For Quick Alerts
ALLOW NOTIFICATIONS  
For Daily Alerts

  ಮಣಿಕಟ್ಟಿನ ರೇಖೆಗಳು-ವ್ಯಕ್ತಿಯ ಆಯಸ್ಸು, ಆರೋಗ್ಯದ ರಹಸ್ಯ ಬಿಚ್ಚಿಡುತ್ತದೆ!

  By Deepu
  |

  ಸಾಮಾನ್ಯವಾಗಿ ಹಸ್ತಸಾಮುದ್ರಿಕೆಯನ್ನು ಗಮನಿಸುವವರು ಹಸ್ತದ ರೇಖೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಮ್ಮ ಹಸ್ತ ಮಡಚುವಲ್ಲಿ ಅಂದರೆ ವಾಚು ಕಟ್ಟಿಕೊಳ್ಳುವ ಭಾಗದಲ್ಲಿ ಅಡ್ಡಲಾಗಿ ಕೆಲವು ರೇಖೆಗಳಿದ್ದು ಇವೂ ಸಹಾ ಹಲವು ಸಂಗತಿಗಳನ್ನು ಪ್ರಚುರಪಡಿಸುತ್ತವೆ. Rascette lines ಎಂದು ಕರೆಯಲ್ಪಡುವ ಈ ರೇಖೆಗಳು ವ್ಯಕ್ತಿಯ ಆರೋಗ್ಯ, ಉನ್ನತಿ ಮತ್ತು ಖ್ಯಾತಿಯನ್ನು ಪ್ರಕಟಿಸುತ್ತವೆ. ಮಣಿಕಟ್ಟಿನಲ್ಲಿರುವ ರೇಖೆಗಳು -ಎಷ್ಟಿವೆ? ಏನು ಹೇಳುತ್ತವೆ? 

  ಮಣಿಕಟ್ಟಿನ ರೇಖೆಗಳು ಹಸ್ತರೇಖೆಗಳಿಗಿಂತ ಭಿನ್ನವಾದ ಮಾಹಿತಿಗಳನ್ನು ನೀಡುತ್ತವೆ ಹಾಗೂ ಈ ಮಾಹಿತಿಗಳು ತುಂಬಾ ಗಾಢವಾಗಿರುತ್ತದೆ. ಈ ರೇಖೆಗಳು ವ್ಯಕ್ತಿಯ ಆಯಸ್ಸು, ಆರೋಗ್ಯ, ಹಾಗೂ ವಿಶೇಷವಾಗಿ ಮಹಿಳೆಯರಲ್ಲಿ ಸಂತಾನಫಲದ ತೊಂದರೆಯ ವಿವರಗಳನ್ನು ನೀಡುತ್ತವೆ. ಬನ್ನಿ, ಈ ರೇಖೆಗಳು ಯಾವ ಗೂಡಾರ್ಥವನ್ನು ಹೊಂದಿವೆ ಎಂಬುದನ್ನು ನೋಡೋಣ... 

  ಮೊದಲ ಮಣಿಕಟ್ಟಿನ ರೇಖೆ

  ಮೊದಲ ಮಣಿಕಟ್ಟಿನ ರೇಖೆ

  ಈ ರೇಖೆ ಆಳವಾಗಿ ಸ್ಪಷ್ಟವಾಗಿದ್ದರೆ ಇದು ಆರೋಗ್ಯದ ಲಕ್ಷಣವಾಗಿದೆ. ಒಂದು ವೇಳೆ ಇದು ತುಂಡುತುಂಡಾಗಿದ್ದಂತಿದ್ದರೆ ಅಥವಾ ಅಸ್ಪಷ್ಟವಾಗಿದ್ದರೆ ಆರೋಗ್ಯದ ಬಗ್ಗೆ ನಿಷ್ಕಾಳಜಿಯನ್ನು ವಹಿಸಿರುವ ಸಂಕೇತವಾಗಿದೆ. ಒಂದು ವೇಳೆ ಇಲ್ಲಿ ಒಂದೇ ಒಂದು ಗೆರೆ ಇದ್ದು ಬೇರೆ ಗೆರೆಗಳೇ ಇಲ್ಲದಿದ್ದರೆ ಈ ವ್ಯಕ್ತಿಯ ಆಯಸ್ಸು 23-28 ಇರಬಹುದು ಎಂದು ಸೂಚಿಸುತ್ತದೆ.

  ಮೊದಲ ರೇಖೆ ಆರೋಗ್ಯದ ಏರುಪೇರು ತಿಳಿಸುತ್ತದೆ

  ಮೊದಲ ರೇಖೆ ಆರೋಗ್ಯದ ಏರುಪೇರು ತಿಳಿಸುತ್ತದೆ

  ಒಂದು ವೇಳೆ ಮಹಿಳೆಯರ ಹಸ್ತದ ಮೊದಲ ರೇಖೆ ಪರಿಪೂರ್ಣವಾಗಿರದೇ ಕಮಾನಿನಂತೆ ಬಾಗಿ ಮಧ್ಯದಲ್ಲಿ ಹಸ್ತದೊಳಗೆ ಹೋಗಿದ್ದರೆ ಅಥವಾ ನಡುವೆ ತುಂಡುತುಂಡಾಗಿದ್ದರೆ ಇದು ಸ್ತ್ರೀರೋಗದ ಇರುವಿಕೆಯ ಲಕ್ಷಣವಾಗಿದೆ. ಪುರುಷರಲ್ಲಿ ಇದು ಪ್ರಾಸ್ಟ್ರೇಟ್ ಗ್ರಂಥಿ ಅಥವಾ ಇತರ ಸಂತಾನೋತ್ಪತ್ತಿಗೆ ಸಂಬಂಧಪಟ್ಟ ತೊಂದರೆಗಳನ್ನು ಸೂಚಿಸುತ್ತದೆ. ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

  ಎರಡನೆಯ ರೇಖೆ ಉನ್ನತಿಯ ಸಂಕೇತವಾಗಿದೆ

  ಎರಡನೆಯ ರೇಖೆ ಉನ್ನತಿಯ ಸಂಕೇತವಾಗಿದೆ

  ಎರಡನೆಯ ರೇಖೆ ಸ್ಪಷ್ಟವಾಗಿದ್ದು ನೇರವಾಗಿ ಅಡ್ಡಲಾಗಿದ್ದರೆ ಇದು ಅಭಿವೃದ್ಧಿ, ಉನ್ನತಿ ಮತ್ತು ಖ್ಯಾತಿಯ ಸಂಕೇತವಾಗಿದೆ. ಒಂದು ವೇಳೆ ವ್ಯಕ್ತಿ ಎರಡೇ ಅಡ್ಡಗೆರೆಗಳನ್ನು ಹೊಂದಿದ್ದರೆ ಈ ವ್ಯಕ್ತಿಯ ಆಯಸ್ಸು 46 ಮತ್ತು 56ರ ನಡುವೆ ಇರಬಹುದಂತೆ!

  ಮೂರನೆಯ ರೇಖೆ ಆಯಸ್ಸಿನ ಸಂಕೇತ

  ಮೂರನೆಯ ರೇಖೆ ಆಯಸ್ಸಿನ ಸಂಕೇತ

  ಮೂರನೆಯ ರೇಖೆ ಸ್ಪಷ್ಟವಾಗಿದ್ದರೆ ಆರೋಗ್ಯ ಉತ್ತಮವಾಗಿದ್ದು ಇನ್ನಷ್ಟು ಕಾಲ ಬಾಳಬಹುದಾದ ಸಾಧ್ಯತೆಗಳನ್ನು ತಿಳಿಸುತ್ತದೆ. ಈ ವ್ಯಕ್ತಿಯ ಆಯಸ್ಸು 69 ವರ್ಷಗಳಿಗೂ ಮೀರಿದ್ದು 84ವರ್ಷದವರೆಗೂ ಆಯಸ್ಸು ಹೊಂದುವ ಸಾಧ್ಯತೆ ಇದೆ.

  ನಾಲ್ಕನೆಯ ರೇಖೆ ಶತಾಯಸ್ಸಿನ ಸಂಕೇತ

  ನಾಲ್ಕನೆಯ ರೇಖೆ ಶತಾಯಸ್ಸಿನ ಸಂಕೇತ

  ನಾಲ್ಕನೆಯ ರೇಖೆ ಅತಿ ಹಿರಿಯ ವಯಸ್ಸನ್ನು ಪ್ರತಿನಿಧಿಸುತ್ತಿದ್ದು ಇದು ಸ್ಪಷ್ಟವಾಗಿದ್ದಷ್ಟೂ 85 ವರ್ಷಕ್ಕೂ ಹೆಚ್ಚಿನ ಆಯಸ್ಸು ಪಡೆದು ಮುಂದೆ ಶತಾಯುಶಿಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಈ ರೇಖೆ ಮೂರನೆಯ ರೇಖೆಗೆ ಸಮಾನಾಂತರವಾಗಿರುತ್ತದೆ.

  ಒಂದು ವೇಳೆ ಒಂದೇ ರೇಖೆ ಇದ್ದರೆ

  ಒಂದು ವೇಳೆ ಒಂದೇ ರೇಖೆ ಇದ್ದರೆ

  ಈ ವ್ಯಕ್ತಿಗಳು ಆರ್ಥಿಕವಾಗಿ ಜೀವನದಲ್ಲಿ ಹಲವು ಏರುಪೇರುಗಳನ್ನು ಕಾಣುತ್ತಿರುತ್ತಾರೆ. ಇವರಿಗೆ ಒಂದಕ್ಕಿಂತಲೂ ಹೆಚ್ಚಿನ ಪ್ರೇಮಸಂಬಂಧಗಳಿದ್ದು ವಿಫಲಪ್ರೇಮ, ವಿರಹ ಮತ್ತು ವಿರಕ್ತಿ ಜೀವನವಿಡೀ ಕಾಡುತ್ತದೆ. ಉಗುರಿನಲ್ಲಿ 'ಅರ್ಧಚಂದ್ರಾಕೃತಿ' ಇದ್ದರೆ-ಅದೃಷ್ಟವೇ ಬದಲಾಗಬಹುದು!

   

  English summary

  Your Wrist Lines Reveal This!

  Each individual has lines on his/her wrists, which are known as the bracelet lines. They were formally known as Rascette lines as well. Did you know that these lines can help you analyse your health and even your lifespan?
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more