ಹೊಸ ವರ್ಷದಲ್ಲಿ ಧನಪ್ರಾಪ್ತಿಯನ್ನು ಹೊಂದಿರುವ ರಾಶಿಗಳು

By: Deepu
Subscribe to Boldsky

ಹೊಸ ವರ್ಷ ಇನ್ನೇನು ಬಂದೇ ಬಿಟ್ಟಿದೆ. ಹೊಸ ವರುಷವು ಹೊಸ ಹರುಷವನ್ನು ತರಲಿದೆ ಎಂಬ ಮಾತಿನಂತೆ ಈ ವರ್ಷದಲ್ಲಿ ನಿಮ್ಮ ರಾಶಿಯು ಯಾವ ಪರಿಣಾಮಗಳನ್ನು ಪಡೆದುಕೊಂಡಿದೆ, ನೀವು ಸ್ಥಿತಿವಂತರಾಗುವುದು ಸಾಧ್ಯವೇ ಮೊದಲಾದ ಸಂದೇಹಗಳನ್ನು ನಮ್ಮ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ನಿಮ್ಮ ರಾಶಿಯಲ್ಲಿರುವ ಒಳಿತು ಕೆಡುಕಿನ ಅಂಶಗಳನ್ನು ಅರಿತುಕೊಳ್ಳಲು ನಿಮ್ಮ ಗ್ರಹಗತಿಗಳು ಹೇಗಿವೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಕೆಲವೊಂದು ರಾಶಿಗಳು ಉನ್ನತ ಉಜ್ವಲ ಭವಿಷ್ಯವನ್ನು ಹೊಂದಿದ್ದರೆ ಇನ್ನು ಕೆಲವು ರಾಶಿಗಳು ಸಾಮಾನ್ಯ ಪರಿಣಾಮವನ್ನು ಹೊಂದಿರುತ್ತವೆ. ಇನ್ನು ಕೆಲವು ರಾಶಿಗಳು ಗಜಕೇಸರಿ ಯೋಗ, ಧನ ಪ್ರಾಪ್ತಿ ಮೊದಲಾದ ಅತ್ಯುನ್ನತ ಅಂಶಗಳನ್ನು ಹೊಂದಿರುತ್ತವೆ.

ಇಂದಿನ ಲೇಖನದಲ್ಲಿ ಈ ವರ್ಷದಲ್ಲಿ ಶ್ರೀಮಂತಿಕೆಯನ್ನು ಹೊಂದಲಿರುವ ರಾಶಿಗಳ ಬಗ್ಗೆ ನಾವು ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ನೀವು ಅದೃಷ್ಟವಂತರಾಗಿದ್ದು ಉತ್ತಮ ರಾಶಿಯನ್ನು ಹೊಂದಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ನಲಿದಾಡುವುದು ಖಂಡಿತ. ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವುದರಲ್ಲಿ ಸಂದೇಹವೇ ಇಲ್ಲ....

ವೃಷಭ ರಾಶಿ: (20 ಏಪ್ರಿಲ್ - 20 ಮೇ)

ವೃಷಭ ರಾಶಿ: (20 ಏಪ್ರಿಲ್ - 20 ಮೇ)

ಈ ರಾಶಿಯವರು ಹೆಚ್ಚು ಕಷ್ಟಪಟ್ಟು ದುಡಿಯುವ ಪ್ರವೃತ್ತಿಯವರಾಗಿದ್ದಾರೆ. ಪರಿಶ್ರಮದಿಂದಲೇ ಮೇಲೆ ಬೀಳುವ ಸ್ವಭಾವ ಇವರದಾಗಿದೆ. ತಮ್ಮ ಪ್ರೀತಿಪಾತ್ರರಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡುವಲ್ಲಿ ಈ ರಾಶಿಯವರು ಎತ್ತಿದ ಕೈಯಾಗಿದ್ದಾರೆ. ಇವರಿಗೆ ವೈಭವೋಪೇತ ಜೀವನವೆಂದರೆ ತುಂಬಾ ಇಷ್ಟ. ಆದರೆ ಉಳಿತಾ ಮಾಡುವುದರಲ್ಲೂ ಇವರು ನಿಷ್ಣಾತರಾಗಿದ್ದಾರೆ. ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ಪ್ರವೃತ್ತಿ ಇವರದಲ್ಲ.

ಕರ್ಕಾಟಕ ರಾಶಿ: (21 ಜೂನ್ - 22 ಜುಲೈ)

ಕರ್ಕಾಟಕ ರಾಶಿ: (21 ಜೂನ್ - 22 ಜುಲೈ)

ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೆಂದರೆ ಇವರಿಗೆ ಜೀವ. ಇವರುಗಳು ಅವರನ್ನು ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತಾರೆ ಮತ್ತು ಉದಾರ ಪ್ರವೃತ್ತಿಯಿಂದ ಅವರಿಗೆ ಸಹಕಾರವನ್ನು ನೀಡುತ್ತಾರೆ. ಆರ್ಥಿಕ ಭದ್ರತೆಯ ವಿಷಯದಲ್ಲೂ ಇವರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುವಲ್ಲಿ ಇವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದರೆ ಇದರ ಬಗ್ಗೆ ಅವರು ಇತರರೊಂದಿಗೆ ಚರ್ಚಿಸುವುದಿಲ್ಲ. ಇವರು ಮಿತವ್ಯಯಿಗಳಾಗಿದ್ದು ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡುತ್ತಾರೆ.

ಸಿಂಹ ರಾಶಿ: (23 ಜುಲೈ - 22 ಆಗಸ್ಟ್)

ಸಿಂಹ ರಾಶಿ: (23 ಜುಲೈ - 22 ಆಗಸ್ಟ್)

ಹಣಕಾಸಿನ ವಿಚಾರದಲ್ಲಿ ಸಿಂಹ ರಾಶಿಯವರದು ಅದ್ವಿತೀಯ ರಾಶಿಯಾಗಿದೆ. ಹಣಕಾಸಿನ ನಿರ್ವಹಣೆಯ ಬಗ್ಗೆ ಇವರು ಹೆಚ್ಚು ಆಸಕ್ತರಾಗಿದ್ದು ತಮ್ಮ ಖರ್ಚುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ನಿಷ್ಣಾತರಾಗಿದ್ದಾರೆ. ಸಕ್ರಿಯವಾಗಿ ಎಲ್ಲದರ ಕೇಂದ್ರಬಿಂದುವಾಗಿರಲು ಇವರು ಬಯಸುತ್ತಾರೆ. ಹೆಚ್ಚಿನ ಧೈರ್ಯಶಾಲಿಗಳು ಇವರಾಗಿದ್ದು ಅಪಾಯವನ್ನು ಮೈಮೇಲೆ ಹಾಕಿಕೊಳ್ಳಲು ಇವರು ಬಯಸುವುದಿಲ್ಲ. ಸೃಜನಾತ್ಮಕ ಮತ್ತು ಆದರ್ಶಾತ್ಮಕ ಪ್ರಕೃತಿ ಅವರನ್ನು ನಾಯಕರನ್ನಾಗಿಸುತ್ತದೆ.

ಕನ್ಯಾ ರಾಶಿ: (23 ಆಗಸ್ಟ್ - 22 ಸೆಪ್ಟೆಂಬರ್)

ಕನ್ಯಾ ರಾಶಿ: (23 ಆಗಸ್ಟ್ - 22 ಸೆಪ್ಟೆಂಬರ್)

ಈ ರಾಶಿಯವರು ವ್ಯವಸ್ಥಿತರಾಗಿದ್ದಾರೆ. ತಮ್ಮ ರಾಶಿಚಕ್ರದಲ್ಲೇ ಹೆಚ್ಚು ಶ್ರೀಮಂತರು ಇವರಾಗಿದ್ದಾರೆ. ತಮ್ಮ ಹಣಕಾಸಿನ ನಿರ್ವಹಣೆಯನ್ನು ಇವರು ಉತ್ತಮವಾಗಿ ಮಾಡುತ್ತಾರೆ. ಆರ್ಥಿಕ ವಹಿವಾಟಿನಲ್ಲಿ ಇವರು ಜಾಗರೂಕರಾಗಿದ್ದಾರೆ ಆದ್ದರಿಂದಲೇ ಅತ್ಯುತ್ತಮ ನಿರ್ಧಾರಗಳನ್ನು ಇವರು ತೆಗೆದುಕೊಳ್ಳಬಹುದು. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಇವರು ನಿಷ್ಣಾತರೆನಿಸಿದ್ದಾರೆ.

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ಇವರು ಹಣಕಾಸು ಕುರಿತಂತೆ ಎಲ್ಲದರದಲ್ಲೂ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಕಷ್ಟು ಹಣವನ್ನು ಗಳಿಸುವ ಸಾಮರ್ಥ್ಯವನ್ನು ಇವರು ಪಡೆದಿದ್ದಾರೆ. ಮಾರುಕಟ್ಟೆ ವಿಷಯದಲ್ಲಿ ಇವರು ನಿಸ್ಸೀಮರೆನಿಸಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನ ಯಾವಾಗಲೂ ಉತ್ತಮವಾಗಿರುತ್ತದೆ. ಅವರು ಭಾವೋದ್ರೇಕ ಮತ್ತು ಸ್ಪರ್ಧೆಯಿಂದ ಪ್ರೇರೇಪಿಸಲ್ಪಟ್ಟಿದ್ದಾರೆ.

ಕಡಿಮೆ ಸಾಮರ್ಥ್ಯವನ್ನು ಹೊಂದಿರುವ ರಾಶಿಗಳು

ಕಡಿಮೆ ಸಾಮರ್ಥ್ಯವನ್ನು ಹೊಂದಿರುವ ರಾಶಿಗಳು

ತುಲಾ ರಾಶಿ

ತಮ್ಮ ಹಣಕಾಸನ್ನು ಸಮತೋಲನಗೊಳಿಸುವ ನಿರ್ಧಾರ ಇವರು ತೆಗೆದುಕೊಳ್ಳಬೇಕು. ಇವರು ದಿವಾಳಿಯವಾಗುವುದಿಲ್ಲ ಅದಾಗ್ಯೂ ದುಬಾರಿ ಉತ್ಪನ್ನಗಳ ಮೇಲೆ ಹಣ ಖರ್ಚು ಮಾಡುವುದನ್ನು ನಿಲ್ಲಿಸಬೇಕು.

ಕುಂಭ ರಾಶಿ

ಕುಂಭ ರಾಶಿ

ಇವರ ಬಳಿ ಹಣವಿಲ್ಲದಿದ್ದರೂ ಹಣ ಖರ್ಚು ಮಾಡಲು ಬೇರೆ ಬೇರೆ ವಿಧಾನಗಳನ್ನು ಇವರು ಪ್ರಯತ್ನಿಸಬಹುದು. ಇದರಿಂದ ಸಾಲಕ್ಕೆ ಒಳಗಾಗುವ ಸಮಸ್ಯೆ ಏರ್ಪಡುತ್ತದೆ.

 ಧನು ರಾಶಿ

ಧನು ರಾಶಿ

ಅವರ ಸದ್ಗುಣಗಳಿಂದ ಮತ್ತು ನ್ಯೂನತೆಗಳ ಕಾರಣದಿಂದ ಹೆಚ್ಚಿನ ಹಣವನ್ನು ಪಡೆಯುವ ರಾಶಿಯಾಗಿದ್ದರೂ ಇವರು ಬಡತನವನ್ನು ಎದುರಿಬೇಕಾಗುತ್ತದೆ. ಸೋಮಾರಿಗಳಾಗಿದ್ದು ಕೈಗೆ ಹಾಗೆಯೇ ಹಣ ಬರಲಿ ಎಂದು ಬಯಸುತ್ತಾರೆ. ಖರ್ಚುಮಾಡುವಾಗ ಎರ್ರಾಬಿರ್ರಿಯಾಗಿ ಖರ್ಚು ಮಾಡುತ್ತಾರೆ. ಭವಿಷ್ಯಕ್ಕೆ ಬೇಕು ಎಂಬ ಸಣ್ಣ ಯೋಚನೆಯನ್ನೂ ಇವರು ಮಾಡುವುದಿಲ್ಲ.

English summary

The Best Zodiac Signs for Wealth

Is there anyone in this world who doesn’t want to be rich? The answer is definitely no one. Neither the wealthiest person nor the poorest one is satisfied with their present wealth. Everyone wants some more money than they have. Hard work and right decision at the right time is the best way to earn money. But not everyone knows that our wealth is also affected by our zodiac signs.
Subscribe Newsletter