ಕೇರಳದಲ್ಲಿ ನಡೆದ ಮಹಿಳೆಯರ ವಿಚಿತ್ರ ಪ್ರತಿಭಟನೆ! ವೈರಲ್ ಆಗುತ್ತಿದೆ ಫೋಟೋಗಳು!

Posted By: Arshad Hussain
Subscribe to Boldsky

ನಮ್ಮ ಸುತ್ತಮುತ್ತ ಹಲವಾರು ಸಂಗತಿಗಳು ನಮಗಿಷ್ಟವಾಗದ ರೀತಿಯಲ್ಲಿ ಸಂಭವಿಸುತ್ತಲೇ ಇರುತ್ತದೆ. ಹೆಚ್ಚಿನವುಗಳನ್ನು ನಾವು ನೋಡಿಯೂ ಅಸಹಾಯಕರಾಗಿ ಸುಮ್ಮನೇ ಇದ್ದು ಬಿಡುತ್ತೇವೆ. ಆದರೆ ಕೆಲವರು ಮಾತ್ರ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಪ್ರತಿಭಟನೆಯನ್ನು ಪ್ರದರ್ಶಿಸಿ ವಿರೋಧಿಸುವ ದಿಟ್ಟತನ ತೋರುತ್ತಾರೆ. ಇದರಲ್ಲಿ ಕೆಲವರು ಸಿಟ್ಟು, ಕಟು ಪದಗಳು, ಹೊಡೆತ ಮೊದಲಾದವುಗಳನ್ನು ಉಪಯೋಗಿಸಿದರೆ ಕೆಲವರು ಯಾರೂ ಊಹಿಸದ, ದಿಟ್ಟವಾದ ಹಾಗೂ ಎದುರಿನವರ ಹೃದಯವನ್ನೇ ಇರಿಯುವಂತಹ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ತನ್ನ ಗೋಳನ್ನು ಯಾರೂ ಕೇಳುವುದಿಲ್ಲವೆಂದು ಮಂತ್ರಿಗಳ ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದು ನೆನಪಿರಬೇಕಲ್ಲವೇ? ಅಂತೆಯೇ ಯಾವಾಗ ತಮ್ಮ ನಯವಾದ ಪ್ರತಿಭಟನೆಗಳಿಗೆ ಪ್ರತಿಕ್ರಿಯೆ ದೊರಕುವುದಿಲ್ಲವೋ ಆಗ ಕೆಲವರು ಅಪ್ರತಿಭರಾಗುವಂತಹ ದಿಟ್ಟತನದ ಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆಯುತ್ತಾರೆ.

ಇತ್ತೀಚಿನ 'ಕಲ್ಲಂಗಡಿ ವಿವಾದ' ಇದಕ್ಕೊಂದು ಉತ್ತಮ ನಿದರ್ಶನ. ಇಂತಹದ್ದೇ ಇನ್ನೊಂದು ಪ್ರಕರಣ ಎಲ್ಲರ ಗಮನ ಸೆಳೆದಿದೆ. "ಮಾರು ಥುರಕ್ಕಳ್ ಸಮರಂ" ಎಂಬ ಹೆಸರಿನ ಈ ವಿವಾದ ಈಗ ಎಲ್ಲರ ಗಮನ ಸೆಳೆದಿದೆ. ಇದರ ಅರ್ಥ 'ತೆರೆದೆದೆಯ ಮೂಲಕ ಪ್ರತಿಭಟನೆ' ಎಂಬುದಾಗಿದೆ. ಮಹಿಳೆಯರ ದೈಹಿಕ ವಿವರಗಳನ್ನೇ ವ್ಯಂಗ್ಯವಾಡುವವರಿಗೆ ತಕ್ಕ ಉತ್ತರ ನೀಡುವುದರ ಮೂಲಕ ದಿಟ್ಟತನ ಪ್ರದರ್ಶಿಸಿವುದೂ ಆಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ... 

ಇದೆಲ್ಲಾ ಪ್ರಾರಂಭವಾಗಿದ್ದು ಹೇಗೆ?

ಇದೆಲ್ಲಾ ಪ್ರಾರಂಭವಾಗಿದ್ದು ಹೇಗೆ?

ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಈ ಘಟನೆ ನಡೆದಿದ್ದು ಉನ್ನತ ಸ್ಥಾನದಲ್ಲಿರುವ ಪ್ರೊಫೆಸರ್ ಒಬ್ಬರು ಸಾಮಾಜಿಕ ತಾಣದಲ್ಲಿ ಮಹಿಳೆಯರ ಬಗ್ಗೆ ತುಚ್ಛವಾದ ಹೇಳಿಕೆಯನ್ನು ನೀಡಿದ್ದರು. ತಮ್ಮ ವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಸೂಕ್ತವಾದ ತಲೆವಸ್ತ್ರವನ್ನು ಧರಿಸಿರಲಿಲ್ಲವೆಂದೂ, ಈ ಮೂಲಕ ಆಕೆಯ ವಕ್ಷಸ್ತಲ ಕಾಣುತ್ತಿದ್ದು 'ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ' ಕಾಣುತ್ತಿತ್ತು ಎಂದು ಬರೆದಿದ್ದಾರೆ.

ಈ ಹೇಳಿಕೆ ನೀಡಿದ ವೀಡಿಯೋ ಮೂರು ತಿಂಗಳು ಹಳೆಯದ್ದು

ಈ ಹೇಳಿಕೆ ನೀಡಿದ ವೀಡಿಯೋ ಮೂರು ತಿಂಗಳು ಹಳೆಯದ್ದು

ಈ ಪ್ರೊಫೆಸರರು ಈ ಬಗೆಯ ವಿವಾದಾತ್ಮಕ ಹೇಳಿಕೆ ನೀಡಿ ಮೂರು ತಿಂಗಳುಗಳೇ ಕಳೆದಿವೆ. ಆದರೆ ಇದಕ್ಕೆ ಪ್ರಚಾರ ಸಿಕ್ಕಿ ಎಲ್ಲರ ಗಮನ ಸೆಳೆಯಲು ಇಷ್ಟು ದಿನ ಕಳೆದಿದೆ ಹಾಗೂ ಹಲವರು ಇದಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ

ವಿವಾದಾತ್ಮಕ ಹೇಳಿಕೆ

ಪ್ರೊಫೆಸರರು ಹೀಗೆ ಹೇಳಿದ್ದರು : " ನಾನು ಕಾಲೇಜೊಂದರಲ್ಲಿ ಶಿಕ್ಷಕನಾಗಿದ್ದು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರಲ್ಲಿ 80% ರಷ್ಟು ವಿದ್ಯಾರ್ಥಿನಿಯರಿದ್ದಾರೆ ಹಾಗೂ ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಇವರು ತಲೆವಸ್ತ್ರವನ್ನು ಧರಿಸಿದ್ದರೂ ಎದೆಯಭಾಗವನ್ನು ಎದುರಿನವರ ದೃಷ್ಟಿ ಬೀಳುವಂತಹ ರೀತಿಯಲ್ಲಿ ಬಟ್ಟೆಗಳನ್ನು ಧರಿಸುತ್ತಾರೆ, ಇದು ತಲೆವಸ್ತ್ರವನ್ನು ಧರಿಸುವ ಮೂಲ ಉದ್ದೇಶಕ್ಕೇ ವಿರುದ್ಧವಾಗಿದೆ. ಈ ಪ್ರದರ್ಶನವನ್ನು ಇವರು ಹೀಗೆ ಮಾಡುತ್ತಾರೆಂದರೆ ನಾವು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಇದು ಹಣ್ಣಾಗಿದೆಯೋ ಇಲ್ಲವೋ ನೋಡುವುದಿಲ್ಲವೇ ಹಾಗೇ ಇರುತ್ತದೆ"

ವಿರೋಧಿ ಪ್ರದರ್ಶನ

ವಿರೋಧಿ ಪ್ರದರ್ಶನ

ಈ ಹೇಳಿಕೆಯನ್ನು ವಿರೋಧಿಸಿ ನಡೆಸಿದ ಪ್ರದರ್ಶನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಇದರ ಹಣೆಪಟ್ಟಿ ಹ್ಯಾಶ್ ಟ್ಯಾಗ್ '"ಮಾರು ಥುರಕ್ಕಳ್ ಸಮರಂ" ಅಥವಾ 'ತೆರೆದೆದೆಯ ಮೂಲಕ ಪ್ರತಿಭಟನೆ' ಎಂಬ ಪ್ರದರ್ಶನವನ್ನು ಪ್ರಾರಂಭಿಸಲಾಗಿದೆ. ಇದನ್ನು ಸಮರ್ಥಿಸುವ ಮಹಿಳೆಯರು ತಮ್ಮ ತೆರೆದೆದೆಯ ಮುಂದೆ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನಿರಿಸಿ ಚಿತ್ರ ತೆಗೆದು ಈ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಬದಲಾವಣೆಗಾಗಿ ವಿಭಿನ್ನ ಪ್ರಯತ್ನ ಪ್ರಯೋಗಿಸಿದ ಕಾರ್ಯಕರ್ತರು

ಒಂದು ಬದಲಾವಣೆಗಾಗಿ ವಿಭಿನ್ನ ಪ್ರಯತ್ನ ಪ್ರಯೋಗಿಸಿದ ಕಾರ್ಯಕರ್ತರು

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಪ್ರಾರಂಭವಾದ ಈ ಸಂಘಟನೆಯ ಕಾರ್ಯಕರ್ತೆ ದಿಯಾ ಸನಾ ತಮ್ಮ ಸ್ನೇಹಿತೆಯೊಬ್ಬರು ತಮ್ಮ ಎದೆಯ ಮುಂದೆ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನಿರಿಸಿದ ಚಿತ್ರವನ್ನು ಪ್ರದರ್ಶಿಸಿದ್ದಾರೆ. ಈ ಪ್ರದರ್ಶನದ ಮೂಲಕ ಆಕೆ ವಿಶ್ವಕ್ಕೆ ಈ ಪ್ರಶ್ನೆಯೊಡ್ಡಿದ್ದಾರೆ :"ಮಹಿಳೆಯರಿಗೆ ತಮಗೇನು ಬೇಕೋ ಆ ವಸ್ತ್ರವನ್ನು ಧರಿಸುವ ಸ್ವಾತಂತ್ರ್ಯ ಬೇಕಾಗಿದೆ. ಇದಕ್ಕೆ ತಡೆಯೊಡ್ಡುವುದನ್ನು ನಮ್ಮ ಸಮಾಜ ಯಾವಾಗ ನಿಲ್ಲಿಸಲಿದೆ?"

ಆದರೆ ಈ ಚಿತ್ರಗಳನ್ನು ಹಿಂಪಡೆಯಲಾಗಿತ್ತು

ಆದರೆ ಈ ಚಿತ್ರಗಳನ್ನು ಹಿಂಪಡೆಯಲಾಗಿತ್ತು

ಈ ಚಿತ್ರಗಳನ್ನು ಯಾವಾಗ ಭಾರೀ ಸಂಖ್ಯೆಯಲ್ಲಿ ಜನರು ವೀಕ್ಷಿಸಲು ತೊಡಗಿದರೋ, ಮುಂದೆ ಯಾವುದಾದರೂ ತೊಂದರೆ ಎದುರಾಗಬಹುದೆಂಬ ಭೀತಿಯಿಂದ ಫೇಸ್ಬುಕ್ ಈ ಚಿತ್ರಗಳನ್ನು ತಾಣದಿಂದ ತೆಗೆದುಹಾಕಿತು. ಅಲ್ಲದೇ ಈ ಚಿತ್ರಗಳನ್ನು ಅಳವಡಿಸಿದ ಕಾರ್ಯಕರ್ತೆಗೆ ದಂಡವನ್ನೂ ವಿಧಿಸಿತು, ಅಂದರೆ ಆಕೆ ಮುಂದಿನ ಒಂದು ದಿನದ ಕಾಲ ತನ್ನ ಖಾತೆಯನ್ನು ತೆರೆಯುವುದನ್ನು ನಿಷೇಧಿಸಿತು.

ಆದರೆ ಇದಕ್ಕೆ ಆಷ್ಟೇಕೆ ಗೊಂದಲ?

ಆದರೆ ಇದಕ್ಕೆ ಆಷ್ಟೇಕೆ ಗೊಂದಲ?

ಚಿತ್ರಗಳು ಅಪ್ಲೋಡ್ ಆದ ಬಳಿಕ ಸೆಳೆದ ಗಮನಕ್ಕಿಂತಲೂ ಇದನ್ನು ಹಿಂಪಡೆದ ಬಳಿಕ ಜನರಿಂದ ಅಪಾರ ಸಂಖ್ಯೆಯಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಾಗಿತ್ತು ಹಾಗೂ ಇದು ಪ್ರತಿರೋಧಕ್ಕೂ ಕಾರಣವಾಯಿತು. ಕೆಲವು ಮಹಿಳೆಯರು ಇಂತಹ ಅಸಭ್ಯ ಚಿತ್ರಗಳನ್ನು ಪೋಸ್ಟ್ ಮಾಡಿದುದಕ್ಕಾಗಿ ಈ ಕಾರ್ಯಕರ್ತೆಯನ್ನೆ ಜರಿದಿದ್ದಾರೆ. ಕೆಲವರು ಈ ಕ್ರಮ ಸರಿ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಈ ಪ್ರತಿಭಟನೆ ಮುಂದುವರೆಯಬೇಕೇ ಅಥವಾ ಯಾವುದೇ ಪ್ರತಿಕ್ರಿಯೆ ಇಲ್ಲದೇ ಕೊಂಚಕಾಲದ ಬಳಿಕ ಗಾಳಿಯಲ್ಲಿ ಲೀನವಾಗಿಬಿಡಬಹುದೇ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

maaru-thurakkal-samaram-protest-bare-the-breasts-women

There are so many bizarre instances where people tend to choose to make a change in the most unique and quirky way possible. Most of the protests that people do these days involve a quirky edge to it, as straight-forward protests are always unheard of and doing something out of the box is what gains all the attention. Here, we bring to you the details of this controversy of "Maaru thurakkal samaram", which means a protest to bare the breasts. It was done on purpose to stop sexualizing women's bodies. Learn more about this, here.