ಈ 4 ರಾಶಿಯವರು ಒಳ್ಳೆಯ ಗುಣ-ನಡತೆಯವರು, ಯಾರಿಗೂ ನೋವು ಮಾಡುವವರಲ್ಲ

Posted By: Deepu
Subscribe to Boldsky

ನಿಮಗೆ, ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದರೆ ಯಾವೆಲ್ಲಾ ಗುಣಗಳು ಇರಬೇಕು? ಎನ್ನುವ ಪ್ರಶ್ನೆ ಕೇಳಿದಾಗ ಏನೆಂದು ಉತ್ತರಿಸುತ್ತೀರಿ? ಬಹುಶಃ ನಿಮ್ಮ ದೃಷ್ಟಿಯಲ್ಲಿ ಒಳ್ಳೆಯ ಗುಣಗಳು ಯಾವವು? ಎನ್ನುವುದರ ಆಧಾರದ ಮೇಲೆ ಉತ್ತರ ನೀಡಬಹುದು. ಉತ್ತಮ ವ್ಯಕ್ತಿ ಆಗಬೇಕು ಎಂದರೆ ಆತನಲ್ಲಿ ಸ್ವಾರ್ಥ ಗುಣಕ್ಕಿಂತ ಪರೋಪಕಾರಿ ಗುಣಗಳು ಅಥವಾ ಇತರರಿಗೆ ಸಹಾಯ ಮಾಡುವಂತಹ ಉದಾರ ಗುಣಗಳಿರಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿ ಚಕ್ರಗಳಲ್ಲಿ ಕೆಲವು ರಾಶಿಚಕ್ರದವರು ಅತ್ಯುತ್ತಮ ಗುಣಗಳನ್ನು ಒಳಗೊಂಡಿರುತ್ತಾರೆ. ಅವರು ಸಮಾಜದಲ್ಲಿ ಎಲ್ಲರೊಡನೆ ಅತ್ಯುತ್ತಮ ವರ್ತನೆ ತೋರುತ್ತಾರೆ. ಜೊತೆಗೆ ತಮ್ಮ ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ಅನುಸರಿಸುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಕರ್ಕ

ಕರ್ಕ

ಈ ರಾಶಿಚಕ್ರಕ್ಕೆ ಸೇರಿದ ವ್ಯಕ್ತಿಗಳು ಸದಾ ಸಹಾಯಕ್ಕಾಗಿ ನಿಲ್ಲುತ್ತಾರೆ. ಕಷ್ಟದ ಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವರು. ನಾಟಕದ ಪ್ರವೃತ್ತಿಯಿಂದಲಾದರೂ ಇತರರನ್ನು ಸಂತೋಷದಿಂದ ಇಡಲು ಪ್ರಯತ್ನಿಸುತ್ತಾರೆ. ಇವರು ಇತರರಿಗೆ ಸಹಾಯ ಮಾಡುವಂತೆ ತಮ್ಮ ಬಗ್ಗೆಯೂ ಕೊಂಚ ಚಿಂತಿಸುವ ಅಗತ್ಯವಿದೆ. ತಮ್ಮ ಸ್ವಂತ ಭಾವನಾತ್ಮಕ ಯೋಗಕ್ಷೇಮಗಳಿಗೆ ಸ್ವಲ್ಪ ಸಮಯವನ್ನು ನೀಡುವುದನ್ನು ಇವರು ಅಭ್ಯಾಸ ಮಾಡಿಕೊಳ್ಳಬೇಕಿದೆ.

ತುಲಾ

ತುಲಾ

ಇವರು ತಾವು ತೆಗೆದುಕೊಳ್ಳುವ ನಿರ್ಣಯದಲ್ಲಿ ಇತರರ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಇವರು ತಮ್ಮ ನಿರ್ಣಯದಿಂದ ಇತರರಿಗೆ ನೋವುಂಟಾಗದಂತೆ ನೋಡಿಕೊಳ್ಳುತ್ತಾರೆ. ಸದಾ ಸಂತೋಷದ ಚಿತ್ತದಿಂದ ಇರುವ ಇವರು ಸಂಘರ್ಷವನ್ನು ಇಷ್ಟಪಡುವುದಿಲ್ಲ. ಇವರ ಒಳ್ಳೆಯ ಗುಣಗಳನ್ನು ಇತರರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಒಳ್ಳೆಯ ಗುಣಗಳನ್ನು ಹೊಂದಿರುವುದರಿಂದ ಇತರರು ಸಾಮಾನ್ಯವಾಗಿ ನಿಮ್ಮೊಂದಿಗೆ ಸಂತೋಷದಿಂದಲೇ ಇರುತ್ತಾರೆ. ಹಾಗಾಗಿ ನಿಮಗೆ ನೀವು ಸ್ವಲ್ಪ ಅಂಟಿಕೊಳ್ಳುವುದನ್ನು ಕಲಿಯಬೇಕಿದೆ.

ಮೀನ

ಮೀನ

ಈ ರಾಶಿಯವರು ಅತ್ಯುತ್ತಮ ವ್ಯಕ್ತಿಗಳು ಹಾಗೂ ಒಳ್ಳೆಯವರಾಗಿರುತ್ತಾರೆ. ಇತರರಿಗೆ ಒಳ್ಳೆಯ ಲಾಭವನ್ನು ತಂದುಕೊಡಲು ಒಲವು ತೋರುತ್ತಾರೆ. ಜನರು ಸಹ ಇವರಿಂದ ಅನೇಕ ಲಾಭವನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ಇವರು ಇತರರಿಗೆ ಸಹಾಯ ಮಾಡುವಲ್ಲಿ ವಿಫಲವಾದಂತೆ ಆದರೆ ತಮಗೆ ತಾವು ಸೋತೆವು ಎನ್ನುವ ಭಾವನೆಯನ್ನು ಹೊಂದುತ್ತಾರೆ. ಇವರು ತಮ್ಮ ಸ್ವಂತ ವಿಚಾರಗಳ ಪ್ರಯುಕ್ತ ಕೆಲವು ಸಮಯ ಕಳೆಯುವುದನ್ನು ರೂಢಿಸಿಕೊಳ್ಳಬೇಕು.

ಕನ್ಯಾ

ಕನ್ಯಾ

ಈ ರಾಶಿಯವರು ಎಲ್ಲಾ ಸಮಯದಲ್ಲೂ ಹೌದು ಎಂದು ಹೇಳುವ ವ್ಯಕ್ತಿಗಳು. ಕೇಳಿ ಬಂದವರಿಗೆ ಎಂದಿಗೂ ಇಲ್ಲ ಎನ್ನುವ ಉತ್ತರವನ್ನು ನೀಡದವರು. ಇತರರ ಸಹಾಯಕ್ಕಾಗಿ ಸದಾ ಸಿದ್ಧರಾಗಿ ನಿಂತಿರುತ್ತಾರೆ. ಇವರಿಂದ ಇತರರು ಬಹಳ ಸುಲಭವಾಗಿಯೇ ಸಹಾಯವನ್ನು ಮತ್ತು ಉಪಯೋಗವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಬೇರೆಯವರಿಗಾಗಿ ನಿಮ್ಮ ಸಮಯವನ್ನು ಕಳೆಯಬೇಕೆಂದಿಲ್ಲ. ಅವರಿಗೆ ಅಗತ್ಯ ಇರುವಾಗ ಅವರೇ ನಿಮ್ಮಲ್ಲಿಗೆ ಬರುತ್ತಾರೆ.

ಮಕರ

ಮಕರ

ಈ ರಾಶಿಯವರು ಕೆಲಸ ಮಾಡಲು ಬಯಸಿದರೆ ವೇಗವರ್ಧಿತ ರೀತಿಯಲ್ಲಿ ಒಲವು ತೋರುತ್ತಾರೆ. ಇವರು ಇತರರಿಂದ ಅತ್ಯುತ್ತಮ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ. ಜನರಿಗೆ ಸಹಾಯ ಹಾಗೂ ಮಾರ್ಗದರ್ಶನದ ಅಗತ್ಯ ಇದ್ದಾಗ ಅಗತ್ಯವಾಗಿ ಇವರಲ್ಲಿ ಬರುತ್ತಾರೆ. ಬಂದವರಿಗೆ ಸೂಕ್ತ ಸಹಾಯ ಮಾಡುವ ವ್ಯಕ್ತಿಗಳು ಇವರು. ಇವರು ಯಾರನ್ನೂ ಕೆಳಗೆ ಬೀಳಿಸಲು ಇಷ್ಟಪಡುವುದಿಲ್ಲ. ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯಬೇಕು. ಇವರು ತಮ್ಮ ಕೆಲವು ಸ್ವಂತ ಕೆಲಸಗಳಿಗೆ ಮತ್ತು ವಿಷಯಗಳಿಗಾಗಿ ಸಮಯವನ್ನು ಬಳಸಿಕೊಳ್ಳಬೇಕು.

English summary

best-zodiac-signs-that-are-known-be-the-nicest-the-lot

Are you tired of hearing that you are the nicest guy all the time? Or do you feel that a friend of yours is way too sweet for real? Your being nice can be due to your zodiac sign. Here, we bring in the details of the best zodiac signs that are known to be the nicest. These individuals are known to go a step ahead in helping others. So, check on to understand about the nicest traits of these zodiac signs.