತಮ್ಮ ಕಾಲಮೇಲೆ ನಿಂತುಕೊಳ್ಳುತ್ತಾರೆ. ಕೆಲಸದಲ್ಲಿ ಉತ್ತಮ ರೀತಿಯಲ್ಲಿ ಗಮನವನ್ನು ಹರಿಸುತ್ತಾರೆ. ಕೆಲಸದಲ್ಲಿ ತೋರುವ ಗಮನ ಹಾಗೂ ಶ್ರದ್ಧೆಯು ಉತ್ತಮ ಯಶಸ್ಸನ್ನು ತಂದುಕೊಡುವುದು. ಇವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ವಿಯನ್ನು ಕಾಣುವುದರಿಂದ ಬಹುಬೇಗ ಶ್ರೀಮಂತಿಕೆಯನ್ನು ಅನುಭವಿಸುವರು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು. ಇನ್ನು ಈ ವ್ಯಕ್ತಿಗಳು ಜೀವನದ ಚಿಕ್ಕ ಚಿಕ್ಕ ವಿಷಯಗಳನ್ನೂ ಮೆಚ್ಚುತ್ತಾರೆ. ಇವರು ಪ್ರತಿ ವಿಷಯವನ್ನೂ ತಾರ್ಕಿಕವಾಗಿ ವಿಶ್ಲೇಷಿಸುವ ಹಾಗೂ ಪ್ರಯೋಗಾತ್ಮಕವಾಗಿಯೇ ಪರಿಗಣಿಸುವ ವ್ಯಕ್ತಿಗಳಾಗಿರುತ್ತಾರೆ. ಈ ಅಚ್ಚರಿಯ ವೈಶಿಷ್ಟ್ಯಗಳು ಇವರನ್ನು ಹಣಕಾಸಿನ ವಿಷಯದಲ್ಲಿ ಲಾಭ ಪಡೆಯಲು ನೆರವಾಗುತ್ತವೆ. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳು ತಮ್ಮ ಕೆಲಸ ಪೂರ್ಣವಾಗುವವರೆಗೂ ತಮ್ಮ ದೃಷ್ಟಿಯನ್ನು ಅಲ್ಲಿಂದ ತೆಗೆಯುವುದಿಲ್ಲ. ಈ ಗುಣದಿಂದಾಗಿ ಇವರು ನಿರ್ವಹಿಸುವ ಯಾವುದೇ ಕೆಲಸದಲ್ಲಿ ಇವರು ಯಶಸ್ಸು ಪಡೆಯುತ್ತಾರೆ. ಈ ರಾಶಿಯವರಿಗೆ ಸ್ವಲ್ಪ ನಾಚಿಕೆ ಸ್ವಭಾವ ಇರಬಹುದು. ಆದರೆ ಇವರಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಉತ್ತಮ ವ್ಯವಹಾರ ಕೌಶಲ್ಯ, ಉದ್ಯೋಗ ನಿರ್ವಹಣೆ ಹಾಗೂ ಅದೃಷ್ಟಗಳನ್ನು ಉತ್ತಮ ರೀತಿಯಲ್ಲಿಯೇ ಅನುಭವಿಸುವುದರಿಂದ ಮಾಡುವ ಕೆಲಸದಲ್ಲಿ ಹಾಗೂ ಜೀವನದಲ್ಲಿ ಬಹುಬೇಗ ಶ್ರೇಯಸ್ಸನ್ನು ಪಡೆದುಕೊಳ್ಳುವರು.

ಮಿಥುನ
ಈ ರಾಶಿಚಕ್ರದ ವ್ಯಕ್ತಿಗಳು ಅತ್ಯುತ್ತಮ ಉಳಿತಾಯ ಕ್ರಮವನ್ನು ಅನುಸರಿಸುವರು. ಹಾಗಾಗಿಯೇ ಮುಂದಿನ ದಿನದಲ್ಲಿ ಆಶ್ಚರ್ಯಕರವಾದ ರೀತಿಯಲ್ಲಿ ಹಣವನ್ನು ಉಳಿಸುವುದರ ಮೂಲಕ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುವುದು. ತಮ್ಮ ಗುರಿಯ ಕಡೆಗೆ ಹೆಚ್ಚು ಗಮನವನ್ನು ನೀಡುವ ಇವರು ತಮ್ಮ ಸಮರ್ಪಣೆಗೆ ಸರಿಯಾಗಿ ಲಾಭವನ್ನು ಪಡೆದುಕೊಳ್ಳುವರು.

ತುಲಾ
ಈ ರಾಶಿಚಕ್ರದ ವ್ಯಕ್ತಿಗಳು ಬಹಳ ಸರಳ ವ್ಯಕ್ತಿಗಳಾಗಿರುತ್ತಾರೆ. ಹಣವನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂತಲೇ ಹೇಳಬಹುದು. ಮನುಷ್ಯನ ದುರಾಸೆಯನ್ನು ತಿರಸ್ಕರಿಸುವ ಇವರು ಮಾನವೀಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲೇ ಮುಂಬರುವ ದಿನದಲ್ಲಿ ಹೆಚ್ಚಿನ ಹಣವನ್ನು ಕಾಣುವರು ಎಂದು ಹೇಳಲಾಗುತ್ತದೆ.



Click it and Unblock the Notifications