For Quick Alerts
ALLOW NOTIFICATIONS  
For Daily Alerts

ತೋಳದ ಮರಿಯ ಆಟಿಕೆ ಶೃಂಗಾರಕ್ಕೆ ಲಕ್ಷ-ಲಕ್ಷ ಹಣ ವ್ಯಯಿಸಿದ ಮಹಿಳೆ!

By Deepu
|

ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳನ್ನು ನೀವು ನೋಡಬಹುದು. ಇದರಲ್ಲಿ ಕೆಲವು ಮನುಷ್ಯ ತೋಳವಾಗಿ ಪರಿವರ್ತಿತವಾಗುವಂತಹ ಕಥೆಯಿರುವುದು ಇದೆ. ಇದು ತುಂಬಾ ಭಯಾನಕವಾದದ್ದು. ಈ ಸಿನಿಮಾ ನೋಡಿದರೆ ನಮಗೆ ರಸ್ತೆಯಲ್ಲಿ ನಡೆದಾಡುವಾಗ ಕೂಡ ತೋಳಮನುಷ್ಯ ಬಂದಂತೆ ಕಾಣುವುದು. ಆದರೆ ಇಲ್ಲೊಂದು ದಂಪತಿಯು ತೋಳದ ಆಟಿಕೆಯನ್ನು ಪಡೆದುಕೊಂಡಿದ್ದು, ಪ್ರವಾಸಕ್ಕೂ ಇದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ಶೃಂಗಾರ ಮಾಡಲು ಸರಿಸುಮಾರು ಏಳು ಲಕ್ಷದ ತನಕ ವ್ಯಯಿಸುತ್ತಿದ್ದಾರೆ. ಮತ್ತೊಂದು ವಿಚಾರವೆಂದರೆ ಈ ಮಹಿಳೆಯ ಬಳಿ ತೋಳದ ಆಟಿಕೆ ಮಾತ್ರವಲ್ಲದೆ ಬೇರೆ ಹಲವಾರು ಆಟಿಕೆಗಳು ಇವೆ. ಈ ವೀಡಿಯೋದಲ್ಲಿ ಅದೆಲ್ಲವನ್ನೂ ನೀವು ನೀಡಿ. ತೋಳದ ಗೊಂಬೆಯನ್ನು ಮನುಷ್ಯನ ರೀತಿ ಉಪಚರಿಸುವ ಬಗ್ಗೆ ತಿಳಿಯಿರಿ.

werewolf doll

ಈ ಮಹಿಳೆ ಈಗ ಇಂಟರ್ನೆಟ್ ನಲ್ಲಿ ವೈರಲ್

ಯೆಟ್ಟೆ ಸೊಲೊಮನ್ ಎಂಬ 53ರ ಹರೆಯದ ವಿವಾಹಿತ ಮಹಿಳೆಯು ತೋಳದ ಆಟಿಕೆಯ ಆಭರಣಗಳಿಗಾಗಿ ಸುಮಾರು ಏಳುಲಕ್ಷದ ತನಕ ವ್ಯಯಿಸಿದ ಬಳಿಕ ಇಂಟರ್ನೆಟ್ ನಲ್ಲಿ ವೈರಲ್ ಆಗಿರುವರು.

ಆಟಿಕೆಯ ಇತಿಹಾಸ

ಎಲಿಯಸ್ ಸೊಲೊಮನ್ ಎನ್ನುವ ಆಟಿಕೆಯು ತನ್ನ ಐಷಾರಾಮಿ ಜೀವನ ಶೈಲಿಯಿಂದಾಗಿ ಈಗ ನೆಟಿಜನರ ಗಮನಸೆಳೆಯುತ್ತಿದೆ. ಎಲಿಯಸ್ ಗೆ ತನ್ನ ಮಾಲಕಿಯಿಂದ ಅಸಾಮಾನ್ಯ ಉಪಚಾರವು ಸಿಗುತ್ತಲಿದೆ. ಈ ಆಟಿಕೆಯು ಏಶ್ಯಾ ಎರ್ಕಿಸೆನ್ ಎನ್ನುವ ಮರಿ ತೋಳಗಳ ಆಟಿಕೆಯ ಕುಟುಂಬದಿಂದ ಬಂದಿರುವ ವಿಶ್ವಪ್ರಸಿದ್ಧ ಆಟಿಕೆಯಾಗಿದೆ.

ಈ ವಿಶೇಷ ಗೊಂಬೆ ಬಗ್ಗೆ

ತೋಳದ ಗೊಂಬೆ ಎಲಿಯಸ್ ಸೊಲೊಮನ್ ಯಾವ ರೀತಿಯ ಉಪಚಾರ ಪಡೆಯುತ್ತಿದೆ ಎಂದರೆ ಇದನ್ನು ನೋಡಿ ಮನುಷ್ಯರಿಗೂ ಹೊಟ್ಟೆಕಿಚ್ಚು ಉಂಟಾಗುವುದು. ಈ ಗೊಂಬೆಯು ಡಿಸ್ನಿಲ್ಯಾಂಡ್ ಗೆ ಅಧಿಕೃತವಾಗಿ ಪ್ರಯಾಣಿಸಿ ಅಲ್ಲಿ ಆಟವಾಡಿದೆ ಮತ್ತು ತನ್ನ ತಾಯಿ' ಜತೆಗೆ ವಿಶ್ವದ ಹಲವಾರು ದೇಶಗಳನ್ನು ಸುತ್ತಿದೆ.

ಎಲಿಯಸ್ ಜೀವನಶೈಲಿ

ಎಲಿಯಸ್ ತೋಳ ಗೊಂಬೆಯಾಗಿದ್ದರೂ ಅದಕ್ಕೆ ಟಿಫ್ನಿ ಎನ್ನುವ ಜನಪ್ರಿಯ ಗೊಂಬೆಗಳ ವಸ್ತ್ರವಿನ್ಯಾಸಕರಿಂದ ವಿಶೇಷವಾಗಿ ಬಟ್ಟೆಗಳನ್ನು ವಿನ್ಯಾಸಗೊಳಿಸಿರುವರು. ಎಲಿಯಸ್ ವೇರ್ ಪಪ್ಸ್' ಸರಣಿಯ ಏಳನೇ ಗೊಂಬೆಯಾಗಿದ್ದು, ಯೆಟ್ಟೆ ಇದನ್ನು ತನ್ನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾಳೆ. ಇದು ತನ್ನ ಸಾಕು ಪ್ರಾಣಿಯೆಂದು ಆಕೆ ಹೇಳುತ್ತಲಿದ್ದಾಳೆ. ಇದನ್ನು ಸಂತೋಷವಾಗಿಡಲು ತಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವಳು.

ಈ ಭಯಾನಕ ಗೊಂಬೆ ಯಾಕೆ ಆಯ್ಕೆ ಮಾಡಿದಳು?

ಗೊಂಬೆಗೆ ಐಷಾರಾಮಿ ಜೀವನ ಸಿಗುತ್ತಿರುವುದನ್ನು ನೋಡಿದರೆ ಯಾರಿಗಾದರೂ ಹೊಟ್ಟೆ ಉರಿಯದೆ ಇರಲಾರದು. ಆದರೆ ಯೆಟ್ಟೆ ತನ್ನ ಸ್ನೇಹಿತೆಯರೊಂದಿಗೆ ಹಾರರ್ ಸಿನಿಮಾವೊಂದರ ಆಭರಣಗಳ ಪ್ರದರ್ಶನಕ್ಕೆ ಹೋದಾಗ ಆಕೆಗೆ ಈ ತೋಳದ ಗೊಂಬೆ ಕಾಣಿಸಿಕೊಂಡಿದೆ. ಈ ವೇಳೆ ಆಕೆಗೆ ಸ್ತನದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದ ಸಮಯ. ಇದರ ಬಳಿಕ ಆಕೆ ಕಿಮೋಥೆರಪಿ ಚಿಕಿತ್ಸೆಗೆ ಗುರಿಯಾಗಿ ತನ್ನ ಕೂದಲು ಕಳೆದುಕೊಂಡಳು.

ಗೊಂಬೆಯಲ್ಲಿ ತನ್ನನ್ನು ಕಂಡಳು

ಆ ಗೊಂಬೆಯು ಈಕೆಯನ್ನು ತುಂಬಾ ಕನಿಕರದಿಂದ ನೋಡುವಂತೆ ಆಕೆಗೆ ಭಾಸವಾಯಿತು. ಭಾವನಾತ್ಮಕವಾಗಿ ಆಕೆ ಕಣ್ಣೀರು ಸುರಿಸಿ, ತನಗೆ ಆ ಗೊಂಬೆ ತಂದುಕೊಡಬೇಕೆಂದು ಸ್ನೇಹಿತೆಯರಿಗೆ ಹೇಳಿದಳು. ಯಾಕೆಂದರೆ ಇದರಲ್ಲಿ ಆಕೆ ತನ್ನನ್ನು ನೋಡುತ್ತಲಿದ್ದಳು.

ಸ್ನೇಹಿತೆಯರು ಗಮನ ಬೇರೆಡೆ ತಿರುಗಿಸಲು ಪ್ರಯತ್ನಿಸಿದರು

ಸ್ನೇಹಿತೆಯರು ಯೆಟ್ಟೆ ಮನಸ್ಸನ್ನು ಬೇರೆಡೆ ಸೆಳೆಯುವ ಸಲುವಾಗಿ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಇಲ್ಲಿ ಆಕೆ ತೋಳದ ಗೊಂಬೆ ನೋಡಿದಳು.

ಅಚ್ಚರಿಯೆಂದರೆ ಆಕೆಯ ಪರಿಸ್ಥಿತಿ ಸುಧಾರಿಸಿತು!

ಎಲಿಯಸ್ ನ್ನು ತೆಗೆದುಕೊಂಡ ಬಳಿಕ ಯೆಟ್ಟೆ ಪರಿಸ್ಥಿತಿ ಕೂಡ ಸುಧಾರಿಸಿತು. ಆಕೆ ಎಲಿಯಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದಳು.

ಆಕೆಗೆ ಗೊಂಬೆಗಳೆಂದರೆ ಪ್ರೀತಿ

ಯವೆಟ್ಟೆ ತನ್ನ ಪ್ರೀತಿ ಹಾಗೂ ಅನ್ಯೋನ್ಯತೆಯನ್ನು ಒಂದು ಗೊಂಬೆಗೆ ತೋರ್ಪಡಿಸುವುದು ತುಂಬಾ ವಿಚಿತ್ರವೆನಿಸುವುದು. ಆಕೆ ಮನುಷ್ಯರಂತೆ ಇದನ್ನು ನೋಡಿಕೊಳ್ಳುವುದು ಕೂಡ ವಿಚಿತ್ರವಾಗಿದೆ.

ನಿಮಗೆ ಇಂತಹ ಗೊಂಬೆ ಬೇಕೇ?

ನೀವು ಕಮೆಂಟ್ ಬಾಕ್ಸ್ ನಲ್ಲಿ ಈ ಪ್ರಶ್ನೆಗೆ ಉತ್ತರಿಸಬೇಕು. ಇದೇ ವಿಭಾಗದಲ್ಲಿ ಮತ್ತಷ್ಟು ಇಂತಹ ಕಥೆಗಳ ಬಗ್ಗೆ ಓದುತ್ತಲಿರಿ.

Read more about: life
English summary

Mum Spends $10K On A Doll That Looks Like A Baby Werewolf

Werewolves themselves look so creepy, imagine coming across a werewolf doll which is given the treatment of a HUMAN! Sounds crazy, right? But there is a couple out there who love their werewolf doll so much that they take it to even their holiday trips! Imagine the woman spending over $10k On Tiffany Jewellery for her baby werewolf doll and the most exciting fact is that the werewolf doll alone is not the only weird looking doll the woman possesses, as there are many such others in her closet! Check them all in this video! Find out more details about the bizarre werewolf who is treated as a human here!
Story first published: Tuesday, June 26, 2018, 17:37 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more