ಯಾವ್ಯಾವ ರಾಶಿಯವರನ್ನು ಜನರು ಹೇಗೆಲ್ಲಾ ನಿರ್ಧರಿಸುತ್ತಾರೆ ನೋಡಿ...

Posted By: Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಭಾವನೆಗೆ ಅನುಗುಣವಾಗಿಯೇ ಇತರರನ್ನು ನಿರ್ಧರಿಸುತ್ತಾರೆ. ವ್ಯಕ್ತಿ ಯಾವ ಬಗೆಯ ವರ್ತನೆಯನ್ನು ತೋರಿದ್ದಾನೆ ಎನ್ನುವುದರ ಮೇಲೆಯೇ ಅವನ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ನಿರ್ಧರಿಸುತ್ತೇವೆ. ಹಾಗಾಗಿ ಕೆಲವು ವ್ಯಕ್ತಿಗಳು ಬಹಳ ಒಳ್ಳೆಯವರಂತೆ ಕಾಣಬಹುದು. ಇನ್ನೂ ಕೆಲವರು ಕೆಟ್ಟವ್ಯಕ್ತಿಗಳಾಗಿ ಕಾಣಿಸಿಕೊಳ್ಳಬಹುದು. ವ್ಯಕ್ತಿಯ ವರ್ತನೆಗಳು ಸಾಮಾನ್ಯವಾಗಿ ಆತ ಬೆಳೆದು ಬಂದ ಪರಿಸರ ಹಾಗೂ ಸಂಸ್ಕಾರದ ಮೇಲೆ ಅವಲಂಭಿತವಾಗಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಆತನ ರಾಶಿಚಕ್ರಗಳ ಅನುಸಾರ ವರ್ತನೆಯನ್ನು ತೋರುತ್ತಾನೆ. ಅವನ ವರ್ತನೆಯು ರಾಶಿಚಕ್ರದ ಅನುಸಾರ ರೂಪುಗೊಳ್ಳಲು ಅಂತಹದ್ದೇ ಪರಿಸ್ಥಿತಿ ಹಾಗೂ ಪರಿಸರವು ಸ್ರಷ್ಟಿಯಾಗಿರುತ್ತದೆ ಎಂದು ಹೇಳಲಾಗುವುದು. ವ್ಯಕ್ತಿಯ ವರ್ತನೆಯನ್ನು ಆಧರಿಸಿ ಜನರು ತಮ್ಮದೇ ಆದ ನಿರ್ಧಾರವನ್ನು ಹೊಂದಿರುತ್ತಾರೆ. ರಾಶಿಚಕ್ರಕ್ಕೆ ಅನುಗುಣವಾಗಿ ಜನರು ನಿಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿರುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

 ಮೇಷ

ಮೇಷ

ಇವರನ್ನು ಜನರು ಅತ್ಯಂತ ಬಿಸಿ ಸ್ವಭಾವದವರು ಎಂದು ನಿರ್ಣಯಿಸುತ್ತಾರೆ. ನೀವು ತಳ್ಳುವ ಹಾಗೂ ಸೊಕ್ಕಿನ ವ್ಯಕ್ತಿಯಾಗಿರುತ್ತೀರಿ ಎಂದು ಭಾವಿಸುವರು. ಅಲ್ಪ ಪ್ರಮಾಣದ ಅಳುವಿನ ಸ್ವಭಾವದಿಂದ ನಿಮ್ಮ ತಪ್ಪುಗಳು ಅಳಿಸಿ ಹೋಗುವುದು ಎಂದು ಜನರು ಭಾವಿಸುತ್ತಾರೆ.

ವೃಷಭ

ವೃಷಭ

ಈ ರಾಶಿಯ ಜನರನ್ನು ಮೊಂಡು ಸ್ವಭಾವದವರು ಎಂದು ನಿರ್ಧರಿಸುತ್ತಾರೆ. ಮೊಂಡುತನದಿಂದಲೇ ತಮ್ಮ ಹುಚ್ಚುತನವನ್ನು ತೋರುತ್ತಾರೆ ಎಂದು ಹೇಳಲಾಗುತ್ತದೆ. ಇವರು ಸೋಮಾರಿಗಳು ಹಾಗೂ ಆಹಾರಕ್ಕಾಗಿ ಅತಿಯಾದ ಪ್ರೀತಿಯನ್ನು ತೋರುತ್ತಾರೆ ಎಂದು ಹೇಳಲಾಗುವುದು. ಜೊತೆಗೆ ಊಟ ತಿಂಡಿಗಾಗಿಯೇ ಹೆಚ್ಚು ಸಮಯವನ್ನು ಕಳೆಯುವಿರಿ ಎಂದು ಹೇಳಲಾಗುವುದು.

ಮಿಥುನ

ಮಿಥುನ

ಇವರು ವಿಭಜನೆಯ ವ್ಯಕ್ತಿತ್ವದ ಜನರು ಎಂದು ನಿರ್ಣಯಿಸುತ್ತಾರೆ. ಎರಡು ಮುಖವನ್ನು ಹೊಂದಿರುವ ನಯವಾದ ವ್ಯಕ್ತಿಗಳು ಎಂದು ಹೇಳಲಾಗುವುದು. ಎಲ್ಲಾ ಸನ್ನಿವೇಶವನ್ನೂ ಒಂದೇ ರೀತಿಯಲ್ಲಿ ನಿರ್ಧರಿಸುವುದರಿಂದ ಜನರು ಇವರನ್ನು ತಪ್ಪಾಗಿ ದೂರುತ್ತಾರೆ. ಇನ್ನೊಂದೆಡೆ ಎಲ್ಲಾ ಪರಿಸ್ಥಿತಿಗೂ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಹಾಗೂ ಅಭಿವೃದ್ಧಿಯ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ.

ಕರ್ಕ

ಕರ್ಕ

ಇವರು ಮಾನಸಿಕವಾದ ಅಸ್ಥಿರತೆಯ ಅಂಚಿನಲ್ಲಿ ಇದ್ದಾರೆ ಎಂದು ಭಾವಿಸುವರು. ಆದರೆ ಇವರು ಅತ್ಯುತ್ತಮ ರೀತಿಯಲ್ಲಿ ಸಹಾನೂಭೂತಿ ಹೊಂದಿರುವರು. ಎಲ್ಲಾ ಭಾವನೆಯನ್ನು ಚೆನ್ನಾಗಿ ತಿಳಿದುಕೊಳ್ಳುವಿರಿ. ಇತರರ ಕಷ್ಟಸುಖಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವಿರಿ. ಇವರು ಭಾವನಾತ್ಮಕ ಸ್ಥಿತಿಯ ಬಗ್ಗೆ ಜನರು ನಿಮ್ಮನ್ನು ನಿರ್ಣಯಿಸುತ್ತಾರೆ.

ಸಿಂಹ

ಸಿಂಹ

ಇವರು ಎಲ್ಲರ ಗಮನವನ್ನು ಕೇಂದ್ರೀಕರಿಸಬೇಕು ಎನ್ನುವ ಪ್ರವೃತ್ತಿ ತೋರುವ ವ್ಯಕ್ತಿಗಳಾಗಿರುತ್ತಾರೆ. ಸ್ವಂತ ಕಾಳಜಿಗೆ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ. ಉದಾರಗುಣದವರು ಹಾಗೂ ಹರ್ಷ ಚಿತ್ತ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ. ಇತರರ ಬಗ್ಗೆಯೂ ಹೆಚ್ಚು ಕಾಳಜಿ ತೋರುವ ವ್ಯಕ್ತಿಗಳು ಎಂದು ಜನರು ಭಾವಿಸುತ್ತಾರೆ.

ಕನ್ಯಾ

ಕನ್ಯಾ

ಇವರು ಅತ್ಯಂತ ಬುದ್ಧಿವಂತರು, ಇತರರಿಗಾಗಿ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ವ್ಯಕ್ತಿ ಎಂದು ಜನರು ನಂಬುವುದಿಲ್ಲ. ಹಾಗೊಮ್ಮೆ ಇವರು ಯಾರೊಂದಿಗಾದರೂ ಹಿತವಾದ ಭಾವನೆಯನ್ನು ಹೊಂದಿದ್ದರೆ ಅದೊಂದು ಅವರ ಅಂಟು ಸ್ವಭಾವ ಎಂದು ಜನರು ಭಾವಿಸುತ್ತಾರೆ.

ತುಲಾ

ತುಲಾ

ಇವರೊಬ್ಬ ಕಿರಿಕಿರಿಯ ವ್ಯಕ್ತಿ ಹಾಗೂ ದ್ವೇಷವನ್ನು ಹೊಂದಿರುವ ವ್ಯಕ್ತಿ ಎಂದು ಭಾವಿಸುತ್ತಾರೆ. ಇವರು ಯಾವುದೇ ಸ್ಥಿತಿಗೆ ಅಥವಾ ವಿಷಯಗಳಿಗಾಗಿ ಎದ್ದು ನಿಂತು ಎದುರಿಸುವ ವ್ಯಕ್ತಿಯಲ್ಲ ಎಂದು ಅಂದಾಜಿಸುತ್ತಾರೆ. ಸತ್ಯ ಹಾಗೂ ನ್ಯಾಯಕ್ಕೆ ಗೌರವಿಸುವಿರಿ. ನೀವು ನಂಬುವಂತಹ ವಿಚಾರಗಳಿಗೆ ಹೋರಾಟ ನಡೆಸುವಿರಿ ಎಂದು ಜನರು ಊಹಿಸುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಲೈಂಗಿಕ ವಿಚಾರದಲ್ಲಿ ರಾಕ್ಷಸ ಸ್ವಭಾವವನ್ನು ಹೊಂದಿದ್ದಾರೆ. ಲೈಂಗಿಕ ಸಂತೋಷಕ್ಕೆ ಹೆಚ್ಚು ಗಮನ ನೀಡುವರು. ಇವರು ಸದಾ ವಿಷಯಾಸಕ್ತಿ ಹಾಗೂ ಭಾವೋದ್ರಿಕ್ತ ವಾಗಿಯೇ ಯೋಚಿಸುತ್ತಾರೆ ಎಂದು ಹೇಳಲಾಗುವುದು. ಭಾವೋದ್ರಿಕ್ತ ಭಾವನೆಗಳಿಗೆ ಸಂಬಂಧಿಸಿದಂತೆ ಹೆಜ್ಜೆಯನ್ನು ಮುಂದಕ್ಕೆ ಇಡುತ್ತಾರೆ ಎಂದು ಜನರು ಭಾವಿಸುತ್ತಾರೆ.

ಧನು

ಧನು

ಇವರು ನಿಂತಲ್ಲಿ ನಿಲ್ಲುವ ವ್ಯಕ್ತಿಗಳಲ್ಲ. ಅಸ್ಥಿರ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳಲ್ಲ ಎಂದು ಅಂದುಕೊಳ್ಳುತ್ತಾರೆ. ಶಾಶ್ವತವಾದ ಸಂಬಂಧವನ್ನು ರಚಿಸಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಬದ್ಧತೆಯ ಭಾವನೆಗೆ ಭಯವನ್ನು ವ್ಯಕ್ತ ಪಡಿಸುವರು. ಹೊಸ ಜನರ ಭೇಟಿ ಹಾಗೂ ಹೊಸ ಸ್ಥಳಗಳಿಗೆ ಪ್ರಯಾಣ ಬೆಳೆಸಲು ಇಷ್ಟಪಡುವರು ಎಂದು ಜನರು ಊಹಿಸುತ್ತಾರೆ.

ಮಕರ

ಮಕರ

ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಕಠಿಣ ವ್ಯಕ್ತಿಗಳು. ಇದು ಜನರನ್ನು ನಿಮ್ಮೆಡೆಗೆ ತಿರುಗುವಂತೆ ಮಾಡುತ್ತದೆ. ಇತರರಿಗೆ ಅರ್ಥವಾಗದ ಅನೇಕ ಭಾವನೆಗಳನ್ನು ಇವರು ಅರ್ಥಮಾಡಿಕೊಳ್ಳುವರು. ಕೆಲಸ ಮಾಡುವುದರಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಬಯಸಿದ್ದನ್ನು ಪಡೆಯಲು ಆಸಕ್ತರಾಗಿರುತ್ತೀರಿ ಎಂದು ಜನರು ಭಾವಿಸುತ್ತಾರೆ.

ಕುಂಭ

ಕುಂಭ

ಈ ರಾಶಿಯವರು ಬಹಳ ಶಾಂತ ಸ್ವಭಾವದವರು, ಇವರಿಗೆ ವಿಶಾಲವಾದ ಹೃದಯವಿದೆ, ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ ಎನ್ನುವುದನ್ನು ಜನರು ಅರಿಯುವುದಿಲ್ಲ. ಈ ಎಲ್ಲಾ ಒಳ್ಳೆಯ ಅಂಶವನ್ನು ಹೊಂದಿದ್ದಾರೆ ಎನ್ನುವುದನ್ನು ಸುಲಭವಾಗಿ ಕಡೆಗಣಿಸುತ್ತಾರೆ. ಜನರು ಹೇಗೆ ಅಥವಾ ಏನನ್ನೇ ಅಂದುಕೊಂಡರೂ ಪ್ರಶಾಂತ ಮನೋಭಾವ ಹಾಗೂ ಹೃದಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.

ಮೀನ

ಮೀನ

ಇವರೊಬ್ಬ ಅಳುಮುಂಜಿಯ ವ್ಯಕ್ತಿ ಎಂದು ಭಾವಿಸುತ್ತಾರೆ. ಇತರರನ್ನು ಗಮನಿಸಲು ಇವರಿಗೆ ಸಮಯ ಇರುವುದಿಲ್ಲ. ಇತರರ ಅಗತ್ಯಗಳಿಗೆ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಸಹಾಯ ಮಾಡುತ್ತೀರಿ ಎನ್ನುವುದನ್ನು ಗಣನೆಗೆ ತಂದುಕೊಳ್ಳುವುದಿಲ್ಲ. ಇತರರ ಹತಾಷೆಯನ್ನು ನಿರ್ಲಕ್ಷಿಸುವರು ಎಂದು ಅಂದುಕೊಳ್ಳುತ್ತಾರೆ.

English summary

reasons-why-people-would-judge-you-based-on-your-zodiac-sign

In astrology, each zodiac sign has certain traits on which one can define their personality. There are also certain things, based on which people tend to judge you as a person. So, check out on the reasons for which people tend to judge you.
Story first published: Tuesday, March 27, 2018, 16:15 [IST]