For Quick Alerts
ALLOW NOTIFICATIONS  
For Daily Alerts

  ಜುಲೈ 07: ಶನಿವಾರದ ದಿನ ಭವಿಷ್ಯ

  By Deepu
  |

  ನಿತ್ಯವು ನಾವು ಏನು ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಇಂದು ಮಾಡಿದ ನಮ್ಮ ಕೆಲಸದ ಫಲವನ್ನು ನಾವು ಇಂದಲ್ಲಾ ನಾಳೆ ಅನುಭವಿಸಲೇ ಬೇಕು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಹಾಗೂ ಪುಣ್ಯದಿಂದ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾಗಿಯೇ ದಯೆ, ಧರ್ಮ, ಆಚಾರ-ವಿಚಾರಗಳಿಂದ ನಮ್ಮ ನಡತೆ ಕೂಡಿದ್ದರೆ ಉತ್ತಮ ಫಲಗಳನ್ನು ನಾವು ಅನುಭವಿಸುತ್ತೇವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ನಾವು ಮಾಡಿದ ಕರ್ಮಗಳ ಆಧಾರದ ಮೇಲೆಯೇ ನಮ್ಮ ಗ್ರಹಗತಿಗಳ ಸ್ಥಾನವು ಶಕ್ತಿಯುತವಾಗುತ್ತದೆ. ಪಾಪ ಫಲದಿಂದ ಕೂಡಿದ್ದರೆ ಒಂದಿಷ್ಟು ಕೆಡುಕು ಉಂಟಾಗುವುದು. ಉತ್ತಮ ಫಲದಿಂದ ಕೂಡಿದ್ದರೆ ಅದೃಷ್ಟಗಳು ಒಲಿದು ಬರುತ್ತವೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಒಳ್ಳೆಯ ನಡತೆ ಅಥವಾ ಉತ್ತಮ ಕೆಲಸ ಕೈಗೊಂಡರೆ ನಾಳೆಯ ಭವಿಷ್ಯದಲ್ಲಿ ಉತ್ತಮ ಅದೃಷ್ಟಗಳನ್ನು ನಿರೀಕ್ಷಿಸಬಹುದು. ಜುಲೈ 7ನೇ ತಾರೀಖಾದ ಇಂದು ನಿಮ್ಮ ಕರ್ಮಫಲಗಳಿಗೆ ಅನುಗುಣವಾಗಿ ಯಾವೆಲ್ಲಾ ಬದಲಾವಣೆಯನ್ನು ಅನುಭವಿಸುವಿರಿ? ಎನ್ನುವುದನ್ನು ಈ ಮುಂದಿರುವ ವಿವರಣೆಯನ್ನು ಅರಿಯುವುದರ ಮೂಲಕ ತಿಳಿಯಿರಿ....

  ಮೇಷ

  ಮೇಷ

  ವೈವಾಹಿಕ ಜೀವನದ ಬಗ್ಗೆ ಕೆಟ್ಟ ಅನುಭವಗಳನ್ನು ಹೊಂದಿದ್ದರೆ ಇಂದು ನಿಮಗೆ ಅದರ ಬಗ್ಗೆ ಸೂಕ್ತ ಮಾಹಿತಿ ದೊರೆಯುವುದು. ಇಂದು ಕೆಲವು ಕಠಿಣ ಅನುಭವಗಳನ್ನು ಹೊಂದುವ ಸಾಧ್ಯತೆಗಳಿವೆ. ಹೊಸ ಹೂಡಿಕೆಗಳು ಲಾಭವನ್ನು ತಂದು ಕೊಡುವುದು. ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿ ಕೊಳ್ಳುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಪಾಯಕಾರಿ ಸಮಸ್ಯೆಗಳಿಂದ ದೂರ ಉಳಿಯಲು ಪ್ರಯತ್ನಿಸಿ. ಗುಪ್ತ ಶತ್ರುಗಳು ನಿಮಗೆ ಹಾನಿಉಂಟುಮಾಡುವ ಸಾಧ್ಯತೆಗಳಿವೆ. ಸಂಜೆಯ ಹೊತ್ತಿಗೆ ಕೆಟ್ಟ ಸುದ್ದಿಯನ್ನು ಕೇಳುವ ಸಾಧ್ಯತೆಗಳಿವೆ ಎಮದು ಹೇಳಲಾಗುತ್ತದೆ.

  ವೃಷಭ

  ವೃಷಭ

  ಇಂದು ನೀವು ನಿಮ್ಮ ಪಾಲುದಾರರೊಂದಿಗೆ ಸಮಯ ಕಳೆಯಲು ವಿಶೇಷವಾದ ದಿನ ಎಂದು ಹೇಳಲಾಗುವುದು. ಸಾಮಾಜಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಜೊತೆಗೆ ಹೊಸ ಸ್ನೇಹಿತರನ್ನು ಪಡೆಯುವಿರಿ. ಪ್ರಮುಖ ವ್ಯಕ್ತಿಗಳನ್ನು ಭೇಟಿ ಯಾಗುವುದರಿಂದ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅಜಾಗರೂಕತೆಯಿಂದ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಪ್ರಮುಖ ಕೆಲಸವನ್ನು ಕೈಗೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕೈಗೊಂಡ ಪ್ರವಾಸಗಳು ಫಲಪ್ರದವಾಗಿರುವುದು. ಹೊಸ ಪಾಲುದಾರರಿಂದ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಸಹೋದರರಿಂದ ಸಂಪೂರ್ಣ ಬೆಂಬಲವನ್ನು ಪಡೆದುಕೊಳ್ಳುವಿರಿ.

  ಮಿಥುನ

  ಮಿಥುನ

  ಮನೆಗೆ ಅಚಾನಕ್ ಆಗಿ ಬರುವ ಅತಿಥಿಗಳಿಂದ ಒಂದಿಷ್ಟು ಆನಂದ ಸಿಗುವುದು. ಸಮಾಜ ಸೇವೆಯ ಕಡೆಗೆ ಒಲವನ್ನು ತೋರಬಹುದು. ಅಗತ್ಯವಿರುವವರಿಗೆ ಒಂದಿಷ್ಟು ದೇಣಿಗೆ ಹಾಗೂ ದಾನ ಮಾಡುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡಬೇಕು. ಆಸ್ತಿಗೆ ಸಂಬಂಧಿಸಿದ ವಿಷಯಗಳು ಫಲಪ್ರದವಾಗಿರುತ್ತವೆ. ನಿಮ್ಮ ಪಾಲುದಾರರು ಅತ್ಯುತ್ತಮ ಭಾವನೆಯನ್ನು ಹೊಂದಿರುತ್ತಾರೆ. ಕೆಲವು ಪ್ರಣಯ ಪೂರ್ಣ ಕ್ಷಣಗಳನ್ನು ಆನಂದಿಸುವ ಸಾಧ್ಯತೆಗಳಿವೆ.

  ಕರ್ಕ

  ಕರ್ಕ

  ಇಂದು ನಿಮಗೆ ಅತ್ಯುತ್ತಮ ಅವಕಾಶಗಳು ಒದಗಿ ಬರುತ್ತವೆ. ಕೆಲಸದಲ್ಲಿ ಸಂಪೂರ್ಣ ಆಸಕ್ತಿ ಹಾಗೂ ಶ್ರಮ ವಹಿಸುವುದರಿಂದ ಕೆಲಸವು ಯಶಸ್ವಿಯಾಗುವುದು. ಕುಟುಂಬದಲ್ಲಿ ಇರುವ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹಣವನ್ನು ವ್ಯಯಿಸಬೇಕು. ಯಾವುದೇ ಕೆಲಸ ಮಾಡುವ ಮುನ್ನ ಒಂದಿಷ್ಟು ಎಚ್ಚರಿಕೆ ಹಾಗೂ ಯೋಚನೆಯನ್ನು ಮಾಡಲು ಮರೆಯದಿರಿ.

  ಸಿಂಹ

  ಸಿಂಹ

  ಇಂದು ನೀವು ನಿಮ್ಮದೇ ಆದ ಒಂದಿಷ್ಟು ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳಿವೆ. ಅನಿರೀಕ್ಷಿತವಾದ ಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗುವುದು. ಸಂಬಂಧಗಳಲ್ಲಿ ಕೆಲವು ಗೊಂದಲ ಉಂಟಾಗಬಹುದು. ಗಾಯದ ಅಥವಾ ನೋವಿನ ಭಯದಿಂದ ಅಪಾಯವನ್ನು ತಂದುಕೊಳ್ಳದಿರಿ. ಕುಟುಂಬಕ್ಕಾಗಿ ನಿಮ್ಮ ಸಂತೋಷವನ್ನು ತ್ಯಾಗಮಾಡಬೇಕಾಗುವುದು. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ಸಂಪೂರ್ಣಗೊಳ್ಳದೆ ನೋವನ್ನು ಅನುಭವಿಸುವ ಸಾಧ್ಯತೆಗಳಿವೆ. ಅನುಭವವು ನಮ್ಮನ್ನು ಸೂಕ್ತ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

  ಕನ್ಯಾ

  ಕನ್ಯಾ

  ಇಂದು ಸಾಕಷ್ಟು ಸಮಯದಲ್ಲಿ ನೀವು ವಿಪರೀತವಾದ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಅವು ನಿಮ್ಮ ನಿತ್ಯದ ಕೆಲಸ ಹಾಗೂ ಧಾರ್ಮಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಲು ತೊಡಕನ್ನುಂಟುಮಾಡಬಹುದು. ಕೆಲವು ಆರೋಗ್ಯ ಸಮಸ್ಯೆಯು ನಿಮಗೆ ತೊಂದರೆಯನ್ನುಂಟುಮಾಡುವುದು. ಕುಟುಂಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಇದು ಉತ್ತಮವಾದ ದಿನ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು. ಪಾಲುದಾರರ ಜೀವನದಲ್ಲಿ ನಿಮ್ಮ ಪಾತ್ರದ ಪ್ರಾಮುಖ್ಯತೆಯನ್ನು ಅರಿತು ಕೊಳ್ಳುವಿರಿ.

   ತುಲಾ

  ತುಲಾ

  ನಿಮ್ಮ ಶ್ರಮದಾಯಕ ಕೆಲಸವನ್ನು ಸಹೋದ್ಯೋಗಿಗಳು ಮತ್ತು ಹಿರಿಯರು ಮೆಚ್ಚಿಕೊಳ್ಳುವರು. ಹೊಸ ಮೂಲಗಳಿಂದ ಬರುವ ಹಣವು ನಿಮಗೆ ಒಂದಿಷ್ಟು ಸಂತೋಷವನ್ನು ನೀಡುವುದು. ವ್ಯಾಪಾರಿಗಳಿಗೆ ಒಂದಿಷ್ಟು ಅಡೆತಡೆ ಉಂಟಾಗಬಹುದು. ನಿಮ್ಮ ಪಾಲುದಾರರಿಂದ ದೊರೆಯುವ ಸಹಕಾರವು ನಿಮ್ಮ ಕಠಿಣ ಸಮಯವನ್ನು ಎದುರಿಸಲು ಸಹಾಯವಾಗುವುದು.

  ವೃಶ್ಚಿಕ

  ವೃಶ್ಚಿಕ

  ನಿಮ್ಮ ಪ್ರೀತಿಯ ಜೀವನಕ್ಕೆ ಇದು ಅತ್ಯುತ್ತಮವಾದ ದಿನ. ನಿಮ್ಮವರೊಂದಿಗೆ ನೀವು ವಿನೋದದ ಪ್ರವಾಸವನ್ನು ಕೈಗೊಳ್ಳಬಹುದು. ಸರಿಯಾದ ಸ್ಥಳ ಹಾಗೂ ರೀತಿಯಲ್ಲಿ ಹೂಡಿಕೆಯನ್ನು ಕೈಗೊಂಡರೆ ದೇವರು ಉತ್ತಮ ಪ್ರತಿಫಲವನ್ನು ನೀಡುವನು. ನಿಮ್ಮ ಹಣಕಾಸಿನ ಸ್ಥಿತಿಯು ಉತ್ತಮವಾಗುವುದು. ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಉತ್ತಮ ಪ್ರತಿಫಲ ದೊರೆಯುವುದು. ನಿಮ್ಮ ಪಾಲುದಾರರು ಸಂಜೆಯ ಸಮಸಯದಲ್ಲಿ ಒಂದಿಷ್ಟು ವಸ್ತುಗಳ ಖರೀದಿ ಮಾಡಬಹುದು.

   ಧನು

  ಧನು

  ಇಂದು ನೀವು ನಿಮ್ಮ ಕುಟುಂಬದವರೊಂದಿಗೆ ಶಾಪಿಂಗ್ ಕೈಗೊಳ್ಳುವಿರಿ. ಒಂದಷ್ಟು ದಣಿವನ್ನು ಅನುಭವಿಸುವಿರಿ. ಹೊಸ ವ್ಯವಹಾರದಿಂದ ಲಾಭವು ದೊರೆಯುವುದು. ನಿಮ್ಮ ಸಂಬಂಧಗಳ ಪ್ರಯಾಣವು ಯಶಸ್ವಿಯಾಗಿ ನೆರವೇರುವುದು. ಹಠಾತ್ ಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು. ನಿಮ್ಮ ಪಾಲುದಾರು ಅಥವಾ ಸಂಗಾತಿ ದುಃಖದಲ್ಲಿ ಇರುವ ಸಾಧ್ಯತೆಗಳಿವೆ. ನೀವು ಕೈಗೊಳ್ಳುವ ಕೆಲಸ ಕಾರ್ಯಗಳು ಯಶಸ್ವಿ ಹೊಂದುವುದು.

  ಮಕರ

  ಮಕರ

  ನೀವು ಇಂದು ಕೈಗೊಳ್ಳುವ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಯಶಸ್ವಿ ಹೊಂದುವುದು. ಹೊಸ ಉಡುಗೆ ಹಾಗೂ ಬಂಗಾರವನ್ನು ಖರೀದಿಸುವ ಸಾಧ್ಯತೆಗಳಿವೆ ಎಂದು ಊಹಿಸಲಾಗಿದೆ. ನಿಮ್ಮ ವೈವಾಹಿಕ ಜೀವನದ ಬಗ್ಗೆ ಒಂದಿಷ್ಟು ಎಚ್ಚರಿಕೆ ವಹಿಸಬೇಕು. ಸಂಗಾತಿಗೆ ನೋವುಂಟಾಗುವ ಕೆಲಸವನ್ನು ಕೈಗೊಳ್ಳದಿರಿ. ಸ್ನೇಹಿತರೊಂದಿಗೆ ಸಂಜೆಯ ವೇಳೆ ವಿನೋದದ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಹೊಸ ವಿಚಾರಗಳನ್ನು ಮನಸ್ಸಲ್ಲಿ ತುಂಬುಕೊಳ್ಳುವಿರಿ. ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮ ಪರೀಕ್ಷೆಯಲ್ಲಿ ಯಶಸ್ವಿಯಾಗುವರು.

  ಕುಂಭ

  ಕುಂಭ

  ಯಾರನ್ನು ಕುರುಡಾಗಿ ನಂಬದಿರಿ. ಮೊದಲು ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಪಾಲುದಾರರ ಅನಾರೋಗ್ಯವು ಒಂದಿಷ್ಟು ಕಾಳಜಿಯ ಭಾವನೆಯನ್ನು ಮೂಡಿಸುವುದು. ಸಂಗಾತಿಯ ಸಂತೋಷಕ್ಕೆ ಒಂದಿಷ್ಟು ಪ್ರಯತ್ನ ಕೈಗೊಳ್ಳಬೇಕಾಗುವುದು. ಮಾನಸಿಕ ಚಿಂತೆಗಳು ನಿಮ್ಮ ಕುಟುಂಬದ ಜೀವನಕಕ್ಕೆ ಒಂದಿಷ್ಟು ನೋವನ್ನುಂಟು ಮಾಡುವುದು. ನಿಮ್ಮ ಅಗತ್ಯ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಗಳು ಯಶಸ್ವಿಯಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಳ್ಳುವಿರಿ.

  ಮೀನ

  ಮೀನ

  ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೀವು ರಚನಾತ್ಮಕ ಕೆಲಸವನ್ನು ಕೈಗೊಳ್ಳಬೇಕಾಗುವುದು. ನಿಮ್ಮ ಜೀವನದ ಪಾಲುದಾರರೊಂದಿಗೆ ಬಿಕ್ಕಟ್ಟಿನ ಕೆಲಸವನ್ನು ನಿರ್ವಹಿಸುವ ಸಾಧ್ಯತೆಗಳಿವೆ. ನಿಮ್ಮ ಅನಾರೋಗ್ಯದಿಂದ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದು. ಒಂದಿಷ್ಟು ತೊಂದರೆಯನ್ನು ಅನುಭವಿಸುವಿರಿ. ಗುಪ್ತ ಶತ್ರುಗಳು ನಿಮಗೆ ತೊಂದರೆ ಉಂಟು ಮಾಡಬಹುದು. ನಿಮ್ಮ ದೌರ್ಬಲ್ಯದಿಂದ ಒಂದಿಷ್ಟು ಸಮಸ್ಯೆಗಳು ಎದುರಾಗಬಹುದು.

  English summary

  Daily Horoscope: 07 July 2018

  People often worry about the future when they simply have no control over. We sometimes think the tragedy in our lives happen because of something that we did or someone that we have hurt. While Karma has its role to play, the position of our stars have some power as well. Instead of loathing about the past or the future, making the most out of the present is what matters. And just when you want a little heads up regarding the events of today, we bring you your daily horoscope. Here is your Daily Horoscope for July 7th 2018.
  Story first published: Saturday, July 7, 2018, 11:43 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more