For Quick Alerts
ALLOW NOTIFICATIONS  
For Daily Alerts

ಅಮೆಜಾನಿಯನ್ ಕಾಡಿನಲ್ಲಿ ಎಷ್ಟೋ ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದಾನಂತೆ ಈ ವ್ಯಕ್ತಿ!

By Hemanth
|

ಬ್ರೆಜಿಲ್ ನ ಮಳೆಕಾಡುಗಳಲ್ಲಿ ಅಮೆಜಾನಿಯನ್ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಸುಮಾರು ಎರಡು ದಶಕಗಳಿಂದ ಏಕಾಂಗಿಯಾಗಿ ವಾಸಿಸುತ್ತಿರುವುದು ಭಾರೀ ಅಚ್ಚರಿಯನ್ನು ಉಂಟು ಮಾಡಿದ್ದು, ಈ ವ್ಯಕ್ತಿಯನ್ನು ರಂಧ್ರ ಮನುಷ್ಯ' ನೆಂದು ಕರೆಯಲಾಗುತ್ತದೆ. ಈತ ಹಲವಾರು ರಕ್ಷಣಾತ್ಮಕವಾಗಿರುವ ಗುಂಡಿಗಳನ್ನು ಅಗೆದಿರುವ ಕಾರಣ ರಂಧ್ರ ಮನುಷ್ಯ'ನೆಂದು ಕರೆಯಲಾಗುತ್ತಿದೆ. ಇತ್ತೀಚೆಗೆ ಈತನನ್ನು ಬ್ರೆಜಿಲ್ ನ ರೊಂಡೊನಿಯಾ ಪ್ರಾಂತ್ಯದ ಮಳೆಕಾಡಿನಲ್ಲಿ ಪತ್ತೆ ಮಾಡಲಾಗಿದೆ.

ಅರಣ್ಯದಲ್ಲಿ ವಾಸವಾಗಿದ್ದರೂ ಈತ ತುಂಬಾ ಶಕ್ತಿಶಾಲಿಯಾಗಿದ್ದು, ಮರದ ಎಲೆಗಳನ್ನೇ ತನ್ನ ಬಟ್ಟೆಯನ್ನಾಗಿಸಿದ್ದಾನೆ. ಈತನಿಗೆ ಈಗ 50ರ ಹರೆಯವಾಗಿದ್ದು, 1998ರಲ್ಲಿ ಬ್ರೆಜಿಲಿನ ಸಾಕ್ಷ್ಯಚಿತ್ರ ಕೊರುಂಬಿಯರಾದಲ್ಲಿ ಈತ ಕಾಣಿಸಿಕೊಂಡಿದ್ದ. ಈ ಸಾಕ್ಷ್ಯಚಿತ್ರದಲ್ಲಿ ಬುಡಕಟ್ಟು ಜನರ ಸಾಮೂಹಿಕ ಹತ್ಯಾಕಾಂಡದ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಬ್ರೆಜಿಲ್ ಸರ್ಕಾರ ಏಜೆನ್ಸಿ ಫುನಾಯಿ ಇದನ್ನು ಸೆರೆಹಿಡಿದಿದ್ದು, ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗವನ್ನು ರಕ್ಷಿಸುವುದು ಇವರ ಉದ್ದೇಶವಾಗಿತ್ತು.

ತನ್ನ ಕುಟುಂಬದವರನ್ನು ಕಳದುಕೊಂಡ ರಂಧ್ರ ಮನುಷ್ಯ

1980 ಮತ್ತು 1990ರಲ್ಲಿ ರೈತರು ಹಾಗೂ ಕಾಡುಗಳ್ಳರು ನಡೆಸಿದ ಸಾಮೂಹಿಕ ಹತ್ಯಾಕಾಂಡದಲ್ಲಿ ರಂಧ್ರ ಮನುಷ್ಯನ ಕುಟುಂಬದವರನ್ನು ಕೊಲ್ಲಲಾಗಿತ್ತು ಎಂದು ಫುನಾಯಿ ಹೇಳಿದೆ. 1980ರಲ್ಲಿ ಸರ್ಕಾರವು ಇಲ್ಲಿಗೆ ರಸ್ತೆ ನಿರ್ಮಾಣ ಮಾಡಿತು. ಇದರ ಪರಿಣಾಮವಾಗಿ ದನಗಳ್ಳರು ಮತ್ತು ಕಾಡುಗಳ್ಳರು ಇಲ್ಲಿಗೆ ಪ್ರವೇಶ ಪಡೆದರು. ಬುಡಕಟ್ಟು ಜನಾಂಗದ ಯಾರೂ ಈ ಪ್ರದೇಶದಲ್ಲಿ ಇಲ್ಲದೆ ಇರುವುದನ್ನು ದೃಢಪಡಿಸಿಕೊಂಡು ರ್ಯಾಂಚರ್ಸ್ ಈ ಪ್ರದೇಶಕ್ಕೆ ನುಗ್ಗಿದ್ದರು. 1990ರಲ್ಲಿ ರಂಧ್ರ ಮನುಷ್ಯನ ಕುಟುಂಬವು ಆರು ಸದಸ್ಯರಿಗೆ ಕುಸಿತ ಕಂಡಿತ್ತು. 1995ರಲ್ಲಿ ಮತ್ತೆ ಈ ಬುಡಕಟ್ಟು ಜನಾಂಗದ ಮೇಲೆ ದಾಳಿ ನಡೆದ ಬಳಿಕ ಆತ ಮಾತ್ರ ಉಳಿದುಕೊಂಡಿದ್ದಾನೆ. ಇದರ ಬಳಿಕ ಈ ಪ್ರದೇಶವನ್ನು ಸಂರಕ್ಷಿತ ತಾಣವೆಂದು ಘೋಷಿಸಲಾಯಿತು.

ಚಾರಿಟಿ ಸರ್ವೈವಲ್ ಇಂಟರ್ನ್ಯಾಷನಲ್ ವಕೀಲೆ ಮತ್ತು ಸಂಶೋಧನೆಯ ಮುಖ್ಯಸ್ಥೆಯಾಗಿರುವ ಫಿಯೊನಾ ವಾಟ್ಸನ್ ಅವರು, `ದ ಟೆಲಿಗ್ರಾಫ್' ಜತೆಗೆ ಮಾತನಾಡುತ್ತಾ, ಆ ವ್ಯಕ್ತಿಯು ತುಂಬಾ ಆರೋಗ್ಯ ಹಾಗೂ ಫಿಟ್ ಆಗಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಯಾವುದೇ ಸಂಪರ್ಕವಿಲ್ಲ!

ಯಾವುದೇ ಸಂಪರ್ಕವಿಲ್ಲ!

1996ರಲ್ಲಿ ಫುನಾಯಿಯು ಈ ಬುಡಕಟ್ಟು ಜನಾಂಗವನ್ನು ಮೊದಲ ಸಲ ಪತ್ತೆ ಮಾಡಿದ್ದು, ಏಜೆನ್ಸಿಯು ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಸಂಪರ್ಕಿಸಲು ಹಲವಾರು ಪ್ರಯತ್ನ ನಡೆಸಿತ್ತು. ಆದರೆ ಆ ವ್ಯಕ್ತಿಗೆ ಹೊರಜಗತ್ತಿನಲ್ಲಿ ಯಾವುದೇ ಆಸಕ್ತಿಯಿರಲಿಲ್ಲ ಮತ್ತು 2005ರಲ್ಲಿ ಆ ವ್ಯಕ್ತಿಯನ್ನು ಹೊರಜಗತ್ತಿಗೆ ಕರೆತರುವಂತಹ ಪ್ರಯತ್ನ ಫುನಾಯಿ ಬಿಟ್ಟುಬಿಟ್ಟಿತು. ಏಜೆನ್ಸಿಯು ಈಗಲೂ ಕೊಡಲಿ ಹಾಗೂ ಭರ್ಜಿಯಂತಹ ಆಯುಧಗಳನ್ನು, ಧಾನ್ಯಗಳನ್ನು ಆ ವ್ಯಕ್ತಿ ಹೋಗುವ ಮಾರ್ಗದಲ್ಲಿ ಇಟ್ಟುಬಿಡುತ್ತದೆ. ರಂಧ್ರ ಮನುಷ್ಯನಿಗೆ ಫುನಾಯಿಯ ಕೆಲವು ಮಂದಿ ತುಂಬಾ ಹತ್ತಿರವಾದಾಗ ಆತ ಬಾಣ ಬಿಟ್ಟು ಎಚ್ಚರಿಕೆ ನೀಡಿದ್ದ. ಇದರಿಂದ ಸಂಪರ್ಕ ಸಾಧಿಸಲು ಆತನಿಗೆ ಇಷ್ಟವಿಲ್ಲ ಮತ್ತು ಏಕಾಂಗಿಯಾಗಿ ಬದಕಲು ಬಯಸುತ್ತಾನೆ ಎಂದು ವಾಟ್ಸನ್ ಹೇಳಿದ್ದಾರೆ. `ಆತನ ತಲೆಯಲ್ಲಿ ಏನು ಓಡುತ್ತಿದೆ ಎಂದು ಕಲ್ಪನೆ ಮಾಡಲು ಸಾಧ್ಯವಿಲ್ಲ. ಕುಟುಂಬ ಹಾಗೂ ಸಮುದಾಯದವರನ್ನು ಸಾಮೂಹಿಕ ಹತ್ಯೆಗೈದ ಬಳಿಕ, ಏಕಾಂಗಿಯಾಗಿ ಇರುವುದು ನಂಬಲು ಅಸಾಧ್ಯವಾದ ಮಾತು' ಎಂದು ವಾಟ್ಸನ್ ವಿವರಿಸಿದ್ದಾರೆ.

ಸಣ್ಣ ಗುಡಿಸಲು ಮತ್ತು ತೋಟ

ಸಣ್ಣ ಗುಡಿಸಲು ಮತ್ತು ತೋಟ

ಫುನಾಯಿ ಕಾರ್ಯಕರ್ತರೊಂದಿಗೆ 2005ರಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ಆ ವ್ಯಕ್ತಿಗೆ ರ್ಯಾಂಚರ್ಸ್ ತೊಂದರೆ ನೀಡುವುದಿಲ್ಲವೆನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ಈ ಭೇಟಿ ವೇಳೆ ಅವರು ಆತನ ಮನೆಯನ್ನು ನೋಡಿದ್ದರು. `ಅದೊಂದು ಸಣ್ಣ ಗುಡಿಸಲು. ಅದು ಬಿಲ್ಲು ಮತ್ತು ಬಾಣಗಳಿಂದ ತುಂಬಿತ್ತು. ಸೋರೆಕಾಯಿ ಬರುಡೆಯಲ್ಲಿ ನೀರು ತುಂಬಿಸಿದ್ದ. ಸಣ್ಣ ತೋಟದಲ್ಲಿ ಆತ ಪಪ್ಪಾಯಿ, ಬಾಳೆಹಣ್ಣು ಮತ್ತು ಜೋಳ ಬೆಳೆಸಿದ್ದ. ನದಿಯಿಂದ ಇದಕ್ಕೆ ನೀರು ತರುತ್ತಿದ್ದ' ಎಂದು ವಾಟ್ಸನ್ ಹೇಳಿದ್ದಾರೆ. ಇಂದು ಕೂಡ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವಂತಹ ಬುಡಕಟ್ಟು ಜನಾಂಗದವರು ಆಧುನಿಕ ಜಗತ್ತಿನೊಂದಿಗೆ ಯಾವುದೇ ರೀತಿಯ ಸಂಪರ್ಕದಲ್ಲಿ ಇರುವುದಿಲ್ಲ. ರಂಧ್ರ ಮನುಷ್ಯನಿಗೆ ಸಂಬಂಧಿಸಿದ್ದಾಗಿರುವ ಭಾಷೆಯನ್ನು ಭಾಷಾ ತಜ್ಞರು ಅಭ್ಯಸಿಸುತ್ತಿದ್ದಾರೆ. `ಅಂಕುನಸ್ತು ಎನ್ನುವ ಬುಡಕಟ್ಟಿನ ಬಗ್ಗೆ ಸ್ವಲ್ಪ ತಿಳಿದಿದೆ. ಇದರಲ್ಲಿ ಒಬ್ಬನ ಬಗ್ಗೆ ನಮಗೆ ತಿಳಿದಿದೆ. ಆತ ಮುಖ್ಯ ನಾಯಕ. ಆತ ನಶ್ಯ ಎಳೆಯುತ್ತಾನೆ. ಕೊಳಲು ಊದುತ್ತಾನೆ. ಅಲ್ಲಿ ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತವಿರುತ್ತದೆ' ಎಂದು ವಾಟ್ಸನ್ ತಿಳಿಸಿದ್ದಾರೆ.

ಕುಟುಂಬವನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಈತ ಹೊರಬಂದಿಲ್ಲ

ಕುಟುಂಬವನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಈತ ಹೊರಬಂದಿಲ್ಲ

ರಂಧ್ರ ಮನುಷ್ಯನ ಬಗ್ಗೆ ಮಾತನಾಡಿರುವ ವಾಟ್ಸನ್, ಆತನೊಬ್ಬ ಬೇಟೆಗಾರ ಸಂಗ್ರಹಗಾರ. ಬುಡಕಟ್ಟು ಜನಾಂಗದ ಹೆಚ್ಚಿನ ಜನರಿಗೆ ಇಲ್ಲಿನ ಸಸ್ಯರಾಶಿಗಳ ಬಗ್ಗೆ ಒಳ್ಳೆಯ ಜ್ಞಾನವಿದೆ. ಇದರಿಂದ ಅವರು ವಿಷಕಾರಿ ಬಾಣ ತಯಾರಿಸಿ ಬೇಡೆಯಾಡುವರು ಎಂದರು. ಬೇರೆ ಬುಡಕಟ್ಟು ಜನಾಂಗದವರು ಇಂತಹ ರಂಧ್ರ ಕೊರೆದು ಜೀವಿಸುವ ಪರಿಪಾಠವಿಲ್ಲ. ಆ ವ್ಯಕ್ತಿಯ ಕುಟುಂಬವನ್ನು ನಿರ್ನಾಮ ಮಾಡಿರುವ ಕಾರಣ ಆಘಾತದಿಂದ ಹೀಗೆ ಮಾಡುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಳವಾಗಿರುವ ರಂಧ್ರವೇ ಆತನಿಗೆ ಶ್ರೀರಕ್ಷೆ!

ಆಳವಾಗಿರುವ ರಂಧ್ರವೇ ಆತನಿಗೆ ಶ್ರೀರಕ್ಷೆ!

ಸುಮಾರು 1.5ಯಿಂದ 2 ಮೀಟರ್ ಉದ್ದದ ರಂಧ್ರವನ್ನು ಆತ ಕೊರೆದಿದ್ದಾನೆ. ಇದೆಲ್ಲವೂ ಚೂಪಾದ ಕಲ್ಲಿನಿಂದ ಮಾಡಿರುವಂತಹ ರಂಧ್ರಗಳು. ಇದರಲ್ಲಿ ಕುಳಿತುಕೊಂಡು ಆತ ಬೇಟೆಯಾಡುತ್ತಾನೆ ಮತ್ತು ಜೀವನ ಸಾಗಿಸುತ್ತಾನೆ. ಮನೆಯಲ್ಲಿ ಇರುವಂತಹ ಆಳವಾಗಿರುವ ರಂಧ್ರವು ಆತನು ತನ್ನನ್ನು ರಕ್ಷಿಸಿಕೊಳ್ಳಲು ಮಾಡಿರುವುದು. ಅದರೊಳಗೆ ಆತ ಜಿಗಿದು ಮನೆಗೆ ಬಂದವರ ಮೇಲೆ ಬಾಣ ಬಿಡಬಹುದು ಎಂದು ವಾಟ್ಸನ್ ವಿವರಿಸಿದ್ದಾರೆ.

ದೃಶ್ಯಾವಳಿ ಬಗ್ಗೆ ರಾಜಕೀಯ

ದೃಶ್ಯಾವಳಿ ಬಗ್ಗೆ ರಾಜಕೀಯ

ಫುನಾಯಿ ಯಾವಾಗಲೂ ಇಂತಹ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವುದಿಲ್ಲ. ಇದು ರಾಜಕೀಯ ಉದ್ದೇಶದಿಂದ ಕೂಡಿರಬಹುದು. ಬ್ರೆಜಿಲ್ ನ ಬುಡಕಟ್ಟು ಜನಾಂಗದ ಬಗ್ಗೆ ತೀವ್ರ ಹಗೆಯಿರುವ ರಾಜಕೀಯ ವಾತಾವರಣದಲ್ಲಿ ಏಜೆನ್ಸಿ ಕೂಡ ಕಡಿತಕ್ಕೆ ಒಳಗಾಗಿದೆ.

ರಾಜಕೀಯದಿಂದಾಗಿ ಇಲ್ಲಿನ ಸಂಸ್ಖೃತಿ ನಾಶವಾಗುತ್ತಿದೆ

ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಭೂಕಬಳಿಕೆಗಾಗಿ ರ್ಯಾಂಚರ್ಸ್ ಈಗಲೂ ಒತ್ತಡ ಹಾಕುತ್ತಿದ್ದಾರೆ ಮತ್ತು ಕೆಲವು ರಾಜಕಾರಣಿಗಳು ಸಂಸ್ಥೆಯು ಸ್ಥಳೀಯ ಜನರನ್ನು ರೂಪಿಸಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಈ ದೃಶ್ಯಾವಳಿಗಳು ರಂಧ್ರ ಮನುಷ್ಯ ಇರುವುದನ್ನು ಸಾಬೀತುಪಡಿಸುವುದು ಅರ್ಧದಷ್ಟು ಮಾತ್ರ ಎಂದು ಆಕೆ ಹೇಳಿದ್ದಾರೆ. `ಇದೊಂದು ದುರಂತ. ಯಾಕೆಂದರೆ ತುಂಬಾ ಪುರಾತನ ಸಂಸ್ಖೃತಿ ಮತ್ತು ಮಳೆಕಾಡಿನ ಬಗ್ಗೆ ಇರುವಂತಹ ಜ್ಞಾನವು ಆತನೊಂದಿಗೆ ನಾಶವಾಗಲಿದೆ. ಬುಡಕಟ್ಟು ಜನಾಂಗದವರು ಖಗೋಳಶಾಸ್ತ್ರಜ್ಞರು, ಎಂಜಿನಿಯರ್ ಗಳು ಮತ್ತು ಸಸ್ಯಶಾಸ್ತ್ರಜ್ಞರು. ಅವರು ಮಳೆಕಾಡಿನ ಸಂರಕ್ಷಕರಾಗಿದ್ದರು. ಅವರ ಕೆಲವು ಜ್ಞಾನ ಕ್ರೋಢೀಕರಿಸಲಾಗಿದೆ ಮತ್ತು ಇದು ಅಮೂಲ್ಯವಾದ್ದು. ನಮ್ಮ ಸಮಾಜದಲ್ಲಿನ ರೋಗಗಳಿಗೆ ಇದು ಔಷಧಿಯಾಗಬಹುದು' ಎನ್ನುವುದು ವಾಟ್ಸನ್ ಅಭಿಮತ.

Image Credit (all pics)

Image Credit

English summary

The story of the 'world's loneliest man!

A rare glimpse has been captured of the lone survivor of an indigenous Amazonian tribe, who has been living in isolation for more than two decades. The tribesman, who is known locally as the ‘man in the hole’ due to his habit of digging protective pits, was spotted recently in remote rainforest in the Rondônia region of Brazil. At the time he was energetically cutting down a tree while clad in little more than a loin cloth. The man, who is thought to be now in his 50s, was last widely seen on film in the 1998 Brazilian documentary Corumbiara, which chronicled the mass murder of remote tribes in the previous decades.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more