Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
30-12-2017 ಶನಿವಾರದ ದಿನ ಭವಿಷ್ಯ
ಪ್ರತಿಯೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮವರು ವರ್ತಿಸಬೇಕು ಎಂದು ಬಯಸುತ್ತಾರೆ. ಅಂತಹ ನಿರೀಕ್ಷೆಗಳು ಎಲ್ಲಾ ಸಮಯದಲ್ಲೂ ಸರಿಹೊಂದುವುದಿಲ್ಲ. ಅನೇಕ ಬಾರಿ ನಮ್ಮ ನಿರೀಕ್ಷೆಗೆ ವಿರುದ್ಧವಾಗಿಯೇ ಇರುತ್ತದೆ. ಆಗ ನಮ್ಮವರು ತಮ್ಮವರು ಎನ್ನುವ ಬೇಧವಿಲ್ಲದೆ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಅದಕ್ಕಾಗಿ ನಾವು ನಮ್ಮಂತೆಯೇ ಇತರರು. ಅವರಿಗೂ ಅನೇಕ ಸಮಸ್ಯೆಗಳು ಹಾಗೂ ಅವರದ್ದೇ ಆದ ಕೆಲಸಗಳಿರುತ್ತವೆ ಎನ್ನುವುದನ್ನು ಅರಿಯಬೇಕು.
ಆಗಲೇ ನಾವು ಎಲ್ಲರೊಂದಿಗೂ ಸುಲಭವಾಗಿ ಬೆರೆತು ಆನಂದಿಸಲು ಸಾಧ್ಯ. ಶನಿವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗಬಹುದು ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ನೀಡಿರುವ ದಿನ ಭವಿಷ್ಯವನ್ನು ಅರಿಯಿರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಏನೆಂಬುದನ್ನು ತಿಳಿಯಿರಿ....

ಮೇಷ (Mar 29 - Apr 19)
ಮನೆಯಲ್ಲಿ ನೆಮ್ಮದಿಯ ವಾತಾವರಣ. ನಿರ್ದಿಷ್ಟ ಗುರಿಯನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು. ವಿದ್ಯಾರ್ಥಿಗಳಿಗೆ ಮುನ್ನಡೆ ಉಂಟಾಗುವುದು. ಆರೋಗ್ಯ ಸುಧಾರಣೆಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ವೃಷಭ: ಏಪ್ರಿಲ್ 29-ಮೇ 20
ಇಂದು ನಿಮಗೆ ಸಮಾಧಾನಕರವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣಲು ಕೆಲವರಿಂದ ಅಡೆತಡೆಗಳು ಉಂಟಾಗುವ ಲಕ್ಷಣಗಳಿವೆ. ಬಂಧು ಮಿತ್ರರ ನಡುವೆ ಕಿರಿಕಿರಿಯ ಭಾವನೆ ಉಂಟಾಗುವುದು. ಮನೋಲ್ಲಾಸಕ್ಕೆ ಅಡೆತಡೆಗಳು ಉಂಟಾಗುವುದು. ಸ್ಥಿರ ಆಸ್ತಿಯಿಂದ ಸಂಪೂರ್ಣ ಲಾಭ ದೊರೆಯದು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ವ್ಯಾಪಾರ ವಹಿವಾಟುಗಳಲ್ಲಿ ಹಿನ್ನಡೆ ಉಂಟಾಗುವುದು. ಆರ್ಥಿಕ ವಲಯದಲ್ಲಿ ಉಂಟಾಗುವ ಏರು ಪೇರು ನಿಮ್ಮನ್ನು ಹೈರಾಣ ಗೊಳಿಸುವುದು. ನಿರ್ದಿಷ್ಟವಾದ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆಯನ್ನು ತೋರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಮಿಥುನ: ಮೇ 29 ಜೂನ್ 20
ಇಂದು ನಿಮಗೆ ನೆಮ್ಮದಿಯ ದಿನ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಶಂಸೆ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವರು. ಬಂಧುಮಿತ್ರರ ಆಗಮನ. ಸಿಹಿ ಭೋಜನ ಸವಿಯುವ ಲಕ್ಷಣ. ಹಿರಿಯರು ದೇವಸ್ಥಾನ ಹಾಗೂ ಮಠಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ರಾಜಕಾರಣಿಗಳ ನಡೆ ಉತ್ತಮವಾಗಿರುತ್ತದೆ. ಪ್ರಶಂಸಾತ್ಮಕ ಬೆಂಬಲ ನಿಮಗೆ ಸಿಗುವುದು. ಸಮಾಜ ಸುಧಾರಕರಿಗೆ ನೆಮ್ಮದಿ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 29-ಜುಲೈ 22
ಇಂದು ನಿಮಗೆ ನೆಮ್ಮದಿಯ ದಿನ, ಪಠ್ಯ ಪುಸ್ತಕ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಗಾರರಿಗೆ ಉತ್ತಮ ಲಾಭ ಉಂಟಾಗುವುದು. ಮನೆಯಲ್ಲಿ ನೆಮ್ಮದಿ ಕಾಣುವಿರಿ. ಮಿತ್ರರಿಂದ ಸಹಕಾರ ದೊರೆಯುವುದು. ಅನಿರೀಕ್ಷಿತ ಸೋಲು ದೂರಾಗುವುದು. ಷೇರು ಮಾರುಕಟ್ಟೆಯಲ್ಲಿ ಹೋಡಿರುವ ಹಣಕ್ಕೆ ಅಧಿಕ ಲಾಭ. ಬ್ಯಾಂಕ್ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಹಾಗೂ ಸರ್ಕಾರಿ ನೌಕರರು ಉತ್ತಮ ಪ್ರಗತಿಯನ್ನು ಕಾಣುವರು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 29-ಆಗಸ್ಟ್ 23
ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗುವುದು. ಅಧಿಕ ಪ್ರಮಾಣದ ಹಣ ವ್ಯಯ ಹಾಗೂ ಆರೋಗ್ಯದಲ್ಲಿ ಏರು ಪೇರು ಉಂಟಾಗುವುದು. ಇಲ್ಲ ಸಲ್ಲದ ಆರೋಪಗಳನ್ನು ನೀವು ಕೇಳಬೇಕಾದ ಪರಿಸ್ಥಿತಿ ಎದುರಾಗುವುದು. ರಾಜಕೀಯ ನಾಯಕರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳನ್ನು ಒಳಗೊಂಡಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಉಪಾಸನೆ ಮಾಡಿ.

ಕನ್ಯಾ: ಆಗಸ್ಟ್ 29-ಸೆಪ್ಟಂಬರ್ 23
ಸಮಾಧಾನಕರ ಬದುಕನ್ನು ಕಾಣುವಿರಿ. ಯಾವುದೇ ಒತ್ತಡಕ್ಕೆ ಮಣಿಯದಿರಿ. ಚಾಲಕ ವೃತ್ತಿಯಲ್ಲಿರುವವರು ಅನುಕೂಲಕರ ವಾತಾವರಣವನ್ನು ಅನುಭವಿಸಲಿದ್ದಾರೆ. ಕೃಷಿಕರಿಗೆ ಉತ್ತಮ ಪ್ರಗತಿ. ಮನೆಯಲ್ಲಿ ಸಂತೋಷ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು. ನಿಮ್ಮ ಮನಸ್ಸಿನಲ್ಲಿರುವ ಶುಭ ಕಾಮನೆಗಳ ಈಡೇರಿಕೆಗೆ ಗಣೇಶನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 29-ಅಕ್ಟೋಬರ್ 23
ಸಮಾಧಾನ ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಉತ್ತಮ ಪ್ರಗತಿಯನ್ನು ಕಾಣುವಿರಿ. ಯಾವುದೇ ಕೆಲಸಕ್ಕೆ ಹಿಂಜರಿಕೆ ತೋರದಿರಿ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಲಾಭಾಂಶ ದೊರೆಯುವುದು. ಅನೇಕ ದಿನಗಳ ಹಿಂದೆ ಹೂಡಿಕೆ ಮಾಡಿರುವ ಹಣ ಇಂದು ಕೈಸೇರುವ ಸಾಧ್ಯತೆಗಳಿವೆ. ನಿಮ್ಮ ಸುಂದರ ಕನಸು ನನಸಾಗಲು ಗಣೇಶನ ಆರಾಧನೆ ಹಾಗೂ ಶಿವ ಉಪಾಸನೆ ಮಾಡಿ.

ವೃಶ್ಚಿಕ:ಅಕ್ಟೋಬರ್ 29- 22 ನವೆಂಬರ್
ನಿಮಗೆ ಶನಿಯ ಪ್ರಭಾವ ಇರುವುದರಿಂದ ಕಿರಿಕಿರಿಯ ವಾತಾವರಣ. ಮಾನಸಿಕವಾಗಿ ಗೊಂದಲ ಮತ್ತು ಸೂಲು ಉಂಟಾಗುವುದು. ಆರೋಗ್ಯದಲ್ಲಿ ಏರು ಪೇರು ಉಂಟಾಗುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ರತ್ನಾಭರಣ ಖರೀದಿ ಮಾಡುವ ಸಾಧ್ಯತೆಗಳಿವೆ. ಕೆಲವರ ಮೋಸದ ಜಾಲಕ್ಕೆ ತುತ್ತಾಗುವ ಸಾಧ್ಯತೆಗಳೂ ಇವೆ. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಧನು: ನವೆಂಬರ್ 29 -22 ಡಿಸೆಂಬರ್
ಮಾನಸಿಕ ನೋವು ನಿಮ್ಮನ್ನು ಕಾಡುವುದು. ಬಂಧು ಮಿತ್ರರಿಂದ ಇಲ್ಲ ಸಲ್ಲದ ಆರೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತವಾದ ಸೋಲು ನಿಮ್ಮನ್ನು ಬಾಧಿಸುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಂದಿಷ್ಟು ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಇಲ್ಲಸಲ್ಲದ ಕಾರಣಗಳಿಗೆ ಹಣ ವ್ಯಯಮಾಡಬೇಕಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಪೂರ್ಣ ಪ್ರಮಾಣದ ನೆಮ್ಮದಿ ಕಂಡುಕೊಳ್ಳಲು ಅಸಾಧ್ಯವಾಗುವುದು. ವಿದ್ಯಾರ್ಥಿಗಳಿಗೂ ಮಾನಸಿಕ ನೆಮ್ಮದಿ ದೊರೆಯದು. ಸಮಸ್ಯೆಗಳ ನಿವಾರಣೆಗೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: 23 ಡಿಸೆಂಬರ್ -20 ಜನವರ
ಸಮಾಧಾನಕರ ಬದುಕನ್ನು ಕಾಣುವಿರಿ. ಆದರೆ ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಇಲ್ಲ ಸಲ್ಲದ ಆರೋಪ ನಿಮ್ಮ ಬೆನ್ನೇರುವುದು. ಸ್ತ್ರೀಯರಿಂದ ಅವಮಾನ ಉಂಟಾಗುವುದು. ಸರ್ಕಾರಿ ನೌಕರಿಯಲ್ಲಿರುವವರಿಗೆ ಒಂದಿಷ್ಟು ಅಡೆತಡೆ ಉಂಟಾಗುವುದು. ನೀವು ಮಾಡದಿರುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಪ್ರಾರ್ಥನೆ ಮಾಡಿ.

ಕುಂಬ: 29 ಜನವರಿ -19 ಫೆಬ್ರುವರಿ
ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ಮನೆಯಲ್ಲಿ ನೆಮ್ಮದಿ ದೊರೆಯುವುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಕಲಾವಿದರಿಗೆ ನೆಮ್ಮದಿ ದೊರೆಯುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ಕಾರ್ಯಗಳನ್ನು ಇಂದು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಉತ್ತಮ ಲಾಭ ಕಾಣುವುದು. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮೀನ: 29 ಫೆಬ್ರವರಿ -20 ಮಾರ್ಚ್
ಇಂದು ನಿಮಗೆ ಅನುಕೂಲಕರವಾದ ವಾತಾವರಣ ಲಭಿಸುವುದು. ಅನಿರೀಕ್ಷಿತ ಸೋಲು ದೂರಾಗುವುದು. ಸಮಾಧಾನಕರವಾದ ಬದುಕನ್ನು ನೀವು ಕಾಣುವಿರಿ. ವಿದೇಶ ಯಾನದ ಕನಸು ನನಸಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಶೀವನ ಆರಾಧನೆ ಮಾಡಿ.



Click it and Unblock the Notifications