ಈ ಐದು ರಾಶಿಯ ಹುಡುಗಿಯರನ್ನು ಮದುವೆಯಾದರೆ, ಸುಖವಾಗಿರುವಿರಿ!

Posted By: Deepu
Subscribe to Boldsky

ಪುರುಷರು ಸಾಮಾನ್ಯವಾಗಿ ತಮ್ಮ ಸಂಗಾತಿಯಾಗಿ ಬರುವ ಹುಡುಗಿ ನೋಡಲು ಸುಂದರ ಹಾಗೂ ಬುದ್ಧಿವಂತೆಯಾಗಿರಬೇಕು ಎಂದು ಬಯಸುತ್ತಾರೆ. ವಿವಾಹದ ನಂತರ ನನ್ನನ್ನು ಅರಿತಂತೆ ತನ್ನ ಮನೆಯವರೊಂದಿಗೂ ಖುಷಿಯಲ್ಲಿ ಬೆರೆಯಬೇಕು.

ನೆಮ್ಮದಿಯ ಜೀವನ ಸಾಗಿಸಲು ಜೊತೆಯಾಗಿ ಇರಬೇಕು ಎಂದು ಬಯಸುತ್ತಾರೆ. ಆದರೆ ರಾಶಿಚಕ್ರಗಳ ಹೊಂದಾಣಿಕೆ ಇಲ್ಲವಾದರೆ ವಿವಾಹದ ಕನಸುಗಳಲ್ಲಿ ಅನೇಕ ವಿಚಾರಗಳು ಭಗ್ನವಾಗುವ ಸಾಧ್ಯತೆಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಸ್ತ್ರೀಯರು ಅತ್ಯುತ್ತಮ ರೀತಿಯಲ್ಲಿ ಪತ್ನಿಯ ಸ್ಥಾನವನ್ನು ತುಂಬುತ್ತಾರೆ.

ಸಾಂಸಾರಿಕ ಜೀವನಕ್ಕೆ ಬೇಕಾಗುವ ಎಲ್ಲಾ ಆಚಾರ ವಿಚಾರಗಳನ್ನು ಆ ರಾಶಿಯವರು ತಿಳಿದಿರುತ್ತಾರೆ ಎಂದು ಹೇಳಲಾಗುವುದು. ನೀವು ವಿವಾಹವಾಗಲು ಹುಡುಗಿಯ ಹುಡುಕಾಟದಲ್ಲಿದ್ದೀರಿ, ಸಂಗಾತಿಯಾಗುವವಳು ನಿಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ತುಂಬಬೇಕು ಎನ್ನುವ ಕನಸುಗಳಿದ್ದರೆ ಈ ರಾಶಿಯ ಹುಡುಗಿಯರನ್ನು ಆಯ್ಕೆ ಮಾಡಲು ಪ್ರಯತ್ನಿಸಿ... 

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ ರಾಶಿಯ ಮಹಿಳೆಯರು ತಾವು ಮಾಡುವ ಎಲ್ಲಾ ಕೆಲಸದಲ್ಲೂ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇವರು ಎಲ್ಲಾ ವಿಚಾರದಲ್ಲೂ ಬಲವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರು ತಮಗೆ ಸವಾಲಾಗಿರುವುದನ್ನು ಎದುರಿಸಲು ಮುಂದಾಗುತ್ತಾರೆ. ಜೊತೆಗೆ ಇತರರಿಗೆ ಪ್ರೇರಣೆಯಾಗುವಂತೆ ಬದುಕುತ್ತಾರೆ. ವಿನಮ್ರತೆಯನ್ನು ಹೊಂದಿರುವ ಇವರು ವ್ಯಕ್ತಿಯ ಭಾವನೆಗಳಿಗೆ ಸ್ಪಂದಿಸುತ್ತಾರೆ. ಸದಾ ಉತ್ಸಾಹದ ಪ್ರವೃತ್ತಿಯನ್ನು ತೋರುವ ಇವರು ನಗುನಗುತ್ತಲೇ ಎಲ್ಲವನ್ನೂ ನಿಭಾಯಿಸುತ್ತಾರೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಕರ್ಕ ರಾಶಿಯ ಮಹಿಳೆಯರು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಇವರು ತನ್ನ ಪ್ರೀತಿ ಪಾತ್ರರಾದವರ ಖುಷಿಗೆ ಅಥವಾ ಅವರಿಗಾಗಿ ಯಾವುದಾದರೂ ಕೆಲಸ ಮಾಡಲು ಮುಂದಾದಾಗುತ್ತಾರೆ. ಇವರು ಪತಿಗೆ ಸಹಕರಿಸಿ, ಸುಂದರವಾದ ಮನೆಯನ್ನು ಕಟ್ಟಲು ಸಹಕರಿಸುತ್ತಾರೆ. ಹಾಗೊಮ್ಮೆ ನಿಮ್ಮ ಸಂಗಾತಿ ಆಗಿರುವವರು ಈ ರಾಶಿಯವರಾಗಿದ್ದರೆ ನೀವೊಬ್ಬ ಅದೃಷ್ಟವಂತರು ಎಂದು ತಿಳಿಯಬಹುದು. ಜೀವನದಲ್ಲಿ ಎಲ್ಲಾ ಬಗೆಯ ಒಳಿತನ್ನು ಅನುಭವಿಸುತ್ತೀರಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ರಾಶಿಯವರು ಆಕರ್ಷಕ ವ್ಯಕ್ತಿತ್ವದೊಂದಿರುತ್ತಾರೆ. ಇವರ ಉತ್ಸಾಹಭರಿತ ಸ್ವಭಾವ ಮತ್ತು ಸ್ವತಂತ್ರವಾದ ನಿರ್ಣಯಗಳು ನಿಮ್ಮನ್ನು ತಕ್ಷಣ ಆಕರ್ಷಿಸುತ್ತದೆ. ಈ ರಾಶಿಯ ಸ್ತ್ರೀಯರು ನೈಜ ಪ್ರೀತಿಯನ್ನು ನಂಬುತ್ತಾರೆ ಹಾಗೂ ನೀಡುತ್ತಾರೆ. ಸಂಗಾತಿಯ ಸಂತೋಷಕ್ಕೆ ಏನುಮಾಡಲೂ ಸಹ ಇವರು ಸಿದ್ಧರಿರುತ್ತಾರೆ. ಇವರು ಸಂಬಂಧಗಳ ವಿಚಾರದಲ್ಲಿ ಅತ್ಯಂತ ನಿಷ್ಠಾವಂತ ವ್ಯಕ್ತಿಯಾಗಿರುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ಸಂಗಾತಿಗೆ ಉತ್ತಮ ಪ್ರೀತಿ ಪಾತ್ರಳಾಗಿ ಇರುತ್ತಾಳೆ. ರಕ್ಷಣಾತ್ಮಕವಾದ ಇವರ ಸ್ವಭಾವ ಮತ್ತು ಸೂಕ್ಷ್ಮ ಮನಸ್ಸಿನ ಇವರ ಗುಣಗಳು ಸಂಗಾತಿಯ ಸ್ಥಾನವನ್ನು ಸಂಪೂರ್ಣವಾಗಿ ತುಂಬುತ್ತಾರೆ. ಸಂಗಾತಿಯ ಆಯ್ಕೆಯ ಪಟ್ಟಿಯಲ್ಲಿ ಈ ರಾಶಿಯವರನ್ನು ಸೇರಿಸಿಕೊಳ್ಳುವುದು ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಈ ರಾಶಿಯ ಮಹಿಳೆಯರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅಂತೆಯೇ ಸಂಬಂಧಗಳ ಮೌಲ್ಯದ ಬಗ್ಗೆ ಇವರು ಉತ್ತಮವಾಗಿ ತಿಳಿದಿದ್ದಾರೆ. ಇವರು ಪ್ರಣಯಾತ್ಮಕವಾಗಿ ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ಸಂಬಂಧ ಆರಂಭವಾದ ನಂತರ ಕೇವಲ ಎರಡು ತಿಂಗಳ ಬಳಿಕ ದೂರಾಗುವಂತಹ ಪ್ರವೃತ್ತಿ ಹೊಂದಿರುವುದಿಲ್ಲ. ಇವರು ಒಮ್ಮೆ ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಳ್ಳುವುದಿಲ್ಲ.

English summary

Best Women To Marry According To The Zodiac Signs

There are 5 listed zodiac signs for women, which are believed to be the perfect ones for having women of the marriage material type. Women of these zodiac signs are said to be the perfect partners in life. These zodiac sign women are known to be perfect in maintaining a balance and in handling their relationships in a mature way! Check them out...