Latest Updates
-
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಪ್ರೇತವಿವಾಹ ಸಂಪ್ರದಾಯ! ಇಲ್ಲಿ ಸತ್ತ ಮಕ್ಕಳಿಗೂ ಮದುವೆ ಮಾಡಿಸುತ್ತಾರೆ!!
ಈ ವಿಶ್ವದಲ್ಲಿರುವ ಕೆಲವು ವಿಚಿತ್ರ ಸಂಪ್ರದಾಯಗಳು ನಂಬಲಿಕ್ಕೇ ಕಷ್ಟವಾಗಿವೆ. ಕೆಲವಂತೂ ಮಾನವತೆಯನ್ನೇ ಅಪಹಾಸ್ಯಕ್ಕೆ ಗುರಿಯಾಗಿಸುತ್ತಿವೆ. ನಮ್ಮ ಭಾರತದಲ್ಲಿಯೇ ನಡೆಯುವ ಅಮಾನವೀಯ ಸಂಪ್ರದಾಯಗಳಾದ ಯುವತಿಯನ್ನು ಕಪ್ಪೆ, ನಾಯಿಗೆ ಮದುವೆ ಮಾಡಿಕೊಡುವುದು ಇತ್ಯಾದಿ.
ಹೀಗೆ ಮಾಡಿದರೆ ಊರಿಗೆ ಒಳ್ಳೆಯದಾಗುತ್ತದೆ, ಮಾರಿಯನ್ನು ದೂರ ಮಾಡಲು ಹೀಗೆ ಮಾಡಲೇಬೇಕು ಎಂದೆಲ್ಲಾ ಕಪಟವಾಡುವ ಕಳ್ಳ ಸಾಧು ಬಾಬಾಗಳೂ ನಮ್ಮ ಭಾರತದಲ್ಲಿಯೇ ಬೇಕಾದಷ್ಟಿದ್ದಾರೆ. ಆದರೆ ಊರಿಗೆ ಒಳ್ಳೆಯದು ಮಾಡಲು ಹೋಗಿ ಈ ಮುಗ್ಧ ಯುವತಿಯರು ತಮ್ಮ ಜೀವನವನ್ನೇ ನರಕವಾಗಿಸಬೇಕಾಗುತ್ತದೆ. ಇಂತಹ ಇನ್ನೊಂದು ಬೆಚ್ಚಿ ಬೀಳಿಸುವಂತಹ ಇನ್ನೊಂದು ಸಂಪ್ರದಾಯವೂ ನಮ್ಮ ಭಾರತದಲ್ಲಿಯೇ ಇದೆ. ಅದೇ ಪ್ರೇತಕಲ್ಯಾಣಂ ಅಥವಾ ಭೂತಗಳ ಮದುವೆ. ಈ ವಿವಾಹದಲ್ಲಿ ಪ್ರಾಪ್ತ ವಯಸ್ಸಿಗೂ ಮುನ್ನವೇ ಗತಿಸಿದ ಮಕ್ಕಳ ಆತ್ಮಗಳಿಗೂ ಕಂಕಣಬಲ ಒದಗಿಸಲಾಗುತ್ತದೆ. ಬನ್ನಿ, ಏನಿದು ಕಥೆ? ಮುಂದೆ ಓದಿ..

ಜಾತಕವನ್ನೂ ನೋಡಲಾಗುತ್ತದೆ
ಇತರ ವಿವಾಹಗಳಂತೆಯೇ ಈ ವಿವಾಹದಲ್ಲಿಯೂ ಗಂಡು ಹೆಣ್ಣಿನ ಜಾತಕಗಳನ್ನು ಪರಿಶೀಲಿಸಿ ಎಲ್ಲಾ ಗುಣಗಳು ಹೊಂದುತ್ತವೆಯೇ, ವಿವಾಹವಾಗಲು ಯಾವುದೇ ಅಡ್ಡಿಯಿಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಪ್ಪಿಗೆ ದೊರೆತ ಬಳಿಕ ಗಂಡುಹೆಣ್ಣಿನ ಗೊಂಬೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸಿ ಮದುವೆಯನ್ನು ನಡೆಸಲಾಗುತ್ತದೆ.

ಇತರ ಮದುವೆಗಳಂತೆಯೇ ಇದೂ ನಡೆಯುತ್ತದೆ
ಇಲ್ಲಿ ವಧೂ ವರರು ಜೀವಂತವಾಗಿಲ್ಲ ಎಂಬ ಒಂದೇ ಕಾರಣದ ಹೊರತಾಗಿ ಇತರ ಎಲ್ಲಾ ಸಂಪ್ರದಾಯಗಳು, ಊಟ, ಉಪಚಾರ ಮೊದಲಾದವು ಉಳಿದ ಮದುವೆಗಳಂತೆಯೇ ಇರುತ್ತದೆ. ವಧು ಗೊಂಬೆಯ ಕೊರಳಿಗೆ ಮಂಗಳಸೂತ್ರ ಧರಿಸುವುದು, ವಧೂವರರು ಪರಸ್ಪರ ಹೂವಿನ ಹಾರ ಹಾಕುವುದು ಇತ್ಯಾದಿ, ಕೊನೆಯಲ್ಲಿ ಗಡದ್ದು ಕೇರಳ ಬಾಳೆ ಎಲೆ ಊಟವನ್ನು ಎಲ್ಲರೂ ಸವಿಯುತ್ತಾರೆ.

ಈ ಸಂಪ್ರದಾಯ ಪ್ರಾರಂಭವಾಗಿದ್ದಾದರೂ ಹೇಗೆ?
ಮೂಲಗಳ ಪ್ರಕಾರ ಒಂದು ವೇಳೆ ಗರ್ಭಾಪಾತದ ಮೂಲಕ ಗರ್ಭದಲ್ಲಿರುವ ಮಗು ಜಗತ್ತಿನಲ್ಲಿ ಕಣ್ಣು ಬಿಡುವುದಕ್ಕೂ ಮುನ್ನವೇ ಗತಿಸಿದರೆ ಅಥವಾ ಹದಿನೆಂಟು ತುಂಬುವ ಮುನ್ನವೇ ಮಕ್ಕಳು ಗತಿಸಿದರೆ ಈ ಮಕ್ಕಳಿಗೂ ನ್ಯಾಯಯುತ ಮದುವೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕುಟುಂಬಕ್ಕೆ ಅಥವಾ ಈ ಕುಟುಂಬದ ಸದಸ್ಯರಿಗೆ ಹಾಗೂ ಅವರ ಮಕ್ಕಳಿಗೂ ಮುಂದೆ ತೊಂದರೆಯುಂಟಾಗಬಹುದೆಂದು ಜೋತಿಷ್ಯಾಸ್ತ್ರಜ್ಞರು ಈ ಮಕ್ಕಳಿಗೂ ಮದುವೆ ಮಾಡಿಸಲು ಸಲಹೆ ಮಾಡುತ್ತಾರೆ. ಎಂದಿನಿಂದ ಪ್ರಾರಂಭವಾಯಿತು ಎಂಬ ಖಚಿತ ಮಾಹಿತಿ ಇಲ್ಲ.

ಗತಿಸಿದ ಮಕ್ಕಳಿಗೂ ಕಂಕಣಭಾಗ್ಯ!
ಒಮ್ಮೆ ವಿವಾಹದ ದಿನಾಂಕ ನಿಗದಿಯಾದ ಬಳಿಕ ಎರಡೂ ಕುಟುಂಬದ ಹಿರಿಯರು ಜಗತ್ತಿನ ಸುಖದಿಂದ ವಂಚಿತರಾದ ತಮ್ಮ ಮಕ್ಕಳು ಮರಣಾನಂತರವಾದರೂ ಸುಖಕರ ಜೀವನ ನಡೆಸಲಿ ಎಂದು ಹಾರೈಸಿ ಈ ವಿವಾಹವನ್ನು ನಡೆಸಿಕೊಡುತ್ತಾರೆ. ಈ ವಿವಾಹವನ್ನು ಮಾಡಿಕೊಡುವ ಮೂಲಕ ತಮ್ಮ ಗತಿಸಿದ ಮಕ್ಕಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಭಾವಿಸಲಾಗಿದೆ.

ಕುಟುಂಬದವರ ನಂಬಿಕೆ
ಯಾವುದೇ ಕುಟುಂಬಕ್ಕೆ ಮಕ್ಕಳನ್ನು ಕಳೆದುಕೊಂಡ ದುಃಖ ಇಡಿಯ ಜೀವಮಾನ ಕಾಡುತ್ತದೆ. ಈ ಮೂಲಕವಾದರೂ ಮಕ್ಕಳ ಆತ್ಮಕ್ಕೆ ಶಾಂತಿ ಸಿಕ್ಕಲು ನಾವು ನಮ್ಮ ಪ್ರಯತ್ನ ಮಾಡಿದ್ದೇವೆ ಎಂಬ ಸಾರ್ಥಕ ಭಾವನೆಯಿಂದ ಹಿರಿಯರು ಹಾಗೂ ಕುಟುಂಬ ಸದಸ್ಯರಿಗೆ ನೆಮ್ಮದಿ ದೊರಕುವುದು ನಿಜವಾಗಿರುವ ಕಾರಣ ಈ ಸಂಪ್ರದಾಯವನ್ನು ತಪ್ಪು ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ.

ಕುಟುಂಬದವರ ನಂಬಿಕೆ
ಇದೇ ಕಾರಣಕ್ಕೆ ಈ ಸಂಪ್ರದಾಯ ಇಂದಿಗೂ ಉಳಿದುಕೊಂಡು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯುವ ಮೂಲಕ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications