Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
31-12-2017 ಭಾನುವಾರದ ದಿನ ಭವಿಷ್ಯ
ನಾವು ಯಾವ ವಿಚಾರವನ್ನೂ ಬಹಳ ಸಣ್ಣದು ಅಥವಾ ಕ್ಷುಲ್ಲಕವಾದದ್ದು ಎಂದು ಪರಿಗಣಿಸಬಾರದು. ಸಣ್ಣ ಸಣ್ಣ ಪ್ರಯತ್ನಗಳಿಂದಲೇ ಸಾಧನೆ ಎನ್ನುವ ಮೆಟ್ಟಿಲನ್ನು ಏರಲು ಸಾಧ್ಯ. ನಮಗೆ ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಂಡು, ಸತತವಾದ ಪರಿಶ್ರಮಗಳ ಮೂಲಕ ಕೆಲಸವನ್ನು ನಿರ್ವಹಿಸಿದರೆ ಉತ್ತಮ ರೀತಿಯಲ್ಲಿ ನಮ್ಮ ಗುರಿಯನ್ನು ಸಾಧಿಸಬಹುದು ಹಾಗೂ ಯಶಸ್ಸು ಎನ್ನುವ ಮೆಟ್ಟಿಲನ್ನು ಏರಬಹುದು. ಆಗಲೇ ಜೀವನ ಎನ್ನುವ ಸಾಗರದಲ್ಲಿ ಈಜಿ ದಡ ಸೇರಲು ಸಾಧ್ಯ.
ಭಾನುವಾರವಾದ ಇಂದು ಸಾಮಾನ್ಯವಾಗಿ ಎಲ್ಲರೂ ಸಂತೋಷ ಹಾಗೂ ವಿಶ್ರಾಂತಿಯನ್ನು ಪಡೆಯುವ ಮನಸ್ಸನ್ನು ಹೊಂದಿರುತ್ತಾರೆ. ಆದರೆ ಜೀವನದ ಕೆಲವು ಕ್ಷಣಗಳು ನಮ್ಮ ಅನುಭವ ಹಾಗೂ ಜೀವನದ ರೂಪವನ್ನೇ ಬದಲಾಯಿಸಬಹುದು. ಯಾವೆಲ್ಲಾ ಬಗೆಯ ಧನಾತ್ಮಕ ಬದಲಾವಣೆಗಳು ಸಂಭವಿಸಬಹುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಕೊಂಡಿದ್ದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ.....

ಮೇಷ
ಇಂದು ನಿಮಗೆ ಸಮಾಧಾನಕರವಾದ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಅನೇಕ ವರ್ಷಗಳಿಂದ ಕಾಣದಿರುವ ಮಿತ್ರರು ಅಥವಾ ಬಂಧುಗಳನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಉತ್ತಮ ಮಾನಸಿಕ ಸ್ಥಿತಿಯಿಂದ ಅನೇಕ ಕೆಲಸವನ್ನು ಸಾಧಿಸುವುದು ಮತ್ತು ಲಾಭವನ್ನು ಗಳಿಸುವ ಸಾಧ್ಯತೆಗಳಿವೆ. ಕಲಾವಿದರಿಗೆ ಅವಕಾಶಗಳು ಲಭ್ಯವಾಗುವುದು. ವಿದೇಶಗಳಿಂದಲೂ ಕರೆ ಬರುವ ಸಾಧ್ಯತೆಗಳಿವೆ. ಪತ್ರಕರ್ತರಿಗೆ ಅನುಕೂಲ.ಮನೆಯಲ್ಲಿ ಸಮಾಧಾನ. ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಸಂತೋಷ ಪ್ರಾಪ್ತಿಯಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಸೂರ್ಯನ ಆರಾಧನೆ ಮಾಡಿ.

ವೃಷಭ: ವಿವಾಹ ದಿನಾಂಕ ಏಪ್ರಿಲ್ 30- ಮೇ 21
ಆರ್ಥಿಕ ಕುಸಿತವನ್ನು ಕಾಣುವಿರಿ. ಮೂರನೇ ವಕ್ತಿಯ ವಿಚಾರದಲ್ಲಿ ಮೂಗು ತೂರಿಸಬೇಡಿ. ಸಾಲ ಪಡೆಯುವುದು ಅಥವಾ ನೀಡುವುದು, ಇಲ್ಲವೇ ಜಾಮೀನು ಪತ್ರಕ್ಕೆ ಸಹಿ ಹಾಕುವ ಕೆಲಸಕ್ಕೆ ಮುಂದಾಗದಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಬಂಧು ಮಿತ್ರರ ನಡುವೆ ಕಿರಿಕಿರಿಯ ವಾತಾವರಣ ಸೃಷ್ಟಿಯಾಗುವುದು. ಇಲ್ಲ ಸಲ್ಲದ ಆರೋಪಗಳು ನಿಮ್ಮ ಬೆನ್ನೇರುವುದು. ಕಬ್ಬಿಣ ಮತ್ತು ತೈಲೋದ್ಯಮ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುವುದು. ಅನಿರೀಕ್ಷಿತ ಸೋಲನ್ನು ಎದುರಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಶಿವನ ಆರಾಧನೆಮಾಡಿ.

ಮಿಥುನ: ಮೇ 31 ಜೂನ್ 20
ಸಮಾಧಾನದ ಬದುಕಿಗೆ ನಾಂದಿಯಾಗುವುದು. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಉದ್ಯೋಗದ ಜೊತೆಗೆ ಸಂಭವಿಸುವ ಹೊಸ ತಿರುವು ಜೀವನದಲ್ಲಿ ಹೊಸತನವನ್ನು ಸೃಷ್ಟಿಸುವುದು. ಪ್ರೇಮಿಗಳಿಗೆ ಸಂತೋಷಕರವಾದ ವಾತಾವರಣ. ಹಿರಿಯರಿಂದ ಆಶೀರ್ವಾದವೂ ಲಭಿಸುವುದು. ಮನೆಯಲ್ಲಿ ನೆಮ್ಮದಿ. ಸ್ಥಿರಾಸ್ತಿಯಿಂದ ಲಾಭ ಹಾಗೂ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ಕರ್ಕ: ಜೂನ್ 30-ಜುಲೈ 22
ಮನೆಯಲ್ಲಿ ಸಮಾಧಾನ ಲಭ್ಯವಾಗುವುದು. ಸಿಹಿ ಭೋಜನವನ್ನು ಸವಿಯುವಿರಿ. ಹದಗೆಟ್ಟ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಧ್ಯಾನಾಸಕ್ತರಾಗಿ ಮನೆಯಲ್ಲಿ ದೇವರ ಆರಾಧನೆ ಮಾಡಿ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಅನಿರೀಕ್ಷಿತ ಸೋಲು ದೂರಾಗುವುದು. ಇತರ ವ್ಯಕ್ತಿಗಳಿಂದ ಸಹಕಾರ ದೊರೆಯುವುದರಿಂದ ಮಾಡುತ್ತಿರುವ ಉದ್ಯೋಗದಲ್ಲಿ ಯಾವುದೇ ಬದಲಾವಣೆಯನ್ನು ಕಾಣದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿ ಪರ ಬದುಕಿಗೆ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ಸಿಂಹ: ಜುಲೈ 30-ಆಗಸ್ಟ್ 23
ಮಾನಸಿಕ ಕಿರಿಕಿರಿ ಮುಂದುವರಿಯುವುದು. ಬೇರೆಯವರ ಜೊತೆಗ ಯಾವುದೇ ತರ್ಕಗಳಿಗೆ ಮುಂದಾಗದಿರಿ. ರಾಜಕೀಯ ನಾಯಕರಿಗೆ ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಇಲ್ಲ ಸಲ್ಲದ ಕಾರಣಗಳಿಗೆ ಹಣ ವ್ಯಯ ಮಾಡಬೇಕಾಗುವುದು. ನೀವು ಮಾಡದ ತಪ್ಪಿಗೆ ಶಿಕ್ಷೆಯನ್ನು ಪಡೆಯಬೇಕಾಗುವ ಸಂದರ್ಭಗಳು ಸೃಷ್ಟಿಯಾಗುವುದು. ಮಕ್ಕಳಿಂದ ಅಪರಾಧ ಕೃತ್ಯಗಳು ಉಂಟಾಗುವ ಸಾಧ್ಯತೆಗಳಿವೆ. ಕೆಲವರು ಆಘಾತಕ್ಕೆ ಒಳಗಾಗುವ ಸಾಧ್ಯತೆಗಳೂ ಇವೆ. ಮನೆಯಿಂದ ಹೊರಡುವಾಗ ಗೋವಿಗೆ ಆಹಾರ ಮತ್ತು ಗೋ ಸ್ಮರಣೆ ಮಾಡಿಕೊಂಡು ಹೊರಡಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿ ಪರ ಬದುಕಿಗೆ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ಕನ್ಯಾ: ಆಗಸ್ಟ್ 30-ಸೆಪ್ಟಂಬರ್ 23
ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿ. ಹೆಂಡತಿಯಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ತವರು ಮನೆಯಿಂದ ಉಡುಗೊರೆ ಲಭಿಸುವ ಸಾಧ್ಯತೆಗಳಿವೆ. ನಿರೀಕ್ಷಿತ ಮಟ್ಟದ ಯಶಸ್ಸು ಹಾಗೂ ಪ್ರಗತಿಯತ್ತ ಹೆಜ್ಜೆ ಹಾಕುವಿರಿ. ನಿಮಗೆ ಇಂದು ಎಲ್ಲಾ ಕಲಸ ಹಾಗೂ ವಿಚಾರಗಳಲ್ಲಿ ಶುಭವಾಗುವುದು. ಮಸ್ಯೆಗಳ ನಿವಾರಣೆ ಹಾಗೂ ಪ್ರಗತಿ ಪರ ಬದುಕಿಗೆ ದೇವಿಯ ಉಪಾಸನೆ ಮಾಡಿ.

ತುಲಾ: ಸೆಪ್ಟಂಬರ್ 30-ಅಕ್ಟೋಬರ್ 23
ಸಮಾಧಾನದ ಬದುಕನ್ನು ಕಾಣುವಿರಿ. ಭಗವಂತನ ಕೃಪೆಗೆ ಒಳಗಾಗುವಿರಿ. ಸಾಧ್ಯವಾದರೆ ಅನಾಥ ಮಕ್ಕಳಿಗೆ ಹಾಗೂ ಬಡವರಿಗೆ ಧಾನ ಮಾಡಿ. ಅನೇಕ ದಿನಗಳಿಂದ ಅಂದುಕೊಂಡ ವಿಚಾರವೂ ಕಾರ್ಯ ರೂಪಕ್ಕೆ ಬರುವುದು. ಹೊಸ ವರ್ಷದಿಂದ ಹೊಸ ಅವಕಾಶ ಹಾಗೂ ಅದೃಷ್ಟವು ಒಲಿಯಲಿದೆ. ಎಲ್ಲಾ ಬಗೆಯ ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ದೇವಿಯ ಉಪಾಸನೆ ಹಾಗೂ ಶಕ್ತಿಯ ಆರಾಧನೆ ಮಾಡಿ.

ವೃಶ್ಚಿಕ: 30 ಅಕ್ಟೋಬರ್ -22 ನವೆಂಬರ್
ಆರ್ಥಿಕ ವಲಯದಲ್ಲಿ ಕುಸಿತ ಉಂಟಾಗುವುದು. ಮಾನಸಿಕ ಕಿರಿಕಿರಿ ಮುಂದುವರಿಯುವುದು. ಕಪ್ಪು ಬಟ್ಟೆಯನ್ನು ಧರಿಸದಿರಿ. ಮನೆಯಿಂದ ಹೊರಡುವಾಗ ಮಕ್ಕಳ ಮುಖ ದರ್ಶನ ಮಾಡಿ ಹೊರಡುವುದು ಉತ್ತಮ. ಪ್ರಯಾಣದಲ್ಲಿ ವಿಳಂಬ ಉಂಟಾಗುವುದು. ಅನೇಕ ದಿನಗಳಿಂದ ಪ್ರಗತಿ ಕಾಣದ ಕೆಲಸಗಳು ಇಂದು ಕಾರ್ಯರೂಪಕ್ಕೆ ಬರುವುದು ಅಥವಾ ಕೈಗೆಟಕುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಧನು: 30 ನವೆಂಬರ್ -22 ಡಿಸೆಂಬರ್
ಮಾನಸಿಕ ಕಿರಿಕಿರಿಯನ್ನು ಎದುರಿಸುವಿರಿ. ವಿಪರೀತವಾದ ಆಯಾಸ ಹಾಗೂ ಆರೋಪಗಳಿಂದ ಮನಸ್ಸಿಗೆ ನೋವುಂಟಾಗುವುದು. ನೀವು ಮಾಡದ ತಪ್ಪಿಗೆ ಹಣವನ್ನು ವ್ಯಯಿಸಬೇಕಾಗುವುದು. ಕೈಗಾರಿಕೋದ್ಯಮದಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಅರಣ್ಯ ಇಲಾಖೆಯಲ್ಲಿ ಕೆಲಸಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುವುದು. ಖಾಸಗಿ ಉದ್ಯೋಗದಲ್ಲಿರುವವರಿಗೆ ಸ್ವಲ್ಪ ಸಮಾಧಾನ ದೊರೆಯುವುದು. ವಿದ್ಯಾರ್ಥಿಗಳಿಗೆ ಸಹಪಾಠಿಗಳೊಂದಿಗೆ ಕಲಹ ಉಂಟಾಗಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 30-ಜನವರಿ 20
ಅನೇಕ ಬಗೆಯ ಸಮಸ್ಯೆ ಹಾಗೂ ಏರು ಪೇರುಗಳು ನಿಮ್ಮನ್ನು ಬಾಧಿಸುವ ಸಾಧ್ಯತೆಗಳಿವೆ. ನಿರೀಕ್ಷಿತ ಮಟ್ಟದ ಗುರಿ ಸಾಧನೆ ಉಂಟಾಗದು. ಸ್ತ್ರೀಯರ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಅನಿರೀಕ್ಷಿತ ಸೋಲನ್ನು ಎದುರಿಸಬೇಕಾಗುವುದು. ಬಂಧು ಮಿತ್ರರ ನಡುವೆ ಕಲಹ ಉಂಟಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕುಂಬ: 30 ಜನವರಿ -19 ಫೆಬ್ರುವರಿ
ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲೂ ನೆಮ್ಮದಿಯ ವಾತಾವರಣ ಲಭಿಸುವುದು. ಪತ್ರಕರ್ತರಿಗೆ ಅನುಕೂಲ ಉಂಟಾಗುವುದು. ಪ್ರಶಂಸಾತ್ಮಕ ನುಡಿಗಳು ನಿಮಗೆ ಪ್ರೋತ್ಸಾಹ ಹಾಗೂ ಹುಮ್ಮಸ್ಸನ್ನು ತುಂಬುವುದು. ಸ್ತ್ರೀಯರಿಂದ ಒಂದಿಷ್ಟು ಉಡುಗೊರೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮೀನ: 30 ಫೆಬ್ರವರಿ -20 ಮಾರ್ಚ್
ಸಮಾಧಾನ ಪಡೆದುಕೊಳ್ಳುವಿರಿ. ಸುಂದರವಾದ ಜೀವನದ ಕಾಯಕಲ್ಪಕ್ಕೆ ನಿದರ್ಶನರಾಗುವಿರಿ. ನಿರ್ದಿಷ್ಟವಾದ ಗುರಿಯನ್ನು ತಲುಪುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಅನೇಕ ದಿನಗಳಿಂದ ಕಾಡುತ್ತಿದ್ದ ಚಿಂತೆಯು ಇಂದು ದೂರಾಗುವುದು. ಉತ್ತಮ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.



Click it and Unblock the Notifications











