Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
24 december 2017 ಭಾನುವಾರದ ದಿನ ಭವಿಷ್ಯ

ಸಾಮಾನ್ಯವಾಗಿ ಎಲ್ಲರೂ ತಮ್ಮ ಬದುಕು ಸುಖದಿಂದ ಕೂಡಿರಲಿ ಎಂದು ಬಯಸುವುದು ಸಹಜ. ಕೈಗೊಳ್ಳುವ ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಪರೀತವಾದ ಆಯಾದ ಬರಬೇಕು. ನಷ್ಟ ಎನ್ನುವುದು ಸುಳಿಯಬಾರದು ಎಂದೆಲ್ಲಾ ಆಶಿಸುತ್ತಾರೆ. ಆದರೆ ನಮ್ಮ ಬಯಕೆಯಂತೆ ಏನು ನಡೆಯದು ಎಲ್ಲವೂ ಆ ದೇವರ ಇಚ್ಛೆಯಂತೆ ನಡೆಯುವುದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಜಾತಕದಲ್ಲಿರುವ ಗ್ರಹಗತಿಗಳು ಮಾತ್ರ ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.
ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಭಾನುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ....

ಮೇಷ
ಮನೆಯಲ್ಲಿ ಸಂಭ್ರಮದ ವಾತಾವರಣ. ಮನಸ್ಸಿಗೆ ನೆಮ್ಮದಿ ಹಾಗೂ ಸಮಾಧಾನ ದೊರೆಯುವುದು. ಅನೇಕ ವರ್ಷದಿಂದ ಭೇಟಿಯಾಗದೇ ಇರುವ ಸ್ನೇಹಿತರ ಹಾಗೂ ಬಂಧುಗಳ ಆಗಮನ ಅಥವಾ ಸಮಾಗಮನ ಉಂಟಾಗುವ ಸಾಧ್ಯತೆಗಳಿವೆ. ಸಿಹಿ ಭೋಜನವನ್ನು ಸವಿಯುವ ಸಾಧ್ಯತೆ ಹಾಗೂ ಹಿರಿಯರ ಆಶೀರ್ವಾದ ಲಭಿಸುವುದು. ಶುಭ ಸಮಾರಂಭಗಳಲ್ಲಿ ಪಾಲ್ಗೊಂಡಂತಹ ನೆಮ್ಮದಿ ನಿಮ್ಮ ಜೀವನದಲ್ಲಿ ಇಂದು ಅನುಭವಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಸಮಾಧಾನ ಹಾಗೂ ಹೊಸ ಯೋಜನೆಯನ್ನು ರೂಪುಗೊಳಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಹಾಗೂ ವಿಷ್ಣುವಿನ ಉಪಾಸನೆ ಮಾಡಿ.

ವೃಷಭ
ಯಾವುದೇ ಕೆಲಸವನ್ನು ಆತುರದಲ್ಲಿ ಕೈಗೊಳ್ಳದಿರಿ. ಆದಷ್ಟು ತಾಳ್ಮೆಯಿಂದ ವರ್ತಿಸಿ. ಮನೆಯಲ್ಲಿ ಇರುವ ಕಿರಿಕಿರಿ ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವುದು. ಆರೋಗ್ಯದ ಕುರಿತು ಆದಷ್ಟು ಕಾಳಜಿಯನ್ನು ತೋರಿಸಿ. ಅವಮಾನ ಉಂಟಾಗುವಂತಹ ಸನ್ನಿವೇಶಗಳು ನಿರ್ಮಾಣವಾಗುವ ಸಾಧ್ಯತೆಗಳಿವೆ. ಸಾಲಗಾರರಿಂದ ಕಿರಿಕಿರಿ ಉಂಟಾಗುವುದು. ವ್ಯಾಪಾರ ವಹಿವಾಟುಗಳಲ್ಲಿ ಸಂಪೂರ್ಣ ಲಾಭ ದೊರೆಯದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ
ಇಂದು ನಿಮಗೆ ಒಳ್ಳೆಯ ದಿನ. ಮಾನಸಿಕವಾಗಿ ನೀವು ಅಂದುಕೊಂಡ ವಿಚಾರಗಳೆಲ್ಲಾ ಸುಲಭವಾಗಿ ನೆರವೇರುವುದು. ಸುಂದರ ಕನಸು ನನಸಾಗುವುದು. ಬಂಧು ಮಿತ್ರರ ಆಗಮನ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಸ್ನೇಹಿತರೊಂದಿಗೆ ಹೊಸ ವಿಚಾರಗಳ ಕುರಿತು ಚರ್ಚಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಕರ್ಕ
ಇಂದು ನಿಮಗೆ ಮಾನಸಿಕ ಕಿರಿಕಿರಿ ದೂರವಾಗುವುದು. ಮನೆಯಲ್ಲಿ ನೆಮ್ಮದಿ ದೊರೆಯುವುದು. ಬಂಧು ಮಿತ್ರರಿಂದ ಸಹಕಾರ ಹಾಗೂ ನಿರ್ದಿಷ್ಟ ಮಟ್ಟದ ಗೆಲವುವನ್ನು ನೀವು ಸಾಧಿಸುವಿರಿ. ನೀವು ಕೈಗೊಂಡ ತೀರ್ಮಾನದಿಂದ ಲಾಭ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಉಂಟಾಗುವುದು. ವೈವಾಹಿಕ ಜೀವನದಲ್ಲಿ ಸುಖವನ್ನು ಅನುಭವಿಸುವಿರಿ. ದೂರದ ಪ್ರಯಾಣವನ್ನು ಕೆಲವು ಕೈಗೊಳ್ಳುವ ಸಾಧ್ಯತೆಗಳಿವೆ. ಜೀವನದಲ್ಲಿ ಎಲ್ಲಾ ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆ ಮಾಡಿ.

ಸಿಂಹ
ನೀವು ಆದಷ್ಟು ಕಾಳಜಿಯಿಂದ ಇರಬೇಕು. ಒಂದಿಷ್ಟು ನೋವು ನಿಮ್ಮನ್ನು ಹೈರಾಣವಾಗುವಂತೆ ಮಾಡುವುದು. ಸ್ತ್ರೀಯರಿಗೆ ಬೆನ್ನು ಮತ್ತು ಕಾಲುನೋವಿನ ಸಮಸ್ಯೆ ಕಾಡಬಹುದು. ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಚಿತ್ರೋದ್ಯಮದಲ್ಲಿ ಒಂದಿಷ್ಟು ಅವಕಾಶಗಳು ಲಭ್ಯವಾಗುವ ಸಾಧ್ಯತೆಗಳಿವೆ. ಪತ್ರಕರ್ತರಿಗೆ ಸಾಮಾನ್ಯವಾದಂತಹ ದಿನ. ಸೋಮಾರಿತನವನ್ನು ತೋರದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಆಂಜನೇಯನ ಆರಾಧನೆ ಮಾಡಿ.

ಕನ್ಯಾ
ಇಂದು ನಿಮಗೆ ಸಾಮಾನ್ಯವಾದ ದಿನ. ಒಂದಿಷ್ಟು ಆತಂಕ ಹಾಗೂ ಒತ್ತಡವು ನಿಮ್ಮನ್ನು ಕಾಡುವುದು. ವಿಪರೀತ ಆಯಾಸ ಹಾಗೂ ಸಂದಿಗ್ಧ ಪರಿಸ್ಥಿತಿಯು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದು. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ತುಲಾ
ಇಂದು ನಿಮಗೆ ಸಮಾಧಾನಕರವಾದ ದಿನ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಹೋಟೆಲ್, ತರಕಾರಿ ವ್ಯಾಪಾರ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ ಮತ್ತು ಉದ್ಯಮಗಳಲ್ಲಿ ಉತ್ತಮ ಲಾಭವನ್ನು ನೀವು ಪಡೆದುಕೊಳ್ಳುವಿರಿ. ಸೋಮಾರಿತನವನ್ನು ತೋರದಿರಿ. ಮಕ್ಕಳ ಮಾತನ್ನು ಧಿಕ್ಕರಿಸುವುದು ಅಥವಾ ಗದರಿಸುವ ಗೋಜಿಗೆ ಹೋಗದಿರಿ. ರಾಜಕೀಯ ಕ್ಷೇತ್ರದಲ್ಲಿ ಇರುಇವವರಿಗೆ ನೆಮ್ಮದಿ ಹಾಗೂ ಸಾಮಾಜಿಕ ಸೇವೆಯಲ್ಲಿರುವವರಿಗೆ ಗೌರವ ಮತ್ತು ಸನ್ಮಾನ ದೊರೆಯುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆಯನ್ನು ಮಾಡಿ.

ವೃಶ್ಚಿಕ
ಇಂದು ನಿಮಗೆ ಕಿರಿಕಿರಿಯ ವಾತಾವರಣ ಉಂಟಾಗುವುದು. ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರದು. ಒಂದಿಷ್ಟು ಅಡೆತಡೆಗಳನ್ನು ಅನುಭವಿಸಬೇಕಾಗುವುದು. ತಂದೆ ತಾಯಿಯ ಆಶೀರ್ವಾದ ದೊರೆಯುವುದು. ಆದರೂ ಕೈಗೊಂಡ ಕೆಲಸದಲ್ಲಿ ಲಾಭ ದೊರೆಯದು. ನಿರ್ಧಿಷ್ಟ ಗುರಿಯನ್ನು ತಲುಪಲು ಆರ್ಥಿಕ ತೊಂದರೆಯು ಅಡ್ಡಿಯನ್ನುಂಟುಮಾಡುವುದು. ವಾಹನ ಸಂಬಂಧಿತ ಕೆಲಸದಲ್ಲಿರುರುವವರು ಕಾಳಜಿಯಿಂದ ಇರಬೇಕು. ರಾಹುಕಾಲದಲ್ಲಿ ಪ್ರಯಾಣವನ್ನು ಕೈಗೊಳ್ಳದಿರಿ. ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ದುರ್ಗಾರಾಧನೆ ಮಾಡಿ.

ಧನು
ಆರ್ಥಿಕ ಸ್ಥಿತಿ ಕುಸಿಯುವುದು. ನೀವು ಮಾಡದ ತಪ್ಪಿಗೆ ಹಣ ವ್ಯಯಿಸಬೇಕಾಗುವುದು. ಜಂಟಿ ವ್ಯವಹಾರ ಒಳ್ಳೆಯದಲ್ಲ. ಕಲಾವಿದರಿಗೆ ಅಪಜಯ ಉಂಟಾಗುವುದು. ಮೂರನೇ ವ್ಯಕ್ತಿಯ ವೈಕ್ತಿಕ ವಿಚಾರದಲ್ಲಿ ಮೂಗು ತೂರಿಸದಿರಿ. ಆದಷ್ಟು ನೇರ ನಡೆ ಹಾಗೂ ನೇರ ನುಡಿಯನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳಿಗೂ ಅಪಜಯ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ
ಕಿರಿಕಿರಿಯ ವಾತಾವರಣವನ್ನು ಎದುರಿಸುವಿರಿ. ಮನೆಯಲ್ಲಿ ಒಂದಿಷ್ಟು ಮಟ್ಟದ ಅಡೆತಡೆ ಉಂಟಾಗುವುದು. ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ತಲೆ ದೂರುವುದು. ಆಸ್ತಿಗಾಗಿ ಜಗಳ ಉಂಟಾಗುವ ಸಾಧ್ಯತೆಗಳಿವೆ. ಇಂದು ಕಪ್ಪು ಬಟ್ಟೆಯನ್ನು ಧರಿಸದಿರಿ. ಸ್ತ್ರೀಯರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಗಣೇಶ ಮತ್ತು ಆಂಜನೇಯನ ಆರಾಧನೆ ಮಾಡಿ.

ಕುಂಬ
ಇಂದು ನಿಮಗೆ ಸಮಾಧಾನಕರವಾದ ಜೀವನ ಲಭಿಸುವುದು. ಮನೆಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚುವುದು. ಕಲಾವಿದರಿಗೆ ಅವಕಾಶ ಲಭಿಸುವುದು. ವಕೀಲರಿಗೆ ಇಂದು ಅನುಕೂಲಕರವಾದ ದಿನ ಮನೆಯಲ್ಲಿ ನೆಮ್ಮದಿ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಈಶ್ವರ ಮತ್ತು ಆಂಜನೇಯನ ಆರಾಧನೆ ಮಾಡಿ.

ಮೀನ
ಮನೆಯಲ್ಲಿ ಸಮಾಧಾನಕರವಾದ ಜೀವನ ಹಾಗೂ ನೆಮ್ಮದಿ ಕಾಣುವಿರಿ. ವಿದೇಶದಿಂದ ಬರುವ ಬಂಧುಗಳು ಹಣಕಾಸಿನ ವ್ಯವಸ್ಥೆಗೆ ನೆರವನ್ನು ನೀಡುವರು. ಆರೋಗ್ಯ ವೃದ್ಧಿ ಹಾಗೂ ಇನ್ನಷ್ಟು ನೆಮ್ಮದಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.



Click it and Unblock the Notifications











