For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಐದು ರಾಶಿಯವರಿಗೆ, ಈ ಬಾರಿ ಅದೃಷ್ಟವೋ ಅದೃಷ್ಟ!

  By Deepu
  |

  ಪ್ರತಿಯೊಂದು ರಾಶಿ ಚಕ್ರದ ಅದೃಷ್ಟ ಹಾಗೂ ದುರಾದೃಷ್ಟವೆಲ್ಲವೂ ಗ್ರಹಗತಿಗಳ ಸಂಚಾರವನ್ನು ಅವಲಂಭಿಸಿರುತ್ತದೆ. ಅವುಗಳ ಆಧಾರದ ಮೇಲೆಯೇ ನಮ್ಮ ಜೀವನವು ನಿಂತಿರುತ್ತದೆ. ಒಳ್ಳೆಯ ಫಲಿತಾಂಶ ಕೊಡುತ್ತದೆ ಎಂದರೆ ನಮ್ಮ ಜೀವನದಲ್ಲಿ ಸುಖ ಶಾಂತಿ, ಶ್ರೀಮಂತಿಕೆ, ಆರೋಗ್ಯ, ಉತ್ತಮ ಉದ್ಯೋಗ, ಸಂಸಾರ ಸುಖ ಹೀಗೆ ಅನೇಕ ಬಗೆಯ ಉತ್ತಮ ಫಲಗಳು ದೊರೆಯುತ್ತವೆ. ಹಾಗೊಂದು ವೇಳೆ ಉತ್ತಮ ಪರಿಣಾಮ ಇಲ್ಲವೆಂದಾದರೆ ಅನೇಕ ಬಗೆಯ ಸಮಸ್ಯೆಗಳು ಒಂದಾದ ಮೇಲೊಂದರಂತೆ ನಮ್ಮನ್ನು ಕಾಡುತ್ತದೆ.

  ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಟ್ಟು ಹನ್ನೆರಡು ರಾಶಿಯವರಲ್ಲಿ, ಐದು ರಾಶಿಯವರು ಈ ವರ್ಷದ ಗ್ರಹಗತಿಗಳ ಸಂಚಾರದ ಆಧಾರದ ಮೇಲೆ ಸಾಮಾನ್ಯ ಪ್ರಮಾಣದ ಒಳಿತನ್ನು, ಹಾಗೂ ಅದೃಷ್ಟ ಇವರ ಕೈಹಿಡಿಯಲಿದೆಯಂತೆ, ಅಲ್ಲದೆ ಉಳಿದ ರಾಶಿಚಕ್ರದವರಿಗೆ ಸಾಮಾನ್ಯ ಫಲಗಳು ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.... ಹಾಗಾದರೆ ಇನ್ನೇಕೆ ತಡ? ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿರುವ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ... ಅದರಲ್ಲಿ ಇರುವ ಅದೃಷ್ಟ ರಾಶಿಚಕ್ರಗಳಲ್ಲಿ ನಿಮ್ಮ ರಾಶಿಚಕ್ರವೂ ಇದ್ದರೆ ಅದೃಷ್ಟವನ್ನು ಅನುಭವಿಸಲು ಸಿದ್ಧರಾಗಿ... ಹಾಗೊಮ್ಮೆ ನಿಮ್ಮ ರಾಶಿ ಇಲ್ಲವೆಂದಾದರೆ ನಿಮ್ಮ ಯಶಸ್ಸಿನ ಹಾದಿಯಲ್ಲಿ ನೀವಿನ್ನೂ ಸ್ವಲ್ಪ ದೂರ ನಡೆಯಬೇಕಿದೆ ಎಂದು, ಸಾಧನೆಗಾಗಿ ಪೂರ್ವ ತಯಾರಿಯನ್ನು ಮುಂದುವರಿಸಿ...

  1. ಸಿಂಹ

  1. ಸಿಂಹ

  ಈ ರಾಶಿಯವರಿಗೆ ಅದೃಷ್ಟ ಇರಲಿ ಅಥವಾ ಇಲ್ಲದಿರಲಿ ಸದಾ ಮಿನುಗುತ್ತಿರುತ್ತಾರೆ. ಇವರು ಎಲ್ಲಿ ಯಾವ ಕೆಲಸವನ್ನು ಮಾಡಿದರೂ ಹೆಚ್ಚಿನ ಶ್ರಮವಿಲ್ಲದೆಯೇ ಎಲ್ಲರ ಗಮನಸೆಳೆದುಕೊಳ್ಳುತ್ತಾರೆ. ಹಾಗಾಗಿ ಇವರದ್ದು ಕಾಂತೀಯ ಮತ್ತು ಪ್ರಬಲವಾದ ವ್ಯಕ್ತಿತ್ವ ಎಂದು ಹೇಳಲಾಗುತ್ತದೆ. ಆದದ್ದರಿಂದಲೇ ಇವರು ಎಲ್ಲರ ಇಷ್ಟಕ್ಕೆ ಪಾತ್ರರಾಗುತ್ತಾರೆ. ಇವರಿಗೆ 2018 ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವರ್ಷ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವರ್ಷ ಇವರ ಹಾದಿಯಲ್ಲಿ ಗೆಲುವು ಸುಲಭವಾಗಿ ದೊರೆಯುವುದು. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗೆಯೇ ಈ ರಾಶಿಯವರೂ ಪ್ರತಿಬಾರಿಯೂ ತಪ್ಪನ್ನು ಮಾಡುತ್ತಾರೆ. ಇದರೊಟ್ಟಿಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಕೈಗೂಡಿ ಬರುವುದು. ವೈಯಕ್ತಿಕ ಮತ್ತು ದಾಂಪತ್ಯದ ಜೀವನವೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ.

  ಸಿಂಹ

  ಸಿಂಹ

  ಇನ್ನು ಇವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಕೇಂದ್ರ ಬಿಂದುವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಸೂಕ್ತವಾಗುವ ಉದ್ಯೋಗ ಸಿಇಓ, ಪ್ರವಾಸ ಮಾರ್ಗದರ್ಶಿ, ನಿರ್ವಾಹಕ ಕಾರ್ಯಕ್ರಮ ಯೋಜಕ, ಉದ್ಯಮಿ, ರಿಯಲ್ ಎಸ್ಟೇಟ್, ಕಲಾವಿದ/ಮನರಂಜನೆ ಮತ್ತು ಮಾರಾಟಗಾರನಾಗಿ ಕೆಲಸ ನಿರ್ವಹಿಸಬಲ್ಲರು. ಇವು ಉತ್ತಮ ಲಾಭ ತಂದುಕೊಡುತ್ತವೆ. ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು.

  2. ಧನು

  2. ಧನು

  ಇವರು ಅತ್ಯಂತ ಸಾಹಸಮಯ ಕೆಲಸಕ್ಕೆ ಮುಂದಾಗುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರ ಚಿಂತನೆಗಳು ಬಹಳ ಮುಕ್ತವಾಗಿ ಮತ್ತು ಆಳವಾದ ಕಾಲ್ಪನಿಕ ಮಾರ್ಗವನ್ನು ಒಳಗೊಂಡಿರುತ್ತದೆ. ಇವರು ಬಯಸುವುದು ಅಥವಾ ಸಾಧಿಸುವ ಗುರಿಗಳಿಗೆ ಯಾವುದೇ ಮಿತಿ ಅಥವಾ ಗಡಿ ಎನ್ನುವುದು ಇರುವುದಿಲ್ಲ. 2018ರಲ್ಲಿ ಇವರ ಈ ಯೋಚನೆಗೆ ಅತ್ಯಂತ ಹೆಚ್ಚು ಅವಕಾಶಗಳು ಹಾಗೂ ಯಶಸ್ಸು ದೊರೆಯುವುದು. ಇವರ ಸಾಧನೆ ಅಥವಾ ಗುರಿಯನ್ನು ತಲುಪಲು ಯಾವುದೇ ಅಡೆತಡೆಗಳು ಅಡ್ಡವಾಗದೆ ಇರುವುದರಿಂದ ಬಹು ಬೇಗ ನಿಮ್ಮ ಕನಸು ನನಸಾಗುವುದು. ಲೆಕ್ಕವಿಲ್ಲದ ಹೊಸ ಹೊಸ ಅವಕಾಶಗಳು ಇವರ ಕಾಲ ಬಳಿ ಬರುವುದು. ಸ್ಥಿರತೆಯನ್ನು ಹೊಂದಿರುವ ಇವರು ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುತ್ತಾರೆ.

  ಧನು

  ಧನು

  ಈಗಾಗಲೇ ಹೇಳಿರುವಂತೆ, ಈ ರಾಶಿಯವರು ಹೆಚ್ಚು ಶಕ್ತಿಯುಳ್ಳವರು. ಹೊರಾಂಗಣವನ್ನು ಇಷ್ಟಪಡುವ ವ್ಯಕ್ತಿಗಳು. ಪ್ರಯಾಣ ಮಾಡಲು ಇಷ್ಟಪಡುವ ಆಧ್ಯಾತ್ಮಿಕ ಜನರು. ಇವರು ಪ್ರಾಣಿ ಮತ್ತು ಜನರನ್ನು ಹೆಚ್ಚು ಇಷ್ಟಪಡುವರು. ಶಿಕ್ಷಕರ, ಟ್ರಾವೆಲ್ ಏಜೆಂಟ್, ಬರಹಗಾರ/ಸಂಪಾದಕ, ನಟ, ಆಧ್ಯಾತ್ಮಿಕ ನಾಯಕ, ತರಬೇತುದಾರ, ಪ್ರಾಣಿ ತರಬೇತುದಾರ ಕೆಲಸವು ಹೆಚ್ಚು ಆಸಕ್ತಿ ಹಾಗೂ ಲಾಭವನ್ನು ತರುವಂತಹ ಕೆಲಸವಾಗಿದೆ. ಶಿಸ್ತಿನ ದೈನಂದಿನ ಚಟುವಟಿಕೆಯು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಸ್ವಾತಂತ್ರ್ಯವಾಗಿ ಅಂದರೆ ಯಾವುದೇ ಕಟ್ಟುಪಾಡು ಇಲ್ಲದೆ ಕೆಲಸ ಮಾಡಿದರೆ ತಮ್ಮ ಶ್ರೇಷ್ಠ ಶ್ರಮ ವಹಿಸುವರು. ಪ್ರಯಾಣ ಇರುವಂತಹ ವೃತ್ತಿಯಲ್ಲಿ ಇವರು ಉತ್ತಮವಾಗಿರುವರು. ಯಾವುದೇ ಬದಲಾವಣೆಗೆ ಇವರು ಹೊಂದಿಕೊಳ್ಳುವರು. ಇವರು ತಮ್ಮ ಕೆಲಸದ ಬಗ್ಗೆ ಸಂತೋಷ ವಾಗಿರುವರು. ಆದರೆ ಬೇರೆ ಯಾರಾದರೂ ಯೋಜನೆಗಳ ವರದಿ ಓದಲಿ ಎಂದು ಬಯಸುವರು.

  3. ಕನ್ಯಾ

  3. ಕನ್ಯಾ

  ಕನ್ಯಾ ರಾಶಿಯವರಿಗೆ 2017 ರಂತೆ 2018 ಸಹ ಅಸಾಧಾರಣ ವರ್ಷವಾಗಿದೆ. ಈ ವರ್ಷ ನಿಮ್ಮ ಎಲ್ಲಾ ರೀತಿಯ ಜೀವನವನ್ನು ಸುಧಾರಿಸುತ್ತದೆ. 2018 ನಿಮಗೆ ಅತ್ಯಂತ ಅದೃಷ್ಟದ ವರ್ಷವಾಗಿರುವುದರಿಂದ ನಿಮ್ಮ ಭಾವನಾತ್ಮಕ ಯೋಗ ಕ್ಷೇಮವೂ ಉತ್ತಮವಾಗಿರುತ್ತದೆ. ಈಗಾಗಲೇ ಇವರು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅವರೊಂದಿಗೆ ದೀರ್ಘಕಾಲದ ಸಂಬಂಧವನ್ನು ಮುಂದುವರಿಸುತ್ತಾರೆ. ಅದರಂತೆಯೇ ಸಂಬಂಧವೂ ವಿಕಾಸಗೊಳ್ಳುತ್ತದೆ. 2018 ಇವರಿಗೆ ಎಲ್ಲಾರೀತಿಯ ಶುಭ ಸೂಚನೆಯನ್ನು ತಂದುಕೊಡುತ್ತದೆ. 2018ರ ಅದೃಷ್ಟವನ್ನು ಪಡೆಯಲಿರುವ ರಾಶಿಚಕ್ರಗಳಲ್ಲಿ ಕನ್ಯಾ ರಾಶಿಯು ಒಂದು ಎನ್ನುವುದನ್ನು ಇವರು ನೆನಪಿನಲ್ಲಿಟ್ಟುಕೊಂಡಿರಬೇಕು.

   ಕನ್ಯಾ

  ಕನ್ಯಾ

  ಇನ್ನು ಇವರು ಮಾಡುವ ಯಾವುದೇ ಕೆಲಸಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇವರಿಗೆ ಗ್ರಂಥಾಲಯಗಳು, ಹಸ್ತಾಲಂಕಾರಿಗಳು, ಯಂತ್ರ ಶಾಸ್ತ್ರಜ್ಞರು, ವಾಸ್ತು ಶಿಲ್ಪಿಗಳು, ಸಂಪಾದಕರು, ಬರಹಗಾರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಥವಾ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.

  4. ವೃಶ್ಚಿಕ

  4. ವೃಶ್ಚಿಕ

  ವೃಶ್ಚಿಕ ಜನರು 2018ರಲ್ಲಿ ಸ್ಥಿರವಾದ ಪಾಲುದಾರರನ್ನು ಹುಡುಕುವ ಮತ್ತು ಅವಕಾಶವವನ್ನು ಪಡೆದುಕೊಳ್ಳುವಂತಹ ಸಮಯವನ್ನು ಒದಗಿಸಿಕೊಡುತ್ತದೆ. ಇವರು ಇಲ್ಲವನ್ನೂ ತನ್ನಿಂದಲೇ ನಿಯಂತ್ರಿಸಬೇಕು ಎನ್ನುವ ಭಾವನೆಯನ್ನು ಹೊಂದಿರುವುದಿಲ್ಲವಾದ್ದರಿಂದ ಸಂಬಂಧವು ಸುಂದರವಾಗಿ ವಿಕಾಸಗೊಳ್ಳುತ್ತದೆ. ಅದರಂತೆಯೇ ನಿಮ್ಮ ಪ್ರಯತ್ನ ಹಾಗೂ ನಿರೀಕ್ಷೆಗೆ ಅನುಗುಣವಾಗಿ ಪ್ರತಿಫಲವನ್ನು 2018ರಲ್ಲಿ ಅನುಭವಿಸಲಿದ್ದೀರಿ.

  ವೃಶ್ಚಿಕ

  ವೃಶ್ಚಿಕ

  ಅಷ್ಟೇ ಅಲ್ಲದೆ ಮುಂಬರುವ ಹೊಸ ವರ್ಷದಲ್ಲಿ ಈ ವ್ಯಕ್ತಿಗಳು ತಮ್ಮ ಸಂತೋಷದ ಸಂತೋಷವನ್ನು ಹೊಂದಿದ್ದಾರೆ. ಯಾವುದೇ ವೃತ್ತಿಪರ ಅಥವಾ ಯಾವುದೇ ಜೀವನ-ಬದಲಾಗುವ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅವರು ಯೋಜಿಸುತ್ತಿದ್ದರೆ ಸೋಮವಾರ, ಶುಕ್ರವಾರ ಮತ್ತು ಭಾನುವಾರಗಳು ತಮ್ಮ ಅದೃಷ್ಟದ ದಿನಗಳಲ್ಲಿ ಅದನ್ನು ಮಾಡಬಹುದು. ಇನ್ನು ಇವರು ಸೂಕ್ತ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ತಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಂಡು ತಮ್ಮ ತನವನ್ನು ಕಳೆದುಕೊಳ್ಳುತ್ತಾರೆ ಎನ್ನಬಹುದು. 2018ರಲ್ಲಿ ಇವರು ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವ ಪರಿಯನ್ನು ತಿಳಿಯಬೇಕಿದೆ. ಅದೊಂದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸೂಕ್ತವಾದ ವರ್ಷವಾಗಿದೆ ಎಂದು ಹೇಳಬಹುದು.

  5. ಮೀನ

  5. ಮೀನ

  2018 ರಲ್ಲಿ ಅತ್ಯಂತ ಅದೃಷ್ಟವನ್ನು ಅನುಭವಿಸಲಿರುವ ಇನ್ನೊಂದು ರಾಶಿಯೆಂದರೆ ಮೀನ. ವರ್ಷದ ಆರಂಭದಲ್ಲಿ ಆಭರಣಗಳ ಖರೀದಿ, ಸಂಬಂಧಗಳ ಆರಂಭದ ಸಂಗತಿಗಳೊಂದಿಗೆ ಆರಂಭಿಸುತ್ತೀರಿ. ವರ್ಷದ ಮಧ್ಯದ ಅವಧಿಯಿಂದ ಸಂಬಂಧಗಳು ಬಲಪಡುತ್ತವೆ. ಕೈಗೊಂಡ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತಲಿರುತ್ತದೆ. ಹಾಗೆಯೇ ಮುಂದಿನ ದಿನಗಳನ್ನು ಕಳೆಯಲು ಉತ್ತಮವಾದ ಅವಕಾಶಗಳು ಮುಂದುವರಿಯುತ್ತವೆ. ಜೊತೆಗೆ ಪಾಲುದಾರರೊಂದಿಗೆ ಸಂಬಂಧವೂ ಸುಗಮವಾಗಿ ಸಾಗುವುದು. ಸೃಜನಶೀಲ ಸಾಭಾವ್ಯತೆಯಿಂದ ಕೆಲವು ಅನಾನುಕೂಲತೆಗೆ ಒಳಗಾಗ ಬಹುದು. ಮನ್ನಿಸುವಿಕೆಯನ್ನು ನಿಲ್ಲಿಸಿ, ನಿಮ್ಮ ಕಲಾತ್ಮಕ ವಿಚಾರದಲ್ಲಿ ಅಭಿವೃದ್ಧಿ ಪಡಿಸುವುದರ ಬಗ್ಗೆ ಯೋಚಿಸಿ.

  ಮೀನ

  ಮೀನ

  ಒಮ್ಮೆ ನಿರ್ಧಾರ ಕೈಗೊಂಡಬಳಿಕ ಹಿಂದೇಟು ಹಾಕದಿರಿ. ಈ ರಾಶಿಚಕ್ರದ ಚಿಹ್ನೆಯವರು ಹೊಸ ಸಾಹಸ ಕೆಲಸವನ್ನು ಪ್ರಾರಂಭಿಸುತ್ತಾರೆ ಇವರ ಈ ಸಾಹಸ ಕರ ಕೆಲಸ ಹಾಗೂ ಇತರ ಶುಭ ಕಾರ್ಯಗಳನ್ನು ಸೋಮವಾರ ಪ್ರಾರಂಭಿಸಬೇಕು. ಈ ರಾಶಿಚಕ್ರದವರಿಗೆ ಸೋಮವಾರ ಅದೃಷ್ಟದ ವಾರ. ಈ ರಾಶಿಯವರು ಎಲ್ಲಾ ವಿಚಾರಕ್ಕೂ ಅಧಿಕವಾಗಿ ಚಿಂತಿಸುತ್ತಾರೆ. ಕೆಲವು ವಿಷಯಗಳಿಗೆ ಮಾನಸಿಕವಾಗಿ ಚಿಂತಿಸುವ ಬದಲು ಹೃದಯದ ಮೂಲಕ ಚಿಂತಿಸಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು. ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತಹ ಗುಣವನ್ನು ಹೊಂದಿರಬೇಕು. 2018ರಲ್ಲಿ ಅತಿಯಾದ ಚಿಂತನೆಗೆ ಒಳಗಾಗುವುದನ್ನು ನಿಲ್ಲಿಸಿ, ಸಂಭವಿಸಬೇಕಾದ ವಿಚಾರಗಳನ್ನು ಹಾಗೇಯೇ ನೆರವೇರಲು ಬಿಡಿ.

  English summary

  These Are The 5 Zodiac Signs Most luckiest

  The year brings luck on all aspects for five signs that are thought to be the spoiled signs of the zodiac this year. So, find out if your sign is one of them. Here are the lucky signs of this year..
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more