ಪ್ರತಿ ರಾಶಿಚಕ್ರದ ಗುಣ, ಭವಿಷ್ಯ, ವರ್ತನೆಗಳ ನಿಖರವಾದ ರಾಶಿ ಭವಿಷ್ಯಗಳು

By Deepu
Subscribe to Boldsky

ರಾಶಿಚಕ್ರದ ಆಧಾರದ ಮೇಲೆ, ಕುಂಡಲಿಯ ಸಹಾಯದಿಂದ ಹಾಗೂ ಗ್ರಹಗತಿಗಳ ಬದಲಾವಣೆಯ ಆಧಾರದ ಮೇಲೆ ನಾವು ಭವಿಷ್ಯ, ವರ್ತನೆ ಮತ್ತು ಸ್ವಭಾವವನ್ನು ತಿಳಿದುಕೊಳ್ಳುತ್ತೇವೆ. ಅದರಂತೆಯೇ ಮುಂದಾಗುವ ಸಮಸ್ಯೆಗಳ ಬಗ್ಗೆ ಎಚ್ಚೆತ್ತು ಕೊಳ್ಳುವುದು ಹಾಗೂ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವ ಕೆಲಸ ಮಾಡುವುದು ಸಹಜ. ಅದರಂತೆಯೇ ಭವಿಷ್ಯದಲ್ಲಿ ಕೆಲವು ಸಮಸ್ಯೆಗಳಿಂದ ಪಾರಾಗುತ್ತೇವೆ ಕೂಡ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಸಂಚಾರದ ಪ್ರಭಾವವನ್ನು ಹೊರತು ಪಡಿಸಿದರೆ ಕೆಲವು ಸೂಕ್ಷ್ಮವಾದ ಗುಣಗಳು ರಾಶಿ ಚಕ್ರಕ್ಕೆ ಅನುಗುಣವಾಗಿ ಇರುತ್ತದೆ. ಜೊತೆಗೆ ಕೆಲವು ಭವಿಷ್ಯ ವಾಣಿಯೂ ನಿಖರವಾಗಿ ಇರುತ್ತವೆ. ಅವು ಯಾವುದೇ ಬದಲಾವಣೆಯಿಂದ ಉಂಟಾಗುವುದಲ್ಲ. ಅವು ನಮ್ಮ ರಾಶಿಗೆ ಅನುಗುಣವಾಗಿ ಇರುತ್ತದೆ ಎನ್ನಲಾಗುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಗುಣ, ಭವಿಷ್ಯ ಹಾಗೂ ವರ್ತನೆಗಳು ನಿಖರವಾಗಿರುತ್ತವೆ? ಎನ್ನುವುದನ್ನು ತಿಳಿದುಕೊಳ್ಳುವ ಕಾತುರವಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇವರು ತಮ್ಮ ಪ್ರೀತಿ ಪಾತ್ರರ ಮೇಲೆ ಯಾವುದೇ ಕಾರಣಕ್ಕೂ ಜಗಳ ಹಾಗೂ ಹೋರಾಟವನ್ನು ಮಾಡಲು ಮುಂದಾಗುವುದಿಲ್ಲ. ಜಗಳವನ್ನು ಬಿಡಿಸಲು ಮುಂದಾಗುತ್ತಾರೆ. ಇವರು ವಾಸ್ತವವಾಗಿ ಸಂಬಂಧವನ್ನು ಸರಿಪಡಿಸಲು ನಟನೆಯನ್ನು ಬಾಡಬಲ್ಲರು. ವ್ಯಕ್ತಿಯಿಂದ ಜಗಳವಾಡಲು ಇವರು ಇಷ್ಟಪಡರು. ಇನ್ನು ಮೇಷ ರಾಶಿಯವರ ಚೆಹ್ನೆ ಬೆಂಕಿಯ ಚಿಹ್ನೆಯಾಗಿರುತ್ತದೆ. ಇವರು ಸದಾ ಬದಲಾವಣೆಯನ್ನು ಬಯಸುತ್ತಿರುತ್ತಾರೆ. ಇವರು ಯಾವುದೇ ಕಡಿವಾಣ ಅಥವಾ ನಿರ್ಬಂಧವಿಲ್ಲದಂತಹ ಶಕ್ತಿ ಮತ್ತು ಉತ್ಸಾಹವನ್ನು ತೋರುತ್ತಾರೆ. ಇವರು ಯಾವುದಾದರೂ ಕೆಲಸ ನಿರ್ವಹಿಸುವ ಮುಂಚೆ ಅದರ ಬಗ್ಗೆ ಪೂರ್ವಾಲೋಚನೆ ಅಥವಾ ಮುನ್ನೆಚ್ಚರಿಕೆಯ ಕ್ರಮವನ್ನು ಅರಿತಿರುವುದಿಲ್ಲ. ಏಕೆಂದರೆ ಇವರಿಗೆ ಸ್ವಲ್ಪ ಆತುರ ಸ್ವಭಾವ ಎಂದು ಹೇಳಬಹುದು. ಆದರೂ ಸ್ವಲ್ಪ ಜಾಗರೂಕರಾಗಿ ವರ್ತಿಸುತ್ತಾರೆ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇವರು ತಮ್ಮ ಸುತ್ತ ವ್ಯಕ್ತಿಗಳಿಲ್ಲವೆಂದರೆ ಭಯಪಡುತ್ತಾರೆ. ಅಂತೆಯೇ ಸುತ್ತಲಿನ ಜನರು ಸುಲಭವಾಗಿ ತಮ್ಮ ಅಸ್ತಿತ್ವವನ್ನು ಮರೆತುಬಿಡುತ್ತಾರೆ ಎಂದು ಭಾವಿಸುತ್ತಾರೆ. ಯಾರಾದರೂ ತಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಇಲ್ಲವೇ ಎನ್ನುವ ಅಚ್ಚರಿಯಲ್ಲಿ ಇರುತ್ತಾರೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ಎಲ್ಲರೊಂದಿಗೂ ಸ್ನೇಹಿತರಾಗಿರಲು ಬಯಸುತ್ತಾರೆ. ಜೊತೆಗೆ ತಮ್ಮ ವ್ಯಕ್ತಿತ್ವ ಅಥವಾ ಸ್ವಭಾವದಲ್ಲಿ ಬದಲಾವಣೆಯನ್ನು ತಂದುಕೊಳ್ಳಲು ಅನೇಕ ಪ್ರಯತ್ನವನ್ನು ಮಾಡುತ್ತಾರೆ. ಇವರು ಒಬ್ಬಂಟಿಯಾಗಿರಲು ಹೆದರುತ್ತಾರೆ. ಹಾಗಾಗಿ ಬಹು ಬೇಗ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಇನ್ನು ಇವರು ಬಹಳ ಮೃದು ಸ್ವಭಾವದವರು ಎನ್ನಬಹುದು. ಇವರು ಯಾವುದೇ ಸನ್ನಿವೇಶದಲ್ಲಾದರೂ ಸರಿ ತಪ್ಪುಗಳ ಎರಡು ನೋಟವನ್ನು ಪರಿಶೀಲಿಸುತ್ತಾರೆ. ಇವರು ಸಂವಹನಗಳ ಮೂಲಕ ತಮ್ಮ ಮಾನಸಿಕ ಪ್ರಕೃತಿಯನ್ನು ವ್ಯಕ್ತಪಡಿಸುತ್ತಾರೆ. ಉತ್ತಮವಾಗಿ ಮಾತನಾಡಬಲ್ಲರು. ಇವರ ಮಾತುಗಳನ್ನು ಕೇಳುವಂತಿರುತ್ತದೆ.

ಕರ್ಕ 22 ಜೂನ್ -22 ಜುಲೈ

ಕರ್ಕ 22 ಜೂನ್ -22 ಜುಲೈ

ಈ ರಾಶಿಯವರು ಸರ್ವಕಾಲಿಕ ಸಂತೋಷವನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಇತರರು ನಿರಾಶೆಯಿಂದ ಕೂಡಿದ್ದರೆ ಅಥವಾ ದುಃಖದಲ್ಲಿದ್ದರೆ ಇವರಿಗೂ ಅದು ಬೇಸರವನ್ನುಂಟುಮಾಡುತ್ತದೆ. ಇವರು ಸುಳ್ಳು ನಗುಮುಖದಿಂದಲಾದರೂ ಇತರರನ್ನು ಸಂತೋಷಗೊಳಿಸುತ್ತಾರೆ. ಇನ್ನು ಈ ಚಿಹ್ನೆಯ ಜನರು ಪ್ರಚೋದಕ ಮತ್ತು ಪ್ರಕೃತಿಯಲ್ಲಿ ಕ್ರಿಯಾತ್ಮಕವಾಗಿರುವ ಆರಂಭಿಕರು ಮತ್ತು ನಾಯಕರು. ಹೃದಯವನ್ನು ಬಳಸಿಕೊಂಡು ಅವರು ತಮ್ಮನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸುತ್ತಾರೆ. ಈ ರಾಶಿಚಕ್ರವು ಎಲ್ಲಾ ರಾಶಿಚಕ್ರ ಚಿಹ್ನೆಗಳ ತಾಯಿ ಫಿಗರ್ ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಇದು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮೊದಲ ರಾಶಿಚಕ್ರವಾಗಿದೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇತರರೊಂದಿಗೆ ಏನಾದರು ತಪ್ಪು ಸಂಭವಿಸಿದಾಗ ಅಥವಾ ದುಃಖಕ್ಕೆ ಒಳಗಾದರೆ ಅದಕ್ಕೆ ತಾವೇ ಹೊಣೆ ಎಂದು ಭಾವಿಸುತ್ತಾರೆ. ಮೇಲ್ನೋಟಕ್ಕೆ ಇವರು ಅತ್ಯಂತ ನೇರ ಸ್ವಭಾವ ಮತ್ತು ಗಟ್ಟಿ ಮನಸ್ಸಿನವರು ಎನಿಸಬಹುದು. ಆದರೆ ಆಂತರಿಕವಾಗಿ ಇವರು ಅತ್ಯಂತ ಸೂಕ್ಷ್ಮ ಪ್ರವೃತ್ತಿಯವಾರಿಗರುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ತಮ್ಮ ಜೀವನದಲ್ಲಿ ಕೆಲವು ಪ್ರಮುಖ ಹೊಣೆಗಾರಿಕೆಯನ್ನು ನಿರ್ವಹಿಸಲು ಅಸಮರ್ಥರಾಗಿರುತ್ತಾರೆ. ಮೇಲ್ನೋಟಕ್ಕೆ ಎಲ್ಲವೂ ಇವರ ನಿಯಂತ್ರಣದಲ್ಲಿದೆ ಎಂದು ತೋರುತ್ತದೆಯಾದರೂ, ವಾಸ್ತವದಲ್ಲಿ ಇವರು ಬಹಳ ತೊಂದರೆ ಹಾಗೂ ಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಇವರಿಗೆ ದೀರ್ಘಕಾಲದ ವರೆಗೆ ಧನಾತ್ಮಕವಾಗಿ ಇರಲು ಕಷ್ಟವಾಗುವುದು. ಇನ್ನು ಇವರು ಮಾರ್ಪಡಿಸಬಹುದಾದ ಭೂಮಿಯ ಸಂಕೇತ. ಈ ಚಿಹ್ನೆಯ ಜನರು ಎಲ್ಲರಲ್ಲೂ ಹಠಮಾರಿ ಸ್ವಭಾವವನ್ನು ತೋರುವುದಿಲ್ಲ. ಆದರೆ ಅವರು ಸಾಕಷ್ಟು ಮನೋಭಾವ ಮತ್ತು ಹೊಂದಿಕೊಳ್ಳಬಲ್ಲ ವ್ಯಕ್ತಿಗಳಾಗಿದ್ದಾರೆ. ಅವರು ಮಾದಕ ಮತ್ತು ರೋಮ್ಯಾಂಟಿಕ್, ಆದರೆ ಅವರು ನಗ್ನ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ಎಂದಿಗೂ ಒಬ್ಬಂಟಿಯಾಗಿ ಇರುವುದಿಲ್ಲ. ಇವರ ಸುತ್ತಲೂ ಸದಾ ವ್ಯಕ್ತಿಗಳು ಇರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಸಮಯವನ್ನು ಇತರರ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಇವರು ಇತರರ ಮುಂದೆ ತಮ್ಮ ಸಮಸ್ಯೆಯನ್ನು ವ್ಯಕ್ತ ಪಡಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಕೆಲವು ನಟನೆಯ ಮೂಲಕ ಸಮಸ್ಯೆಯನ್ನು ಮರೆಮಾಚುತ್ತಾರೆ. ಆದರೆ ಆಂತರಿಕವಾಗಿ ಹೆಚ್ಚು ನೋವನ್ನು ಹೊಂದಿರುತ್ತಾರೆ. ಈ ರಾಶಿಯವರು ಪ್ರಮುಖವಾದ ಗಾಳಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಇದರ ಅರ್ಥ ಶಾಂತ ಮತ್ತು ರಾಜ ತಾಂತ್ರಿಕ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ಚಿಹ್ನೆಯ ಜನರು ಯಾವುದೇ ಸಂದರ್ಭಗಳಲ್ಲಿ ಉಪಕ್ರಮವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಅವರು ತಮ್ಮ ಬೌದ್ಧಿಕ ಶಕ್ತಿಯನ್ನು ಹೊರಹೊಮ್ಮುವ ಮೂಲಕ ಮತ್ತು ಸ್ನೇಹಿತರೊಂದಿಗೆ ತೊಡಗಿಸಿಕೊಳ್ಳುತ್ತಾರೆ. ಮತ್ತೊಂದೆಡೆ, ಅವರು ಸಾಕಷ್ಟು ದುರ್ಬಲ ಮತ್ತು ಅಗತ್ಯವಿರುವವರು ಆಗಿರಬಹುದು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ಜನರೊಂದಿಗೆ ಬೆರೆಯಲು ಹೆದರುತ್ತಾರೆ. ಇವರು ಇತರರ ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಇವರು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಜೊತೆಗೆ ಇತರರನ್ನು ನಂಬುತ್ತಾರೆ. ಒಂದು ದಿನ ಇತರರು ಇವರನ್ನು ದೂರ ತಳ್ಳಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಇಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎನ್ನುವ ಚಿಂತನೆಯಲ್ಲಿ ಗೊಂದಲಕ್ಕೆ ಒಳಗಾಗಿ ಅಸಹಾಯಕರಾಗಿರುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇವರು ಯಾರನ್ನಾದರೂ ಇಷ್ಟ ಪಟ್ಟರೆ ಅವರನ್ನು ಮಾತ್ರವೇ ಇಷ್ಟಪಡುತ್ತಾರೆ. ಅವರು ಹಾಗೊಮ್ಮೆ ಇವರೊಂದಿಗೆ ಅವರು ಅಷ್ಟು ಸಮಾಧಾನ ಹಾಗೂ ಹೊಂದಾಣಿಕೆಯನ್ನು ತೋರದೆ ಇದ್ದರೆ ಬಹುಬೇಗ ಹತಾಷೆಗೆ ಒಳಗಾಗುತ್ತಾರೆ. ಇನ್ನು ಈ ರಾಶಿಯವರು ಅತ್ಯಂತ ಹೊಂದಾಣಿಕೆಯ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಯಾವುದೇ ವಿಚಾರವನ್ನು ಪ್ರಾರಂಭಿಸುವುದು ಅಥವಾ ಅದನ್ನು ಕಾಪಾಡಿಕೊಳ್ಳಬೇಕು ಎನ್ನುವ ಕಾಳಜಿಯ ಮನೋಭಾವವನ್ನು ತೋರುವುದಿಲ್ಲ. ಇವರು ಆಶಾವಾದ ಮತ್ತು ಅತ್ಯಂತ ಉತ್ಸಾಹಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ತಮ್ಮನ್ನು ತಾವು ಕೆಲವು ವಿಚಾರಗಳಲ್ಲಿ ವಿಲೀನ ಗೊಳಿಸುವುದರ ಮೂಲಕ ಉನ್ನತ ಸ್ಥಾನಕ್ಕೆ ಏರಲು ಪ್ರಯತ್ನಿಸುತ್ತಾರೆ. ಹಾಗಾಗಿ ಇವರು ಇತರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವುದಿಲ್ಲ. ಇವರು ಒಬ್ಬಂಟಿಯಾಗಿರುವ ಸಂದರ್ಭಗಳಿಗೆ ಅಧಿಕವಾಗಿ ಭಯಪಡುತ್ತಾರೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇವರು ವಾಸ್ತವಿಕವಾಗಿ ಏನನ್ನು ಪಡೆದಿರುತ್ತಾರೋ ಅದನ್ನೇ ಭಾವನಾತ್ಮಕವಾಗಿ ಪಡೆದುಕೊಳ್ಳುತ್ತಾರೆ. ಇವರು ಸಂಬಂಧದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಆರಂಭದ ಸನ್ನಿವೇಶವನ್ನು ಅರ್ಥೈಸಿಕೊಳ್ಳುವುದಿಲ್ಲ. ಹಾಗಾಗಿ ತಮ್ಮದೇ ಆದ ರೀತಿಯಲ್ಲಿ ಅಸಮಧಾನಕ್ಕೆ ಒಳಗಾಗುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇವರು ತಮ್ಮ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ತಮ್ಮನ್ನು ತಾವು ಉತ್ತಮರೆಂದು ಭಾವಿಸುತ್ತಾರೆ. ಕೆಲವೊಮ್ಮೆ ಸಾಮಾನ್ಯವಾದ ಸಂಗತಿಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸಹಾಯಕ್ಕಾಗಿ ಇತರರನ್ನು ಅವಲಂಭಿಸುತ್ತಾರೆ. ಅಲ್ಲದೆ ಎಲ್ಲವೂ ಅವರ ನಿಯಂತ್ರಣದಲ್ಲಿಯೇ ಇದೆ ಎಂದು ಭಾವಿಸುತ್ತಾರೆ. ಇನ್ನು ಈ ರಾಶಿಚಕ್ರದ ಚಿಹ್ನೆಯು ರೂಪಾಂತರಿತ ನೀರಿನ ಚಿಹ್ನೆ. ಅಂದರೆ ವ್ಯಕ್ತಿ ಸೂಕ್ಷ್ಮ ಮತ್ತು ಭಾವನಾತ್ಮಕ ಎಂದು ಅರ್ಥ. ಇವರು ಒಂದು ಸಂಕೀರ್ಣ ಮತ್ತು ಅತ್ಯಂತ ತಪ್ಪು ರಾಶಿಚಕ್ರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಇದು ನಿರಂತರವಾಗಿ ಹರಿಯುವ, ನಿರಂತರವಾಗಿ ಬದಲಾಗುವ ದ್ರವ ಪ್ರಕೃತಿಯ ಕಾರಣ. ಈ ಚಿಹ್ನೆಯ ಜನರು ತುಂಬಾ ಸರಳ . ತಮ್ಮ ಅಚ್ಚುಮೆಚ್ಚಿನ ವ್ಯಕ್ತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಇರಲು ಬಯಸುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    Most Annoying Personality Traits According To Zodiac

    One of the oldest fields of study, astrology has been in existence for thousands of years now. In fact, it is interesting to note that the beliefs and practices which have been there for hundreds of years seem to hold value even today. As this is an advancing branch of study, things that did not hold much value back then are slowly and steadily coming within the realms of astrology.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more