Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
2018ರ ಡಿಸೆಂಬರ್ ತಿಂಗಳಲ್ಲಿ ಬರುವ ಅಮವಾಸ್ಯೆ ಈ 4 ರಾಶಿಚಕ್ರದವರ ಮೇಲೆ ಹೆಚ್ಚು ಪ್ರಭಾವ ಬೀರುವುದು!

ಅಮವಾಸ್ಯೆ ಎಂದರೆ ಸಾಮಾನ್ಯವಾಗಿ ಕಗ್ಗತ್ತಲು ಹಾಗೂ ಋಣಾತ್ಮಕ ಶಕ್ತಿಯ ಸಮಯ ಎಂದು ಪರಿಗಣಿಸಲಾಗುತ್ತದೆ. ಕೆಲವು ಶುಭ ಕಾರ್ಯಗಳನ್ನು ಅಮವಾಸ್ಯೆಯ ಸಮಯದಲ್ಲಿ ಕೈಗೊಳ್ಳಬಾರದು ಎಂದು ಸಹ ಹೇಳಲಾಗುವುದು. ಹಿಂದೂ ಪಂಚಾಂಗದಲ್ಲಿ ಅಮವಾಸ್ಯೆ ಹಾಗೂ ಪೂರ್ಣಿಮೆಗೆ ವಿಶೇಷ ಆದ್ಯತೆಯನ್ನು ನೀಡಲಾಗುವುದು. ಚಂದ್ರನಿಗೆ ಸಂಬಂಧಿಸಿದ ಈ ಎರಡು ಸಮಯವು ಕೆಲವು ವಿಶೇಷ ಚಿಂತನೆ ಹಾಗೂ ಸಂಗತಿಗಳನ್ನು ತೆರೆದಿಡುತ್ತವೆ. ಸಾಮಾನ್ಯವಾಗಿ ಅಮವಾಸ್ಯೆ ಎಂದರೆ ಧನಾತ್ಮಕ ಚಿಂತನೆಗಳ ಬಗ್ಗೆ ಹೇಳುತ್ತದೆ. ಅಮವಾಸ್ಯೆಯು ಋಣಾತ್ಮಕ ವಿಷಯಗಳಿಗೆ ಸಂಬಂಧಿಸಿರುತ್ತದೆ ಎನ್ನಲಾಗುವುದು.
ಇಂಗ್ಲಿಷ್ ಪಂಚಾಂಗದ ಪ್ರಕಾರ ಇದೀಗ ನಾವು ವರ್ಷದ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ. ಈ ಒಂದು ತಿಂಗಳು ಅಂದರೆ ಡಿಸೆಂಬರ್ ಮಾಸದಲ್ಲಿ ಬಹುತೇಕರು ವರ್ಷದ ಯೋಜನೆಗಳನ್ನು ಪೂರ್ಣಗೊಳಿಸುವ ಹವಣಿಕೆಯಲ್ಲಿ ಇರುತ್ತಾರೆ. ಅಂತೆಯೇ ಹೊಸ ವರ್ಷದ ಸ್ವಾಗತಕ್ಕಾಗಿ ಸಾಕಷ್ಟು ತಯಾರಿಗಳನ್ನು ಕೈಗೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿರುತ್ತಾರೆ. ಈ ವರ್ಷದಲ್ಲಿ ನೆರವೇರದ ಕೆಲವು ಆಸೆಗಳು ಮುಂದಿನ ವರ್ಷವಾದರೂ ನೆರವೇರಲಿ ಎನ್ನುವ ಆಶಯವನ್ನು ಹೊಂದಿರುತ್ತಾರೆ. ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸುವ ತಿಂಗಳು 2018ರ ಡಿಸೆಂಬರ್ ತಿಂಗಳಾಗಿರುತ್ತವೆ.

ವರ್ಷದ ಕೊನೆಯ ತಿಂಗಳಾದ ಇದೇ ಡಿಸೆಂಬರ್ 7ರಂದು ಅಮವಾಸ್ಯೆ ಸಂಭವಿಸುತ್ತದೆ. ಈ ಅಮವಾಸ್ಯೆಯು ಗ್ರಹಗತಿಗಳ ಮೇಲೆ ಹಾಗೂ ರಾಶಿಚಕ್ರಗಳ ಮೇಲೆ ವಿಶೇಷ ಪ್ರಭಾವವನ್ನು ಬೀರಲಿದೆ ಎನ್ನಲಾಗುತ್ತಿದೆ. ಕೆಲವು ಗ್ರಹಗಳು ತಮ್ಮ ಸ್ಥಾನಗಳ ಬದಲಾವಣೆಯನ್ನು ಹೊಂದುತ್ತವೆ. ಈ ಹಿನ್ನೆಲೆಯಲ್ಲಿಯೇ ಪ್ರತಿಯೊಂದು ರಾಶಿಚಕ್ರಗಳ ಮೇಲೆ ಗಮನಾರ್ಹ ಬದಲಾವಣೆ ಉಂಟಾಗುವುದು. ಇದರ ಅನುಸಾರ ಕೆಲವು ರಾಶಿಯವರು ವಿಶ್ರಾಂತಿಯನ್ನು ಪಡೆಯಲು ಆಶಿಸುವರು. ಕೆಲವರು ಸೋಮಾರಿಯ ವರ್ತನೆ ತೋರಬಹುದು ಅವೆಲ್ಲವೂ ಅಮವಾಸ್ಯೆಯ ಪ್ರಭಾವ ಎನ್ನಲಾಗುತ್ತದೆ.
ಈ ಡಿಸೆಂಬರ್‌ನ ಅಮವಾಸ್ಯೆಯು ಖಗೋಳದಲ್ಲಿ ಗಮನಾರ್ಹ ಬದಲಾವಣೆಯನ್ನು ತರುವುದು. ಅದು ಎಲ್ಲಾ ರಾಶಿಚಕ್ರದವರ ಮೇಲೆ ಪ್ರಭಾವ ಬೀರುವುದು. ಅದರಲ್ಲೂ ಪ್ರಮುಖವಾಗಿ ನಾಲ್ಕು ರಾಶಿಚಕ್ರದವರ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ವರ್ಷದ ಅಂತ್ಯದಲ್ಲಿ ಯಾವೆಲ್ಲಾ ಹೊಸ ಸಂಗತಿಗಳನ್ನು ಇವರು ಎದುರಿಸಬೇಕಾಗುವುದು? ಅವುಗಳಿಂದ ಜೀವನದಲ್ಲಿ ಹೇಗೆ ತಿರುವನ್ನು ಪಡೆದುಕೊಳ್ಳುವರು? ಎನ್ನುವುದನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ
ಮೇಷ ರಾಶಿಯ ವ್ಯಕ್ತಿಗಳು ಅನೇಕ ದಿನಗಳಿಂದ ಸಾಕಷ್ಟು ಶ್ರಮವನ್ನು ವಿನಿಯೋಗಿಸುತ್ತಾ ಬರುತ್ತಿದ್ದಾರೆ. ಯೋಜನೆಗಳನ್ನು ಹಾಗೂ ಕೆಲಸಗಳನ್ನು ತಾವು ಅಂದುಕೊಂಡ ರೀತಿಯಲ್ಲಿ ವಿಷಯಗಳನ್ನು ವಿನಿಯೋಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸತ್ಯದ ಸಂಗತಿ. ಆದರೆ ಬದಲಾಗುತ್ತಿರುವ ಗ್ರಹಗಳು ಹಾಗೂ ಅವುಗಳ ಸ್ಥಾನಗಳಿಂದ ಉಂಟಾಗುವ ಪ್ರಭಾವದ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು.

ಮೇಷ
ಅಮವಾಸ್ಯೆಯ ಪ್ರಭಾವದಿಂದ ಎದುರಿಸುತ್ತಿರುವ ಈ ಸಮಯವು ಮೇಷ ರಾಶಿಯವರನ್ನು ಪರೀಕ್ಷಿಸುವ ಒಂದು ಪ್ರಮುಖ ಸಮಯ ಎಂದು ನಿರ್ಧರಿಸಲಾಗಿದೆ. ಹಾಗಾಗಿ ಇವರು ತಮ್ಮ ನೈಜ ಸಂಗತಿಗಳ ಬಗ್ಗೆ ಹಾಗೂ ವರ್ತನೆಗಳ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕಾಗುವುದು. ನಿಮ್ಮ ನೈಜ ಸಂಗತಿಯನ್ನು ಕಳೆದುಕೊಳ್ಳಬಾದರು ಎಂದು ಜ್ಯೋತಿಷ್ಯ ಶಾಸ್ತ್ರವು ಸಲಹೆ ನೀಡುವುದು. ನೀವು ನಿಮ್ಮ ಆಲೋಚನೆಗಳನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವುದರಿಂದ ವಿಷಯವು ಅಥವಾ ಕೆಲಸವು ನಿಮ್ಮ ಪರವಾಗಿ ನಿಲ್ಲುವುದು.

ಕರ್ಕ
ಈ ರಾಶಿಯ ವ್ಯಕ್ತಿಗಳು ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನುವುದು ಸಾಮಾನ್ಯವಾದ ಸಂಗತಿ. ಅಲ್ಲದೆ ಇವರು ಸಾಕಷ್ಟು ಸಂದರ್ಭದಲ್ಲಿ ಸಹಾಯ ಮಾಡಲು ಮುಂದಾಗುವರು. ಈ ಬಾರಿಯ ಅಮವಾಸ್ಯೆ ಹಾಗೂ ಗ್ರಹಗಳ ಪ್ರಭಾವವು ಇವರ ಮೇಲೆ ಅಧಿಕ ಪರಿಣಾಮವನ್ನುಂಟುಮಾಡುವುದು. ಅದರಲ್ಲೂ ಚಂದ್ರನು ವಿಶೇಷ ಪ್ರಭಾವವನ್ನು ಉಂಟುಮಾಡುವನು.

ಕರ್ಕ
ಚಂದ್ರನ ಪ್ರಭಾವದಿಂದ ಒಂದಿಷ್ಟು ಆಯಾಸದ ಭಾವನೆಗೆ ಒಳಗಾಗುವರು. ಒಂದಿಷ್ಟು ಶಕ್ತಿಯನ್ನು ಕಳೆದುಕೊಂಡಂತಹ ಭಾವನೆಯನ್ನು ಹೊಂದುವರು. ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ ಮಾತನಾಡಬೇಕು. ಅಲ್ಲದೆ ನಿರ್ಧಾರಗಳನ್ನು ಕೈಗೊಳ್ಳುವಾಗ ಸೂಕ್ತ ಚಿಂತನೆಗಳನ್ನು ನಡೆಸಿಯೇ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗುವುದು.

ತುಲಾ
ಈ ರಾಶಿಯ ವ್ಯಕ್ತಿಗಳಿಗೆ ಈ ತಿಂಗಳ ಅಮವಾಸ್ಯೆಯು ಸಾಕಷ್ಟು ದಣಿವಾದ ಅನುಭವವನ್ನು ನೀಡುವುದು. ನಿಮಗೆ ವಹಿಸಿರುವ ಕೆಲಸ ಅಥವಾ ಕೈಗೊಂಡ ಯೋಜನೆಗಳು ಇನ್ನೂ ಮುಗಿಯದೆ ಇದ್ದರೆ ಅದರ ಕುರಿತು ಯಾವುದೇ ನಿರ್ಧಾರವನ್ನು ಕೈಗೊಳ್ಳುವುದು ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ಮೇಲಾಧಿಕಾರಿಗಳಿಗೆ ಇ ಮೇಲ್ ಮಾಡುವಂತಹ ಕೆಲಸಕ್ಕೆ ಮುಂದಾಗದಿರಿ.

ತುಲಾ
ಈಗಾಗಲೇ ನೀವು ಮಾಡಬೇಕಾಗಿದ್ದ ಅಥವಾ ಮುಗಿಸ ಬೇಕಾಗಿದ್ದ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ನಂತರ ನಿಮ್ಮ ಯಾವುದೇ ಮಹತ್ವದ ಕೆಲಸವು ಉಳಿದಿದ್ದರೆ ಅದರ ಕುರಿತು ಗಮನ ಹರಿಸಿ. ಈ ಸಮಯವು ನಿಮ್ಮ ಪರವಾಗಿ ಇಲ್ಲದೆ ಇರುವುದರಿಂದ ನಿಮಗೆ ನೀಡುವ ಸಲಹೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಮಕರ
ಮಕರ ರಾಶಿಯವರು ಸಾಕಷ್ಟು ಶ್ರಮ ವಹಿಸಿ ಕೆಲಸ ನಿರ್ವಹಿಸುವ ವ್ಯಕ್ತಿಗಳು. ಆದರೆ ಅವರಿಗೆ ಈ ಸಂದರ್ಭದಲ್ಲಿ ನೀಡುವ ಸಲಹೆ ಎಂದರೆ ತಮ್ಮ ಆರೋಗ್ಯ ಹಾಗೂ ವಿಶ್ರಾಂತಿಯ ಬಗ್ಗೆ ಹೆಚ್ಚಿನ ಮಹತ್ವ ಅಥವಾ ಕಾಳಜಿಯನ್ನು ಕೈಗೊಳ್ಳಬೇಕು ಎಂದು ಹೇಳಲಾಗುವುದು. ವೃತ್ತಿ ಜೀವನದಲ್ಲಿ ಸಾಕಷ್ಟು ಕೆಲಸಗಳು ನಿಮಗೆ ಇರಬಹುದು.

ಮಕರ
ನೀವು ನಿಮ್ಮ ಆರೋಗ್ಯವು ಉತ್ತಮವಾಗಿದ್ದರೆ ಮಾತ್ರ ಕೆಲಸವನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಲು ಹಾಗೂ ಮುಗಿಸಲು ಸಾಧ್ಯ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವ ಕೆಲಸ ಮೊದಲ ಆದ್ಯತೆಯನ್ನು ಹೊಂದಿದೆ ಎನ್ನುವುದನ್ನು ಮೊದಲು ಪಟ್ಟಿ ಮಾಡಿ. ನಂತರ ಕೆಲಸದ ನಿರ್ವಹಣೆಗೆ ಮುಂದಾಗಿ. ಆಗ ನಿಮ್ಮ ಕೆಲಸ ಯಶಸ್ಸನ್ನು ಕಾಣುವುದು. ನಿಮ್ಮ ಆರೋಗ್ಯವೂ ಉತ್ತಮವಾಗಿರುವುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.



Click it and Unblock the Notifications











