For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಇಲ್ಲಸಲ್ಲದ ಕಾರಣಗಳಿಂದಾಗಿ ನಿಮಗೆ ಕಷ್ಟ ಬರಬಹುದು!!

  By Deepu
  |

  ಕೆಲವೊಮ್ಮೆ ನಾವೆಷ್ಟೇ ಪ್ರಯತ್ನ ಮಾಡಿದರೂ ನಾವು ಅಂದುಕೊಂಡ ರೀತಿಯಲ್ಲಿ ನಡೆಯುವುದಿಲ್ಲ. ನಾವು ಕಲ್ಪನೆ ಮಾಡಿರದ ರೀತಿಯಲ್ಲಿಯೇ ಆಗುತ್ತದೆ. ಏಕೆ ಹೀಗೆ? ಎಂದು ಬೇಸರಕ್ಕೆ ಒಳಗಾಗುವುದು ಸಹಜ. ಆದರೆ ಈ ಬಗೆಯ ಬದಲಾವಣೆಗೆ ಕಾರಣವೇನು? ಎಂದು ಯಾರೂ ಚಿಂತಿಸುವುದಿಲ್ಲ. ಈ ಬಗೆಯ ಪರಿಸ್ಥಿತಿ ಒದಗಲು ಅಥವಾ ನಮ್ಮ ಪ್ರಯತ್ನ ವಿಫಲವಾಗಲು ಪ್ರಮುಖ ಕಾರಣ ನಮ್ಮ ರಾಶಿಚಕ್ರಗಳೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಈ ವರ್ಷ ಅಂದರೆ 2018ರಲ್ಲಿ ಗ್ರಹಗತಿಗಳ ಸಂಚಾರದಿಂದ ಪ್ರತಿಯೊಂದು ರಾಶಿಚಕ್ರದವರು ಬಹುತೇಕ ಉತ್ತಮ ಫಲಗಳನ್ನು ಅನುಭವಿಸಲಿದ್ದಾರೆ ಎನ್ನುವುದು ನಿಜ. ಅದೇ ರೀತಿ ಕೆಲವು ವೈಯಕ್ತಿಕ ಕಾರಣಗಳಿಗೆ ತಮ್ಮ ಅವನತಿ ಅಥವಾ ಕೆಟ್ಟ ಸಂಗತಿಗಳಿಗೆ ಒಳಗಾಗಲಿದ್ದಾರೆ. ಈ ವರ್ಷದ ಜೀವನದಲ್ಲಿ ಯಾವೆಲ್ಲಾ ಸಂಗತಿಗಳಿಂದ ಕಷ್ಟದ ಸನ್ನಿವೇಶವನ್ನು ಅಥವಾ ಅವನತಿಯ ಸಂಗತಿಯನ್ನು ಅನುಭವಿಸಲಿದ್ದೀರಿ ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ...

  ಮೇಷ

  ಮೇಷ

  ಈ ವರ್ಷ ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೇ ಶ್ರದ್ಧೆಯನ್ನು ತೋರಿದರೂ ಅತ್ಯುತ್ತಮ ಫಲವನ್ನು ಕಾಣಲು ಸಾಧ್ಯವಿಲ್ಲ. ಅತಿಯಾದ ಭರವಸೆ ಇಟ್ಟುಕೊಳ್ಳದಿರುವುದೇ ಉತ್ತಮ. ಯಾವುದೇ ವಿಚಾರವಾಗಿ ಯಾರಿಗೂ ಭರವಸೆ ನೀಡುವುದು ಅಥವಾ ಇತರರಿಗೆ ಬದ್ಧರಾಗಿರದಿರಿ. ಇದು ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವುದು. ನಿಮ್ಮ ಕೆಲಸದ ಬಗ್ಗೆ ಒಂದು ಚಾರ್ಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಆಪ್ತರಿಗೂ ಸ್ವಲ್ಪ ಸಮಯವನ್ನು ಮೀಸಲಿಡಿ. ಇದು ನಿಮಗೆ ಅನಗತ್ಯ ಕುಸಿತವನ್ನು ತಡೆಯಲು ಸಹಾಯವಾಗುವುದು.

  ವೃಷಭ

  ವೃಷಭ

  ಅಹಂಕಾರವನ್ನು ನೀವು ಬೆಳೆಸಿಕೊಳ್ಳುವ ವಿಚಾರವಲ್ಲ. ಏಕೆಂದರೆ ಅದೇ ನಿಮ್ಮ ಅವನತಿಗೆ ಕಾರಣವಾಗಬಹುದು. ಕ್ಷಮಿಸು ಎಂದು ಕೇಳಿಕೊಳ್ಳಲು ಇನ್ನೂ ಸಮಯ ಮೀರಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನೀವು ಹಠಮಾರಿ ಮತ್ತು ಸ್ವಾರ್ಥ ಸ್ವಭಾವದಿಂದ ನೀವೇ ಸರಿ ಎನ್ನುವಂತೆ ವರ್ತಿಸುತ್ತಾ ಬಂದಿದ್ದೀರಾದರೂ ಇದೀಗ ನಿಮ್ಮಿಂದಲೂ ತಪ್ಪಾಗುವುದು ಎನ್ನುವುದನ್ನು ನೀವೇ ಅರಿತುಕೊಳ್ಳುವ ಸಮಯವಾಗಿದೆ. ನಿಮ್ಮ ಅಹಂಕಾರವನ್ನು ತೊರೆಯುವುದು ನಿಮಗೇ ಒಳ್ಳೆಯ ವಿಚಾರವಾಗಿ ಪರಿಣಮಿಸುವುದು.

  ಮಿಥುನ

  ಮಿಥುನ

  ಅನುಚಿತವಾದ ಹವ್ಯಾಸಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನೀವೇ ಸ್ವಾಗತಿಸಿದ್ದೀರಿ ಎಂದು ತಿಳಿದುಕೊಳ್ಳಬಹುದಾದ ಸಮಯವಾಗಿದೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ನಿಮ್ಮ ಜೀವಿತಾವಧಿಯನ್ನು ಕಡಿಮೆಮಾಡಿಕೊಳ್ಳುವಿರಿ. ಇದೀಗ ನಿಮ್ಮ ಕೆಟ್ಟ ಹವ್ಯಾಸಗಳಿಂದ ದೂರವುಳಿದು, ಉತ್ತಮ ಜೀವನವನ್ನು ಮುಂದುವರಿಸುವ ಸಮಯ ಇದಾಗಿದೆ.

  ಕರ್ಕ

  ಕರ್ಕ

  ನೀವು ಇನ್ನುಮುಂದೆಯಾದರೂ ಹೆಚ್ಚು ಜವಾಬ್ದಾರ ವ್ಯಕ್ತಿಯಾಗಿರಬೇಕು. ಈ ಹಿಂದೆ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಿರಿ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ನಿಮ್ಮ ಬೇಜವಾಬ್ದಾರಿ ಗುಣದಿಂದಲೇ ಈ ಹಿಂದೆ ಸಂಬಂಧಗಳಲ್ಲಿ ಹಾಗೂ ಸ್ನೇಹಿತರಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನುವುದನ್ನು ಅರಿತುಕೊಳ್ಳಬೇಕು. ನಿಮ್ಮ ಬೇಜವಾಬ್ದಾರಿಗುಣವನ್ನು ತೋರದೆ ಕೆಲಸವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

  ಸಿಂಹ

  ಸಿಂಹ

  ಈ ರಾಶಿಯವರು ಸಂಬಂಧಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು. ಸಂಬಂಧದಲ್ಲಿ ದ್ವಿಮುಖ ಪ್ರಕ್ರಿಯೆಯನ್ನು ಹೊಂದುವುದು ವಿಷಕಾರಿ ಹಾಗೂ ನಿಮ್ಮ ಅವನತಿಗೂ ಕಾರಣವಾಗುತ್ತದೆ ಎನ್ನುವುದನ್ನು ಅರಿಯಬೇಕು. ಇಂತಹ ವಿಚಾರವನ್ನು ತಿಳಿದು ಅವುಗಳಿಂದ ಹೊರ ಹೋಗುವ ಸೂಕ್ತ ಸಮಯ ಇದು. ಯಾವುದು ಒಳ್ಳೆಯದ್ದು ಎನ್ನುವುದನ್ನು ಅರಿತು ಮುಂದೆ ಸಾಗಬೇಕಿದೆ.

   ಕನ್ಯಾ

  ಕನ್ಯಾ

  ಈ ರಾಶಿಯವರು ಉದಾರ ಗುಣವನ್ನು ಅಳವಡಿಸಿಕೊಳ್ಳುವ ಅಥವಾ ಕಲಿಯುವ ಸಮಯ ಇದು ಎಂದು ಹೇಳಬಹುದು. ಇತರರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ಜೊತೆಗೆ ಕಷ್ಟುವು ನಿಮ್ಮ ಸುತ್ತ ಋಣಾತ್ಮಕವಾಗಿ ವರ್ತಿಸುವುದು. ಹೊಸ ವಿಚಾರಗಳ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿ. ಸಿಕ್ಕ ವೈವಿದ್ಯತೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು.

  ತುಲಾ

  ತುಲಾ

  ಹಲವಾರು ಹೊಸ ಅವಕಾಶಗಳು ನಿಮ್ಮ ಮಾರ್ಗದಲ್ಲಿ ಬರಲಿದೆ. ಆದರೆ ನಿಮ್ಮಲ್ಲಿರುವ ಕೆಲವು ಸ್ವಭಾವಗಳು ಯಶಸ್ಸನ್ನು ಹೊಂದುವಲ್ಲಿ ಅಡಚಣೆಯನ್ನು ಸೃಷ್ಟಿಸುತ್ತದೆ. ಹಿಂದಿನ ಜೀವನ ಶೈಲಿಯು ನಿಮ್ಮನ್ನು ಕೆಳಗೆ ತಳ್ಳುವುದು. ಈ ಹಿಂದೆ ಅನುಭವಿಸಿದ ಅಸುಂತುಷ್ಟ ಪರಿಸ್ಥಿತಿಯ ಅನುಭವಗಳ ಆಧಾರದ ಮೇಲೆ ಜೀವನದ ಅರ್ಥವನ್ನು ಅರಿತು ಮುಂದೆ ಸಾಗಬೇಕಿದೆ.

  ವೃಶ್ಚಿಕ

  ವೃಶ್ಚಿಕ

  ಈ ರಾಶಿಯವರು ತಮ್ಮ ಸ್ಥಳಾವಕಾಶವನ್ನು ಹೆಚ್ಚು ಹೊಂದಬೇಕಿದೆ. ದೀರ್ಘ ಕಾಲದಿಂದ ನೀವು ಅನಾರೋಗ್ಯಕರವಾದ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದ್ದೀರಿ ಎನ್ನುವುದನ್ನು ಅರಿಯಬೇಕಿದೆ. ಈ ಹಿಂದೆ ಜನರನ್ನು ನಿರ್ಲಕ್ಷಿಸಿರುವುದು ನಿದರ್ಶನಗಳಿವೆ. ನೀವು ನಿಮ್ಮ ಸೀಮೆಯಿಂದ ಹೊರ ಬಂದು ಇತರ ವ್ಯಕ್ತಿಗಳೊಂದಿಗೆ ಬೆರೆಯಬೇಕಾದ ಸಮಯ ಇದು. ನಿಮ್ಮ ಜೀವನದಲ್ಲಿ ಕೆಲವರಿಗೆ ಸ್ವಲ್ಪ ಜಾಗ ನೀಡುವ ಅಗತ್ಯವಿದೆ ಎನ್ನುವುದನ್ನು ಅರಿಯಬೇಕು.

  ಧನು

  ಧನು

  ಈ ಹಿಂದೆ ನೀವು ಮಾಡಿರುವ ತಪ್ಪು ನಿಮ್ಮನ್ನು ಸಂಹರಿಸುವುದನ್ನು ತಪ್ಪಿಸಿ. ಹಿಂದಿನ ಸಮಸ್ಯೆಯನ್ನು ಮರೆಮಾಚುವುದು ಅಥವಾ ಸ್ವೀಕರಿಸುವ ಬದಲು ಅದನ್ನು ಅಲ್ಲಿಯೇ ಬಿಟ್ಟು ಜೀವನವನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ವಿಚಾರದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎನ್ನುವುದನ್ನು ನೀವು ನೆನಪಿಟ್ಟುಕೊಳ್ಳಬೇಕು.

  ಮಕರ

  ಮಕರ

  ನಾವು ಮಾಡುವ ತಪ್ಪುಗಳಿಂದ ಕಲಿಸುವ ಪಾಠ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿಸುತ್ತದೆ. ನಿಮ್ಮ ತಪ್ಪುಗಳನ್ನು ಪುನಃ ಪುನರಾವರ್ತಿಸಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ತಪ್ಪನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಇನ್ನೊಂದು ತಪ್ಪನ್ನು ಮಾಡದೆ ಇರುವಂತೆ ನೋಡಿಕೊಳ್ಳಲು ಸಹಾಯವಾಗುವುದು.

  ಕುಂಭ

  ಕುಂಭ

  ಈ ರಾಶಿಯವರು ಪ್ರತಿಯೊಂದು ವಿಚಾರದಲ್ಲೂ ಹೆಚ್ಚಿನ ನಿರೀಕ್ಷೆ ಮಾಡುತ್ತಾರೆ. ಜಗತ್ತಿನಲ್ಲಿ ನಾವು ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಸಮಯ ಇದು. ಅತಿಯಾದ ನಿರೀಕ್ಷೆ ಹೊಂದುವುದನ್ನು ನಿಲ್ಲಿಸಿ. ವಿಚಾರವು ಹೇಗೆ ಪರಿಣಾಮ ನೀಡುತ್ತದೆಯೋ ಹಾಗೇ ಸ್ವೀಕರಿಸುವುದನ್ನು ಕಲಿಯಬೇಕು. ಅದರ ಬಗ್ಗೆ ಅತಿಯಾಗಿ ಚಿಂತಿಸುವುದರಿಂದ ಇಂದಿನ ಜೀವನ ಹಾಳಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಿ.

  ಮೀನ

  ಮೀನ

  ನೀವು ಈ ಹಿಂದಿನ ವಿಚಾರಗಳಿಗೆ ಹಿಂತಿರುಗುವುದರ ಮೂಲಕ ಸಂಬಂಧವನ್ನು ಉಳಿಸಿಕೊಳ್ಳಬೇಕಾದ ಸಮಯ ಇದು. ಹಿಂದಿನ ಸಂಬಂಧ ಅದೆಷ್ಟೇ ಭೀಕರ ರೀತಿಯಲ್ಲಿ ಕೊನೆಗೊಂಡಿದೆಯಾದರೂ ಇದೀಗ ಎರಡನೇ ಅವಕಾಶದ ಬಗ್ಗೆ ನೀವು ಚಿಂತಿಸಬೇಕಾದ ಸಮಯವಾಗಿದೆ. ಹಾಗೊಮ್ಮೆ ಮಾಡಿದರೆ ಅದು ನಿಮ್ಮ ಸಮಯವನ್ನು ವ್ಯರ್ಥಮಾಡಿದಂತೆ. ಹಿಂದಿನ ಸಂಬಂಧದಿಂದ ಹೊರ ಬಂದರೆ ಇತರ ಸಂಬಂಧಗಳ ಬಗ್ಗೆ ಗಮನ ಹರಿಸಲು ಅನುಕೂಲವಾಗುವುದು.

  English summary

  According To Your Your Downfall In 2018 Will Be Due To...

  Have you ever imagined why things are not working the way you want it to? From trying your best in making things work in the right direction to having the right attitude even if things don't work out, your zodiac plays a major role in deciding your fate. Each zodiac has its own reasons for its downfall and here we bring to you the reason on why you would experience a downfall in your life, be it your personal life or your career.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more