For Quick Alerts
ALLOW NOTIFICATIONS  
For Daily Alerts

  ಆತ್ಮಶ್ಲಾಘನೆ ಮಾಡಿಕೊಳ್ಳುವ ರಾಶಿಗಳು

  By Deepu
  |

  ಪ್ರತಿಯೊಂದು ರಾಶಿಚಕ್ರದಲ್ಲಿ ಕೂಡ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಇದ್ದೇ ಇರುತ್ತದೆ. ಮನುಷ್ಯನಾಗಿರುವ ಕಾರಣ ಒಳ್ಳೆಯದು ಹಾಗೂ ಕೆಟ್ಟದು ಎನ್ನುವುದು ಇದ್ದೇ ಇರುತ್ತದೆ. ಇಂತಹ ಗುಣಗಳಿಂದಾಗಿಯೇ ನಾವು ಮಾನವರಾಗುವುದು. ಆದರೆ ಜೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ತುಂಬಾ ಆತ್ಮಶ್ಲಾಘನೆ ಮಾಡಿಕೊಳ್ಳುವರು. ಇವರಲ್ಲಿ ಸ್ವಾರ್ಥ ಮನೋಭಾವವಿರುವುದು. ಇಂತಹ ರಾಶಿಚಕ್ರಗಳ ಬಗ್ಗೆ ನಾವು ಇಂದು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಯಾಕೆಂದರೆ ಇವರು ಹುಟ್ಟಿನಿಂದಲೇ ಇಂತಹ ಗುಣ ಪಡೆದುಕೊಂಡಿರುವರು. ಇದಕ್ಕೆಲ್ಲಾ ಕಾರಣ ಅವರಲ್ಲಿನ ರಾಶಿಚಕ್ರ. ಕೆಲವರು ಇದರ ಬಗ್ಗೆ ಹೇಳಿಕೊಂಡರೂ ಇನ್ನು ಕೆಲವರು ಮೌನವಾಗಿರುವರು. ಇಲ್ಲಿ ನಾವು ಇಂತಹ ರಾಶಿಗಳ ಬಗ್ಗೆ ತಿಳಿಯುವ...

  ಮೇಷ: ಮೇ 21-ಎಪ್ರಿಲ್ 19

  ಮೇಷ ರಾಶಿಯವರು ತುಂಬಾ ಆತ್ಮಶ್ಲಾಘನೆ ಮಾಡಿಕೊಳ್ಳುವವರು. ಇವರಲ್ಲಿ ಪರಿತ್ಯಾಗ ಸಮಸ್ಯೆಗಳಿರುವುದು. ಸಮಾಜದಲ್ಲಿ ಹೆಸರು ಪಡೆಯಲು ಇವರು ಹೆಚ್ಚು ವ್ಯಸ್ತರಾಗಿರುವರು. ಇವರು ಹೆಚ್ಚಾಗಿ ಸ್ವಹಿತಾಸಕ್ತಿಯತ್ತ ದೃಷ್ಟಿಹರಿಸಿರುವರು. ಇವರು ಬೇರೆಯವರು ಭಾವನೆ ಹಾಗೂ ಆಲೋಚನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ದಾಟಿಯಲ್ಲಿ ಬದುಕುವರು. ಇವರಲ್ಲಿ ಸ್ವಲ್ಪವೂ ಕರುಣೆ ಇಲ್ಲದಿರುವುದು ಕೂಡ ಅವರನ್ನು ಆತ್ಮರತಿಯನ್ನಾಗಿಸುವುದು. ಸಮಾನ ಅನುಭೂತಿ ತೋರಿಸಬಲ್ಲ ಸಂಬಂಧಕ್ಕಾಗಿ ಇವರು ಹುಡುಕುತ್ತಿರುವರು. ಇನ್ನೊಂದು ಕಡೆಯಲ್ಲಿ ಇತರರ ಆರೈಕೆ ಮಾಡಲು ಇವರಿಗೆ ತುಂಬಾ ಆನಂದ ಸಿಗುವುದು.

  Zodiac Signs

  ಸಿಂಹ: ಜುಲೈ 23- ಆಗಸ್ಟ್ 22

  ಸಿಂಹದ ಅಧಿಪತಿ ಸೂರ್ಯ ಮತ್ತು ಇವರು ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುವರು. ಇವರು ಕೇಂದ್ರವಾಗಿರಲು ಬಯಸುವರು ಮತ್ತು ಸ್ವಾಅಭಿವ್ಯಕ್ತಿಯ ಶಕ್ತಿಯನ್ನು ಸಮಾಜಕ್ಕೆ ತೋರಿಸಲು ಪ್ರಯತ್ನಿಸುವರು. ಇನ್ನೊಂದು ಬದಿಯಲ್ಲಿ ಪರಿಸ್ಥಿತಿಯು ಇವರ ಕಡೆಗೆ ಇರದೇ ಇದ್ದಾಗ ಇವರ ಭಾವನೆಗಳಿಗೆ ಬೆಂಕಿ ಹತ್ತಿಕೊಳ್ಳುವುದು. ಇವರಿಗೆ ಆವೇಶ ಬಂದಾಗ ತುಂಬಾ ವಿಧ್ವಂಸಕಾರಿಯಾಗುವರು. ಜೀವನದಲ್ಲಿ ಸಾಗಲು ಅವರು ಯಾವುದೇ ರೀತಿಯ ಬದಲಾವಣೆ ಮಾಡಲು ಬಯಸುವರು. ಈ ವ್ಯಕ್ತಿಗಳಲ್ಲಿ ಒಂದು ರೀತಿಯ ಆತ್ಮವಿಶ್ವಾಸವಿರುವುದು. ಯಾವುದನ್ನು ಅವರು ತುಂಬಾ ವೈಯಕ್ತಿಕವಾಗಿ ಪರಿಗಣಿಸಲ್ಲ ಮತ್ತು ಇತರರ ಭಾವನೆಗಳನ್ನು ಸ್ವೀಕರಿಸುವರು. ಸಿಂಹ ರಾಶಿಯವರು ಯಾವಾಗಲೂ ತಾವೇ ಆಕರ್ಷಣೆಯ ಕೇಂದ್ರಬಿಂದುವಾಗಬೇಕೆಂದು ಬಯಸುವರು.

  ಮಕರ: ಡಿ.20 ಜ.19

  ಮಕರ ರಾಶಿಯವರು ತುಂಬಾ ಸ್ವಾರ್ಥಿಗಳಾಗಿರುವರು. ಯಾಕೆಂದರೆ ಇವರು ಎಲ್ಲರ ಮುಂದೆ ತಮ್ಮನ್ನು ಹೇಗೆ ಚಿತ್ರಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ತುಂಬಾ ಸೂಕ್ಷ್ಮವಾಗಿರುವರು. ಇವರು ಯಾವಾಗಲೂ ಉತ್ತಮವಾಗಿರಬೇಕೆಂದು ಬಯಸುವವರು. ಇವರು ಯಾವಾಗಲೂ ಉನ್ನತ ಹುದ್ದೆಯನ್ನೇ ಬಯಸುವರು. ಇದರಿಂದ ಅವರಿಗೆ ಇತರರನ್ನು ನೋಡಲು ಸಾಧ್ಯವಾಗುತ್ತದೆ. ಇಂತಹ ವ್ಯಕ್ತಿತ್ವದವರು ಬೆಳೆಯುವಾಗ ತುಂಬಾ ಕಠಿಣ ಸಮಯವನ್ನು ಎದುರಿಸುವರು. ಯಾಕೆಂದರೆ ಇವರು ತುಂಬಾ ಅಸುರಕ್ಷಿತ ಭಾವನೆ ಹೊಂದಿರುವ ಕಾರಣದಿಂದಾಗಿ ಆತ್ಮರತಿಗಳಾಗುವರು. ಅಸುರಕ್ಷಿತ ಭಾವನೆಯಿಂದಾಗಿಯೇ ಅವರಿಗೆ ಕೆಲವೊಮ್ಮೆ ನಷ್ಟಗಳು ಆಗುವುದು. ಇವರಲ್ಲಿರುವಂತಹ ಅಸುರಕ್ಷಿತ ಭಾವನೆಯಿಂದಾಗಿ ಇವರು ಬೇರೆಯವರಿಂದ ತಮಗೆ ಬೇಕಾಗಿರುವುದನ್ನು ಪಡೆಯಬಹುದು. ಆತ್ಮರತಿಗಳಾಗುವುದನ್ನು ತಪ್ಪಿಸಲು ಇವರು ತಾವು ಇರುವಂತೆ ಒಪ್ಪಿಕೊಳ್ಳುವರು. ಇವರು ಹೀಗೆ ಮಾಡಿದಾಗ, ಇತರರನ್ನು ನೋಡುವಂತಹ ಪರಿಸ್ಥಿತಿಯು ಬರುವುದಿಲ್ಲ.  ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆದುಬಿಡಿ. ರಾಶಿಚಕ್ರದ ಬಗ್ಗೆ ಮತ್ತಷ್ಟು ಜ್ಞಾನ ಪಡೆಯಲು ಇದೇ ಸೆಕ್ಷನ್ ನೋಡುತ್ತಲಿರಿ....

  English summary

  List Of Zodiac Signs That Are More Likely To Be Narcissists

  According to astrology, each zodiac sign comes with its fair share of positive and negative qualities. After all, we all have good and bad sides, which make us human. But according to astrology, a certain trait seems to be holding a person back in life, which can make the individual to be a bit self-absorbed that tags him/her to be narcissists. But who is a narcissist? Well, this term is often used to describe those who are in vain, or those who are self-absorbed, egotistical, and selfish by nature.
  Story first published: Friday, May 25, 2018, 23:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more