Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ರಾಶಿಚಕ್ರದ ಅನುಸಾರ ಸಾಡೇಸಾತಿ ಸಮಸ್ಯೆ ಬಂದಾಗ ಈ ರೀತಿಯ ಪರಿಹಾರ ಮಾಡಬೇಕು
ಶನಿ ಎಂದರೆ ಸಾಮಾನ್ಯವಾಗಿ ಒಂದು ರೀತಿಯ ಬೇಸರ ಹಾಗೂ ಭಯ ಉಂಟಾಗುವುದು. ಶನಿಯ ಅವಧಿ ಆರಂಭವಾದಾಗ ಜೀವನದಲ್ಲಿ ಇರುವ ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಸದಾ ದುಃಖದಲ್ಲಿಯೇ ಕೈತೊಳೆಯ ಬೇಕಾಗುವುದು. ನಮ್ಮ ಕುಂಡಲಿಯಲ್ಲಿ ಬರುವ ಶನಿಯು ನಮ್ಮನ್ನು ಆಳುವಾಗ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುವುದು. ಶನಿಯ ಪ್ರಭಾವ ಇರುವಾಗ ವ್ಯಕ್ತಿ ಸಾಯುವಷ್ಟು ಕಷ್ಟಗಳು ಎದುರಾಗುವುದು. ಆದರೆ ಯಾರನ್ನೂ ಸಾಯಲು ಬಿಡುವುದಿಲ್ಲ ಎನ್ನುತ್ತಾರೆ.
ಪ್ರತಿಯೊಂದು ಗ್ರಹಗಳು ತಮ್ಮ ಆಳ್ವಿಕೆಯನ್ನು ಮೀಸಲಾದ ಸಮಯದಲ್ಲಿ ಆಳ್ವಿಕೆ ನಡೆಸುತ್ತವೆ. ಪ್ರತಿಯೊಂದು ಗ್ರಹಗಳು ತಮ್ಮದೇ ಆದ ಪ್ರಭಾವವನ್ನು ಬೀರುವುದರ ಮೂಲಕ ಜೀವನದಲ್ಲಿ ಪಾಠವನ್ನು ಕಲಿಸುತ್ತಾರೆ. ಅದರಲ್ಲಿ ಶನಿಯ ಸರದಿ ಎದುರಾದಾಗ ಶನಿಯು ಸಾಕಷ್ಟು ಜೀವನದ ಅರ್ಥವನ್ನು ತಿಳಿಸಿಕೊಡುತ್ತಾನೆ. ಸತ್ಯದ ಬದುಕು ಎಂದರೇನು ಎನ್ನುವುದು ನಮ್ಮ ಅರಿವಿಗೆ ಬರುವಂತೆ ಮಾಡುವನು. ಜೀವನದ ಸತ್ಯವನ್ನು ತಿಳಿಯುವಾಗ ನಾವು ನಮ್ಮ ಭ್ರಮೆಯ ಲೋಕವನ್ನು ತ್ಯಜಿಸಿ, ವಾಸ್ತವದ ಅರಿವನ್ನು ಪಡೆಯುವಾಗ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುವುದು. ಈ ನಿಟ್ಟಿನಲ್ಲಿಯೇ ಶನಿಯ ಪ್ರಭಾವ ಕಷ್ಟವನ್ನು ತಂದುಕೊಡುವುದು ಎಂದು ಹೇಳಲಾಗುವುದು.

ಪಂಚಮ ಶನಿ, ಅಷ್ಟಮ ಶನಿ, ಸಾಡೇ ಸಾತ್
ಶನಿಯ ಅವಧಿಯು ವಿವಿಧ ರೀತಿಯಲ್ಲಿ ಇರುತ್ತದೆ. ಪಂಚಮ ಶನಿ, ಅಷ್ಟಮ ಶನಿ, ಸಾಡೇ ಸಾತ್ ಎಂದು ಹೇಳಲಾಗುವುದು. ಸಾಡೇ ಸಾತ್ ಎಂದರೆ ಶನಿಯು ಏಳು ವರೇ ವರ್ಷಗಳ ಕಾಲ ಪ್ರಭಾವ ಬೀರುವನು ಎಂದರ್ಥ. ಈ ಸಮಯದಲ್ಲಿ ವ್ಯಕ್ತಿಯು ಸಾಕಷ್ಟು ಕಷ್ಟ-ನಷ್ಟವನ್ನು ಅನುಭವಿಸುತ್ತಾನೆ. ಅದರಿಂದಲೇ ಜೀವನದ ಸತ್ಯವನ್ನು ತಿಳಿದುಕೊಳ್ಳುತ್ತಾನೆ ಎನ್ನಲಾಗುವುದು. ಸಾಡೇ ಸಾತ್ ಎದುರಾದಾಗ ವ್ಯಕ್ತಿ ದೀರ್ಘ ಸಮಯಗಳ ಕಾಲ ಮಾನಸಿಕ ಸಂಕಟ, ನೋವು ಹಾಗೂ ನಷ್ಟವನ್ನು ಎದುರಿಸುವನು ಎನ್ನಲಾಗುವುದು.

ಈ ಸಮಯದಲ್ಲಿ ಸತತ ಪ್ರಯತ್ನವನ್ನು ಕೈಗೊಳ್ಳಬೇಕು
ಸಾಡೇ ಸಾತ್ ಸಮಯದಲ್ಲಿ ವ್ಯಕ್ತಿ ಒಂದು ವಸ್ತುವನ್ನು ಪಡೆದುಕೊಳ್ಳಬೇಕು ಅಥವಾ ಯಾವುದೋ ಕೆಲಸದ ಯೋಜನೆಯಲ್ಲಿ ಯಶಸ್ಸನ್ನು ಹೊಂದಬೇಕು ಎಂದಾದರೆ 4-5 ಬಾರಿ ಸತತ ಪ್ರಯತ್ನವನ್ನು ಕೈಗೊಳ್ಳಬೇಕು. ಆಗಲೇ ಒಮ್ಮೆ ಯಶಸ್ಸು ದೊರೆಯುವುದು. ಅಲ್ಲದೆ ವ್ಯಕ್ತಿ ಆತ್ಮೀಯರ ಮೇಲೆ ಅಥವಾ ತಮ್ಮವರ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವನು. ಎಲ್ಲಾ ಸಂಗತಿಗಳಲ್ಲೂ ಅಪೇಕ್ಷಿತ ಫಲಿತಾಂಶ ದೊರೆಯದೆ ಹೋಗುವುದು. ಈ ಹಿನ್ನೆಲೆಯಲ್ಲಿಯೇ ವ್ಯಕ್ತಿಗೆ ಅಸಹಾಯಕತೆಯ ಭಾವನೆ ಮೂಡುವುದು.

ಸಾಡೇ ಸಾತ್ ಪ್ರತಿಯೊಬ್ಬರು ಅನುಭಿಸಬೇಕಾಗಿ ಬರುವುದು
ಸಾಡೇ ಸಾತ್ ಪ್ರತಿಯೊಬ್ಬರು ತಮ್ಮ ಕುಂಡಲಿಗೆ ಅನುಗುಣವಾಗಿ ಜೀವಿತಾವಧಿಯಲ್ಲಿ ಒಮ್ಮೆ ಅನುಭವಿಸಬೇಕಾಗುವುದು. ಅಂತಹ ಸಂದರ್ಭದಲ್ಲಿ ಕೆಲವು ಪರಿಹಾರ ಕ್ರಮವನ್ನು ಕೈಗೊಂಡರೆ ಅನುಭವಿಸುವ ಕಷ್ಟಗಳು ಗಮನಾರ್ಹ ರೀತಿಯಲ್ಲಿ ಕಡಿಮೆಯಾಗುವುದು. ಶನಿಯ ಪ್ರಭಾವ ಕೇವಲ ದುಃಖವನ್ನಷ್ಟೇ ಎಲ್ಲಾ ಸಂತೋಷವನ್ನು ತಂದುಕೊಡುವುದು. ಅದು ನಾವು ಮಾಡಿರುವ ಕರ್ಮಗಳನ್ನು ಅನುಸರಿಸಿರುತ್ತವೆ. ನಿಮ್ಮ ಸರದಿಯಲ್ಲಿ ಸಾಡೇ ಸಾತು ಎದುರಾದಾಗ ಯಾವ ರೀತಿಯ ಕ್ರಮವನ್ನು ಅಥವಾ ಪರಿಹಾರವನ್ನು ಮಾಡಿಸಬೇಕು ಎನ್ನುವುದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ...

ಶನಿ ದೇವರು
ಶನಿ ದೇವರು ಸಾಡೇ ಸಾತ್ ಆರಂಭದ ಜೀವನದಲ್ಲಿ ಒಳ್ಳೆಯದನ್ನು ಮಾಡಿದರೆ ಸಾಡೇ ಸಾತ್ ಅಂತ್ಯದ ವೇಳೆಗೆ ಕೆಟ್ಟದನ್ನು ಮಾಡುತ್ತಾನೆ. ಅದೇ ಮೊದಲು ಕೆಟ್ಟದನ್ನು ಮಾಡಿದರೆ ನಂತರ ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಜೀವನದ ಪ್ರತಿಯೊಂದು ವಿಷಯ ಅಥವಾ ಸಂಗತಿಯ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದರ ಅರಿವನ್ನು ಮೂಡಿಸುತ್ತಾನೆ. ಜೊತೆಗೆ ಜೀವನದಲ್ಲಿ ಯಶಸ್ಸನ್ನು ಹೊಂದಲು ವ್ಯಕ್ತಿಯನ್ನು ಮಾನಸಿಕವಾಗಿ ಸದೃಢನಾಗಿ ಮಾಡುವನು. ಯಶಸ್ಸಿನ ಹೊಸ ಮಾರ್ಗವನ್ನು ತೋರಿಸುವನು. ವೈಯಕ್ತಿಕ ಜೀವನದ ಆಳದಲ್ಲಿ ಇರುವ ನಕಾರಾತ್ಮಕ ಮತ್ತು ಸಕಾರಾತ್ಮಕ ವಿಷಯಗಳನ್ನು ಅರಿವಿಗೆ ತಂದುಕೊಡುವನು ಎಂದು ಹೇಳಲಾಗುವುದು.

ಶನಿಯ ಪರೀಕ್ಷೆ
ಸಾಡೇ ಸಾತ್ ಅವಧಿಯಲ್ಲಿ ಶನಿಯು ವ್ಯಕ್ತಿಯ ತಾಳ್ಮೆಯನ್ನು ಪರೀಕ್ಷಿಸುತ್ತಾನೆ ಎಂದು ಹೇಳಲಾಗುವುದು. ಸಂಘರ್ಷದ ಜೀವನದಿಂದ ಹೇಗೆ ಶಾಂತಿಯುತವಾದ ಜೀವನವನ್ನು ಕಂಡುಕೊಳ್ಳಬಹುದು ಎನ್ನುವುದನ್ನು ತಿಳಿಸಿಕೊಡುತ್ತಾನೆ. ಆಗ ವ್ಯಕ್ತಿಯ ಬಾಳಿಕೆಯು ಗಮನಾರ್ಹವಾಗಿ ಹೆಚ್ಚಾಗುವುದು ಎನ್ನಲಾಗುವುದು. ಜೀವನದಲ್ಲಿ ತೃಪ್ತಿ ಕಂಡುಕೊಳ್ಳುವುದು, ವೃತ್ತಿ ಜೀವನದಲ್ಲಿ ಸಾಧನೆ ಹಾಗೂ ವೈಯಕ್ತಿಕ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ಪಡೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲು ಆಶೀರ್ವಾದ ನೀಡುವನು.

ಮೇಷ ರಾಶಿಯವರ ಪರಿಹಾರ ಕ್ರಮ
ಮೇಷ ರಾಶಿಯವರು ಸಾಡೇ ಸಾತ್ ಸಮಯದಲ್ಲಿ ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಮತ್ತು ಹನುಂತನ ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ಪೂಜೆ ಸಲ್ಲಿಸುವುದು ಹಾಗೂ ನೈವೇದ್ಯವನ್ನು ಅರ್ಪಿಸುವುದರ ಮೂಲಕ ಸಾಡೇ ಸಾತ್‍ನ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನಲಾಗುತ್ತದೆ. ಈ ಪರಿಹಾರ ಕ್ರಮವನ್ನು ಸತತವಾಗಿ ಕನಿಷ್ಠ ಎಂದರೆ 7 ಶನಿವಾರ ಕೈಗೊಳ್ಳಬೇಕು. ಅಲ್ಲದೆ ಕುದುರೆ ಲಾಳದ ಆಕ್ರತಿಯ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆ ಕಾಣುವುದು. ಜೊತೆಗೆ ಶನಿಯ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು.

ವೃಷಭ ರಾಶಿಯವರಿಗೆ ಪರಿಹಾರ ಕ್ರಮಗಳು
ವೃಷಭ ರಾಶಿಯವರು ಸಾಡೇ ಸಾತ್ ಸಮಯದಲ್ಲಿ ಕಬ್ಬಿಣ ಅಥವಾ ಬೆಳ್ಳಿಯಲ್ಲಿ ಕಟ್ಟಿಸಿದ ಅಮೆಥಿಸ್ಟ್ ಹರಳಿನ ಉಂಗುರವನ್ನು ಧರಿಸಬೇಕು. ಅದು ಮಧ್ಯಮ ಬೆರಳಿಗೆ ಧರಿಸಬೇಕು ಎನ್ನಲಾಗುವುದು. ಐದು ಶನಿವಾರ ತುಪ್ಪಳ ದ ಮರ/ ಅಶ್ವತ್ತ್ಥ ಮರದ ಕೆಳಗೆ ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು. ಮನೆಯ ಪ್ರವೇಶದ ದ್ವಾರದ ಬಳಿ ಕಪ್ಪು ಬಣ್ಣದ ಕುದುರೆ ಲಾಳವನ್ನು ತೂಗು ಹಾಕಬೇಕು. ಇದರಿಂದ ಸಾಡೇ ಸಾತ್ ಪ್ರಭಾವವನ್ನು ಕಡಿಮೆ ಮಾಡಬಹುದು. ಮಹಾ ಮೃತ್ಯುಂಜಯ ಜಪವನ್ನು ನಿತ್ಯವು ಮಾಡಬೇಕು. ಇದರಿಂದ ನೀವು ಆಶ್ಚರ್ಯಕರವಾದ ಫಲಿತಾಂಶವನ್ನು ಕಾಣಬಹುದು.

ಮಿಥುನ ರಾಶಿಯವರ ಪರಿಹಾರ ಕ್ರಮಗಳು
ಮಿಥುನ ರಾಶಿಯವರು ಸಾಡೇಸಾತ್ ಸಮಯದಲ್ಲಿ ಬೆಳ್ಳಿಯಲ್ಲಿ ಮಾಡಿಸಿದ ನೀಲಿಮಣಿ ಅಥವಾ ವೈಡೂರ್ಯ ರತ್ನದ ಉಂಗುರವನ್ನು ಧರಿಸಬೇಕು ಎಂದು ಸಲಹೆ ನೀಡಲಾಗುವುದು. ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಗೇಟ್ ಬಳಿ ಸ್ವಸ್ತಿಕ್ ಅಥವಾ ಮಂಗಳಕರವಾದ ಚಿಹ್ನೆಯನ್ನು ತೂಗಲು ಹಾಕಬೇಕು. ಇದರಿಂದ ಹನುಂತನ ಆಶೀರ್ವಾದ ದೊರೆಯುವುದು. ಜೊತೆಗೆ ಕಪ್ಪು ನಾಯಿಗೆ ಆಹಾರವನ್ನು ನೀಡುವುದರ ಮೂಲಕ ಶನಿಯ ಆಶೀರ್ವಾದ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಲಾಗುವುದು.

ಕರ್ಕ ರಾಶಿಯವರ ಪರಿಹಾರ ಕ್ರಮಗಳು
ಕರ್ಕ ರಾಶಿಯವರು ಸಾಡೇ ಸಾತ್ ಸಮಯದಲ್ಲಿ ಪ್ರತಿ ಶನಿವಾರ ಶನಿಗೆ ಸಂಬಂಧಿಸಿದ ಏಳು ವಸ್ತುವನ್ನು ದಾನ ಮಾಡಿ. ಹೀಗೆ ದಾನ ಮಾಡುವುದರಿಂದ ಶನಿಯ ಕೃಪೆಗೆ ಒಳಗಾಗುವರು. ಪ್ರತಿ ಶನಿವಾರ ಶನಿಗೆ ಸಂಬಂಧಿಸಿದ ಅಷ್ಟೋತ್ತರ, ಸ್ತೋತ್ರ ಅಥವಾ ಜಪವನ್ನು ಪಠಿಸಬೇಕು. ಕುದುರೆ ಲಾಳದ ಉಂಗುರವನ್ನು ಧರಿಸುವುದರಿಂದ ಕುಂಡಲಿಯಲ್ಲಿರುವ ದುರ್ಬಲ ಗ್ರಹಗಳು ಪ್ರಬಲತೆಯನ್ನು ಪಡೆದುಕೊಳ್ಳುವರು. ಅಲ್ಲದೆ ಶನಿವಾರ ಉಪವಾಸ ಕೈಗೊಳ್ಳುವುದರಿಂದ ಉತ್ತಮ ಪ್ರತಿಫಲವನ್ನು ಕಂಡುಕೊಳ್ಳುವಿರಿ.

ಸಿಂಹ ರಾಶಿಯವರ ಪರಿಹಾರ ಕ್ರಮಗಳು
ಸಿಂಹ ರಾಶಿಯವರು ಸಾಡೇ ಸಾತ್‍ಗೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರತಿ ಶನಿವಾರ ಶನಿ ಸ್ತೋತ್ರ ಹಾಗೂ ಜಪವನ್ನು ಕೈಗೊಳ್ಳಬೇಕು. ಕಪ್ಪು ಎಳ್ಳು, ಕಪ್ಪು ಬಟ್ಟೆ ಹಾಗೂ ಸಾಸಿವೆ ಎಣ್ಣೆಯನ್ನು ಪ್ರತಿ ಶನಿವಾರ ದಾನ ಮಾಡಬೇಕು. ಕಪ್ಪು ನಾಯಿಗೆ ಆಹಾರವನ್ನು ನೀಡ ಬೇಕು. ಕಪ್ಪು ಬಣ್ಣದ ಕುದುರೆಯ ಲಾಳದ ಉಂಗುರವನ್ನು ಧರಿಸುವುದರಿಂದ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು. ಶನಿವಾರ 108 ಬಾರಿ ಮಹಾ ಮೃತ್ಯುಂಜಯ ಜಪವನ್ನು ಜಪಿಸುವುದರ ಮೂಲಕ ಶಿವಲಿಂಗಕ್ಕೆ ಆರಾಧನೆ ಮಾಡಿ. ಇದು ಉತ್ತಮ ಪರಿಹಾರವನ್ನು ನೀಡುವುದು.

ಕನ್ಯಾ ರಾಶಿಯವರ ಪರಿಹಾರ ಕ್ರಮಗಳು
ಕನ್ಯಾ ರಾಶಿಯವರು ಸಾಡೇಸಾತ್‍ಗೆ ಸಂಬಂಧಿಸಿದಂತೆ ಪರಿಹಾರ ಕ್ರಮವನ್ನು ಕೈಗೊಳ್ಳಲು ಪ್ರತಿ ಶನಿವಾರ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಬೇಕು. ಶನಿಯ ಸ್ತೋತ್ರ ಹಾಗೂ ಜಪವನ್ನು ಮಾಡುವುದರ ಮೂಲಕ ಶನಿಯ ಕೃಪೆಗೆ ಒಳಗಾಗಬಹುದು. ಏಳು ಶನಿವಾರ ಸತತವಾಗಿ 1 ತೆಂಗಿನ ಕಾಯಿ ಅಥವಾ ಏಳು ಬಾದಾಮಿಯನ್ನು ಹರಿಯುವ ನೀರಿನಲ್ಲಿ ಮುಳುಗಿಸಿ. ಇದರಿಂದ ಸಾಕಷ್ಟು ಉತ್ತಮ ಪ್ರತಿಫಲವನ್ನು ಕಂಡುಕೊಳ್ಳುವಿರಿ.

ತುಲಾ ರಾಶಿಯವರ ಪರಿಹಾರ ಕ್ರಮಗಳು
ತುಲಾ ರಾಶಿಯವರು ಸಾಡೇ ಸಾತ್ ಸಮಯದಲ್ಲಿ ಪ್ರತಿ ಶನಿವಾರ ಕಪ್ಪು ಉದ್ದಿನ ಬೇಳೆಯನ್ನು ಬಿಕ್ಷುಕರಿಗೆ ದಾನ ಮಾಡಬೇಕು. ಸಾಧ್ಯವಾದರೆ ಎರಡು ಕಪ್ಪು ನಾಯಿಗೆ ಆಹಾರವನ್ನು ನೀಡಬೇಕು. ಅವರಿಗೆ ಮನೆಯ ಒಳಗೆ ತಂದು ಆಹಾರ ನೀಡಬಾರದು. ಮನೆಯ ಹೊರಗೆ ಆಹಾರವನ್ನು ನೀಡಬೇಕು. ಶಿವಲಿಂಗವನ್ನು ಅಥವಾ ಶನಿಯ ಯಂತ್ರವನ್ನು ಹರಿಯುವ ನೀರಿನಲ್ಲಿ ಮುಳುಗಿಸಿ. ಇದರಿಂದ ಸಾಕಷ್ಟು ಪಾಪಕರ್ಮಗಳು ಶಮನವಾಗುವುದು. ಶನಿ ದೇವರ ಕೃಪೆಗೆ ಒಳಗಾಗುವಿರಿ.

ವೃಶ್ಚಿಕ ರಾಶಿಯವರ ಪರಿಹಾರ ಕ್ರಮಗಳು
ವೃಶ್ಚಿಕ ರಾಶಿಯವರು ಸಾಡೇ ಸಾತ್‍ನ ಪ್ರಭಾವಕ್ಕೆ ಒಳಗಾದಾಗ ಶನಿಯ ಯಂತ್ರವನ್ನು ಮನೆಗೆ ತಂದು, ಶನಿಯ ತಾಂತ್ರಿಕ ಮಂತ್ರವನ್ನು ಪಠಿಸಬೇಕು. ಈ ಮೂಲಕ ಪೂಜೆ ಗೈಯುವುದರಿಂದ ಉತ್ತಮ ಪರಿಹಾರ ಕಂಡುಕೊಲ್ಲುವಿರಿ. ಕಪ್ಪು ಎಳ್ಳನ್ನು ಕೀಟಗಳಿಗೆ ಆಹಾರವನ್ನಾಗಿ ನೀಡಿ. ಐದು ಶನಿವಾರ ಸತತವಾಗಿ ತಾಮ್ರದ ತುಂಡನ್ನು ಹರಿಯುವ ನೀರಿನಲ್ಲಿ ಮುಳುಗಿಸಿ. ಪ್ರತಿ ಶನಿವಾರ ಹನುಂತನ ಆರಾಧನೆಯನ್ನು ಕೈಗೊಳ್ಳಬೇಕು. ಇದರಿಂದ ಸಾಕಷ್ಟು ಪರಿಹಾರವನ್ನು ಕಂಡುಕೊಳ್ಳುವಿರಿ ಎಂದು ಸಲಹೆ ನೀಡಲಾಗುವುದು.

ಧನು ರಾಶಿಯವರ ಪರಿಹಾರ ಕ್ರಮಗಳು
ಧನು ರಾಶಿಯವರು ಸಾಡೇ ಸಾತ್ ಸಮಯದಲ್ಲಿ ಪ್ರತಿ ಶನಿವಾರ ಉಪವಾಸವನ್ನು ಕೈಗೊಳ್ಳಬೇಕು. ಅಲ್ಲದೆ 108 ಬಾರಿ ಮಹಾನ್ ಮೃತ್ಯುಂಜಯ ಜಪವನ್ನು ಕೈಗೊಳ್ಳಬೇಕು. ಇದಕ್ಕಿಂತ ಉತ್ತಮವಾದದ್ದು ಯಾವುದು ಇಲ್ಲ ಎನ್ನುವುದನ್ನು ಅರಿಯಬೇಕು. ಶನಿಗೆ ಸಂಬಂಧಿಸಿದ ಕಪ್ಪು ಎಳ್ಳು, ಕಪ್ಪು ಬಟ್ಟೆ, ಸಾಸಿವೆ ಎಣ್ಣೆ, ಕಪ್ಪು ಉದ್ದು ಸೇರಿದಂತೆ ಯಾವುದೇ ಇತರ ವಸ್ತುಗಳನ್ನು ಖರೀದಿಸಬಾರದು. ಅದು ಹೆಚ್ಚು ದುಃಖಕರವಾಗಿರುತ್ತದೆ ಎಂದು ಹೇಳಲಾಗುವುದು.

ಮಕರ ರಾಶಿಯವರ ಪರಿಹಾರ ಕ್ರಮಗಳು
ಮಕರ ರಾಶಿಯವರು ತಮ್ಮ ಸಾಡೇ ಸಾತ್ ಸಮಯದಲ್ಲಿ ಪ್ರತಿ ಶನಿವಾರ ಶನಿ ಹಾಗೂ ಹನುಮಂತನ ಆರಾಧನೆ ಕೈಗೊಳ್ಳುವುದರ ಮೂಲಕ ಕೆಟ್ಟ ಪರಿಣಾಮಗಳನ್ನು ತಡೆಯಬಹುದು. ಶನಿವಾರ ಮತ್ತು ಮಂಗಳವಾರ ಯಾವುದೇ ಬಗೆಯ ಮಾಂಸಹಾರ ಮತ್ತು ಮದ್ಯವನ್ನು ಸೇವಿಸದಿರಿ. ಮನೆಗೆ ಶನಿಯ ಯಂತ್ರವನ್ನು ತಂದು ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು.

ಕುಂಭ ರಾಶಿಯವರ ಪರಿಹಾರ ಕ್ರಮಗಳು
ಕುಂಭ ರಾಶಿಯವರು ಸಾಡೇ ಸಾತ್ ಪ್ರಭಾವವನ್ನು ಎದುರಿಸುವಾಗ ನೀಲಿ ಬಟ್ಟೆಯ ಉಡುಗೆಯನ್ನು ತೊಡುವುದು ಉತ್ತಮ. ಅಲ್ಲದೆ ನೀಲಿ ಮಣಿಯ ಉಂಗುರವನ್ನು ಧರಿಸಬೇಕು. ಇದರಿಂದ ಶಾಂತಿ ಹಾಗೂ ಉತ್ತಮ ಭವಿಷ್ಯ ದೊರೆಯುವುದು. ಪ್ರತಿ ಶನಿವಾರ ಶನಿಗೆ ಪೂಜೆ ಸಲ್ಲಿಸಿ, ಶನಿಗೆ ಸಂಬಂಧಿಸಿದ ಏಳು ವಸ್ತುಗಳನ್ನು ದಾನ ಮಾಡಿ ಎಂದು ಸಲಹೆ ನೀಡಲಾಗುವುದು.

ಕುಂಭ ರಾಶಿಯವರ ಪರಿಹಾರ ಕ್ರಮಗಳು
ಮೀನ ರಾಶಿಯವರು ಸಾಡೇ ಸಾತ್ ಸಮಯವನ್ನು ಎದುರಿಸುವಾಗ ಪವಿತ್ರವಾದ ಶನಿ ತಾಂತ್ರಿಕ ಮಂತ್ರವನ್ನು ಜಪಿಸಿ. ಮನೆಯಿಂದ ಆಚೆ ಹೋಗುವಾಗ ಅಥವಾ ಯಾವುದೇ ಪ್ರಮುಖ ಕೆಲಸವನ್ನು ಕೈಗೊಳ್ಳುವ ಮೊದಲು ನಾಯಿಗೆ ಆಹಾರವನ್ನು ನೀಡಿ. ನಂತರ ಕೆಲಸವನ್ನು ಕೈಗೊಳ್ಳಿ. ಶಿವನ ಆರಾಧನೆ ಕೈಗೊಳ್ಳುವುದರ ಮೂಲಕ ಶಿವನ ಆಶೀರ್ವಾದ ಪಡೆದುಕೊಳ್ಳಿ.



Click it and Unblock the Notifications











