Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಈ 6 ರಾಶಿಚಕ್ರದ ವ್ಯಕ್ತಿಗಳು ತಮ್ಮ ಭಾವನೆಯನ್ನು ಬಹುಬೇಗ ಬದಲಾಯಿಸುತ್ತಾರಂತೆ!
ಸಾಮಾನ್ಯವಾಗಿ ಒಂದು ಸ್ನೇಹಿತರ ಗುಂಪು ಅಥವಾ ಕುಟುಂಬದ ಸಂಬಂಧಿಕರಲ್ಲಿ ಕೆಲವರು ಬಹುಬೇಗ ಕಿರಿಕಿರಿಯನ್ನುಂಟುಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಕ್ಷಣದಲ್ಲಿಯೇ ಬದಲಾಗುವ ಅವರ ಮನೋಭಾವದ ಸ್ಥಿತಿ ಇತರರಿಗೆ ಆಶ್ಚರ್ಯವನ್ನುಂಟುಮಾಡುವುದು. ಇವರ ಕಿರಿಕಿರಿಯ ಪ್ರವೃತ್ತಿ ಇತರರಿಗೆ ಗೊಂದಲ ಉಂಟುಮಾಡಬಹುದು. ಜೊತೆಗೆ ಮೂಡಿ ಸ್ವಭಾವದ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು.

ಒಂದು ನಿರ್ದಿಷ್ಟ ಸಮಯದಲ್ಲಿ ಸ್ನೇಹಿತರ ವರ್ತನೆಗಳ ಬಗ್ಗೆ ಖಚಿತತೆ ಹೊಂದಿದ್ದರೂ, ಇತರರ ಭಾವನೆಗಳ ಕುರಿತು ಊಹೆ ಮಾಡುವುದು ಅಷ್ಟು ಸುಲಭವಾದದ್ದಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಗ್ರಹಗತಿಗನುಗುಣವಾಗಿ ವರ್ತನೆ ಹಾಗೂ ಭಾವನೆಗಳ ಮೇಲೆ ಶೀಘ್ರ ಬದಲಾವಣೆಯನ್ನು ಕಾಣುತ್ತಾರೆ. ಅದು ಇತರರಿಗೆ ಇರಿಸುಮುರಿಸು ಉಂಟಾಗುವುದು. ಹಾಗಾದರೆ ಯಾವ ರಾಶಿಚಕ್ರದ ವ್ಯಕ್ತಿಗಳು ತಮ್ಮ ಭಾವನೆಯಲ್ಲಿ ಬಹುಬೇಗ ಬದಲಾವಣೆಯನ್ನು ಕಾಣುತ್ತಾರೆ ಎನ್ನುವ ಕುತೂಹಲ ನಿಮಗಿದೆ ಅಥವಾ ನೀವು ಆ ರಾಶಿಚಕ್ರಗಳ ಪಟ್ಟಿಯಲ್ಲಿ ಬರುತ್ತೀರಾ? ಎನ್ನುವುದನ್ನು ತಿಳಿಯುವ ಕುತೂಹಲ ಇದ್ದರೆ ಲೇಖನದ ಮುಂದಿನ ಭಾಗವನ್ನು ಓದಿ.

1.ಮೇಷ
ಇವರು ಸಾಮಾನ್ಯವಾಗಿ ತಮ್ಮ ಭಾವನೆ ಅಥವಾ ಮನಃಸ್ಥಿತಿಯನ್ನು ಬದಲಿಸುವ ಅಗತ್ಯವಿರುವುದಿಲ್ಲ. ಆದರೆ ಕೆಲವು ಸಂದರ್ಭ ಹಾಗೂ ಸಮಯದಲ್ಲಿ ತಕ್ಷಣದ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ. ಇವರ ಈ ರೀತಿಯ ವರ್ತನೆ ಸರ್ವೇ ಸಾಮಾನ್ಯವಾಗಿರುತ್ತದೆ. ಇವರು ಸಂತೋಷದಲ್ಲಿ ಇರುವಾಗ ತಮ್ಮ ಶತ್ರುಗಳನ್ನು ಸಹ ದೊಡ್ಡ ನಗುವಿನ ಮೂಲಕ ತಬ್ಬಿಕೊಳ್ಳುವರು. ಅದೇ ಸಿಟ್ಟಿನಲ್ಲಿರುವಾಗ ಏನು ಮಾಡುತ್ತಾರೆ ಎನ್ನುವುದು ಅವರಿಗೇ ಅರಿವಿರುವುದಿಲ್ಲ.

2.ಮಿಥುನ
ಸಾಮಾಜಿಕ ಮಾಧ್ಯಮಗಳು ಇವರ ಮನಃಸ್ಥಿತಿಯನ್ನು ಉತ್ತಮವಾಗಿ ಪ್ರತಿಫಲಿಸುತ್ತದೆ. ಇವರ ಮನಸ್ಸಿನಲ್ಲಿ ಸಂತೋಷ ಅಥವಾ ದುಃಖ ಏನೇ ಆದರೂ ಅವುಗಳನ್ನು ಮೊದಲು ಸಾಮಾಜಿಕ ಕ್ಷೇತ್ರದಲ್ಲಿಯೇ ಹಂಚಿಕೊಳ್ಳುತ್ತಾರೆ. ಮನಃಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಸ್ವಲ್ಪ ನಿಮಿಷಗಳ ಕಾಲ ನಿಯಂತ್ರಿಸುವರು. ನಂತರ ಗಂಭೀರ ರೀತಿಯಲ್ಲಿ ಹೊರಹೊಮ್ಮುವುದು. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಇವರ ನಕಾರಾತ್ಮಕ ವರ್ತನೆಯಿಂದ ಉಂಟಾದ ತೊಂದರೆಗಳಿಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ವಿಷಾದಿಸುತ್ತಾರೆ.

3.ಕರ್ಕ
ಈ ರಾಶಿಯ ವ್ಯಕ್ತಿಗಳು ಎಲ್ಲಾ ಭಾವನೆಗಳನ್ನು ಬಹಳ ಆಳವಾಗಿ ಅನುಭವಿಸುತ್ತಾರೆ. ಭಾವನಾತ್ಮಕ ವರ್ತನೆಯನ್ನು ಹೊಂದಿರುವುದರಿಂದ ಇವರನ್ನು ಮೂಡಿ ವ್ಯಕ್ತಿಗಳು ಎಂದು ಹೇಳಲಾಗುವುದು. ಚಿತ್ತಾಕರ್ಷಕ ಹಾಗೂ ಉತ್ತಮ ಸ್ನೇಹಿತರ ಪಟ್ಟಿಯಲ್ಲಿ ನಿಲ್ಲುವ ವ್ಯಕ್ತಿಗಳು ಎನ್ನಬಹುದು. ಇವರು ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಎಲ್ಲರ ಮೇಲೂ ತೋರುತ್ತಾರೆ. ಇವರು ಉತ್ತಮ ಸ್ಥಿತಿಯಲ್ಲಿ ಇರುವಾಗ ಯಾರನ್ನೂ ನೋಯಿಸುವುದಿಲ್ಲ. ಇತರರ ಮನಃಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಇವರು ಅಹಿತಕರ ಸನ್ನಿವೇಶ ಉಂಟಾದರೆ ಬಹುಬೇಗ ಮಾನಸಿಕ ಸ್ಥಿತಿಯ ಬದಲಾವಣೆಯನ್ನು ಹೊಂದುತ್ತಾರೆ. ಇದರ ಪರಿಣಾಮ ಇತರಮೇಲೆ ಋಣಾತ್ಮಕವಾಗಿ ಇರುವುದು.

4.ತುಲಾ
ಇವರು ತಮ್ಮ ಸುತ್ತಲಿನ ವಾತಾವರಣದಲ್ಲಿ ನಡೆಯುವ ಬದಲಾವಣೆಯಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲವನ್ನೂ ಅನುಭವಿಸುತ್ತಾರೆ. ಕೆಲವೊಮ್ಮೆ ಅವರೊಂದಿಗೆ ಏನೂ ಇಲ್ಲ ಎನ್ನುವ ರೀತಿಯ ಅನುಭವವನ್ನು ಪಡೆದುಕೊಳ್ಳುವರು. ಸಣ್ಣ ಸಣ್ಣ ವಿಚಾರಗಳಿಗೂ ಇವರು ಸಂತೋಷ ಹಾಗೂ ದುಃಖವನ್ನು ಅನುಭವಿಸುವರು. ಮನಸ್ಸು ಅಹಿತಕರವಾದ ಸ್ಥಿತಿಯಲ್ಲಿರುವಾಗ ಅಜಾಗರೂಕತೆಯಿಂದ ವರ್ತಿಸುತ್ತಾರೆ. ಕೆಲವೊಮ್ಮೆ ಹಾನಿ ಉಂಟುಮಾಡುವ ಸಾಧ್ಯತೆಗಳು ಇರುತ್ತವೆ ಎನ್ನಬಹುದು. ಇವರ ಮನಃಸ್ಥಿತಿಯು ಬಹುಬೇಗ ಪರಿವರ್ತನೆಯನ್ನು ಕಾಣುವ ವ್ಯಕ್ತಿಗಳಾಗಿರುತ್ತಾರೆ.

5.ವೃಶ್ಚಿಕ
ವೃಶ್ಚಿಕ ರಾಶಿಯವರು ಗಂಭೀರ ಮನಃಸ್ಥಿತಿಯನ್ನು ಹೊಂದಿರುವುದರಿಂದ ಪರಿಸ್ಥಿತಿಗಳು ಅವರ ಭಾವನೆಯ ಮೇಲೆ ಬಹುಬೇಗ ಪ್ರಭಾವವನ್ನು ಬೀರುತ್ತದೆ. ಸನ್ನೀವೇಶಗಳ ಪ್ರಭಾವದಿಂದ ಅವರ ಮುಖ ಹಾಗೂ ಭಾವನೆಗಳು ಬಹುಬೇಗ ಪರಿವರ್ತನೆಗೆ ಒಳಗಾಗುತ್ತವೆ. ಇವರು ಏನು ಚಿಂತಿಸುತ್ತಾರೆ ಎನ್ನುವುದನ್ನು ಸುಲಭವಾಗಿ ನಿರ್ಧರಿಸಲು ಕಷ್ಟವಾಗಬಹುದು. ತಮ್ಮ ಚಿತ್ತಸ್ಥಿತಿಯೊಂದಿಗೆ ಹೆಚ್ಚು ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಲಾಗುವುದು.

6. ಮೀನ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ವಿಷಯವನ್ನು ತಮ್ಮ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಇವರು ಬಹುಬೇಗ ವಿಷಯಗಳಿಗೆ ಪ್ರಭಾವಿತರಾಗುತ್ತಾರೆ. ಇವರು ವಿಷಯಗಳನ್ನು ಬಲು ಸುಲಭವಾಗಿ ಅರ್ಥೈಸಿಕೊಳ್ಳುವರು. ಅಲ್ಲದೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ತಮ್ಮ ಸ್ವಂತ ಸಮಸ್ಯೆಗಳನ್ನು ಹೆಚ್ಚು ಮನಸ್ಸಿನಲ್ಲಿ ಇಟ್ಟುಕೊಳ್ಳುವರು. ಸೂಕ್ಷ್ಮ ಮನಸ್ಸಿನವರಾದ ಇವರು ವಿಷಯಗಳಿಗೆ ಅನುಗುಣವಾಗಿ ಭಾವನೆಗಳ ಬದಲಾವಣೆಗೆ ಒಳಗಾಗುವರು. ಹಾಗಾಗಿ ಇವರನ್ನು ಮೂಡಿ ಮನಸ್ಸಿನವರು ಎಂದು ಹೇಳಲಾಗುವುದು.



Click it and Unblock the Notifications











