For Quick Alerts
ALLOW NOTIFICATIONS  
For Daily Alerts

ರಾಶಿ ಭವಿಷ್ಯ: ಕೆಟ್ಟ ಗುಣಗಳನ್ನು ಹೊಂದಿರುವ ರಾಶಿ ಚಕ್ರದವರು

By Deepu
|

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ರಾಶಿ ಲೆಕ್ಕಾಚಾರವನ್ನು ನಿಮ್ಮ ಹುಟ್ಟಿದ ದಿನ, ಸಮಯ ಮತ್ತು ಗಳಿಗೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ನಿಮ್ಮ ರಾಶಿ ಯಾವುದು ಎಂಬುದನ್ನು ಆಧರಿಸಿಕೊಂಡು ನಿಮ್ಮ ವ್ಯಕ್ತಿತ್ವ, ಗುಣ, ನಿಮ್ಮ ಉನ್ನತಿ, ಭವಿಷ್ಯ, ಉದ್ಯೋಗ ಮೊದಲಾದ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ. ನಿಮ್ಮ ರಾಶಿಯ ಉಚ್ಛ ಸ್ಥಿತಿಯನ್ನು ತಿಳಿದುಕೊಂಡು ನಿಮ್ಮ ಭವಿಷ್ಯದಲ್ಲಿ ನೀವು ಎಷ್ಟು ಉನ್ನತಿಯನ್ನು ಪಡೆದುಕೊಳ್ಳಬಹುದು ಅಂತೆಯೇ ನಿಮ್ಮ ಸ್ವಭಾವ ಮತ್ತು ನಿಮ್ಮಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ರಾಶಿಗೆ ಅನುಗುಣವಾಗಿ ನಿಮ್ಮ ಸ್ವಭಾವ ಕೂಡ ಹಾಗೆ ಇರುತ್ತದೆ. ನೀವು ಹೆಚ್ಚು ಕೋಪವಂತರಾಗಿರಬಹುದು, ಇಲ್ಲವೇ ಮೃದು ಮನಸ್ಸಿನವರಾಗಿರಬಹುದು, ಮೋಸದ ಸ್ವಭಾವ ನಿಮ್ಮಲ್ಲಿರಬಹುದು ಇಲ್ಲದಿದ್ದರೆ ಸಹೃದಯರು ನೀವಾಗಿರಬಹುದು. ಹೀಗೆ ಮನುಷ್ಯನ ಗುಣಗಳನ್ನು ಈ ರಾಶಿಗಳು ಪರಿಚಯಿಸುತ್ತವೆ. ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲೂ ಕೆಲವೊಂದು ವಿಶಿಷ್ಟ ಹಾಗೂ ವಿಚಿತ್ರವಾದ ನಕಾರಾತ್ಮಕ ಗುಣಲಕ್ಷಣಗಳು ಇರುತ್ತದೆ. ಒಂದೇ ರಾಶಿಯವರಲ್ಲಿ ಇಂತಹ ನಕಾರಾತ್ಮಕ ಅಂಶಗಳು ಸಾಮಾನ್ಯವಾಗಿರುವುದು. ಯಾವ್ಯಾವ ರಾಶಿಗಳಲ್ಲಿ ಯಾವ ನಕಾರಾತ್ಮಕ ಗುಣಗಳು ಇವೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ... ಮುಂದೆ ಓದಿ

ಮೇಷ

ಮೇಷ

ಈ ರಾಶಿಯವರಲ್ಲಿ ಉರಿಯುವ ಕೋಪವಿರುವುದು ಮತ್ತು ಯಾವುದೇ ಕೆಲಸ ಮಾಡಲು ಇವರು ಅವಸರಪಡುತ್ತಾರೆ. ಯಾವುದೇ ನಿರ್ಧಾರ ಮಾಡುವ ಮೊದಲು ಅವರು ತಾಳ್ಮೆ ಕಳೆದುಕೊಳ್ಳುವರು. ಇವರಲ್ಲಿ ತುಂಬಾ ಬಲವಾದ ನಡವಳಿಕೆ ಮತ್ತು ಅಧಿಕಾರಯುತ ಮನೋಭಾವವಿರುವುದು. ಇವರಲ್ಲಿರುವಂತಹ ಅಸಹನೆ ಅವರ ಯಶಸ್ಸಿಗೆ ಅಡ್ಡಿಯುಂಟು ಮಾಡುವುದು. ಹಾಗಾದರೆ ಇದಕ್ಕೆ ಪರಿಹಾರವೇನು? ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮೇಷ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

ವೃಷಭ

ವೃಷಭ

ಈ ರಾಶಿಯಲ್ಲಿ ಹುಟ್ಟಿದವರು ಸ್ವಾಮ್ಯಸೂಚಕ ಹಾಗೂ ಅಸೂಯೆಯವರಾಗಿರುವರು. ಇವರಿಗೆ ಸಂಬಂಧದಲ್ಲಿ ಸುರಕ್ಷತೆ ಮತ್ತು ಸ್ಥಿರತೆ ಬೇಕಾಗಿರುತ್ತದೆ. ಪ್ರಾಪಂಚಿಕ ವಸ್ತುಗಳ ಬಗ್ಗೆ ಅವರಿಗೆ ಹೆಚ್ಚಿನ ಪ್ರೀತಿ ಇರುವುದು. ಇದರಿಂದಾಗಿಯೇ ಅವರು ಸಮಸ್ಯೆಗೆ ಸಿಲುಕುವರು. ಇವರು ತುಂಬಾ ಮೊಂಡು ಸ್ವಭಾವದವರು ಮತ್ತು ಇದೇ ವೇಳೆ ತುಂಬಾ ವಿವೇಚನೆಯಿಲ್ಲದವರಾಗಿರುವರು. ನಿಮ್ಮ ಜೀವನದಲ್ಲಿ ಎಲ್ಲರಿಗೂ ಮತ್ತು ಎಲ್ಲವನ್ನೂ ನಿಯಂತ್ರಿಸಲು ಇವರು ಬಯಸುತ್ತಾರೆ. ವಿಷಯ ದೂರ ಹೋದಾಗ ನೀವು ಅದರ ಬಗ್ಗೆ ಯೋಚಿಸಿ. ಆಗ ಅದು ಅರ್ಥಮಾಡಿಕೊಳ್ಳಲು ಕಷ್ಟವಾದ ವಿಷಯವಾಗುವುದು. ಅದನ್ನು ಗ್ರಹಿಸುವುದು ಹೇಗೆ ಎಂದು ಲೆಕ್ಕಾಚಾರ ಮಾಡಿ. ಜೀವನದಲ್ಲಿ ಒಂದು ಪೂರ್ವಸಿದ್ಧತೆಯಿಲ್ಲದ ಪರಿಸ್ಥಿತಿ ಕಷ್ಟವನ್ನು ತಂದೊಡ್ಡುತ್ತದೆ.

ಮಿಥುನ

ಮಿಥುನ

ಇವರು ಯಾವಾಗಲೂ ಉಭಯತ್ವ ತೋರಿಸುತ್ತಾ ಇರುತ್ತಾರೆ. ಇದರಿಂದಾಗಿ ಅವರ ವ್ಯಕ್ತಿತ್ವದಲ್ಲಿ ಯಾವಾಗಲೂ ಅಸ್ಥಿರತೆ ಇರುವುದು. ಇವರ ಮನೋಭಾವ ಆಗಾಗ ಬದಲಾಗುತ್ತಾ ಇರುತ್ತದೆ. ಭಾವನೆ ಹಾಗೂ ಬುದ್ಧಿಶಕ್ತಿ ಮಧ್ಯೆ ಇವರಿಗೆ ಸಂಘರ್ಷವಾಗುತ್ತಿರುವುದು. ಇನ್ನು ತಪ್ಪಾದ ನೆಲೆಯನ್ನು ಆರಿಸಿಕೊಳ್ಳುವುದರಿಂದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಬೇಕಾದುದನ್ನು ಖಚಿತವಾಗಿ ಆಯ್ಕೆ ಮಾಡಿಕೊಳ್ಳದೆ, ಜೀವನದ ಬದಲಾವಣೆಯನ್ನು ಗ್ರಹಿಸುವುದರ ಮೂಲಕ ಭಯ ಪಡುತ್ತಾರೆ. ಅಷ್ಟೇ ಅಲ್ಲದೆ ಜೀವನದ ಸವಾಲುಗಳನ್ನು ಎದುರಿಸಲಾಗದೆ ಕೆಲವೊಮ್ಮೆ ನಾಶದ ಅಂಚನ್ನು ಮುಟ್ಟುತ್ತಾರೆ.

ಕರ್ಕಾಟಕ

ಕರ್ಕಾಟಕ

ರಾಶಿಗಳಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ರಾಶಿಯೆಂದರೆ ಅದು ಕರ್ಕಾಟಕ. ಇವರು ಹೊರಗಡೆ ತಾವು ತುಂಬಾ ಬಲಿಷ್ಠ ಮನೋಭಾವದವರೆಂದು ತೋರಿಸಲು ಪ್ರಯತ್ನಿಸಿದರೂ ಒಳಗಿನಿಂದ ಅವರು ತುಂಬಾ ಮೃಧುವಾಗಿರುತ್ತಾರೆ. ತಮ್ಮ ಸುತ್ತಲು ಇರುವ ಜನರು ಹಾಗೂ ಅವರು ಇರುವ ಪ್ರದೇಶ ಹೀಗೆ ಪ್ರತಿಯೊಂದರಲ್ಲೂ ಅವರ ಭಾವನೆ ಬದಲಾಗುತ್ತಾ ಇರುವುದು. ಇವರಲ್ಲಿ ನಕಾರಾತ್ಮಕ ಭಾವನೆ ಬೇಗನೆ ಮೂಡುವುದು ಮತ್ತು ಇದರಿಂದ ಖಿನ್ನತೆಗೆ ಒಳಗಾಗುವರು.

ಸಿಂಹ

ಸಿಂಹ

ಈ ರಾಶಿಯಲ್ಲಿ ಹುಟ್ಟಿದವರಲ್ಲಿ ಅಧಿಕಾರ ಸಾಧಿಸುವ ಗುಣವಿರುವುದು ಮತ್ತು ಅವರ ನಡವಳಿಕೆ ಬಲಿಷ್ಠವಾಗಿರುವುದು. ಅಧಿಕಾರ ಪಡೆಯಲು ಬಯಸುವುದು ಮತ್ತು ಯಾವಾಗಲೂ ಸುದ್ದಿಯಲ್ಲಿರಬೇಕೆಂದು ಬಯಸುವುದು ತುಂಬಾ ಸಮಸ್ಯೆಯಾಗುವುದು. ಅವರು ತುಂಬಾ ಸ್ವಾಮ್ಯಸೂಚಕವಾಗಿರುತ್ತಾರೆ. ಅವರು ತುಂಬಾ ಸೊಕ್ಕಿನ ಹಾಗೂ ಉನ್ನತ ಮನಸ್ಸಿನವರಾಗಿರುವರು. ಈ ರಾಶಿಯಲ್ಲಿ ಸೂರ್ಯ ಅಧಿಪತ್ಯ ವಹಿಸಿರುತ್ತಾನೆ. ಅಂತೆಯೇ ಶಿವನೇ ಲೋಕಾಧಿಪತಿಯಾಗಿದ್ದು ಶಿವನನ್ನು ಆರಾಧಿಸುವುದು ಸುಲಭ ಮತ್ತು ಶಿವ ಸುಲಭವಾಗಿ ಒಲಿಯುವವನಾಗಿದ್ದಾನೆ. ಆದ್ದರಿಂದ ಈ ರಾಶಿಯವರು ಪವಿತ್ರ ಮಂತ್ರವನ್ನು ಸದಾ ಪಠಿಸುತ್ತಾ ಶಿವನನ್ನು ಆರಾಧಿಸುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

 ಕನ್ಯಾ

ಕನ್ಯಾ

ಇವರು ತಮ್ಮ ತಪ್ಪುಗಳನ್ನು ಕಡೆಗಣಿಸುವುದಿಲ್ಲ ಮತ್ತು ಅವರು ತುಂಬಾ ವಿಮರ್ಶನಾತ್ಮಕವಾಗಿರುವರು. ಸಾಮಾನ್ಯವಾಗಿರುವ ಕೆಲವು ವಿಷಯಗಳ ಬಗ್ಗೆ ಅವರು ನಕಾರಾತ್ಮಕವಾಗಿರುವರು. ಅವರಲ್ಲಿ ಬಲಿಷ್ಠ ಇಷ್ಟ ಹಾಗೂ ಇಷ್ಟವಿಲ್ಲದಿರುವ ನಡವಳಿಕೆಯು ಅವರ ನಡವಳಿಕೆ ಚೆನ್ನಾಗಿಲ್ಲದಂತೆ ಮಾಡುವುದು.

ತುಲಾ

ತುಲಾ

ತುಲಾ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಯಾವಾಗಲೂ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಒಂದು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದಾಗ ಅವರು ಅದಕ್ಕೆ ಹಿಂಜರಿಯುವರು ಮತ್ತು ನಿರ್ಧಾರ ಮಾಡಲು ಅವರಿಗೆ ತುಂಬಾ ಕಷ್ಟವಾಗುವುದು. ಅವರು ತಮ್ಮ ಮನಸ್ಸನ್ನು ಪದೇ ಪದೇ ಬದಲಾಯಿಸುತ್ತಿರುವರು. ತುಲಾ ರಾಶಿಯವರಲ್ಲಿ ವಿರೋಧಾತ್ಮಕ ವ್ಯಕ್ತಿತ್ವವಿರುವುದು.

ವೃಶ್ಚಿಕ

ವೃಶ್ಚಿಕ

ಇವರು ಹಗೆಸಾಧಿಸಲು ಯಾವಾಗಲೂ ಕಾಯುತ್ತಿರುವರು ಮತ್ತು ತಮ್ಮ ದಾರಿಗೆ ಯಾರಾದರು ಅಡ್ಡ ಬಂದರೆ ತಾಳ್ಮೆ ಕಳೆದುಕೊಳ್ಳುವರು. ಇವರು ದೀರ್ಘಕಾಲದ ತನಕ ಹಗೆ ಇಟ್ಟುಕೊಂಡಿರುವರು ಮತ್ತು ಸಮಯ ಸಿಕ್ಕಾಗ ಹಗೆ ಸಾಧಿಸಲು ಪ್ರಯತ್ನಿಸುವರು. ಇಂತಹ ಸ್ವಾಮ್ಯತೆಯು ಅವರ ಸಂಬಂಧ ಕೆಡಿಸುವುದು. ಇದರಿಂದ ಅವರಿಗೆ ಹಾಗೂ ಅವರ ಸಂಗಾತಿಗೆ ತುಂಬಾ ಕಠಿಣ ಪರಿಸ್ಥಿತಿ ಉಂಟಾಗುವುದು.

ಧನು

ಧನು

ಇತರರಿಗೆ ನೋವು ಮಾಡುವ ವಿಷಯದಲ್ಲಿ ಇವರು ತುಂಬಾ ಕಠಿಣ ಹಾಗೂ ಕ್ರೂರವಾಗುವರು. ಇವರಿಗೆ ಬದ್ಧತೆ ಇರುವುದಿಲ್ಲ. ಆದರೆ ಅವರಿಗೆ ನಿಷ್ಠ ಸ್ನೇಹಿತರು ಹಾಗೂ ಪ್ರೇಮಿಗಳಿರುವರು. ಅವರ ನಡವಳಿಕೆ ಬದಲಾಗುತ್ತಿರುತ್ತದೆ ಮತ್ತು ಇದನ್ನು ಊಹಿಸುವುದು ಕಷ್ಟವಾಗುವುದು. ಚತುರತೆಯಿಂದ ಇರಲು ಅವರು ಪ್ರಯತ್ನಿಸಬೇಕು.

ಮಕರ

ಮಕರ

ಈ ರಾಶಿಯಲ್ಲಿ ಹುಟ್ಟಿದವರು ಮುಖ್ಯವಾಗಿ ತಮ್ಮ ಸುತ್ತಮುತ್ತಲು ಇರುವವರನ್ನು ಹಾಗೂ ಇತರರನ್ನು ಗೌರವಿಸಲು ಕಲಿಯಬೇಕು. ಇವರಿಗೆ ತಮ್ಮದೇ ಆದ ನಿಯಮಗಳಿರುವುದು ಮತ್ತು ಬೇರೆಯವರ ಸಲಹೆಗಳನ್ನು ಪಾಲಿಸುವುದಿಲ್ಲ. ಕೆಲವೊಂದು ಸಲ ಇವರು ತುಂಬಾ ನಿರಾಶವಾದಿಗಳಾಗಿರುವರು.

ಕುಂಭ

ಕುಂಭ

ಕುಂಭ ರಾಶಿಯು ತುಂಬಾ ದೂರ ಹಾಗೂ ಪ್ರತ್ಯೇಕವಾಗಿರುವುದು. ಅವರು ಒಂದೇ ಮನಸ್ಸನ್ನು ಹೊಂದಿರುವರು ಮತ್ತು ತಮಗೆ ಬೇಕಾದಂತೆ ಜೀವನ ಸಾಗಿಸಲು ಪ್ರಯತ್ನಿಸುತ್ತಾರೆ. ಅವರಲ್ಲಿ ಕೆಲವು ಭಾವನೆಗಳು ಅಡಗಿರುವುದು ಮತ್ತು ಹೆಚ್ಚು ಭಾವನಾತ್ಮಕವಾಗಿಯೂ ಇರುವುದಿಲ್ಲ. ಕೆಲವು ಸಲ ಇವರು ಬಂಡಾಯಗಾರರಾಗುವರು.

ಮೀನ

ಮೀನ

ಇವರಿಗೆ ನಿರ್ಧಾರ ತೆಗೆದುಕೊಳ್ಳವ ಸಾಮರ್ಥ್ಯವಿರಲ್ಲ ಮತ್ತು ಅವರಿಗೆ ಏನು ಬೇಕು ಎಂದೇ ತಿಳಿದಿರುವುದಿಲ್ಲ. ಅವರು ಯಾವಾಗಲೂ ಕಾಲ್ಪನಿಕ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಈ ರಾಶಿಯವರು ಚಟಕ್ಕೆ ಅಂಟಿಕೊಂಡಿರುವರು. ಯಾಕೆಂದರೆ ಅವರು ಸತ್ಯ ಹಾಗೂ ವಾಸ್ತವತೆ ಎದುರಿಸಲು ಬಯಸುವುದಿಲ್ಲ.

English summary

Negative Characteristics Of Each Zodiac Sign

Personality is basically who we are and what we identify with as 'self'. There are many factors that influence our characteristics. At the time of our birth, the planets, the moon and the sun are said to form a unique position, thus shaping our personality. This affects our relationships and daily life. Check these out.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more