ಕೇಳ್ರಪ್ಪೋ ಕೇಳಿ ಮಲ್ಯ ಮೂರನೆಯ ಮದುವೆ ಮಾಡಿಕೊಳ್ಳುತ್ತಿದ್ದಾರಂತೆ!

Posted By: Arshad Hussain
Subscribe to Boldsky

ದೇಶವನ್ನು ದೋಚಿ ವಿದೇಶಕ್ಕೆ ಓಡಿ ಹೋಗಿ ವರ್ಷಗಳೇ ಕಳೆದರೂ, ಯಾವುದೇ ರೀತಿಯಲ್ಲಿ ಬಂಧಿಸಲು ಸಾಧ್ಯವಾಗದ ಒಂದು ಕಾಲದ 'ಮದ್ಯದ ದೊರೆ' ಎಂದೇ ಖ್ಯಾತಿ ಪಡೆದು 'ಒಳ್ಳೆಯ ದಿನಗಳ ರಾಜ' ಎಂಬ ಬಿರುದನ್ನೂ ಪಡೆದಿದ್ದ ಈ ವ್ಯಕ್ತಿ ಈಗ ದೇಶದಿಂದ ವಿದೇಶಕ್ಕೆ ಓಡಿಹೋಗಿದ್ದು ಅಲ್ಲಿಯೇ ಈಗ ಮೂರನೆಯ ಮದುವೆ ಮಾಡಿಕೊಳ್ಳುತ್ತಿರುವ ಸುದ್ದಿ ಪ್ರಕಟಗೊಂಡಿದೆ.

ತನ್ನ ಹಳೆಯ ಗೆಳತಿಯಾಗಿರುವ, ಕಿಂಗ್ ಫಿಷರ್ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್ವಾನಿಯವರನ್ನೇ ಮದುವೆಯಾಗುತ್ತಿರುವ ಸುದ್ದಿ ಬಂದಿದ್ದೇ ತಡ, ಜಗತ್ತಿನಾದ್ಯಂತ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ....

ಇವರ ಕುಟುಂಬ

ಇವರ ಕುಟುಂಬ

ದಿವಂಗತ ವಿಟ್ಠಲ ಮಲ್ಯರವರ ಪುತ್ರರಾಗಿರುವ ಈ ವ್ಯಕ್ತಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಆಸ್ತಿಗಳ ಒಡೆಯರಾಗಿದ್ದರು. ಆದರೆ ಇಂದು ಅವರು ತಮ್ಮ ಎಲ್ಲಾ ಆಸ್ತಿಯನ್ನು ಮಾರಿ ದಿವಾಳಿತನವನ್ನು ಪ್ರಕಟಿಸಿದ್ದಾರೆ. ಈ ಹಣವನ್ನು ಇವರು ತಮ್ಮ ವೈಭವ, ಲೋಲುಪತೆ, ಸುಂದರ ಯುವತಿಯರು ಹಾಗೂ ಕಿಂಗ್ ಫಿಷರ್ ಕ್ಯಾಲೆಂಡರುಗಳಲ್ಲಿ ಖರ್ಚು ಮಾಡಿ ಚಿಂದಿ ಉಡಾಯಿಸಿದ್ದಾರೆ.

ಇಪ್ಪತ್ತೆಂಟರ ವಯಸ್ಸಿನಲ್ಲಿ ಮೊದಲ ಮದುವೆ

ಇಪ್ಪತ್ತೆಂಟರ ವಯಸ್ಸಿನಲ್ಲಿ ಮೊದಲ ಮದುವೆ

1986ರಲ್ಲಿ ಇವರಿಗೆ ಇಪ್ಪತ್ತೆಂಟು ವರ್ಷ ವಯಸ್ಸಾಗಿದ್ದಾಗ ಇವರ ಮೊದಲ ವಿವಾಹವಾಗಿತ್ತು. ಅಂದು ಅಮೇರಿಕಾಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಗಗನಸಖಿ ಸಮೀರಾ ತ್ಯಾಬ್ಜಿ ಎಂಬುವವರನ್ನು ಮೋಹಿಸಿ ಪರಸ್ಪರ ಪ್ರೇಮದಲ್ಲಿ ಸಿಲುಕಿ ಬಳಿಕ ಪ್ರೇಮವಿವಾಹ ಮಾಡಿಕೊಂಡರು. ಬಳಿಕ ಈ ದಂಪತಿಗಳಿಗೆ ಹುಟ್ಟಿದ ಮಗನನ್ನು ಸಿದ್ಧಾರ್ಥ ಮಲ್ಯ ಎಂದೂ ನಾಮಕರಣ ಮಾಡಲಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಜೋಡಿ ವಿಚ್ಛೇದನದ ಮೂಲಕ ವಿಭಜನೆಗೊಂಡಿತು.

ಎರಡನೆ ಮದುವೆಯ ಅದೃಷ್ಟ

ಎರಡನೆ ಮದುವೆಯ ಅದೃಷ್ಟ

ತಮ್ಮ ಚಿಕ್ಕಂದಿನ ಗೆಳತಿ ರೇಖಾ ತಮ್ಮ ಪತಿಯಿಂದ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿಯನ್ನು ತಿಳಿದ ಮಲ್ಯ ಒಂದು ನಿಮಿಷವೂ ಸಮಯ ವ್ಯರ್ಥಮಾಡದೇ ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ಪ್ರಕಟಿಸಿದ್ದರು. ಕೆಲವು ತಿಂಗಳು ಜೊತೆಯಾಗಿ ಕಳೆದ ಬಳಿಕ ಕಡೆಗೂ ಇವರು ಮದುವೆಯಾದರು. ರೇಖಾರವರು ಇವರನ್ನು ವಿವಾಹವಾಗುವ ಮುನ್ನ ಎರಡು ಮದುವೆಯಾಗಿದ್ದರು. ಎರಡನೆಯ ಮದುವೆಯಿಂದ ರೇಖಾರವರಿಗೆ ಲೈಲಾ ಮತ್ತು ಕಬೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮೂರನೆಯ ವಿವಾಹದ ಬಳಿಕ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಾಗಿದ್ದಾರೆ, ಲಿಯಾನ್ನಾ ಮತ್ತು ತಾನ್ಯ ಎಂಬುದು ಇವರ ಹೆಸರು. ಈಗ ಮೂರನೆಯ ವಿವಾಹವಾಗುತ್ತಿರುವಾಗಲೂ ವಿಜಯ್ ಮಲ್ಯ ಕಾನೂನು ಬದ್ಧವಾಗಿ ರೇಖಾರ ಪತಿಯೇ ಆಗಿದ್ದಾರೆ.

ಮೂರನೆಯ ಮದುವೆಗೂ ಮುಂದುವರೆದ ಅದೃಷ್ಟ

ಮೂರನೆಯ ಮದುವೆಗೂ ಮುಂದುವರೆದ ಅದೃಷ್ಟ

ಈಗ ಮಲ್ಯರವರು ಮದುವೆಯಾಗುತ್ತಿರುವ ಪಿಂಕಿ ಲಾಲ್ವಾನಿಯವರು ಹಿಂದಿನ ಕಿಂಗ್ ಫಿಶರ್ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿದ್ದರು. 2011ರಲ್ಲಿ ಈಕೆಯನ್ನು ಕೆಲಸಕ್ಕೆ ನೇಮಿಸಿಕೊಂಡ ಬಳಿಕ ಈಕೆ ಮಲ್ಯರವರ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಗರಿಷ್ಟ ಮಟ್ಟದ ಬೆಂಬಲ ವ್ಯಕ್ತ ಪಡಿಸಿದ್ದರು. ಈಗ ಇವರಿಬ್ಬರೂ ವಿವಾಹವಾಗುತ್ತಿರುವ ಸುದ್ದಿ ಎಲ್ಲೆಡೆ ಬಿಸಿಬಿಸಿಯಾಗಿ ವಿಸ್ತರಿಸುತ್ತಿದೆ.

ಮೂರನೆಯ ಮದುವೆಗೂ ಮುಂದುವರೆದ ಅದೃಷ್ಟ

ಮೂರನೆಯ ಮದುವೆಗೂ ಮುಂದುವರೆದ ಅದೃಷ್ಟ

ಈಗ ಮಲ್ಯರವರು ಮದುವೆಯಾಗುತ್ತಿರುವ ಪಿಂಕಿ ಲಾಲ್ವಾನಿಯವರು ಹಿಂದಿನ ಕಿಂಗ್ ಫಿಶರ್ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿದ್ದರು. 2011ರಲ್ಲಿ ಈಕೆಯನ್ನು ಕೆಲಸಕ್ಕೆ ನೇಮಿಸಿಕೊಂಡ ಬಳಿಕ ಈಕೆ ಮಲ್ಯರವರ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಗರಿಷ್ಟ ಮಟ್ಟದ ಬೆಂಬಲ ವ್ಯಕ್ತ ಪಡಿಸಿದ್ದರು. ಈಗ ಇವರಿಬ್ಬರೂ ವಿವಾಹವಾಗುತ್ತಿರುವ ಸುದ್ದಿ ಎಲ್ಲೆಡೆ ಬಿಸಿಬಿಸಿಯಾಗಿ ವಿಸ್ತರಿಸುತ್ತಿದೆ.

ಸ್ಪಷ್ಟೀಕರಣ

ಸ್ಪಷ್ಟೀಕರಣ

ಈ ಲೇಖನದಲ್ಲಿ ಒದಗಿಸಲಾಗಿರುವ ವಿಜಯ್ ಮಲ್ಯ ರವರ ಜೀವನ ಹಾಗೂ ಅವರ ಪತ್ನಿಯರ ವಿವರಗಳನ್ನು ವಿವಿಧ ಸಾಮಾಜಿಕ ತಾಣಗಳಲ್ಲಿ ಪ್ರಕಟವಾದ ವರದಿಗಳಿಂದ ಪಡೆಯಲಾಗಿದೆ. ದಿವಾಳಿಯಾಗಿದ್ದರೂ ವಿಜೃಂಬಣೆಯ ಜೀವನ ನಡೆಸುತ್ತಿರುವ, ಈಗ ಮೂರನೆಯ ಮದುವೆಯಾಗುತ್ತಿರುವ ಮಲ್ಯರ ಅದೃಷ್ಟದ ಬಗ್ಗೆ ನಿಮಗೇನೆನಿಸುತ್ತದೆ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

Image Courtesy Twitter

English summary

all-about-vijay-mallya-and-the-women-in-his-life

Vijay Mallya, who was famously tagged as the 'King of Good Times' to being labelled as the 'Monarch of Loan Defaulters in India', is all set to marry for the third time! Pinky Lalwani, who is his current girlfriend, is a former Kingfisher air hostess. It is reported that the couple met when Mallya had hired Lalwani in 2011.