For Quick Alerts
ALLOW NOTIFICATIONS  
For Daily Alerts

ಈ ವರ್ಷ ಯಾವ್ಯಾವ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ ನೋಡಿ...

By Deepu
|

ಜ್ಯೋತಿಷ್ಯ ಶಾಸ್ತ್ರವನ್ನು ಬಳಸಿಕೊಂಡು ಭವಿಷ್ಯವನ್ನು ಕೇಳಬಹುದು? ಮುಂದಾಗುವ ಆಗು ಹೋಗುಗಳನ್ನು ತಿಳಿದುಕೊಳ್ಳಬಹುದು ಎಂಬುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರ. ಅದೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರ್ದಿಷ್ಟ ರಾಶಿಚಕ್ರದವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತದೆ. ಇದು ನಿಮಗೆ ಒಮ್ಮೆ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ.

ಕೆಲವು ಗ್ರಹಗಳು ನಿಗದಿತ ರಾಶಿಚಕ್ರಕ್ಕೆ ಅನುಗುಣವಾಗಿ ತಮ್ಮ ಪ್ರಭಾವ ಬೀರುತ್ತವೆ. ಆ ಪ್ರಭಾವಗಳಿಂದ ಹೇಗೆ ಭವಿಷ್ಯದಲ್ಲಿ ಸನ್ನಿವೇಶಗಳು ಬದಲಾಗುತ್ತವೆಯೋ ಹಾಗೆಯೇ ರೋಗಗಳು ನಿರ್ಣಯವಾಗುತ್ತದೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ಆರೋಗ್ಯದಲ್ಲಿ ಆಗಾಗ ಕೆಲವು ಬದಲಾವಣೆಗಳು ಉಂಟಾಗುತ್ತಿರುತ್ತವೆ. ಸಾಮಾನ್ಯವಾಗಿ ಒಂದೇ ಬಗೆಯ ಸಮಸ್ಯೆ ದೀರ್ಘಾವಧಿಯವರೆಗೆ ಕಾಡುತ್ತದೆ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ. ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಅರಿಯಿರಿ...

ಮೇಷ

ಮೇಷ

ಈ ರಾಶಿಚಕ್ರದವರಿಗೆ ತಲೆ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇವರಲ್ಲಿ ಸಹನೆಯ ಸಾಮರ್ಥ್ಯ ಬಹಳ ಕಡಿಮೆಯಿರುತ್ತದೆ ಎಂದು ಹೇಳಲಾಗುವುದು. ಅತಿಯಾದ ಸಿಟ್ಟು, ಉತ್ಸಾಹವು ಮೆದುಳಿನ ಮೇಲೆ ಕೆಲವು ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ತಲೆ ನೋವು, ಹಲ್ಲಿನ ಸಮಸ್ಯೆ, ದವಡೆ ಹಾಗೂ ಮುಖದ ಮೇಲೆ ಕಲೆಗಳಂತಹ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತವೆ. ಇದಕ್ಕೆ ಪರಿಹಾರವೆಂದರೆ ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

ವೃಷಭ

ವೃಷಭ

ಈ ರಾಶಿಯವರಿಗೆ ಗಂಟಲು, ಕುತ್ತಿಗೆ, ಕಿವಿ, ಮೂಗು, ಹಲ್ಲು ಮತ್ತು ಶ್ರವಣಗಳಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಉತ್ತಮ ಕೇಳುವಿಕೆ ಹಾಗೂ ಹಲ್ಲುಗಳನ್ನು ಹೊಂದಿರುತ್ತಾರೆ. ತಂಡಿ ಜ್ವರಗಳು ಇವರನ್ನು ಆಗಾಗ ಬಾಧಿಸುವುದು. ಥೈರಾಯ್ಡ್, ಕತ್ತಿಗೆ ಸಂಬಂಧಿಸಿದ ಸಮಸ್ಯೆ, ಕಿವಿಯ ಸೋಂಕುಗಳು ಅಧಿಕವಾಗಿ ಬಾಧಿಸುವ ಸಾಧ್ಯತೆಗಳಿರುತ್ತವೆ. ಚಿಂತಿಸದಿರಿ, ಈ ರಾಶಿಯಲ್ಲಿಯೂ ಶುಕ್ರನೇ ಆಳುತ್ತಾನೆ. ಆದ್ದರಿಂದ ಈ ರಾಶಿಯವರೂ ಶುಕ್ರನ ಅಧಿಪತಿಯಾಗಿರುವ ಲಕ್ಷ್ಮಿಯನ್ನೇ ಪೂಜಿಸುವ ಮೂಲಕ ಧನಾತ್ಮಕ ಶಕ್ತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯಬಹುದು.

ಮಿಥುನ

ಮಿಥುನ

ಈ ರಾಶಿಯವರಿಗೆ ವಾಸನೆ, ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಭಲವಾಗಿ ಕಾಡುತ್ತವೆ. ಸಾಮಾನ್ಯವಾಗಿ ಶೀತಗಳು, ಜ್ವಾಲೆ, ಕೆಮ್ಮುಗಳಂತಹ ಸಮಸ್ಯೆಗಳು ಇವರನ್ನು ಆಗಾಗ ಕಾಡುತ್ತದೆ.ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

ಕರ್ಕ

ಕರ್ಕ

ಇವರಿಗೆ ಹೊಟ್ಟೆ, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತದೆ. ಇವರು ತಮ್ಮ ಕೋಪ ಹಾಗೂ ಭಾವನೆಗಳನ್ನು ಹಿಡಿತದಲ್ಲಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅಜೀರ್ಣ, ಕರುಳಿನ ರೋಗ, ಆಸಿಡ್ ರಿಫ್ಲೆಕ್ಸ್ ರೋಗಗಳು ಆಗಾಗ ಕಾಡುವ ಸಾಧ್ಯತೆಗಳು ಹೆಚ್ಚು. ಈ ರಾಶಿಯಲ್ಲಿ ಚಂದ್ರ ಅಧಿಪತ್ಯ ವಹಿಸಿರುತ್ತಾನೆ. ಚಂದ್ರನ ಅಧಿಪತಿಯಾದ ದೇವತೆ ಎಂದರೆ ಗೌರಿ. ಗೌರಿ ಎಂದರೆ ಶಾಂತಿ, ಸಹಾನುಭೂತಿ, ಕರುಣೆಯ ಸಾಕಾರರೂಪವಾಗಿದ್ದು ಗೌರಿಯನ್ನು ಪೂಜಿಸುವ ಮೂಲಕ ಈ ಗುಣಗಳನ್ನೂ ಪಡೆಯಬಹುದು.

ಸಿಂಹ

ಸಿಂಹ

ಈ ರಾಶಿಯವರಿಗೆ ಹೃದಯ ಮತ್ತು ರಕ್ತ ಸಂಬಂಧಿ ಸಮಸ್ಯೆಗಳು ಕಾಡುವುದು. ಇವರು ಅಧಿಕೃತ ಮತ್ತು ವಿಶ್ವಾಸ ಭರಿತ ವ್ಯಕ್ತಿಗಳು. ಹೃದಯ ಮತ್ತು ರಕ್ತದ ಹರಿವಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಇವರು ಬಳಲುತ್ತಾರೆ. ಇವರು ಈ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಕ್ಕೆ ಪರಿಹಾರವೆನೆಂದರೆ ಈ ರಾಶಿಯಲ್ಲಿ ಸೂರ್ಯ ಅಧಿಪತ್ಯ ವಹಿಸಿರುತ್ತಾನೆ. ಅಂತೆಯೇ ಶಿವನೇ ಲೋಕಾಧಿಪತಿಯಾಗಿದ್ದು ಶಿವನನ್ನು ಆರಾಧಿಸುವುದು ಸುಲಭ ಮತ್ತು ಶಿವ ಸುಲಭವಾಗಿ ಒಲಿಯುವವನಾಗಿದ್ದಾನೆ. ಆದ್ದರಿಂದ ಈ ರಾಶಿಯವರು ಪವಿತ್ರ ಮಂತ್ರವನ್ನು ಸದಾ ಪಠಿಸುತ್ತಾ ಶಿವನನ್ನು ಆರಾಧಿಸುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

ಕನ್ಯಾ

ಕನ್ಯಾ

ಈ ರಾಶಿಯವರಿಗೆ ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದು. ಚಯಾಪಚಯ ಕ್ರಿಯೆಯಿಂದಲೇ ಬಹುಬೇಗ ಸ್ಥೂಲ ಕಾಯವನ್ನು ಹೊಂದುವರು. ಇವರು ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಹುಣ್ಣು, ಮಲಬದ್ಧತೆ, ಆಹಾರ ಅಲರ್ಜಿ ಸೇರಿದಂತೆ ಕೆಲವು ತಿನ್ನುವ ಕಾಯಿಲೆಗಳಿಂದ ಬಳಲುತ್ತಾರೆ. ಇದಕ್ಕೆ ಪರಿಹಾರವೇನೆಂದರೆ ಕನ್ಯಾರಾಶಿಯಲ್ಲಿ ಬುಧಗ್ರಹ ಪ್ರಾಬಲ್ಯ ಹೊಂದಿದೆ. ಬುಧನ ಅಧಿಪತಿಯಾದ ಶ್ರೀಮನ್ನಾರಾಯಣ ವಿಷ್ಣುವಿನ ಅವತಾರವಾಗಿದ್ದು ಈ ರಾಶಿಯವರು ಶ್ರೀಮನ್ನಾರಾಯಣನನ್ನೇ ಪೂಜಿಸುವ ಮೂಲಕ ಜೀವನದಲ್ಲಿ ಸಮೃದ್ಧಿ ಮತ್ತು ಕ್ಷಿಪ್ರವಾದ ಆದಾಯವನ್ನು ಪಡೆಯಬಹುದು. ಸಾಮಾನ್ಯವಾಗಿ ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಒಂಟಿಯಾಗಿದ್ದಾಗ ನೀವು ನಡೆಸುವ ಚಿಂತನೆ ಮತ್ತು ವಿಮರ್ಶೆಗಳ ಪರಿಣಾಮವಾಗಿ ನಿಮ್ಮಲ್ಲಿ ಬಹಳವಾದ ಸಂಗತಿಗಳು ಹೊಮ್ಮುತ್ತವೆ. ಯಾರೇ ಎಷ್ಟೇ ಸಲಹೆಗಳನ್ನು ನೀಡಿದರೂ ನೀವು ಒಂಟಿಯಾಗಿದ್ದಾಗ ತಳೆದ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ.

ತುಲಾ

ತುಲಾ

ಆಹಾರ ಸಂಸ್ಕರಣೆಯ ಚಿಹ್ನೆಗಳು ಈ ರಾಶಿಚಕ್ರದವರಲ್ಲಿ ಬಲವಾಗಿರುತ್ತದೆ. ಈ ವ್ಯಕ್ತಿಗಳಿಗೆ ಜೀರ್ಣಕ್ರಿಯೆ ಮತ್ತು ಬಲಬದ್ಧತೆಯ ಸಮಸ್ಯೆ ಹೆಚ್ಚು ಕಾಡುವುದು. ಇವರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಗಂಭೀರವಾಗಿ ಕಾಡುವುದು. ಇದಕ್ಕೆ ಚಿಂತಿಸುವ ಅವಶ್ಯಕತೆ ಇಲ್ಲ ಈ ರಾಶಿಯನ್ನು ಶುಕ್ರ ಆಳುತ್ತಾನೆ. ಮತ್ತು ಶುಕ್ರನ ಅಧಿಪತ್ಯ ವಹಿಸಿರುವ ದೇವತೆ ಎಂದರೆ ಲಕ್ಷ್ಮಿ. ಆದ್ದರಿಂದ ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಜೀವನದಲ್ಲಿ ಸಮೃದ್ಧಿ ಮತ್ತು ಆರೋಗ್ಯವನ್ನು ಪಡೆಯ ಬಹುದು. ಇನ್ನು ಇವರಿಗೆ ಪಕ್ಷಿ ಮತ್ತು ಗಾಳಿಯ ಚಿಹ್ನೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರವು ಉತ್ತಮ ಪಡಿಸಿಕೊಳ್ಳಲು ಈ ಚಿಹ್ನೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಗ್ರೀಕ್ ಶಾಸ್ತ್ರದ ಪ್ರಕಾರ ಇವರಿಗೆ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರಿಗೆ ಜನನಾಂಗ ಮತ್ತು ಹಾರ್ಮೋನ್ ಸಮಸ್ಯೆಗಳು ಹೆಚ್ಚು ಕಾಡುವ ಸಾಧ್ಯತೆಗಳಿರುತ್ತವೆ. ಇವರು ಇತರರ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಗಾಳಿ ಗುಳ್ಳೆಗಳ ಸೋಂಕು, ಮಧುಮೇಹ, ನೋವು ಹಾಗೂ ಮುಟ್ಟಿನ ಸಮಸ್ಯೆಗಳು ಅಧಿಕವಾಗಿ ಕಾಡುವುದು. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ, ಈ ರಾಶಿಯಲ್ಲಿ ಮಂಗಳನೇ ಅಧಿಪತ್ಯ ವಹಿಸಿರುತ್ತಾನೆ. ಆದ್ದರಿಂದ ಮಂಗಳನ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು. ನೆನಪಿಡಿ ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇವರಿಗೆ ನೀರು ಮತ್ತು ಚಂದ್ರನ ಆಜೃತಿಯು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಸ್ಟಾರ್ ಆಕಾರದ ಬೆಳ್ಳಿಯ ಆಭರಣ ಧರಿಸಿದರೆ ಯಶಸ್ಸು ನಿಮ್ಮ ಜೊತೆಗೆ ಇರುವುದು.

ಧನು

ಧನು

ಈ ರಾಶಿಯವರಿಗೆ ದೃಷ್ಟಿ, ತೊಡೆ, ಸೊಂಟ ಮತ್ತು ಯಕೃತ್ತಿನ ಸಮಸ್ಯೆಗಳು ಹೆಚ್ಚು ಕಾಡುವುದು. ದುರ್ಬಲ ದೃಷ್ಟಿ ದೋಷ, ತೂಕದ ಸಮಸ್ಯೆ ಮತ್ತು ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಾರೆ. ಈ ರಾಶಿಯಲ್ಲಿ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ಎಂದರೆ "ಶ್ರೀ ದಕ್ಷಿಣಾಮೂರ್ತಿ" ದಕ್ಷಿಣಾಮೂರ್ತಿಯೂ ಶಿವನ ಅವತಾರಗಳಲ್ಲೊಂದಾಗಿದ್ದು ಈತನು ಬುದ್ಧಿಮತ್ತೆ ಮತ್ತು ಜ್ಞಾನದ ಆಗರವಾಗಿದ್ದಾನೆ. ಆದ್ದರಿಂದ ಧನುರಾಶಿಯವರು ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಅಪಾರ ಜ್ಞಾನ ಮತ್ತು ತಿಳಿವಳಿಕೆ ಪಡೆದು ಜೀವನದಲ್ಲಿ ಬಹಳಷ್ಟನ್ನು ಸಾಧಿಸಬಹುದು.

ಮಕರ

ಮಕರ

ಈ ರಾಶಿಯವರು ದುರ್ಬಲವಾದ ಮೂಳೆಯ ರಚನೆಯಿಂದ ಬಳಲುತ್ತಾರೆ. ಇವರಲ್ಲಿ ಕೂದಲು, ಉಗುರು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ರಾಶಿಯಲ್ಲಿ ಮಂಗಳ ಪ್ರಾಬಲ್ಯ ಹೊಂದಿರುತ್ತಾನೆ. ಮಂಗಳಗ್ರಹದ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಮಕರ ರಾಶಿಯವರು ಜೀವನದಲ್ಲಿ ಸಮೃದ್ಧಿ, ನೆಮ್ಮದಿಗಳನ್ನು ಪಡೆಯಬಹುದು.

ಕುಂಭ

ಕುಂಭ

ಈ ರಾಶಿಚಕ್ರದವರಿಗೆ ಆರೋಗ್ಯ ಸಮಸ್ಯೆಗಳಾಗಿ ಸಂಧಿವಾತ, ಹೃದಯದ ತೊಂದರೆ, ಊದಿಕೊಂಡ ವಲಯಗಳು, ಉಬ್ಬಿರುವ ರಕ್ತನಾಳ, ಅಲರ್ಜಿ ಮತ್ತು ಅಸ್ತಮಗಳಿಂದ ಬಳಲುತ್ತಾರೆ. ಕುಂಭರಾಶಿಯಲ್ಲಿ ಮಂಗಳ ಅಧಿಪತ್ಯ ವಹಿಸಿರುತ್ತಾನೆ. ಶಿವನೇ ಮಂಗಳನ ಅಧಿಪತಿಯೂ ಆಗಿರುವ ಕಾರಣ ಈ ರಾಶಿಯವರು ಶಿವನನ್ನು ತುಂಬುಹೃದಯದಿಂದ ಪ್ರಾರ್ಥಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

ಮೀನ

ಮೀನ

ಈ ರಾಶಿಯವರಿಗೆ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದು. ಇವರು ನಿರಾಶದಾಯಕ ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಅನೇಕ ರೋಗಗಳು ಕಾಡುತ್ತವೆ. . ಈ ರಾಶಿಯಲ್ಲಿಯೂ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಉತ್ತಮ ಫಲವನ್ನು ಪಡೆಯಬಹುದು.

English summary

Health Issues That Can Be Faced By You, As Per Your Zodiac Sign!

Here, in this article, we are revealing about the possible health issues that are related as per your zodiac sign!This was a technique which was used in medical astrology that prevailed in the past! So, check out on what are the possible ways in which a person could suffer from any possible ailment, based on zodiac sign.
X
Desktop Bottom Promotion