For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳ ರಾಶಿ ಭವಿಷ್ಯ: ನಿಮಗೇನು ಒಳಿತು, ಏನು ಕೆಡುಕು...

  By Hemanth
  |

  ವರ್ಷದ ಆರಂಭದಲ್ಲಿ ವರ್ಷ ಭವಿಷ್ಯ ನೋಡಿಕೊಂಡವರಿಗೆ ಇದರಲ್ಲಿ ಕೆಲವು ಅಂಶಗಳು ನೆನಪಿರಬಹುದು. ಇನ್ನು ಕೆಲವು ಮರೆತು ಹೋಗಿರಬಹುದು. ಈಗಾಗಲೇ ಅರ್ಧ ವರ್ಷ ಕಳೆದುಹೋಗಿದೆ. ಇನ್ನು ಉಳಿದಿರುವುದು ಕೆಲವೇ ತಿಂಗಳುಗಳು. ಕಳೆದು ಹೋಗಿರುವ ತಿಂಗಳುಗಳ ಬಗ್ಗೆ ಹೆಚ್ಚು ಚಿಂತಿಸಿ ಯಾವುದೇ ಪ್ರಯೋಜನವಿಲ್ಲ. ಗತಿಸಿರುವ ಕಾಲವನ್ನು ಮರಳಿ ತರಲು ಆಗಲ್ಲ. ಇನ್ನೇನಿದ್ದರೂ ಮುಂದಿನ ಕೆಲವು ತಿಂಗಳುಗಳ ಬಗ್ಗೆ ನಾವು ಗಮನಹರಿಸಬೇಕಾಗಿದೆ. ಕಳೆದು ಹೋಗಿರುವ ತಿಂಗಳಲ್ಲಿ ನಿಮಗೆ ಸಿಕ್ಕಿರುವಂತಹ ಅವಕಾಶಗಳನ್ನು ಸರಿಯಾಗಿ ಬಳಸದೇ ಇರುವ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ.

  ಭವಿಷ್ಯದಲ್ಲಿರುವಂತಹ ಮುಂಬರುವ ತಿಂಗಳುಗಳ ಕಡೆ ಗಮನಹರಿಸಿ. ನಿರಾಶವಾದಿಗಳು ಲೋಟವು ಅರ್ಧ ಖಾಲಿಯಿದ್ದರೆ, ಅದೇ ಆಶಾವಾದಿಗಳಿಗೆ ಅರ್ಧ ತುಂಬಿರುವುದು. ಮುಂಬರುವ ದಿನಗಳಲ್ಲಿ ನಿಮ್ಮ ಪರಿಸ್ಥಿತಿ, ಹಣದ ಸ್ಥಿತಿ, ಆರೋಗ್ಯ ಹೇಗಿರಲಿದೆ ಎಂದು ತಿಳಿದರೆ ಅದಕ್ಕೆ ಹೊಂದಿಕೊಂಡು ನೀವು ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಈ ಲೇಖನದಲ್ಲಿ ನಿಮಗೆ ಜೂನ್ 2018ರ ತಿಂಗಳ ಭವಿಷ್ಯದ ಬಗ್ಗೆ ಹೇಳಲಿದ್ದೇವೆ. ಇದನ್ನು ಓದುತ್ತಾ ಸಾಗಿ....

  ವೃಷಭ: ಎಪ್ರಿಲ್ 21- ಮೇ 21

  ವೃಷಭ: ಎಪ್ರಿಲ್ 21- ಮೇ 21

  ಹೊಸ ಹೊಸ ಆಲೋಚನೆಗಳು ಈಗ ನಿಮ್ಮ ತಲೆಯಲ್ಲಿ ಬರಬಹುದು. ಆದರೆ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗದೆ ಇದ್ದರೆ ನೀವು ಅದರ ಬಗ್ಗೆ ಚಿಂತಿಸಬೇಡಿ. ನಿಮ್ಮ ಸಂವಹನ ಕೌಶಲ್ಯವು ಉನ್ನತ ಮಟ್ಟದಲ್ಲಿರುವುದು ಮತ್ತು ಇದರಿಂದ ಸಾಮಾಜಿಕ ಚಟುವಟಿಕೆಗಳು ತುಂಬಾ ಸುಲಭವಾಗಿರಲಿದೆ. ಸರಿಯಾದ ಸಂಪರ್ಕವನ್ನೇ ಸಾಧಿಸಿ. ನಿಮ್ಮ ಆಲೋಚನೆಗಳ ಬಗ್ಗೆ ಯಾವುದೇ ಗೊಂದಲವಿದ್ದರೆ ಆಗ ಸ್ವಲ್ಪ ಧ್ಯಾನ ಮಾಡಿಕೊಳ್ಳಿ. ಯಾವುದೇ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಬೇರೆಯವರ ಬಗ್ಗೆ ಕೂಡ ಗಮನಹರಿಸಿ. ನಿಮ್ಮ ಸಂಗಾತಿ ಜತೆಗೆ ಒಳ್ಳೆಯ ಸಮಯ ಕಳೆಯಲಿದ್ದೀರಿ. ಸಂಗಾತಿ ಜತೆಗೆ ಬೇರೆ ಕಡೆ ಪ್ರವಾಸಕ್ಕೆ ಹೋಗಿ. ಆದರೆ ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಹಾನಿ ಮಾಡಬೇಡಿ.

  ವೃಷಭ: ಎಪ್ರಿಲ್ 21- ಮೇ 21

  ವೃಷಭ: ಎಪ್ರಿಲ್ 21- ಮೇ 21

  ಈ ತಿಂಗಳಲ್ಲಿ ಕೆಲಸವು ನಿಮ್ಮ ಮೊದಲ ಆದ್ಯತೆಯಾಗಿರಲಿದೆ. ಗುರಿಗಳ ಕಡೆ ಸಂಪೂರ್ಣವಾಗಿ ಗಮನಹರಿಸಿ ಮತ್ತು ಅದರತ್ತ ಕೆಲಸ ಮಾಡಿದರೆ ಯಶಸ್ಸು ನಿಮಗೆ ಸಿಗುವುದು. ಎಲ್ಲವೂ ನೀವು ಅಂದುಕೊಂಡಂತೆ ನಡೆಯಲ್ಲ, ಇದರಿಂದ ಪ್ಲ್ಯಾನ್ ಬಿ ಯನ್ನು ತಯಾರಾಗಿಟ್ಟುಕೊಳ್ಳಿ. ಸ್ವಲ್ಪ ಸಮಯ ಕಾಲ ನೀವು ಜಂಕ್ ಫುಡ್ ನಿಂದ ದೂರಉಳಿದು, ಆರೋಗ್ಯಕಾರಿ ಆಹಾರ ಸೇವನೆ ಮಾಡಿ. ಹಿರಿಯ ಸಹೋದ್ಯೋಗಿಗಳ ಗಮನ ಸೆಳೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದನ್ನು ನೀವು ಬಳಸಿಕೊಂಡು ಭಡ್ತಿಗೆ ಪ್ರಯತ್ನಿಸಬಹುದು. ಹೊಸ ಹೂಡಿಕೆ ಮಾಡುವುದು ತುಂಬಾ ಲಾಭಕರವಾಗಲಿದೆ. ಸಂಬಂಧದ ವಿಚಾರಕ್ಕೆ ಬಂದರೆ ಸ್ವಲ್ಪ ಹೊಂದಾಣಿಕೆ ಮತ್ತು ಸಂಧಾನ

  ಮಾಡಿಕೊಳ್ಳಬೇಕು.

  ಮಿಥುನ: ಮೇ 22- ಜೂನ್ 21

  ಮಿಥುನ: ಮೇ 22- ಜೂನ್ 21

  ನಿಮ್ಮ ಸುತ್ತಲಿನ ಪರಿಸ್ಥಿತಿಯನ್ನು ನಿಮ್ಮತ್ತ ತಿರುಗಿಸಲು ಯಶಸ್ವಿಯಾಗುವಿರಿ. ಕೆಲಸದ ಒತ್ತಡವು ನಿಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಬೀರದಂತೆ ನೋಡಿಕೊಳ್ಳಿ. ಸಾಮಾಜಿಕವಾಗಿ ತೊಡಗಿಕೊಳ್ಳುವುದರಿಂದ ಹೊಸ ಸಂಪರ್ಕವು ನಿಮಗೆ ಆಗಲಿದೆ. ಹೊಸ ಮೂಲಗಳಿಂದ ಆದಾಯವು ಬರುವುದು ನಿಮಗೆ ಸಂತೋಷ ನೀಡಲಿದೆ. ಪ್ರವಾಸದಿಂದ ನಿಮಗೆ ಬಯಸಿದ ಮನಸ್ಸಿನ ಶಾಂತಿ ಸಿಗಲಿದೆ. ಈ ತಿಂಗಳಲ್ಲಿ ನಿಮ್ಮ ವೃತ್ತಿ ಜೀವನದ ದಾರಿಯನ್ನು ಬದಲಾವಣೆಯಾಗುವ ನಿರೀಕ್ಷೆಯಿದೆ. ನಿರ್ಲಕ್ಷದಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದ ಎಚ್ಚರದಿಂದ ಇರುವುದು ಅತೀ ಅಗತ್ಯ. ಸಮಸ್ಯೆ ಮತ್ತು ಚರ್ಚೆಯನ್ನು ಪ್ರೌಢ ರೀತಿಯಲ್ಲಿ ನಿಭಾಯಿಸಿದರೆ ಎಲ್ಲವೂ

  ನಿವಾರಣೆಯಾಗುವುದು.

  ಕರ್ಕಾಟಕ: ಜೂನ್ 22-ಜುಲೈ 22

  ಕರ್ಕಾಟಕ: ಜೂನ್ 22-ಜುಲೈ 22

  ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಹೆಚ್ಚಿನ ಶ್ರಮ ವಹಿಸಬೇಕಿಲ್ಲ. ಯಾಕೆಂದರೆ ಗ್ರಹಗಳು ನಿಮ್ಮ ಪರವಾಗಿದೆ ಮತ್ತು ಕೆಲಸಗಳನ್ನು ಸುಲಭವಾಗಿ ಮಾಡಲು ನೆರವಾಗಲಿದೆ. ಮನೆ ಹಾಗೂ ವೃತ್ತಿಗೆ ಸಮಾನವಾದ ಪ್ರಾಮುಖ್ಯತೆ ನೀಡುವುದು ಎಲ್ಲಾ ವಿಚಾರಗಳನ್ನು ಸರಳವಾಗಿಸಲಿದೆ. ಉದ್ಯೋಗದ ಕಡೆ ನಿಮ್ಮನ್ನು ಕಡೆಗಣಿಸಲ್ಪಟ್ಟಂತೆ ಆಗಬಹುದು. ಆದರೆ ಭರವಸೆ ಕಳಕೊಳ್ಳಬೇಡಿ ಮತ್ತು ನಿಮ್ಮ ಶ್ರೇಷ್ಠ ಪ್ರದರ್ಶನ ನೀಡಿ. ನಿಮಗೆ ಅದರ ಪ್ರತಿಫಲ ಸಿಗುವುದು. ಆದರೆ ತಾಳ್ಮೆಯಿಂದ

  ಇರಬೇಕು. ನೀವು ಹಿಂದೆ ಮಾಡಿರುವಂತಹ ಕೆಲವೊಂದು ನಿರ್ಧಾರಗಳಿಂದ ನಿಮಗೆ ನೆರವಾಗುವುದು. ಯಾಕೆಂದರೆ ನಿಮ್ಮ ಹಿಂದಿನ ಹೂಡಿಕೆಯಿಂದ ಉತ್ತಮ ಆದಾಯ ಬರುವುದು. ಯಾವಾಗಲೂ ಹೊರಗಡೆ ತಿನ್ನುವುದರಿಂದ ಅಜೀರ್ಣ ಸಮಸ್ಯೆಯು ನಿಮಗೆ ಯಾವಾಗಲೂ ಕಾಡಬಹುದು. ನಿಮ್ಮ ಕುಟುಂಬದೊಂದಿಗೆ ಆದಷ್ಟು ಸಮಯ ಕಳೆಯಿರಿ.

  ಸಿಂಹ: ಜುಲೈ 23- ಆ.21

  ಸಿಂಹ: ಜುಲೈ 23- ಆ.21

  ನಿಮ್ಮ ಕೆಲಸವು ನಿಮಗೆ ಸಂಪೂರ್ಣ ತೃಪ್ತಿ ನೀಡಲಿದೆ. ಯಾಕೆಂದರೆ ನೀವು ಏನು ಮಾಡುತ್ತೀರೋ ಅದನ್ನು ಪರಿಗಣಿಸಲ್ಪಟ್ಟು, ಶ್ಲಾಘಿಸಲಾಗುವುದು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಇದರಿಂದಾಗಿಯೇ ನೀವು ಜನರಿಂದ ದೂರವಾಗಬಹುದು. ಉದ್ಯೋಗದ ಕಡೆ ನೀವು ರಾಜಕೀಯದ ಕೇಂದ್ರವಾಗಬಹುದು. ನಿಮ್ಮ ಕ್ರಿಯಾತ್ಮಕತೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ. ಇದರಿಂದ ವಿಷಯಗಳು ತುಂಬಾ ಆಸಕ್ತಿದಾಯಕವಾಗುವುದು. ನೀವು ಸರಿಯಾಗಿ ಹೂಡಿಕೆ ಮಾಡಲು ಕಲಿಯಲಿದ್ದೀರಿ. ಆದರೆ ಖರ್ಚುವೆಚ್ಚದ ಬಗ್ಗೆ ನೀವು ನಿಯಂತ್ರಣವನ್ನಿಟ್ಟುಕೊಳ್ಳಬೇಕು. ಈ ತಿಂಗಳಲ್ಲಿ ಮಾನಸಿಕ ಚಿಂತೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಹುದು. ಇದರಿಂದ ಕೆಲವು ಸರಳ

  ವ್ಯಾಯಾಮಗಳನ್ನು ಮಾಡಿ. ಸಂಬಂಧದಲ್ಲಿ ನಿಮ್ಮ ನಂಬಿಕೆಯು ತುಂಬಾ ಮುಖ್ಯವಾಗಿರುವುದು.

  ಕನ್ಯಾ: ಆ.23-ಸೆ.23

  ಕನ್ಯಾ: ಆ.23-ಸೆ.23

  ಜೀವನದ ಆಯ್ಕೆ ಬಗ್ಗೆ ನಿಮಗೆ ಇಕ್ಕಟ್ಟಿರಬಹುದು. ಧಾರ್ಮಿಕ ಒಲವಿನಿಂದಾಗಿ ಇದಕ್ಕೆ ನಿಮಗೆ ಉತ್ತರ ಸಿಗಬಹುದು. ನಿಮ್ಮ ಬಗ್ಗೆ ಸತ್ಯದಿಂದ ಇರಿ ಮತ್ತು ನೀವು ಯಾವತ್ತೂ ಸೋಲಲ್ಲ. ಉದ್ಯೋಗದ ಕಡೆ ದೊಡ್ಡ ಮಟ್ಟ ಪ್ರಗತಿ ಕಂಡುಬರದಲಿದೆ. ಆಸ್ತಿಯಿಂದಾಗಿ ನಿಮಗೆ ಲಾಭ ಬರಲಿದೆ. ಪ್ರೀತಿಯ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಮದುವೆಯಾಗುವಂತಹ ಸಂಭವವು ಹೆಚ್ಚಾಗಿದೆ. ಒತ್ತಡ ಮತ್ತು ಆತಂಕದಿಂದ ಜಂಕ್ ಫುಡ್ ತಿಂದು ಆರೋಗ್ಯ ಸಮಸ್ಯೆ ಕಾಡಬಹುದು.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ಮನಸ್ಸು ಮತ್ತು ಬುದ್ಧಿಯು ಬೇರೆ ಬೇರೆ ದಾರಿಯಲ್ಲಿ ಹೋಗುವ ಕಾರಣದಿಂದಾಗಿ ನಿರ್ಧಾರ ಮಾಡಲು ನಿಮಗೆ ಕಷ್ಟವಾಗಬಹುದು. ಆದರೆ ಸಾಮಾನ್ಯ ಜ್ಞಾನವು ನಿಮಗೆ ನೆರವಾಗಬಹುದು. ಸಂಬಂಧದ ವಿಚಾರವನ್ನು ಮನಸ್ಸಿನಿಂದ ಮತ್ತು ಹಣಕಾಸಿನ ವಿಚಾರವನ್ನು ಬುದ್ಧಿಯಿಂದ ಬಗೆಹರಿಸಬೇಕೆಂದು ನೀವು ತಿಳಿದುಕೊಳ್ಳಬೇಕು. ಉದ್ಯೋಗದ ವಿಚಾರದಲ್ಲಿ ನಿಮಗೆ ಹಲವಾರು ರೀತಿಯ ಅವಕಾಶಗಳು ಬರಲಿದೆ. ಉದ್ಯೋಗದ ಕಡೆ ತಪ್ಪು ತಿಳುವಳಿಕೆಯು ನಿಮಗೆ ಆಶಾಭಂಗವುಂಟು ಮಾಡಬಹುದು. ಇದಕ್ಕೆ ಚಿಂತೆ ಬೇಡ, ಎಲ್ಲವೂ ಸರಿದು ಹೋಗಲಿದೆ. ಕಾನೂನುಬಾಹಿರವಾಗಿ ಹಣ ಸಂಪಾದನೆ ಮಾಡಲು ಹೊರಟರೆ ಅದರಿಂದ ನಿಮಗೆ ಸಮಸ್ಯೆಯಾಗುವುದು. ಇದರಿಂದ ಆದಷ್ಟು ಮಟ್ಟಿಗೆ ದೂರವಿರಿ. ಸಾಹಸಪ್ರವೃತ್ತಿಯ ಹವ್ಯಾಸಗಳು ನಿಮ್ಮನ್ನು ಚುರುಕಾಗಿಡುವುದು. ಸಂಬಂಧದ ವಿಚಾರದಲ್ಲಿ ಹಲವಾರು ಏಳುಬೀಳುಗಳನ್ನು ಕಾಣಲಿದ್ದೀರಿ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ಉದ್ಯೋಗದ ಕಡೆ ಕೆಲವೊಂದು ಅತ್ಯಾಕರ್ಷಕ ವಿಚಾರಗಳ ಕಡೆ ನೀವು ಗಮನಹರಿಸಬಹುದು. ಏಕತಾನತೆಯಿಂದಾಗಿ ನಿಮಗೆ ತುಂಬಾ ಬೇಸರ ಮೂಡಿಸಿರಬಹುದು, ಆದರೆ ಇದು ನಿಮಗೆ ಉತ್ತೇಜನ ನೀಡಬಹುದು. ಯಾವುದೇ ಕಾರ್ಯಕ್ರಮದಲ್ಲಿ ನೀವು ಸಂಚಲನ ಮೂಡಿಸುವ ಕಾರಣದಿಂದಾಗಿ ಸಾಮಾಜಿಕ ವಲಯದಲ್ಲಿ ನೀವು ಹೆಚ್ಚು ಬೇಡಿಕೆಯವರಾಗಿರಲಿದ್ದೀರಿ. ವೃತ್ತಿ ಬದಲಾವಣೆ ಮಾಡಬೇಕೆಂದು ಬಯಸಿದ್ದರೆ ನೀವು ಬೇರೆಯವರು ಆಯ್ಕೆ ಕೂಡ ನೋಡಬೇಕು. ಸಾಲ ನೀಡುವುದನ್ನು ತಪ್ಪಿಸಿಕೊಂಡರೆ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದು. ಯೋಗ ಮತ್ತು ಧಾನ್ಯವನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಆಗ ನಿಮಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಸಿಗುವುದು. ಮೊದಲ ನೋಟಕ್ಕೆ ಪ್ರೀತಿ ಮೊಳಕೆಯೊಡೆಯುವ ಸಾಧ್ಯತೆಯು ಇದೆ.

  ಧನು: ನ.23- ಡಿ.22

  ಧನು: ನ.23- ಡಿ.22

  ಉದ್ಯೋಗದ ಕಡೆ ನಿಮ್ಮ ಪ್ರತಿಭೆ ತೋರಿಸಲು ಹಲವಾರು ಅವಕಾಶಗಳು ಇವೆ. ನಿಮ್ಮ ಅಂತರ್ಮುಖಿ ಸ್ವಭಾವವನ್ನು ಬದಿಗಿಟ್ಟು, ಹೆಚ್ಚಿನ ಲಾಭ ಪಡೆಯಿರಿ. ನಿಮ್ಮ ಆಶಾವಾದ ಅಥವಾ ಯಾರಾದರೂ ನಕಾರಾತ್ಮಕವಾಗಿ ನಿಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಎಲ್ಲಾ ಸಮಯದಲ್ಲಿ ಎಲ್ಲರನ್ನು ಸಂತೋಷವಾಗಿಡಲು ಸಾಧ್ಯವಿಲ್ಲ. ಇದರಿಂದ ನೀವು ಇದರ ಬಗ್ಗೆ ಚಿಂತೆ ಮಾಡಬೇಡಿ. ಹೆಚ್ಚು ಅನುಭವ ಉಳ್ಳವರೊಂದಿಗೆ ಚರ್ಚೆ ಮಾಡಿದ ಬಳಿಕ ಆರ್ಥಿಕ ನಿರ್ಧಾರ ತೆಗೆದುಕೊಲ್ಳಿ. ಪ್ರತಿನಿತ್ಯದ ಹಣಕಾಸಿನ ಜಂಜಾಟದಿಂದ ನೀವು ಸ್ವಲ್ಪ ವಿಶ್ರಾಂತಿ ಪಡೆಯಬೇಕು. ಸಂಬಂಧದ ಬಗ್ಗೆ ನೀವು ಅತ್ಯುತ್ಸಾಹ ತೋರಿಸುವಿರಿ. ಆದರೆ ಸಂಗಾತಿಯು ಇದೇ ರೀತಿ ಪ್ರತಿಕ್ರಿಯಿಸದೆ ಇದ್ದರೆ ಆಗ ನಿಮಗೆ ನಿರಾಶೆಯಾಗುವುದು.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ತುಂಬಾ ಹೆಚ್ಚಿನ ಕಠಿಣ ಪರಿಶ್ರಮ ಮಾಡುವುದು ಬಾಕಿಯಿರಿ. ಉದ್ಯೋಗದ ಕಡೆ ನಿಮ್ಮ ಸ್ಥಿತಿಯು ಬದಲಾಗಬಹುದು. ಆದರೆ ಇದು ನಿಮಗೆ ತುಂಬಾ ಧನಾತ್ಮಕವಾಗಿರಲಿದೆ. ಹಿರಿಯ ಉದ್ಯೋಗಿಗಳಿಂದ ನಿಮ್ಮ ಕೆಲಸವು ಗಮನಿಲ್ಪಡುವ ಕಾರಣದಿಂದಾಗಿ ನೀವು ಭಡ್ತಿ ಹೊಂದುವವರ ಪಟ್ಟಿಯಲ್ಲಿ ಇರಲಿದ್ದೀರಿ. ಆರ್ಥಿಕವಾಗಿ ಈ ತಿಂಗಳಲ್ಲಿ ನಿಮಗೆ ಸಮಸ್ಯೆಗಳು ಬರಬಹುದು. ಆದರೆ ಅನಗತ್ಯವಾಗಿ ಖರ್ಚು ಮಾಡಬೇಡಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದರಿಂದ ನಿಮ್ಮ ಹಣ ಹಾಗೂ ಸಮಯವು ಉಳಿತಾಯವಾಗಲಿದೆ. ಕೆಲವೊಂದು ಸಂಬಂಧಗಳು ಕೊನೆಯಾಗಬಹುದು ಅಥವಾ ಸಂಗಾತಿಗಳ ಮಧ್ಯೆ ಹೊಂದಾಣಿಕೆಯ ಸಮಸ್ಯೆಯಾಗಬಹುದು.

  ಕುಂಭ: ಜ.21- ಫೆ.19

  ಕುಂಭ: ಜ.21- ಫೆ.19

  ನಿಮ್ಮ ದಾರಿಯು ಹಲವಾರು ಅನಿಶ್ಚಿತತೆಯಿಂದ ಕೂಡಿದೆ. ನೀವು ಧನಾತ್ಮಕ ವಿಚಾರದ ಕಡೆ ಗಮನಹರಿಸಿಕೊಂಡು, ಅದರಿಂದ ಧನಾತ್ಮಕ ಶಕ್ತಿ ಪಡೆದುಕೊಳ್ಳಿ. ಕೆಲಸದ ಕಡೆ ನೀವು ನಿರೀಕ್ಷಿಸಿದಂತೆ ವಿಷಯಗಳು ಸಾಗದೆ ಇರುವಾಗ ತುಂಬಾ ತಾಳ್ಮೆಯಿಂದ ಇರುವುದು ಉತ್ತಮ. ಮಕ್ಕಳು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನಿಮಗೆ ಜೀವನದ ಉತ್ತಮ ಕ್ಷಣಗಳು ಲಭ್ಯವಾಗಲಿದೆ. ಆರ್ಥಿಕತೆಯು ಸಮಸ್ಯೆಯಾಗಲಿದೆ. ಯಾಕೆಂದರೆ ಆದಾಯ ಮತ್ತು ಖರ್ಚು ಸಮತೋಲನದಲ್ಲಿರಲಿದೆ. ಸಣ್ಣ ಜಿಗಿತವು ಕಂಡುಬರಲಿದೆ. ಆದರೆ ಇದರಲ್ಲಿ ನೀವು ಹೆಚ್ಚು ಒಳಪಡಬೇಡಿ.

  ಮೀನ: ಫೆ.20-ಮಾ.20

  ಮೀನ: ಫೆ.20-ಮಾ.20

  ಹಲವಾರು ವಿಚಾರಗಳು ಈ ತಿಂಗಳಲ್ಲಿ ನಿಮ್ಮ ಭಾವನಾತ್ಮಕವಾಗಿ ಹಿಂಡಿ ಹಾಕಲಿದೆ. ಸ್ವಾರ್ಥಿಯಗಿರಬೇಡಿ, ನೀವು ಕಾಳಜಿ ವಹಿಸುವವರ ಬಗ್ಗೆ ಕೂಡ ಹೆಚ್ಚಿನ ಗಮನಹರಿಸಿ. ನಿಮ್ಮೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ನಿಮ್ಮ ಸಂವಹನದ ಹಾದಿಯನ್ನು ಸರಳವಾಗಿಡಿ. ಅಸಂಪ್ರದಾಯಿಕವಾದ ಮಾರ್ಗ ತೆಗೆದುಕೊಳ್ಳಲು ನಿಮ್ಮನ್ನು ಪ್ರಚೋದಿಸಬಹುದು. ಹೂಡಿಕೆ ಮಾಡುವುದರಿಂದ ನೀವು ಸ್ವಲ್ಪ ದೂರ ಉಳಿಯಿರಿ. ಆದರೆ ಹಿಂದೆ ಮಾಡಿರುವ ಹೂಡಿಕೆಯಿಂದ ಲಾಭ ಬರುವುದು. ಯೋಗ ಮತ್ತು ಏರೋಬಿಕ್ಸ್ ನ್ನು ಅಳವಡಿಸಿಕೊಂಡರೆ ನೀವು ತುಂಬಾ ಫಿಟ್ ಮತ್ತು ಚುರುಕಾಗಿರಬಹುದು. ವೈವಾಹಿಕ ಜೀವನವು ನಾಶವಾಗಿದೆ ಎಂದು ನೀವು ದೂರಬೇಡಿ, ಯಾಕೆಂದರೆ

  ನೀವು ಯಾವುದೇ ಶ್ರಮ ವಹಿಸಲಿಲ್ಲ ಮತ್ತು ಎಲ್ಲದಕ್ಕೂ ನಿರ್ಲಕ್ಷ್ಯ ಮಾಡಿದ್ದೀರಿ.

  English summary

  Monthly Predictions For Zodiac Signs For The Month Of June 2018

  The Mid-year crisis may be catching up on some people, while the others may be enjoying the good phases of their lives. The reality of the half year already zooming past us can make us retrospect the past. But, the past is the past and we just cannot re-do or alter it. So, it is better to focus all our energies on our future instead. The Mid-year crisis may be catching up on some people, while the others may be enjoying the good phases of their lives. The reality of the half year already zooming past us can make us retrospect the past. But, the past is the past and we just cannot re-do or alter it. So, it is better to focus all our energies on our future instead.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more