Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಎದೆಹಾಲಿನ ಆಭರಣ! ಸರಿಯಾಗಿ ಕೇಳಿದಿರಿ, ಈ ಆಭರಣಗಳ ಒಳಗೆ ಎದೆಹಾಲಿದೆ!
ಎದೆಹಾಲು ಮಗುವಿನ ಬೆಳವಣಿಗೆಗೆ ತುಂಬಾ ಅಗತ್ಯವಾದ ಜೀವದ್ರವವಾಗಿದೆ. ಕೆಲವು ಮಹಿಳೆಯರಿಗೆ ಎದೆಹಾಲಿನ ಕೊರತೆ ಇದ್ದು ಮಗುವಿಗೆ ಕುಡಿಸಲು ಸಾಧ್ಯವಾಗದ ಬಗ್ಗೆ ವ್ಯಾಕುಲರಾಗಿರುತ್ತಾರೆ. ಈ ಅನುಭವವನ್ನು ಸ್ಮರಣೀಯವಾಗಿಸಲು ಓರ್ವ ಆಭರಣ ವಿನ್ಯಾಸಕಾರರ ಕಲ್ಪನೆಯಲ್ಲಿ ಭಿನ್ನವಾದ ಯೋಜನೆಯೊಂದು ಮೂಡಿದ್ದು ಈಗ ಎದೆಹಾಲನ್ನು ಆಭರಣಗಳ ಒಳಗೆ ಅಳವಡಿಸಿಕೊಂಡು ಪ್ರದರ್ಶಿಸುವ ಮೂಲಕ ಭಿನ್ನವಾದ ಪ್ರಯೋಗವನ್ನು ನಡೆಸಿದ್ದು ಈಗ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಹೌದು, ನೀವು ಸರಿಯಾಗಿಯೇ ಓದಿದಿರಿ. ಎದೆಹಾಲನ್ನು ಬಳಸಿ ಸೌಂದರ್ಯವನ್ನು ಹೆಚ್ಚಿಸುವ ಆಭರಣಗಳು ಇಂದು ಜನರು ಮೆಚ್ಚುತ್ತಿದ್ದು ಹೆಚ್ಚು ಹೆಚ್ಚು ಒಲವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಭಿನ್ನವಾಗಿ ಯೋಚಿಸುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ
ಪ್ರೀತಿ ಎಂಬ ಈ ಮೂವತ್ತು ವರ್ಷದ ಆಭರಣ ವಿನ್ಯಾಸಗಾರ್ತಿಗೆ ಮೊದಲ ಬಾರಿ ಈ ಕಲ್ಪನೆ ಮೂಡಿತ್ತು. ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು ಇವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಹಲವು ವಿನ್ಯಾಸಗಳನ್ನು ಬಿಡುಗಡೆಗೊಳಿಸಿದ್ದಾರೆ. ಇದರಿಂದ ಎದೆಹಾಲನ್ನು ಮಗುವಿಗೆ ಊಡಿಸುವ ಅನುಭವದ ಭಾವಾತ್ಮಕ ರೂಪವನ್ನು ದಂಪತಿಗಳು ಸದಾ ಪಡೆಯುವಂತಾಗುತ್ತದೆ ಎಂದು ಇವರು ತಿಳಿಸುತ್ತಾರೆ.

ಇವರಿಗೆ ಈ ಕಲ್ಪನೆ ಮೂಡಿದ್ದು ಸಾಮಾಜಿಕ ತಾಣದಿಂದ
ಫೇಸ್ ಬುಕ್‌ನಲ್ಲಿ ಗ್ರಾಹಕರೊಬ್ಬರು ಎದೆಹಾಲಿನಿಂದ ಆಭರಣವನ್ನು ತಯಾರಿಸಲು ಸಾಧ್ಯವಿಲ್ಲವೇ ಎಂದು ಯಾರೋ ಪ್ರಶ್ನಿಸಿದ್ದರು. ಹೇಗಿದ್ದರೂ ನಾನು ಪಾಲಿಮರ್ ಜೇಡಿಯಿಂದ ಆಭರಣಗಳನ್ನು ತಯಾರಿಸುತ್ತಲೇ ಇದ್ದೇನೆ. ನಾಲ್ಕೈದು ವರ್ಷದಿಂದ ಇನ್ನೂ ಕೆಲವಾರು ಬಗೆಯ ಜೇಡಿಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹೊಸ ಪ್ರಯೋಗವನ್ನೇಕೆ ಮಾಡಬಾರದು ಎಂದೆನ್ನಿಸಿತು.

ಈ ಕಲೆಯನ್ನೂ ಆಕೆ ಅಂತರ್ಜಾಲದಿಂದಲೇ ಕಲಿತರು
ಆದರೆ ಈ ಕಲೆಯನ್ನು ಸಾಕಾರಗೊಳಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಈ ಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇವರು ಮತ್ತೊಮ್ಮೆ ಅಂತರ್ಜಾಲದ ಮೊರೆ ಹೊಕ್ಕರು. ಈ ಕಾರ್ಯ ತುಂಬಾ ಸೂಕ್ಷ್ಮವಾಗಿದ್ದು ಹಾಲು ಕೆಟ್ಟುಹೋಗುವ ಮುನ್ನವೇ ಇದನ್ನು ಕಲಾವಂತಿಕೆಯಿಂದ ಜೇಡಿಯೊಳಗೆ ಅಳವಡಿಸುವುದು ಅಗತ್ಯವಾಗಿರುತ್ತದೆ.

ಪ್ರತಿ ಭಾರಿಯೂ ಯಶಸ್ಸು ಸಿಗುವುದಿಲ್ಲ
ಅಂತರ್ಜಾಲದಲ್ಲಿ ಹಲವು ವಿಧಾನಗಳು ಲಭ್ಯವಿದ್ದರೂ ಎಲ್ಲವೂ ಕಾರ್ಯಸಾಧುವಲ್ಲ. ಏಕೆಂದರೆ ಹಾಲು ಶೀಘ್ರವಾಗಿ ಹಾಳಾಗುತ್ತದೆ ಹಾಗೂ ಇದು ಹಾಳಾಗುವ ಮುನ್ನವೇ ಜೇಡಿಯಲ್ಲಿ ಅಳವಡಿಸಿಬಿಡಬೇಕು. ಆದರೆ ಇದರ ಪೂರ್ಣ ಪ್ರಮಾಣದ ಫಲಿತಾಂಶವನ್ನು ಪಡೆಯಬೇಕಾದರೆ ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.

ಈಕೆಯನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಬಹುದು!
ಈ ಆಭರಣಗಳನ್ನು ಇಷ್ಟಪಟ್ಟು ಖರೀದಿಸಬಯಸುವ ಗ್ರಾಹಕರು ಇವರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಬಹುದು. ಮೊದಲು ಗ್ರಾಹಕರು ತಮ್ಮ ಸ್ವಂತ ಹಾಲನ್ನು ಇವರಿಗೆ ಕಳುಹಿಸಬೇಕಾಗುತ್ತದೆ. ಇದನ್ನು ಹೇಗೆ ಕಳುಹಿಸಿಕೊಡಬೇಕೆಂದು ಪ್ರೀತಿ ತಿಳಿಸುತ್ತಾರೆ. ಸಧ್ಯಕ್ಕೆ ಇವರಿಗೆ ದೇಶದ ವಿವಿಧ ರಾಜ್ಯಗಳಿಂದ ಮನವಿಗಳು ಬರುತ್ತಿವೆ. ಹಲವರು ಈ ಹಾಲು ಹಾಳಾಗದೇ ಇರುವ ಬಗ್ಗೆ ಕಾಳಜಿಯನ್ನೂ ಪ್ರಕಟಿಸಿದ್ದರೆ. ಆದರೆ ಗ್ರಾಹಕರ ಎಲ್ಲಾ ಪ್ರಶ್ನೆಗಳಿಗೆ ಪ್ರೀತಿಯವರ ಬಳಿ ಉತ್ತರವಿದೆ.

ಇದರ ರಹಸ್ಯಗಳೇನು
ಇವರ ವಿವರಣೆಯ ಪ್ರಕಾರ ಈ ಹಾಲನ್ನು ಅವರು ಪಡೆದ ಬಳಿಕ ಈ ಹಾಲಿಗೆ ಕೆಲವು ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಇದರಿಂದ ಹಾಲು ಹೆಚ್ಚು ಕಾಲ ಕೆಡದೇ ಉಳಿಯುತ್ತದೆ. ಆದರೆ ಈಗ ಈ ಹಾಲನ್ನು ಮಗುವಿಗೆ ಕುಡಿಸಲು ಸಾಧ್ಯವಿಲ್ಲ. ಈ ಹಾಲನ್ನು ಫ್ರಿಜ್ಜಿನಲ್ಲಿರಿಸಿ ಮಂಜುಗಟ್ಟಿಸಲಾಗುತ್ತದೆ. ಹೀಗೆ ಇದನ್ನು ಆರು ತಿಂಗಳವರೆಗೂ ಸುರಕ್ಷಿತವಾಗಿರಿಸಬಹುದು. ಬಳಿಕ ಇದನ್ನು ಕರಗುತ್ತಿದ್ದಂತೆಯೇ ಪಾರದರ್ಶಕ ಜೇಡಿಯಲ್ಲಿ ಅಳವಡಿಸಿ ಎಲ್ಲಾ ಕಡೆಯಿಂದ ಆವರಿಸುವಂತೆ ಮಾಡಿ ಗಟ್ಟಿಯಾಗಿಸಲಾಗುತ್ತದೆ. ಅಂತಿಮವಾಗಿ ಇದಕ್ಕೆ ಕಲಾತ್ಮಕ ರೂಪ ನೀಡಿ ಆಭರಣವಾಗಿಸಲಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ...



Click it and Unblock the Notifications











