ಮಿಥುನ, ಸಿಂಹ, ಕುಂಭ- ಈ ಮೂರು 'ರಾಶಿ' ಯವರು ಬಹಳ ಬುದ್ಧಿವಂತರಂತೆ!

By Deepu

ಮೇಲ್ನೋಟಕ್ಕೆ ನಾವೆಲ್ಲರೂ ಮನುಷ್ಯರು. ಇತರ ಪ್ರಾಣಿಗಳಿಗಿಂತ ಮನುಷ್ಯನಿಗೆ ವಿಶೇಷವಾದ ಶಕ್ತಿಯಿದೆ ಎನಿಸುತ್ತದೆ. ಮನುಷ್ಯ ಎಷ್ಟೇ ಬುದ್ಧಿವಂತ ಅಥವಾ ಕ್ರಿಯಾಶೀಲ ವ್ಯಕ್ತಿಯಾಗಿದ್ದರೂ ಅವನಿಗೆ ಹಣೆ ಬರಹ ಹಾಗೂ ಕುಂಡಲಿ ಎನ್ನುವ ವಿಶೇಷ ಶಕ್ತಿಯ ಅಡಿಯಲ್ಲಿ ನಿಯಂತ್ರಣದಲ್ಲಿರುತ್ತಾನೆ. ಅವನು ಏನೇ ಮಾಡಲು ಹೊರಟರು ಅವನ ಗ್ರಹಗತಿಗಳು ಅವನಿಗೆ ಸಾಥ್ ನೀಡಬೇಕಾಗುತ್ತದೆ. ಇಲ್ಲವಾದರೆ ಮನುಷ್ಯ ತಾನು ಅಂದುಕೊಂಡ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಂತೆಯೇ ಪ್ರತಿಯೊಂದು ರಾಶಿಚಕ್ರದವರು ವಿಶೇಷ ಬಗೆಯ ಹಾಗೂ ಭಿನ್ನ ರೀತಿಯ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರದ ಚಿಹ್ನೆಗಳು ವಿವಿಧ ಬಗೆಯ ವ್ಯಕ್ತಿತ್ವವನ್ನು ಮತ್ತು ಧೋರಣೆಗಳನ್ನು ಹೊಂದಿರುತ್ತವೆ. ಇವುಗಳ ಜೊತೆಗೆ ಕೆಲವು ವಿಶೇಷ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಅದರಲ್ಲೂ 12 ರಾಶಿ ಚಕ್ರಗಳಲ್ಲಿ ಮೂರು ರಾಶಿ ಚಕ್ರದವರು ವಿಶೇಷ ಗುಣ ವಿಶೇಷಗಳನ್ನು ಒಳಗೊಂಡಿವೆ.

ಇಂತಹ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡಿದ್ದು ಇತರರ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಗಳಾಗಿದ್ದಾರೆ. ಇದರರ್ಥ ಬೇರೆ ರಾಶಿಯಲ್ಲಿ ಹುಟ್ಟಿದ ಜನರು ದಡ್ಡರೆಂದು ಅರ್ಥವಲ್ಲ. ಬದಲಿಗೆ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಕೆಲವು ಗ್ರಹಗಳು ಇತರರಿಗಿಂತ ಹೆಚ್ಚು ಪ್ರಭಾವ ಬೀರುತ್ತವೆ. ಬನ್ನಿ, ಅಂತಹ ರಾಶಿಗಳು ಯಾವುವು ಎಂಬುದನ್ನು ನೋಡೋಣ.....

ಮಿಥುನ

ಮಿಥುನ

ದ್ವಂದ್ವತೆ ಮತ್ತು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಸನ್ನಿವೇಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಬುದ್ಧಿವಂತ ರಾಶಿಚಕ್ರ ಚಿಹ್ನೆ. ಸಾಮಾನ್ಯವಾಗಿ ಮಿಥುನ ರಾಶಿಯವರು ಯಾವಾಗಲೂ ಸಮತೋಲನ ಕಂಡುಹಿಡಿಯುವ ಮತ್ತು ತಮ್ಮ ಘರ್ಷಣೆಗಳು ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಓದುವುದು, ವಿಶ್ಲೇಷಣೆ ನಡೆಸುವುದು ಮತ್ತು ಅವರ ಲಾಭಕ್ಕಾಗಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಚತುರತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಮಿಥುನ

ಮಿಥುನ

ಇನ್ನು ಈ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ಇವರು ಗಣಿತದಲ್ಲಿ ಉತ್ತಮರಾಗಿದ್ದು ವಾಣಿಜ್ಯ ವಹಿವಾಟುದಾರದು, ಲೆಕ್ಕಪರಿಶೀಲಿಕರು, ಭೌತವಿಜ್ಞಾನಿ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳನ್ನು ಸಫಲವಾಗಿ ನಿರ್ವಹಿಸುವವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು: ಡೇನಿಯಲ್ ಫ್ಯಾರೆನ್ ಹೀಟ್ (ಡಿಗ್ರಿ ಎಫ್ ತಾಪಮಾನದ ಸೂಚಿ ನೀಡಿದವರು) ಫ್ರಾನ್ಸಿಸ್ ಕ್ರಿಕ್ (ಡಿ ಎನ್ ಎ ರಚನೆಯನ್ನು ಕಂಡುಹಿಡಿದವರು), ಮೇರಿ ಆನಿಂಗ್ (ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ), ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ (ಆಧುನಿಕ ಭೌತ ವಿಜ್ಞಾನದ ಪಿತಾಮಹ, ವಿದ್ಯುದಾಯಸ್ಕಾಂತ ಶಕ್ತಿಯನ್ನು ಕಂಡುಹಿಡಿದವರು)

ಸಿಂಹ

ಸಿಂಹ

ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

ಸಿಂಹ

ಸಿಂಹ

ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣ ಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕುಂಭ

ಕುಂಭ

ಈ ರಾಶಿಯ ಅಧಿಪತಿ ಶನಿಯಾಗಿದ್ದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ತಮ್ಮದೇ ವಿಚಾರಗಳನ್ನು ಮಂಡಿಸುತ್ತಾರೆ.ಇವರು ಹೆಚ್ಚು ಪ್ರತ್ಯಕ್ಷಜನಿತರೂ ಹಾಗೂ ಪ್ರತಿಫಲಾಪೇಕ್ಷಿಗಳೂ ಆಗಿರುತ್ತಾರೆ. ಇವರು ಜನ್ಮತಃ ಸಮಾಜದ ಕುಂದು ಕೊರತೆಗಳನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿರುತ್ತಾರೆ ಹಾಗೂ ದೂರದೃಷ್ಟಿಯುಳ್ಳವರಾಗಿರುತ್ತಾರೆ. ಈ ಕಾರಣಗಳಿಂದ ಇವರಿಗೆ ಜಾಣರು ಎಂಬ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಖ್ಯಾತ ವ್ಯಕ್ತಿಗಳು: ಚಾರ್ಲ್ಸ್ ಡಾರ್ವಿನ್ (ಜೀವಶಾಸ್ತ್ರಜ್ಞ), ಗೆಲಿಲಿಯೋ ಗೆಲಿಲೈ(ವಿಜ್ಞಾನಿ), ಥೋಮಸ್ ಆಲ್ವಾ ಎಡಿಸನ್ (ಎಲೆಕ್ಟ್ರಿಕ್ ಬಲ್ಬ್ ಕಂಡುಹಿಡಿದವರು)

ಕುಂಭ

ಕುಂಭ

ಇನ್ನು ಸನ್ನಿವೇಶದಲ್ಲಿ ಎರಡು ದೃಷ್ಟಿಕೋನಗಳನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದಿಂದಾಗಿ ಕುಂಬ ರಾಶಿಯವರು ಅತ್ಯುತ್ತಮ ಬುದ್ಧಿವಂತರು ಎನ್ನಬಹುದು. ಇದು ರಾಶಿಚಕ್ರದ ಪೂರ್ವಾಗ್ರಹವನ್ನು ಮುಕ್ತಗೊಳಿಸುತ್ತದೆ. ಕುಂಬ ರಾಶಿಯವರು ಇತರರಿಗೆ ಕೇಳಲು ಮತ್ತು ಸತ್ಯವನ್ನು ತಿಳಿದುಕೊಳ್ಳಲು ಸಿದ್ಧರಿದ್ದಾರೆ. ಯಾಕೆಂದರೆ ಎಲ್ಲರೂ ಏನಾದರೂ ಕಲಿಯಬಹುದೆಂದು ಅವರು ಸಾಮಾನ್ಯವಾಗಿ ತಿಳಿದಿದ್ದಾರೆ. ಅವರು ಬುದ್ಧಿವಂತರಾಗಿದ್ದಾರೆ ಆದರೆ ಕೆಲವೊಮ್ಮೆ ಮೌನವಹಿಸುವುದರ ಮೂಲಕ ಇತರರಿಂದ ದೂರವಿರುತ್ತಾರೆ. ಇವರು ಅತ್ಯುತ್ತಮ ಸ್ಮರಣಾ ಶಕ್ತಿಯನ್ನು ಹೊಂದಿರುತ್ತಾರೆ. ಏನನ್ನಾದರೂ ತಿಳಿದುಕೊಳ್ಳಬೇಕು ಎಂದುಕೊಂಡರೆ ಅದನ್ನು ಕಷ್ಟಪಟ್ಟು ತಿಳಿದುಕೊಳ್ಳುತ್ತಾರೆ. ಜೊತೆಗೆ ಕೆಲವು ಬುದ್ಧಿವಂತಿಕೆಯಿಂದ ವಿಷಯಗಳನ್ನು ಅರ್ಥೈಸಿಕೊಳ್ಳುತ್ತಾರೆ.

English summary

These three Zodiac Signs, Are The most Smartest Ones!

Based on that, they have been refered to as the most intelligent or smart. If people born under these signs tap into their potential, they would understand and grasp any phenomena occuring around them easily. Now this does not mean that people born under other zodiac signs are dumb! It only states that certain planets influence a particular trait more in a zodiac sign.Check out if your sun sign is one of these three!
X
Desktop Bottom Promotion